ವ್ಯಕ್ತಿಯ ಸಂತೋಷ ಮತ್ತು ಸಮೃದ್ಧಿಯಲ್ಲಿನ ಅಡೆತಡೆಗೆ ಹೆಚ್ಚಾಗಿ ಮನೆಯ ವಾಸ್ತು ಕಾರಣವಾಗಿರುತ್ತೆ, ಅದರ ಬಗ್ಗೆ ಹೆಚ್ಚಾಗಿ ಯಾರಿಗೂ ತಿಳಿದಿಲ್ಲ. ವಾಸ್ತು ಸಂಬಂಧಿತ ತಪ್ಪುಗಳಿಂದಾಗಿ, ವ್ಯಕ್ತಿಯು ಮಾನಸಿಕ ವಾಗಿ ನರಳುತ್ತಾನೆ ಮತ್ತು ಆರ್ಥಿಕವಾಗಿ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ.
ವಾಸ್ತವವಾಗಿ ವಾಸ್ತು ಸಂಬಂಧಿತ ದೋಷಗಳು ಮನೆಯಲ್ಲಿ ನಕಾ ರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ, ಇದರಿಂದ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕೆಲವು ಪರಿಹಾರಗಳನ್ನು ಪ್ರಯತ್ನಿಸಿದರೆ, ಖಂಡಿತವಾಗಿಯೂ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು ಎಂದು ವಾಸ್ತು ವಿಜ್ಞಾನದಲ್ಲಿ ತಿಳಿಸಲಾಗಿದೆ.
* ಲಕ್ಷ್ಮಿ ದೇವಿಯ ಚಿತ್ರವನ್ನು ಈ ಜಾಗದಲ್ಲಿರಿಸಿ: ಮನೆಯ ಉತ್ತರ ದಿಕ್ಕಿನಲ್ಲಿ, ಕಮಲಾಸನದ ಮೇಲೆ ಕುಳಿತಿರುವ ಮತ್ತು ಚಿನ್ನದ ನಾಣ್ಯಗಳನ್ನು ಬೀಳಿಸುತ್ತಿರುವ ಲಕ್ಷ್ಮಿ ದೇವಿ ಚಿತ್ರವನ್ನು ಹಾಕಿ. ಅಂತಹ ಚಿತ್ರವನ್ನು ಹಾಕುವುದು ಶುಭವೆಂದು ಪರಿಗಣಿಸಲಾಗುತ್ತದೆ, ಇದು ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ. ಅಲ್ಲದೆ, ನೀವು ಗಿಳಿಯ ಚಿತ್ರವನ್ನು ಉತ್ತರ ದಿಕ್ಕಿನಲ್ಲಿ ಹಾಕಿದರೆ ಅದು ಅಧ್ಯಯನ ಮಾಡುವ ಮಕ್ಕಳಿಗೆ ತುಂಬಾ ಒಳ್ಳೆಯದು.
ಈ ಸುದ್ದಿ ಓದಿ:-ಮೀನಾ ರಾಶಿಯವರ ಮೇ ತಿಂಗಳ ರಾಶಿ ಭವಿಷ್ಯ, ಈ ತಿಂಗಳಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆದರೆ ಈ ವಿಚಾರವಾಗಿ ಎಚ್ಚರವಾಗಿರಬೇಕು.!
* ಮನೆಯ ಪ್ರವೇಶ ದ್ವಾರದಲ್ಲಿ ನವಿಲುಗರಿಯನ್ನು ಬೀಸಣಿಕೆಯಂತೆ ಮಾಡಿ ಕಟ್ಟುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶ ವಾಗದಂತೆ ತಡೆಯಬಹುದು.
* ನಿಮ್ಮ ಮನೆಯಲ್ಲಿ ಬೋರು ನೀರು ದಕ್ಷಿಣದಲ್ಲಿದ್ದರೆ ಅದು ಬಹಳ ದೊಡ್ಡ ದೋಷವಾಗುತ್ತದೆ. ಇದರಿಂದ ಮನೆಯ ಮಹಿಳೆಯರ ಆರೋಗ್ಯ ಕೆಡುತ್ತದೆ ಹಾಗೂ ಖರ್ಚು ಸಹ ಹೆಚ್ಚಾಗುತ್ತದೆ.
* ಗೃಹಿಣಿಯರು ದಕ್ಷಿಣದ ಕಡೆ ಮುಖ ಮಾಡಿ ಅಡುಗೆ ಮಾಡುವವರಿಗೆ ಕುತ್ತಿಗೆ, ಮೂಳೆಗಳಲ್ಲಿ ನೋವು, ಬೆನ್ನು ನೋವಿನ ತೊಂದರೆ ಮುಂತಾದ ಸಮಸ್ಯೆಗಳು ಕಾಡುತ್ತವೆ.
