ರವಿಯು ಈಗ 2ನೇ ಮನೆಯಲ್ಲಿ, ಮೇ 15ರ ನಂತರ 3ನೇ ಮನೆಯಲ್ಲಿ ಸಂಚಾರ ಮಾಡುವುದರಿಂದ ಮೇ ತಿಂಗಳಲ್ಲಿ ಮೀನ ರಾಶಿಯವರು ಬಹಳ ಉತ್ತಮ ಪರಿಣಾಮಗಳನ್ನು ಪಡೆಯುತ್ತಿದ್ದಾರೆ ಅದರಲ್ಲೂ ಆರೋಗ್ಯದ ವಿಚಾರವಾಗಿ ಬಹಳ ಶುಭವಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ನಿಮಗೆ ಆರೋಗ್ಯ ಸಮಸ್ಯೆ ಇದ್ದರೆ ಅಥವಾ ನಿಮ್ಮ ಕುಟುಂಬದಲ್ಲಿ ಮಡದಿಗೋ ಮಕ್ಕಳಿಗೋ ಅಥವಾ ತಂದೆ ತಾಯಿಗೋ ಅನಾರೋಗ್ಯ ಉಂಟಾಗಿ ನೀವು ನೋ’ವಿನಲ್ಲಿದ್ದರೆ ನಿಮ್ಮ ಚಿಂತೆ ಪರಿಹಾರ ಈ ಮೇ ತಿಂಗಳಿನಲ್ಲಿ ಆಗುತ್ತದೆ ಆರೋಗ್ಯ ವಿಚಾರವಾಗಿ ವಿಷಯ ಇತ್ಯರ್ಥವಾಗಿ ಮನಸ್ಸು ನಿರಾಳವಾಗುತ್ತದೆ.
ಕುಟುಂಬ ಸೌಖ್ಯ ಇರುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಯಾವುದಕ್ಕೂ ಕೊರತೆ ಇರುವುದಿಲ್ಲ ಬಹಳ ಉತ್ತಮವಾದ ಸಮಯವನ್ನು ಕುಟುಂಬದೊಂದಿಗೆ ಸಂತೋಷವಾಗಿ ಈ ತಿಂಗಳಲ್ಲಿ ಕಳೆಯುತ್ತೀರಿ. ಆದರೆ ಮಂಗಳ ಗ್ರಹದ ದೋಷಗಳು ಉಂಟಾಗಿರುವುದರಿಂದ ಪತಿಪತ್ನಿ ಸಂಬಂಧದ ನಡುವೆ ವಿ’ರ’ಸವಾಗಬಹುದು.
ಈ ಸುದ್ದಿ ಓದಿ:- ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!
ಮೀನ ರಾಶಿಯವರಿಗೆ ಜನ್ಮಸ್ಥಾನವಾದ ಒಂದನೇ ಮನೆಯಲ್ಲಿ ಮಂಗಳ ಗ್ರಹ ಸಂಚಾರ ಮಾಡುತ್ತಿರುವುದು ದಾಂಪತ್ಯದಲ್ಲಿ ಸಣ್ಣ ಪುಟ್ಟ ಕ’ಲ’ಹ ಮ’ನ’ಸ್ತಾ’ಪ ಮಾತುಗಳಾಗಬಹುದು ಅಥವಾ ಅನಿವಾರ್ಯ ಕಾರಣಗಳಿಂದ ಕೆಲ ದಿನಗಳ ಕಾಲ ಇಬ್ಬರು ದೂರವಾಗಿ ವಾಸಿಸಬೇಕಾಗಿ ಬರಬಹುದು ಎನ್ನುವುದನ್ನು ಸೂಚಿಸುತ್ತಿದೆ.
ಆದರೆ ಗುರುವಿನ ಬಲವು ಉತ್ತಮವಾಗಿರುವುದರಿಂದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕೊಡುವುದು ಮಾತ್ರವಲ್ಲದೆ ಈ ರೀತಿಯಾಗಿ ಮಂಗಳ ಗ್ರಹದಿಂದ ಉಂಟಾಗಿರುವ ದೋಷವನ್ನು ಕೂಡ ಗುರುಗ್ರಹದ ಪ್ರಭಾವವು ಕಡಿಮೆ ಮಾಡುತ್ತಿದೆ ದೇವಗುರುವಿನ ಅನುಗ್ರಹ ಬಲದಿಂದ ಕಲ್ಲಿನಂತೆ ಬಂದ ಕಷ್ಟವು ಮಂಜಿನಂತೆ ಕರಗುತ್ತಿದೆ.
ಆದರೆ ನೀವು ಈ ವಿಚಾರವಾಗಿ ಮುನ್ನೆಚ್ಚರಿಕೆಯಿಂದ ಇದ್ದು ಆದಷ್ಟು ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುವುದು ಇನ್ನೂ ಉತ್ತಮ. ಬುಧನು ಕೂಡ ಒಂದನೇ ಮನೆ ಹಾಗೂ ಎರಡನೇ ಮನೆಯಲ್ಲಿ ಸಂಚಾರ ಮಾಡುವುದರಿಂದ ನಿಮ್ಮ ಕೀರ್ತಿ ಹೆಚ್ಚಾಗುತ್ತದೆ.
ಈ ಸುದ್ದಿ ಓದಿ:- ಬಾಯಿಯಲ್ಲಿ ನೀರೂರಿಸುವ ಮಾವಿನಕಾಯಿ ತಿಳಿ ಸಾರು, ಮಾವಿನಕಾಯಿ ರಸಂ ಮಾಡುವ ವಿಧಾನ.!
