ಏಪ್ರಿಲ್ 23 ಶಕ್ತಿಶಾಲಿ ಚೈತ್ರ ಹುಣ್ಣಿಮೆ, ಹನುಮ ಜಯಂತಿ ಕೂಡ ಇರುವ ಈ ದಿನದಂದು ಒಂದು ವಿಶೇಷ ಮಂತ್ರ ಹೇಳಿ ಈ ಚಿಕ್ಕ ವಸ್ತುವನ್ನು ನಿಮ್ಮ ಬಳಿ ಇಟ್ಟುಕೊಂಡರೆ ಅಂದುಕೊಂಡಿದ್ದೆಲ್ಲಾ ಆಗುತ್ತದೆ ದಾರಿದ್ರ್ಯ ದೂರವಾಗುತ್ತದೆ.! ಏಪ್ರಿಲ್ 23, ಮಂಗಳವಾರ ನೂತನ ಸಂವತ್ಸರದ ಮೊದಲ ಹುಣ್ಣಿಮೆಯ ದಿನವಾಗಿದೆ. ಇದನ್ನು ಚೈತ್ರ ಹುಣ್ಣಿಮೆ ಎಂದು ಕೂಡ ಕರೆಯುತ್ತಾರೆ.
ಇದು ಅತ್ಯಂತ ಶ್ರೇಷ್ಠವಾದ ದಿನವಾಗಿದ್ದು ಈ ದಿನ ಯಾವುದೇ ಕಾರ್ಯವನ್ನು ಆರಂಭಿಸಿದರೂ ಅತ್ಯಂತ ಶುಭ ಎನ್ನುವ ಮಾತುಗಳಿವೆ. ಈ ಬಾರಿಯ ವಿಶೇಷತೆ ಏನೆಂದರೆ ಇದೇ ದಿನ ಹನುಮ ಜಯಂತಿ ಕೂಡ ಇದೆ. ಹನುಮನು ಈ ದಿನ ಜನಿಸಿದರು ಮತ್ತು ಹನುಮನು ದು’ಷ್ಟ ಶಕ್ತಿಗಳ ವಿರುದ್ಧ ಹೋರಾಡಿ ಜಯಶಾಲಿಯಾದ ದಿನ ಎಂದು ಹನುಮ ಜಯಂತಿಯನ್ನು ಆಚರಿಸುತ್ತಾರೆ.
ಈ ಎರಡು ವಿಶೇಷತೆಗಳು ಸೇರಿರುವ ಈ ದಿನದಂದು ನಾವು ಈ ಮುಂದೆ ಹೇಳುವ ನಾಲ್ಕು ವಿಧಾನದಲ್ಲಿ ಯಾವುದಾದರೂ ಒಂದನ್ನು ಪಾಲಿಸಿ ಆಚರಣೆ ಮಾಡಿದರು ನಿಮ್ಮ ಜೀವನದ ಬಹಳ ಕಷ್ಟ ಕಾರ್ಪಣ್ಯಗಳು ದಟ್ಟ ದರಿದ್ರಗಳು ದೂರಾಗಿ ಶುಭದಿನಗಳು ಆರಂಭಗೊಳ್ಳುತ್ತದೆ.
ಈ ಸುದ್ದಿ ಓದಿ:-ಉತ್ತಮ ಪುರುಷರ ಲಕ್ಷಣಗಳು ಇವು, ಈ ನೆಲದ ಪ್ರತಿ ಗಂಡು ಕೂಡ ಇವುಗಳನ್ನು ಪಾಲಿಸಬೇಕು.!
* ಇವುಗಳಲ್ಲಿ ಯಾವುದನ್ನೇ ಆಚರಣೆ ಮಾಡಿದರೂ ಮೊದಲಿಗೆ ಈ ದಿನದಂದು ಹನುಮ ದೇವರನ್ನು ನೆನೆಯುವುದು ಮತ್ತು ಹನುಮನ ದೇವಾಲಯಕ್ಕೆ ಹೋಗಿ ದರ್ಶನ ಪಡೆಯುವುದನ್ನು ಮರೆಯಬೇಡಿ. ಆ ಬಳಿಕ ಅಸಹಾಯಕರಿಗೆ ಅಥವಾ ಅವಶ್ಯಕತೆ ಇರುವವರಿಗೆ ವಿವಿಧ ಬಣ್ಣಗಳಿಂದ ಕೂಡಿದ ವಸ್ತುವನ್ನು ದಾನ ಮಾಡಿ. ಇದು ನಿಮ್ಮ ಜೀವನದ ಮೇಲೆ ಶುಭ ಪರಿಣಾಮ ಬೀರಿ ನಿಮ್ಮ ಕಷ್ಟಗಳು ಕರಗಿಸುತ್ತದೆ
* ಈ ದಿನ ಹುಣ್ಣಿಮೆ ಕೂಡ ಇರುವುದರಿಂದ ಸತ್ಯನಾರಾಯಣನ ಪೂಜೆಯನ್ನು ಅನೇಕರು ಮಾಡಿಸಿರುತ್ತಾರೆ. ನೀವು ಸತ್ಯನಾರಾಯಣ ಪೂಜೆ ಮಾಡಿಸಿದರು ಅಥವಾ ಆಗದಿದ್ದವರು ಪೂಜೆಯಲ್ಲಿ ಪಾಲ್ಗೊಂಡರು ಅಥವಾ ಸತ್ಯನಾರಾಯಣನ ದರ್ಶನ ಪಡೆದರು ಆ ಕಥೆ ಕೇಳಿದರೂ ನಿಮಗೆ ಬಹಳ ಪುಣ್ಯ ಫಲಗಳು ಉಂಟಾಗಿ ನಿಮ್ಮ ಜೀವನ ಉತ್ತಮ ರೀತಿಯಲ್ಲಿ ಬದಲಾಗುತ್ತದೆ.
