ಮನೆಯಲ್ಲಿ ನಾವು ಅಡುಗೆ ಮನೆಯ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್ ಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಮನೆಯಲ್ಲಿರುವ ಮಹಿಳೆಯರಿಗಾಗಿರಬಹುದು ಅಥವಾ ಕೆಲಸಗಳಿಗೆ ಹೋಗುವಂತಹ ಮಹಿಳೆಯರಿಗೆ ಆಗಬಹುದು ಈಗ ನಾವು ಹೇಳುವಂತಹ ಕೆಲವೊಂದಷ್ಟು ಟಿಪ್ಸ್ ಗಳು ತುಂಬಾ ಅನುಕೂಲವಾಗುತ್ತದೆ.
ಹಾಗೂ ಅಡುಗೆ ಮನೆಯಲ್ಲಿ ಮಾಡುವಂತಹ ಕೆಲವೊಂದಷ್ಟು ಕೆಲಸವನ್ನು ಈಗ ನಾವು ಹೇಳುವ ಈ ಒಂದು ವಿಧಾನವನ್ನು ಅನುಸರಿಸಿ ಮಾಡುವುದರಿಂದ ಕೆಲಸ ಬೇಗನೆ ಆಗುತ್ತದೆ. ಹಾಗೂ ಕಡಿಮೆ ಸಮಯದಲ್ಲಿ ನೀವು ಆ ಒಂದು ಕೆಲಸವನ್ನು ಮಾಡಿ ಮುಗಿಸಬಹುದು. ಇದರಿಂದ ನಿಮಗೆ ಸಮಯ ಹಾಗೂ ನಿಮ್ಮ ಶ್ರಮ ಎರಡು ಕೂಡ ಉಳಿತಾಯವಾಗುತ್ತದೆ.
ಈ ಸುದ್ದಿ ಓದಿ:- ಅಕ್ಷಯ ತೃತೀಯ ಹಬ್ಬಕ್ಕೆ ಯಾರು ಈ 5 ಮಹಾ ರೆಮಿಡಿ ಮಾಡಿಕೊಳ್ಳುವರೋ ವರ್ಷ ತುಂಬುವುದರಲ್ಲಿ ದೊಡ್ಡ ಶ್ರೀಮಂತರಾಗ್ತಾರೆ.!
ಜೊತೆಗೆ ಹೆಚ್ಚಿನ ಗ್ಯಾಸ್ ಸಿಲಿಂಡರ್ ಬಳಕೆಯು ಸಹ ಆಗುವುದಿಲ್ಲ. ಹಾಗಾದರೆ ಈ ಈ ದಿನ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಯಾವುದೇ ರೀತಿಯಾದಂತಹ ಅಡುಗೆಯನ್ನು ಮಾಡಬೇಕು ಎಂದರೆ ಕುಕ್ಕರ್ ಇದೆ ಅದನ್ನು ಉಪಯೋಗಿಸಿಕೊಂಡು ಹಾಗೂ ಹೇಗೆ ಕಡಿಮೆ ಸಮಯದಲ್ಲಿ ಕೆಲವೊಂದು ಸುಲಭವಾಗಿ ತಯಾರಿಸಬಹುದು ಅಂದರೆ ಕುಕ್ಕರ್ ಗೆ ಸಂಬಂಧಿಸಿದಂತೆ 11 ಟಿಪ್ಸ್ ಗಳನ್ನು ಈ ದಿನ ತಿಳಿದುಕೊಳ್ಳೋಣ.
* ಸಾಮಾನ್ಯವಾಗಿ ನಾವೆಲ್ಲರೂ ಕೂಡ ಕಾಳುಗಳನ್ನು ಕುಕ್ಕರ್ ನಲ್ಲಿ ಬೇಯಿಸುವಂತಹ ಸಂದರ್ಭದಲ್ಲಿ ಅದನ್ನು ಸ್ವಲ್ಪ ಹೊತ್ತು ನೆನೆ ಹಾಕಿ ಅಥವಾ ಕುಕ್ಕರ್ ನಲ್ಲಿ ಕಾಳು ಹಾಕಿ ಉಪ್ಪು ಹಾಕಿ ಐದ ರಿಂದ ಆರು ವಿಶಲ್ ಕೂಗಿಸುತ್ತೇವೆ. ಆದರೆ ಇದಕ್ಕೆ ಹೆಚ್ಚಿನ ಗ್ಯಾಸ ಸಿಲಿಂಡರ್ ಬಳಕೆ ಬೇಕು ಹಾಗು ಹೆಚ್ಚು ಸಮಯವು ಬೇಕು. ಆದರೆ ಈ ಒಂದು ವಿಧಾನ ಅನುಸರಿಸುವ ಮುಂಚೆ.
ಈ ಸುದ್ದಿ ಓದಿ:- ಕೆಟ್ಟು ಹೋದ ಹಾಲನ್ನು ಸರಿಪಡಿಸುವ ಸೀಕ್ರೆಟ್, ಟೀ,ಕಾಫಿ ಏನ್ ಬೇಕಾದ್ರು ಮಾಡಬಹುದು.!
