Home Useful Information ಉತ್ತಮ ಪುರುಷರ ಲಕ್ಷಣಗಳು ಇವು, ಈ ನೆಲದ ಪ್ರತಿ ಗಂಡು ಕೂಡ ಇವುಗಳನ್ನು ಪಾಲಿಸಬೇಕು.!

ಉತ್ತಮ ಪುರುಷರ ಲಕ್ಷಣಗಳು ಇವು, ಈ ನೆಲದ ಪ್ರತಿ ಗಂಡು ಕೂಡ ಇವುಗಳನ್ನು ಪಾಲಿಸಬೇಕು.!

0
ಉತ್ತಮ ಪುರುಷರ ಲಕ್ಷಣಗಳು ಇವು, ಈ ನೆಲದ ಪ್ರತಿ ಗಂಡು ಕೂಡ ಇವುಗಳನ್ನು ಪಾಲಿಸಬೇಕು.!

ನಾವು ಇಂಗ್ಲಿಷ್ ನಲ್ಲಿ ಜಂಟಲ್ ಮ್ಯಾನ್ ಎಂದು ಸುಲಭವಾಗಿ ಕರೆದು ಬಿಡುತ್ತೇವೆ ಆದರೆ ಈ ಜನರಲ್ ಮ್ಯಾನ್ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಅಷ್ಟೊಂದು ಸುಲಭವಾದ ಮಾತಲ್ಲ. ಮರ್ಯಾದೆ ಪುರುಷೋತ್ತಮನಾದ ಶ್ರೀರಾಮನಿಂದ ಹಿಡಿದು ಲಿಂಗ ಸಮಾನತೆಯನ್ನು ಪ್ರತಿಪಾದಿಸಿದ ಬಸವಣ್ಣನವರು.

ಆದಿಶಂಕರಚಾರ್ಯರಿಂದ ಹಿಡಿದು ಸಿದ್ಧಗಂಗಾ ಶ್ರೀಗಳು ಹೀಗೆ ಸಾವಿರಾರು ಜನ ಮಹಾತ್ಮರು ಮಹಾಮಹಿಮರು ಬದುಕು ಕಳೆದ ಇಂತಹ ಪವಿತ್ರ ಭರತ ಖಂಡದ ಭೂಮಿಯಲ್ಲಿ ನಡೆದಾಡುತ್ತಿರುವ ಪ್ರತಿಯೊಬ್ಬ ಪುರುಷನು ಕೂಡ ಇಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡರೆ ಮತ್ತೊಮ್ಮೆ ರಾಮ ರಾಜ್ಯ ಸ್ಥಾಪನೆಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಈಗ ಕಾಲ ಬಹಳ ಬದಲಾಗಿದೆ ಕಾಲಕ್ಕೆ ತಕ್ಕ ಹಾಗೆ ಬದಲಾಗುವುದು ಜಗದ ನಿಯಮ. ಆದರೆ ನಮ್ಮ ಅಸ್ತಿತ್ವವನ್ನು ಮರೆಯಬಾರದು ಹೀಗಿದ್ದಾಗ ಮಾತ್ರ ಭದ್ರಬುನಾದಿ ಮೇಲೆ ಮುಗಿಲೆತ್ತರಕ್ಕೆ ನಮ್ಮ ಪೀಳಿಗೆ ಬೆಳೆದು ರಾರಾಜಿಸುತ್ತದೆ. ಹಾಗಾಗಿ ಮನೆಯೇ ಮೊದಲ ಪಾಠಶಾಲೆ ಎಂದು ನಂಬಿರುವಂತಹ ನಮ್ಮ ಸಂಸ್ಕೃತಿಯಲ್ಲಿ ಪ್ರತಿ ಪುರುಷನು ಹೀಗೆ ಬಾಳಲಿ ಎನ್ನುವ ಉದ್ದೇಶದಿಂದ ಈಗಿನ ಕಾಲಕ್ಕೆ ಒಬ್ಬ ಉತ್ತಮ ಪುರುಷನಾಗಲು ಕನಿಷ್ಠ ಇಷ್ಟಾದರೂ ಗುಣ ಲಕ್ಷಣವಿರಬೇಕು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಮೀನಾ ರಾಶಿಯವರ ಮೇ ತಿಂಗಳ ರಾಶಿ ಭವಿಷ್ಯ, ಈ ತಿಂಗಳಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆದರೆ ಈ ವಿಚಾರವಾಗಿ ಎಚ್ಚರವಾಗಿರಬೇಕು.!

