ಸಕ್ಸಸ್ ಎನ್ನುವುದ ಸರಿಯಾದ ಡೆಫ್ನೇನೇಷನ್ ಅನ್ನು ಈ ರೀತಿ ಹೇಳಬಹುದು ಎನಿಸುತ್ತದೆ. ಎಲ್ಲಿ ನಮಗೆ ಬೆಲೆ ಇರುವುದಿಲ್ಲವೋ ಅಲ್ಲಿ ಬಲವಾಗಿ ಬೆಳೆದು ಹೆಮ್ಮರವಾಗುವುದು ಎಂದು. ಈಗ ಅದಕ್ಕೆ ಅನ್ವರ್ಥವಾಗಿ ಸುದೀಪ್ ಎಂದು ಹೇಳಬಹುದು. ಯಾಕೆಂದರೆ ಸುದೀಪ್ ಅವರು ಬಾಲ್ಯದಿಂದಲೂ, ತಾನೊಬ್ಬ ಸಿನಿಮಾ ಹೀರೋ ಆಗಬೇಕು ಎಂದು ಕನಸು ಕಟ್ಟಿಕೊಂಡು ಅದಕ್ಕಾಗಿ ಮುಂಬೈ ಗೆ ಹೋಗಿ ತರಬೇತಿ ಪಡೆದುಕೊಂಡು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು.
ಆದರೆ ಆರಂಭದ ದಿನಗಳಲ್ಲಿ ಇವರನ್ನು ಆರಡಿ ಹೈಟು, ಐರನ್ ಲೆಗ್, ಎಮ್ಮೆ ತರಹ ಧ್ವನಿ ಇದೆ ಎಂದೆಲ್ಲಾ ಅವಮಾನ ಮಾಡಿ ಹೀಯಾಳಿಸಿದರು. ಆದರೆ ಇಂದು ಅದೇ ಬೇಸ್ ವಾಯ್ಸ್ ಗಾಗಿ, ಆರಡಿ ಹೀರೋಗಾಗಿ ಕನ್ನಡ ಸಿನಿಮಾ ರಂಗ ಮಾತ್ರವಲ್ಲದೆ ಭಾರತದ ಎಲ್ಲಾ ಚಿತ್ರರಂಗದವರು ಕೂಡ ಕರೆದು ಮಣೆ ಹಾಕುತ್ತಿದ್ದಾರೆ. ಅಗರ್ಭ ಶ್ರೀಮಂತನಾಗಿ ಹುಟ್ಟಿದರೂ ಕೂಡ ಸಿನಿಮಾ ಆಸೆಗಾಗಿ ಇಂಡಸ್ಟ್ರಿಗೆ ಬಂದಮೇಲೆ ಒಂದೇ ಒಂದು ಸಕ್ಸಸ್ ಆಗಿ ಸುದೀಪ್ ಅವರು ಸಾಕಷ್ಟು ಶ್ರಮ ಪಡುವುದಲ್ಲದೇ ಕಣ್ಣೀರು ಸಹಾ ಹಾಕಿದ್ದಾರೆ.
ಅಂತಹ ಟೈಮಲ್ಲಿ ಸುದೀಪ್ ಅವರ ಅದೃಷ್ಟ ಬದಲಾಯಿಸಿದ ಚಿತ್ರ ಎಂದರೆ ಅದು ಹುಚ್ಚ ಸಿನಿಮಾ. ಹುಚ್ಚ ಸಿನಿಮಾ ತಯಾರಾಗುವ ವೇಳೆ ಇಂಡಸ್ಟ್ರಿಯಲ್ಲಿ ಸುದೀಪ್ ಬಗ್ಗೆ ಒಂದು ಗಂಭೀರವಾದ ಅಭಿಪ್ರಾಯ ಶುರುವಾಗಿದ್ದು ಎಂದು ಹೇಳಬಹುದು. ಆಗ ಹುಚ್ಚ ಸಿನಿಮಾವನ್ನು ತೆರೆ ಮೇಲೆ ತರುವ ಮುನ್ನ ವಿಷ್ಣುವರ್ಧನ್ ಅವರಿಗೆ ತೋರಿಸಬೇಕು ಎನ್ನುವುದು ಸುದೀಪ್ ಆಸೆ ಆಗಿತ್ತು. ಯಾಕೆಂದರೆ ವಿಷ್ಣುವರ್ಧನ್ ಅವರು ಸುದೀಪ್ ಅವರ ಫೇವರಿಟ್ ಹೀರೋ ಮಾತ್ರ ಅಲ್ಲದೆ ಅವರ ಅನೇಕ ವಿಷಯಗಳನ್ನು ತಮ್ಮ ಜೀವನದಲ್ಲಿ ಅವರು ಆಗಿನಿಂದಲೇ ಅಳವಡಿಸಿಕೊಂಡಿದ್ದರು.