ವ್ಯಾಪಾರ, ವ್ಯವಹಾರ ವೃದ್ಧಿಯಾಗಿ ಹೊಸ ಸಂಪರ್ಕಗಳು ಬೆಳೆಯುತ್ತವೆ ಸ್ನೇಹಿತರ ಸಹಕಾರದಿಂದ ಅಪಾರ ಧನ ಲಾಭ ಯೋಗ ಇದ್ದು, ಮದ್ಯಸ್ತಿಕೆ ವಹಿಸುವ ವಿಚಾರಗಳಲ್ಲಿ ನಿಮ್ಮ ಮಾತಿಗೆ ಬಹಳ ಮಾನ್ಯತೆ ಸಿಗುತ್ತದೆ. ಅದಾಗಿ ಯಾವುದೇ ಕಲಿಕೆ ವಿಚಾರಗಳಲ್ಲಿ ಆಸಕ್ತಿ ತೋರುವುದಿದ್ದರೆ ಈ ಸಮಯದಿಂದ ಅಭ್ಯಾಸ ಪ್ರಾರಂಭ ಮಾಡುವುದು ಬಹಳ ಉತ್ತಮ.
ಯಾಕೆಂದರೆ ಈಗಿನ ತೊಡಗಿಕೊಳ್ಳುವಿಕೆ ಹಾಗೂ ಒಳ್ಳೆಯ ನಿರ್ಧಾರಗಳು ಇಷ್ಟೇ ಶುಭ ಫಲಿತಾಂಶಗಳನ್ನು ಮುಂದಿನ ದಿನಗಳಲ್ಲಿ ತಂದು ಕೊಡಲಿದೆ. ಶುಕ್ರನ ಸ್ಥಾನವೂ ಕೂಡ ಬಲವಾಗಿರುವುದರಿಂದ ಎರಡನೇ ಮನೆಯಲ್ಲಿ ಶುಕ್ರನ ಸಂಚಾರ ಇರುವುದರಿಂದ ಪ್ರೀತಿ ಪ್ರೇಮದಲ್ಲಿ ಬಿದ್ದಿರುವವರು ಅದನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತಿದ್ದರೆ ಕುಟುಂಬದ ಅನುಮತಿಯೊಂದಿಗೆ ನಿಶ್ಚಿತಾರ್ಥವಾಗುವ ಅಥವಾ ವಿವಾಹಕ್ಕೆ ಒಪ್ಪಿಗೆ ಪಡೆಯುವಂತಹ ಯೋಗಗಳನ್ನು ಪಡೆಯುತ್ತಿದ್ದಾರೆ.
ಸುಖ ಭೋಜನ ಮತ್ತು ಅತ್ಯಂತ ಮನೋರಂಜನೆಯಲ್ಲಿ ಈ ಸಮಯವನ್ನು ಕಳೆಯಲಿದ್ದಾರೆ. ಹಣಕಾಸಿನ ವಿಚಾರದಲ್ಲಿ ಕೂಡ ಬಹಳ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿದ್ದಾರೆ ಈ ವಿಚಾರದಲ್ಲಂತೂ ಕೈ ಹಾಕಿದ್ದೆಲ್ಲ ಚಿನ್ನವಾಗುವಂತಹ ಯೋಗವು ಮೀನ ರಾಶಿಯವರಿಗೆ ಒಲಿದಿದೆ ಎಂದು ಹೇಳಬಹುದು.
ಈ ಸುದ್ದಿ ಓದಿ:- ನಿಮ್ಮ ರಾಶಿಗೆ ಅನುಗುಣವಾಗಿ ಶುಭ ವಾರ, ಶುಭ ದಿಕ್ಕು, ಶುಭ ಬಣ್ಣ, ಮತ್ತು ಶುಭ ಸಂಖ್ಯೆಗಳ ಬಗ್ಗೆ ತಿಳಿದುಕೊಳ್ಳಿ.!
ಸಮಯವನ್ನು ಉತ್ತಮವಾಗಿ ಉಪಯೋಗಿಸಿಕೊಂಡು ಒಳ್ಳೆ ಕಡೆ ಹಣ ಹೂಡಿಕೆ ಮಾಡಿ ಜೀವನಪೂರ್ತಿ ಇದರ ಲಾಭವನ್ನು ಅನುಭವಿಸುವ ರೀತಿಯಾಗಿ ಯೋಚನೆ ಮಾಡಿ. ಹೀಗೆ ಮಂಗಳ ಗ್ರಹ ಹೊರತುಪಡಿಸಿ ಬಹುತೇಕ ಎಲ್ಲಾ ಗ್ರಹಗಳ ಫಲವು ಶುಭವಾಗಿದೆ. ಸಣ್ಣ ಪುಟ್ಟ ದೋಷಗಳು ಗುರುಬಲದಿಂದ ಕಳೆಯುತ್ತಿದೆ. ಇನ್ನು ಹೆಚ್ಚಿನ ಶುಭಫಲಗಳನ್ನು ಪಡೆಯುವುದಕ್ಕಾಗಿ ನವಗ್ರಹ ಆರಾಧನೆ ಮಾಡಿ ಮತ್ತು ನಿಮ್ಮ ಕುಲದೇವ ಹಾಗೂ ಇಷ್ಟ ದೇವರಿಗೆ ಪ್ರತಿದಿನವೂ ಪ್ರಾರ್ಥನೆ ಮಾಡಿ.