* ಮಲಗುವ ಮುನ್ನ ಬೆಡ್ ರೂಮಿನಲ್ಲಿ ಎಳ್ಳೆಣ್ಣೆ ದೀಪ ಹಚ್ಚಿದರೆ ಒಳಿತು. ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಬಾರದು, ಇದು ದುಃಖ, ಅನಾರೋಗ್ಯ ಮತ್ತು ಅಸಂತೋಷವನ್ನು ಉಂಟುಮಾಡುತ್ತದೆ.
* ಋಣಾತ್ಮಕ ಶಕ್ತಿಯನ್ನು ದೂರವಿರಿಸಲು ಅರಿಶಿಣವನ್ನು ಬಳಸ ಬಹುದು. ಅರಿಶಿನದ ಬಳಕೆಯ ಮೂಲಕ ಆರ್ಥಿಕ ಸಮಸ್ಯೆ ಹಾಗೂ ಆರೋಗ್ಯದ ಸಮಸ್ಯೆಯನ್ನು ನಿವಾರಿಸಬಹುದು.
* ಮನೆಯಲ್ಲಿರುವ ವಾಸ್ತುದೋಷವನ್ನು ನಿವಾರಿಸಲು ಅರಿಶಿಣ ಮಿಶ್ರಿತ ನೀರನ್ನು ನಿಯಮಿತವಾಗಿ 15 ದಿನಗಳವರೆಗೆ ನಂತರದಲ್ಲಿ ವಾರ ಕ್ಕೊಮ್ಮೆ, ಮನೆಯ ಮುಂದೆ ಸಿಂಪಡಿಸಿದರೆ ಒಳ್ಳೆಯದು. ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಮನೆಯ ಮುಖ್ಯ ಪ್ರವೇಶ ದ್ವಾರದ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಬೇಕು.
ಈ ಸುದ್ದಿ ಓದಿ:-ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!
* ಮನೆಯ ಸಮೃದ್ಧಿಗಾಗಿ ಶುಭದಿನದಂದು 5 ಅರಿಶಿನದ ಕೊಂಬನ್ನು, ಅಕ್ಕಿ ಮತ್ತು 5 ಅಡಿಕೆಯನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಸುರಕ್ಷಿತವಾಗಿ ಒಂದು ಸ್ಥಳದಲ್ಲಿ ಇಡಿ ಇದು ಸಂಪತ್ತನ್ನು ಆಕರ್ಷಿಸುವುದು.
* ರಾತ್ರಿ ವೇಳೆ ಕೊರತೆಯನ್ನು ಮನೆಯ ಹೊರಗೆ ಅಥವಾ ಮುಖ್ಯ ದ್ವಾರದ ಬಳಿ ಇಡುವುದು ಶುಭಕಾರಕ ಎಂಬ ನಂಬಿಕೆ ಇದೆ. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವು ದಿಲ್ಲವಂತೆ.
* ನಿವೇಶನದ ಮುಂಭಾಗ ಉತ್ತರ ದಿಕ್ಕು ಋಷಿಮುನಿಗಳಿಗೆ, ಪೂರ್ವ ದಿಕ್ಕು ರಾಜರುಗಳಿಗೆ, ದಕ್ಷಿಣ ದಿಕ್ಕು ವೈಶ್ಯರುಗಳಿಗೆ, ಮತ್ತು ಪಶ್ಚಿಮ ದಿಕ್ಕು ಉಳಿದವರಿಗೆ ಶ್ರೇಯಸ್ಕರ.
* ಸಕಾರಾತ್ಮಕ ಶಕ್ತಿಯ ಹರಿವನ್ನು ತಡೆಯದಂತೆ ಕೋಣೆಯಲ್ಲಿರುವ ಪೀಠೋಪಕರಣಗಳು ಗೋಡೆಗಳಿಂದ ಕೆಲವು ಇಂಚುಗಳಷ್ಟು ದೂರ ದಲ್ಲಿ ಇರಬೇಕು. ಮಂಚವನ್ನು ಮರದಿಂದ ಮಾಡಿರಬೇಕು. ಮಲಗುವ ಕೋಣೆಯು ಆಗ್ನೇಯ ಮೂಲೆಯಲ್ಲಿರುವ ಬೆಳಕು ಸಕಾರಾತ್ಮಕ ಶಕ್ತಿ ಮತ್ತು ಉತ್ತಮ ಆರೋಗ್ಯವನ್ನು ತರುತ್ತದೆ.
* ಧಾರ್ಮಿಕ ಗ್ರಂಥಗಳ ಪ್ರಕಾರ, ಒಬ್ಬ ವ್ಯಕ್ತಿಯು ನೆಲದ ಮೇಲೆ ಕುಳಿತು ಆಹಾರವನ್ನು ಸೇವಿಸಬೇಕು. ಏಕೆಂದರೆ ಕುರ್ಚಿ ಅಥವಾ ಹಾಸಿಗೆಯ ಮೇಲೆ ಕುಳಿತು ತಿನ್ನುವುದರಿಂದ ರಕ್ತ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.