* ಈ ದಿನ ನಿಮ್ಮ ಮನೆಯಲ್ಲಿರುವ ಆಂಜನೇಯ ಫೋಟೋಗೆ ಕೇಸರಿ ಮತ್ತು ಎಳ್ಳೆಣ್ಣೆಯನ್ನು ಬೆರೆಸಿ, ಫೋಟೋಗೆ ಬೊಟ್ಟುಗಳನ್ನು ಇಟ್ಟು ಆಂಜನೇಯನಿಗೆ ಇಷ್ಟವಾದ ಹಾಲು, ಮೊಸರು, ಬೆಣ್ಣೆ, ತುಪ್ಪ, ಸಿಹಿ ಪದಾರ್ಥಗಳು, ಉದ್ದಿನ ವಡೆ ಕಿತ್ತಳೆ ಹಣ್ಣು, ಸೀತಾಫಲ, ತೆಂಗಿನಕಾಯಿ ಇವುಗಳನ್ನು ನೈವೇದ್ಯ ಇಟ್ಟು ತುಳಸಿ ಮಾಲೆ, ವಿಳ್ಯದೆಲೆ ಮಾಲೆ ಅರ್ಪಿಸಿ ಪೂಜೆ ಮಾಡಿ.
ಈ ಸುದ್ದಿ ಓದಿ:-ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!
ಈ ಒಂದು ವಿಶೇಷ ಮಂತ್ರವನ್ನು ಪಠಣೆ ಮಾಡಿ ಭಕ್ತಿಯಿಂದ ವಾಯುಪುತ್ರನನ್ನು ನೆನೆದರೆ ಸಾಕು ಹನುಮಂತನ ಬಲದಿಂದ ನಿಮ್ಮ ಜೀವನದ ಕಷ್ಟಗಳು ಒಂದೊಂದಾಗಿ ನಿವಾರಣೆಯಾಗಲು ಆರಂಭವಾಗುತ್ತದೆ. ಈ ಮಂತ್ರದ ಜೊತೆ ಹನುಮಾನ್ ಚಾಲೀಸಾ ಹಾಗೂ ಇನ್ನಿತರ ಹನುಮನ ನಾಮ ಸ್ಮರಣೆ ಮಾಡುವಂತಹ ಮಂತ್ರಗಳು ಅಥವಾ ಜೈ ಶ್ರೀ ರಾಮ್ ಜಯ ಜಯ ರಾಮ ಎಂದರೆ ಸಾಕು.
ಮಂತ್ರ:-
ತ್ವಮಸ್ಮಿನ್ ಕಾರ್ಯನಿರ್ಯೋಗೆ ಪ್ರಮಾಣಂ ಹರಿಸತ್ತಮ
ಹನುಮಾನ್ ಯತ್ನಮಾಸ್ಥಾಯಾ ದುಃಖ ಕ್ಷಯಕರೋ ಭವ
* ಹನುಮಂತನ ದೇವಸ್ಥಾನಕ್ಕೆ ಹೋಗಿ 5 ಅಥವಾ 11 ಪ್ರದಕ್ಷಣೆ ಹಾಕಿ ಉದ್ದಿನವಡೆ ಹಾರ, ವೀಳ್ಯದೆಲೆ ಹಾರ, ತುಳಸಿ ಮಾಲೆ ಅರ್ಪಿಸಿ ನಿಮ್ಮ ಶಕ್ತಿಯೇ ಅನುಸಾರ ಒಂದು ಚಿಕ್ಕ ಗಂಟೆಯನ್ನು ನೀಡಿದರೆ ಅಥವಾ ಮನೆಗೆ ಹನುಮಂತನ ಹಿಡಿ ಇರುವ ಘಂಟೆಯನ್ನು ಪೂಜೆ ಮಾಡಲು ತಂದು ದೇವರ ಕೋಣೆಯಲ್ಲಿ ಇಟ್ಟರೆ.
ನಿಮ್ಮ ಕೆಟ್ಟಿರುವ ಸಮಯ ಸರಿಹೋಗುತ್ತದೆ ಮತ್ತು ಹನುಮನು ನಿಮ್ಮನ್ನು ಇನ್ನು ಮುಂದೆ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಸಿ ಕಾಯುತ್ತಾರೆ ಎನ್ನುವ ನಂಬಿಕೆಗಳು ಇವೆ. ತಪ್ಪದೇ ಹುಣ್ಣಿಮೆಯ ದಿನದಂದು ಇಷ್ಟು ಸರಳವಾದ ಈ ಎಲ್ಲಾ ನಿಯಮಗಳಲ್ಲಿ ಯಾವುದಾದರು ಒಂದನ್ನಾದರೂ ಪಾಲಿಸಿ ಹನುಮ ಹಾಗೂ ಶ್ರೀರಾಮರ ಕೃಪೆಗೆ ಪಾತ್ರರಾಗಿ.