* ಎಲ್ಲಿ ಸ್ತ್ರೀಯನ್ನು ಪೂಜ್ಯನೀಯ ಕಾಣಲಾಗುತ್ತದೆ ಅಲ್ಲಿ ದೇವಾನುದೇವತೆಗಳು ನೆನೆಸಿರುತ್ತಾರೆ ಎನ್ನುವುದು ಅಕ್ಷರಶಃ ಸತ್ಯವಾದ ಮಾತು. ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಮೊದಲು ಗೌರವ ಕೊಡಿ. ತಾಯಿ, ಮಡದಿ, ಮಕ್ಕಳು, ಸಹೋದರಿ ಇವರನ್ನು ತಾತ್ಸರದಿಂದ ಕಾಣಬೇಡಿ. ನಿಮ್ಮ ಸಮಯ ಮತ್ತು ನಿಮ್ಮ ಬೆಂಬಲ ಸದಾ ಅವರಿಗೆ ಬೇಕು ಒಂದು ವೇಳೆ ಅವರು ಅರಿವಿಲ್ಲದೆ ತಪ್ಪು ಮಾಡಿದರು ಕ್ಷಮಿಸಿ ಶಿ’ಕ್ಷಿಸಿ ತಿದ್ದುವಂತಹ ಸಹನೆಯನ್ನು ಬೆಳೆಸಿಕೊಳ್ಳಿ.

* ನಿಮ್ಮ ಮನೆಯ ಹೆಣ್ಣು ಮಕ್ಕಳೊಂದಿಗೆ ನಿಮ್ಮ ಸಹೋದ್ಯೋಗಿಗಳು ಹಾಗೂ ಸ್ನೇಹಿತೆಯರನ್ನು ಕೂಡ ಗೌರವದಿಂದ ಕಾಣಿ. ಯಾವುದೇ ಸಂದರ್ಭದಲ್ಲಿ ಅವರ ಬಗ್ಗೆ ಅವಮಾನಿಸಿ ಮಾತನಾಡುವುದು ಕಣ್ಣಿನಲ್ಲಿ ನೀರು ಹಾಕಿಸುವುದು ಸುಳ್ಳು ಅಪವಾದ ಹೊರಿಸುವುದು ಇಂತಹ ತಪ್ಪುಗಳನ್ನು ಮಾಡಬೇಡಿ ನಿಮ್ಮ ಸುತ್ತಮುತ್ತ ಇರುವ ಯಾವುದೇ ಹೆಣ್ಣು ಮಗುವಿಗೆ ನಿಜವಾಗಿಯೂ ಸಹಾಯ ಬೇಕಿದ್ದರೆ ನಿಮ್ಮ ಕೈಲಾದಷ್ಟು ಅವರ ತೊಂದರೆ ಪರಿಹರಿಸಿ.

* ಅನಾವಶ್ಯಕವಾಗಿ ಯಾವುದೇ ಸ್ತ್ರೀಯ ಸಹವಾಸ ಮಾಡಬೇಡಿ, ನಿಮ್ಮ ಜೀವನದಲ್ಲಿ ಋಣ ಇದ್ದರೆ ಆಕೆ ಸ್ನೇಹಿತೆಯಾಗಿ ಅಥವಾ ಸಂಬಂಧಿಕರಾಗಿ ನಿಮ್ಮ ಜೀವನಕ್ಕೆ ಬರುತ್ತಾರೆ ಇಲ್ಲವಾದಲ್ಲಿ ಬಲವಂತವಾಗಿ ಯಾರನ್ನು ನಮ್ಮ ಬದುಕಿನಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ ಈ ವಿಚಾರವಾಗಿ ಯಾವುದೇ ಹೆಣ್ಣನ್ನು ಹಿಂಸಿಸಬೇಡಿ.