ವಿಷ್ಣುವರ್ಧನ್ ಅವರನ್ನು ಸುದೀಪ್ ಅವರು ಅಘೋಷಿತ ಗುರು ಎಂದೇ ಪರಿಗಣಿಸಿದ್ದಾರೆ. ಇಂದಿಗೂ ಸಹ ಸುದೀಪ್ ಅವರಲ್ಲಿ ವಿಷ್ಣುವರ್ಧನ್ ಅವರ ಛಾಯೆಯನ್ನು ಇಂಡಸ್ಟ್ರಿಯ ಹಲವರು ಕಾಣುತ್ತಿದ್ದಾರೆ. ಹೀಗಾಗಿ ವಿಷ್ಣುವರ್ಧನ್ ಅವರ ಅಭಿಪ್ರಾಯ ಸುದೀಪ್ ಅವರಿಗೆ ಬಹಳ ಮುಖ್ಯವಾಗಿದ್ದ ಕಾರಣ ಹುಚ್ಚ ಸಿನಿಮಾವನ್ನು ವಿಷ್ಣುವರ್ಧನ್ ಅವರಿಗೆ ತೋರಿಸಿದರು. ಆ ಸಿನಿಮಾ ನೋಡಿದ ತಕ್ಷಣವೇ ವಿಷ್ಣುವರ್ಧನ್ ಸುದೀಪ್ ಅವರನ್ನು ನೋಡಿ ಇಷ್ಟು ದಿನ ಎಲ್ಲಿದ್ದೀರಿ ಸುದೀಪ್ ಎಷ್ಟು ಚೆನ್ನಾಗಿ ನಟನೆ ಮಾಡಿದ್ದೀರಾ.
ಈ ಸಿನಿಮಾದಿಂದ ಖಂಡಿತ ನಿಮ್ಮ ಅದೃಷ್ಟ ಬದಲಾಗುತ್ತದೆ ನೋಡಿ ಎಂದು ಭವಿಷ್ಯ ಹೇಳಿದ್ದಾರಂತೆ. ಅದೇ ರೀತಿ ಸುದೀಪ್ ಅವರ ಅದೃಷ್ಟ ಬದಲಾಯಿಸಿದ ಚಿತ್ರ ಹುಚ್ಚ. ಹುಚ್ಚ ಸಿನಿಮಾದ ಬಳಿಕ ಸುದೀಪ್ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಇಂದು ಬಹು ಭಾಷೆಗಳ ಬೇಡಿಕೆ ನಟನಾಗಿ ನ್ಯಾಷನಲ್ ಸ್ಟಾರ್ ಆಗಿ ಸುದೀಪ್ ಅವರು ಬೆಳೆದಿದ್ದಾರೆ. ವಿಷ್ಣುವರ್ಧನ್ ಮತ್ತು ಸುದೀಪ್ ಅವರನ್ನು ಒಟ್ಟಿಗೆ ತೆರೆ ಮೇಲೆ ನೋಡಬೇಕು ಎನ್ನುವ ಅಭಿಲಾಷೆ ಆಗಿನಿಂದಲೂ ಅವರಿಬ್ಬರ ಅಭಿಮಾನಿಗಳಿಗೂ ಇತ್ತು.
ಆ ಸಿನಿಮಾ ಮಾತಾಡು ಮಾತಾಡು ಮಲ್ಲಿಗೆ ಸಿನಿಮಾದ ಒಂದು ಹಾಡು ಹಾಗೂ ಒಂದು ದೃಶ್ಯದ ಸನ್ನಿವೇಶದಲ್ಲಿ ಸಾಧ್ಯವಾಯಿತು. ಆದರೂ ಕೂಡ ಪೂರ್ತಿ ಪ್ರಮಾಣದ ಸಿನಿಮಾದಲ್ಲಿ ಸುದೀಪ್ ಅವರು ವಿಷ್ಣು ಮಗನಾಗಿ ಅಭಿನಯಿಸಬೇಕು ಎಂದು ಸಹ ಕಿಚ್ಚನ ಅನೇಕ ಅಭಿಮಾನಿಗಳು ಆಸೆಪಟ್ಟಿದರು. ಆದರೆ ಅದೆಲ್ಲ ಈಡೇರುವ ಮುನ್ನವೇ ಬಹಳ ಬೇಗ ಇಂಡಸ್ಟ್ರಿಯ ವಿಷ್ಣು ಎನ್ನುವ ಮಾಣಿಕ್ಯ ಮರೆಯಾಗಿ ಹೋಯಿತು.