ಮೊದಲು ನೀವು ಕಾಳುಗಳನ್ನು ಚೆನ್ನಾಗಿ ತೊಳೆದು ಸ್ವಲ್ಪ ಹೊತ್ತು ನೆನೆ ಹಾಕಿ ಆ ನಂತರ ಕುಕ್ಕರ್ ನಲ್ಲಿ ಕಾಳನ್ನು ಹಾಕಿ ನೀರು ಹಾಕಿ ಸ್ವಲ್ಪ ಉಪ್ಪು ಹಾಕಿ ಅದರ ಒಳಗಡೆ ತೆಂಗಿನ ಕಾಯಿಯ ಚಿಪ್ಪು ಇದನ್ನು ಚೆನ್ನಾಗಿ ಶುದ್ಧ ಮಾಡಿ ತೊಳೆದು ಅದನ್ನು ಕಾಳಿನ ಜೊತೆ ಹಾಕಿ ಕುಕ್ಕರ್ ನಲ್ಲಿ ಎರಡು ವಿಷಲ್ ಕೂಗಿಸಿದರೆ ಸಾಕು ಯಾವುದೇ ಕಾಳಿದ್ದರೂ ಸಹ ಅದು ಸಂಪೂರ್ಣವಾಗಿ ಬೇಯುತ್ತದೆ. ಇದಕ್ಕೆ ಹೆಚ್ಚಿನ ಸಮಯ ಕೂಡ ಬೇಕಾಗಿಲ್ಲ.
* ಕುಕ್ಕರ್ ನಲ್ಲಿ ಹಾಕುವಂತಹ ಬೆಲ್ಟ್ ಅನ್ನು ನಾವು ಸದಾ ಕಾಲ ನೀರಿನಲ್ಲಿ ಇಟ್ಟು ಅದನ್ನು ಉಪಯೋಗಿಸುತ್ತಿರುತ್ತೇವೆ ಆದರೆ ಆ ರೀತಿ ಮಾಡುವುದರ ಬದಲು ಟ್ಯಾಪ್ ಬಳಿ ಅದನ್ನು ಸಿಕ್ಕಿಸಿದರೆ ನಾವು ಪ್ರತಿ ಬಾರಿ ಕೈಯನ್ನು ತೊಳೆಯುವಂತಹ ಸಂದರ್ಭದಲ್ಲಿ ನೀರು ಅದಕ್ಕೆ ತಾಕುತ್ತದೆ.
ಈ ಸುದ್ದಿ ಓದಿ:- ಈ ವಸ್ತು ನಿಮ್ಮ ಬಳಿ ಇದ್ರೆ ಸಾಕು ಹಣ ನಿಮ್ಮನ್ನು ಹುಡುಕಿ ಬರುತ್ತೆ.!
ಆದ್ದರಿಂದ ಅದನ್ನು ಪ್ರತಿ ಬಾರಿ ನೀರಿನಲ್ಲಿ ಹಾಕಿಡುವುದರಿಂದ ರಬ್ಬರ್ ಹಾಳಾಗುವ ಸಾಧ್ಯತೆ ಇರುತ್ತದೆ. ಸ್ವಲ್ಪ ಕೈಯಿಂದ ಎಳೆದು ಆನಂತರ ಹಾಕುವುದರಿಂದ ಕುಕ್ಕರ್ ನಲ್ಲಿ ಯಾವುದೇ ರೀತಿಯ ನೀರು ಲೀಕೇಜ್ ಆಗುವುದಿಲ್ಲ ಹಾಗೂ ಹೆಚ್ಚು ದಿನಗಳ ಕಾಲ ಕುಕ್ಕರ್ ರಬ್ಬರ್ ಬಾಳಿಕೆಗೆ ಬರುತ್ತದೆ.
* ಸಾಧಾರಣವಾಗಿ ನಾವು ಯಾವುದೇ ಸಾಂಬಾರ್ ಅನ್ನು ಕುಕ್ಕರ್ ನಲ್ಲಿ ಮಾಡಲು ಇಟ್ಟರೆ ಅದು ಸ್ವಲ್ಪ ಕುದಿ ಬಂದು ಆಚೆ ಚೆಲ್ಲುತ್ತಿರುತ್ತದೆ. ಆ ರೀತಿ ಆದಂತಹ ಸಂದರ್ಭದಲ್ಲಿ ನಾವು ಕುಕ್ಕರ್ ಒಳಗಡೆಗೆ ಒಂದು ಚಿಕ್ಕದಾಗಿರುವಂತಹ ಸ್ಟೀಲ್ ಬೌಲ್ ಅಥವಾ ಒಂದು ಸ್ಪೂನ್ ಅನ್ನು ಕುಕ್ಕರ್ ಒಳಗಡೆ ಹಾಕಿ ಸಾಂಬಾರ್ ಮಾಡುವುದರಿಂದ ಯಾವುದೇ ರೀತಿಯ ಲೀಕೇಜ್ ಆಗುವುದಿಲ್ಲ. ಈ ಒಂದು ವಿಧಾನ ಬಹಳ ಅಚ್ಚರಿ ಎನಿಸಬಹುದು ಆದರೆ ಇದು ಸತ್ಯ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.