ಈ ಸುದ್ದಿ ಓದಿ:- ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!

* ಯಾವುದೇ ಹೆಣ್ಣು ಮಗುವನ್ನು ಆಕೆಯ ದೇಹದ ಬಣ್ಣ ಅಥವಾ ಆಕೆಯ ದೇಹದ ಯಾವುದೇ ವಿಕಾರ ಹೇಳಿ ಚುಚ್ಚುಮಾತಿನಿಂದ ಕೊಲ್ಲಬೇಡಿ. ಯಾವುದೇ ಹೆಣ್ಣನ್ನು ನಿಮ್ಮ ಗುಲಾಮರಂತೆ ಬಳಸಿಕೊಳ್ಳಬೇಡಿ, ಯಾವುದೇ ಹೆಣ್ಣಿಗೆ ಬ್ಲಾಕ್ ಮೇಲ್ ಮಾಡಿ ಆಕೆಯ ಜೀವನಕ್ಕೆ ಅಭದ್ರತೆಯನ್ನು ತರಬೇಡಿ.

* ಹೆಣ್ಣಿನೊಂದಿಗೆ ಕೆಟ್ಟದಾಗಿ ವರ್ತಿಸುವ ಮುನ್ನ ಆಕೆಯು ಕೂಡ ಮತ್ತೊಬ್ಬರ ಮಗಳು ಪತ್ನಿ ಇರಬಹುದು ಎನ್ನುವ ಎಚ್ಚರ ಇರಲಿ ಅದರಲ್ಲೂ ಮದುವೆ ಆಗಿರುವ ಹೆಣ್ಣು ಮಕ್ಕಳ ಮೇಲೆ ಕೆಟ್ಟ ದೃಷ್ಟಿಯನ್ನು ಹಾಕಬೇಡಿ ಇದು ನಿಮ್ಮ ಸರ್ವನಾಶಕ್ಕೆ ದಾರಿ ಮಾಡಿಕೊಳ್ಳುತ್ತದೆ.

* ನಿಮ್ಮ ಕುಟುಂಬದಲ್ಲಿರುವ ಯಾವುದೇ ಮಹಿಳೆಗೆ ಯಾವುದಾದರು ವಿಷಯದಲ್ಲಿ ಪ್ರತಿಭೆ ಇದ್ದರೆ ಆಕೆಯನ್ನು ಆ ಕ್ಷೇತ್ರದಲ್ಲಿ ಬೆಳೆಯಲು ಸಹಕಾರ ನೀಡಿ.

ಈ ಸುದ್ದಿ ಓದಿ:- ನಿಮ್ಮ ಮಗುವಿಗೆ ಈ ಹೆಸರಿಟ್ಟರೆ ತುಂಬಾ ಅದೃಷ್ಟ.!

* ಹೆಣ್ಣು ಮಕ್ಕಳು ಹೂವಿನಂತೆ ಆಕೆ ನಕ್ಕರೆ ಆ ಕುಟುಂಬವೇ ನಂದನವನ ಜೀವನ ಎಲ್ಲಾ ಕಷ್ಟಗಳನ್ನು ಹೊರುವ ಶಕ್ತಿ ಇಡುವುದು ಅಷ್ಟೇ ಅಚ್ಚುಕಟ್ಟಾಗಿ ಹೊರಗಿನ ಜವಾಬ್ದಾರಿ ಜೊತೆ ಮನೆ ಹಾಗೂ ಮನೆತನದ ಕರ್ತವ್ಯವನ್ನು ಕೂಡ ಮೆರೆಯುವ ಶಕ್ತಿ ಇರುವುದು ಹೆಣ್ಣಿಗೆ, ಆಕೆಗೆ ಜೊತೆಯಾಗಿ ಆಕೆಗೆ ಧೈರ್ಯವಾಗಿ.

LEAVE A REPLY

Please enter your comment!
Please enter your name here