ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು 2015 ರಲ್ಲಿ ಹೆಣ್ಣು ಮಕ್ಕಳ ಭವಿಷ್ಯವನ್ನು ಭದ್ರಗೊಳಿಸುವ ಕಾರಣದಿಂದಾಗಿ ಮುಂದಾಲೋಚನೆಯಿಂದ ಸುಕನ್ಯಾ ಸಮೃದ್ಧಿ ಯೋಜನೆ (SSY) ಎನ್ನುವ ಹೊಸ ಯೋಜನೆಯನ್ನು ಪರಿಚಯಿಸಿದರು.
ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕಬೇಕು ಎಂದರೆ ಹೆಣ್ಣು ಮಕ್ಕಳ ಪೋಷಕರು ತಮ್ಮ ಹೆಣ್ಣು ಮಕ್ಕಳು ಒಂದು ಹಂತಕ್ಕೆ ಬಂದಾಗ ಅವರ ವಿದ್ಯಾಭ್ಯಾಸದ ಅಸಕ್ತಿಯನ್ನು ಪೂರೈಸಲು ಅಥವಾ ಅವರನ್ನು ಒಂದೊಳ್ಳೆ ಸಂಬಂಧಕ್ಕೆ ಮದುವೆ ಮಾಡಿಕೊಡಲು ಅಥವಾ ಅವರು ಉದ್ದಿಮೆ ಮಾಡಲು ಬಯಸಿದರೆ ಅದಕ್ಕೆ ಬಂಡವಾಳಕ್ಕಾಗಿ ಖರ್ಚು ಮಾಡಲು ಅಲ್ಪ ಮೊತ್ತದ ಹಣವನ್ನಾದರೂ ಹೊಂದಿರಬೇಕು.
2024ರಲ್ಲಿ ತುಲಾ ರಾಶಿಯವರಿಗೆ ಈ ವಿಚಾರವಾಗಿ ಮೋಸವಾಗುವ ಸಾಧ್ಯತೆ ಇದೆ ಎಚ್ಚರ.!
ಆದರೆ ದಿಢೀರ್ ಎಂದು ಲಕ್ಷಗಟ್ಟಲೇ ಹಣವನ್ನು ಒಟ್ಟಿಗೆ ತರಲು ಬಡ ಹಾಗೂ ಸಾಮಾನ್ಯ ವರ್ಗದವರಿಗೆ ಸಾಧ್ಯವಾಗುವುದಿಲ್ಲ ಇಂತಹ ಜವಾಬ್ದಾರಿಗಳಿದ್ದಾಗ ದಿಕ್ಕು ತೋಚದಂತಾಗುತ್ತದೆ. ಮಕ್ಕಳು ಚಿಕ್ಕವರಿರುವಾಗಲೇ ಅವರ ಹೆಸರಿನಲ್ಲಿ ಪ್ರತಿ ತಿಂಗಳು ಅಥವಾ ವಾರ್ಷಿಕವಾಗಿ ಒಂದು ಸ್ವಲ್ಪ ಹಣವನ್ನು ಕೂಡಿಟ್ಟಿದ್ದರೆ ಅದು ಭವಿಷ್ಯದಲ್ಲಿ ಹನಿಹನಿ ಕೂಡಿದರೆ ಹಳ್ಳ ಎನ್ನುವ ರೀತಿ ಕಷ್ಟ ಕಾಲಕ್ಕೆ ಅನುಕೂಲಕ್ಕೆ ಬರುತ್ತದೆ.
ಈ ಹಣವನ್ನು ನೀವು ಸರ್ಕಾರದ ಉತ್ತಮ ಯೋಜನೆಗಳಲ್ಲಿ ಹೂಡಿದರೆ ಭದ್ರತೆಯೊಂದಿಗೆ ಸರ್ಕಾರವು ನಿಮಗೆ ಬಡ್ಡಿ ಸಮೇತವಾಗಿ ಹಣ ಹಿಂತಿರುಗಿಸಲಿದೆ. ಸದ್ಯಕ್ಕೆ ಸುಕನ್ಯ ಸಮೃದ್ಧಿ ಯೋಜನೆ ಇಂಥಹದೇ ಒಂದು ಉದ್ದೇಶದಿಂದ ತಯಾರಾಗಿರುವ ಯೋಜನೆಯಾಗಿದ್ದು ಈ ಯೋಜನೆಯಲ್ಲಿ ಹೆಣ್ಣು ಮಕ್ಕಳ ಪೋಷಕರು ತಮ್ಮ ಹೆಣ್ಣು ಮಗುವಿಗೆ ಹತ್ತು ವರ್ಷ ತುಂಬುವ ಮುನ್ನವೇ.
ಸ್ವಂತ ಮನೆ ಕನಸು ಇದ್ದವರು ಈ ಕೆಲಸ ಮಾಡಿ ಸಾಕು.! ವರ್ಷದೊಳಗೆ ಮನೆ ಕಟ್ಟುತ್ತಿರಾ.!
ಅಂಚೆ ಕಚೇರಿಯಲ್ಲಿ ಅಥವಾ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಸುಕನ್ಯ ಸಮೃದ್ಧಿ ಯೋಜನೆ ಖಾತೆ ತೆಗೆದು ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ವಾರ್ಷಿಕವಾಗಿ ಕನಿಷ್ಠ 250 ರಿಂದ ಗರಿಷ್ಠ 1.5 ಲಕ್ಷದವರೆಗೆ ನಿಮ್ಮ ಕೈಲಾದಷ್ಟು ಹಣವನ್ನು ಹೂಡಿಕೆ ಮಾಡುತ್ತಾ ಬಂದರೆ ಪ್ರಸ್ತುತವಾಗಿ ಅನ್ವಯವಾಗುತ್ತಿರುವ ಬಡ್ಡಿ ದರದ ಪ್ರಕಾರವಾಗಿ ಅಂಚೆ ಕಚೇರಿ ಎಲ್ಲ ಯೋಜನೆಗಳಿಗೂ ಅಧಿಕವಾದ 8% ಬಡ್ಡಿದರದಲ್ಲಿ ನಿಮ್ಮ ಮಗುವಿಗೆ 21 ವರ್ಷ ತುಂಬಿದ ಬಳಿಕ ಉತ್ತಮ ಮೊತ್ತದ ಹಣವನ್ನು ಹಿಂದಿರುಗಿಸಲಿದೆ.
ಈ ನಡುವೆ ಮಗುವಿಗೆ 18 ವರ್ಷ ತುಂಬಿದ ಬಳಿಕ ಹಣಕಾಸಿನ ಅವಶ್ಯಕತೆ ಇದ್ದರೆ, ಅದರಲ್ಲಿ 75% ಹಿಂಪಡೆಯಲು ಅವಕಾಶವಿದೆ. ಆದರೆ ಇದಕ್ಕಿರುವ ಕಂಡೀಶನ್ ಏನೆಂದರೆ ಯಾವುದೇ ಪೋಷಕರು ತಮ್ಮ ಮೊದಲ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಈ ಯೋಜನೆಯನ್ನು ಖರೀದಿಸಬಹುದು, ಒಂದು ವೇಳೆ ಎರಡನೇ ಮಗುವಿನ ಜನನದ ಸಂದರ್ಭದಲ್ಲಿ ಅವಳಿ ಹೆಣ್ಣು ಮಕ್ಕಳಾಗಿದ್ದರೆ ಆಗ ಮಾತ್ರ 3 ಹೆಣ್ಣು ಮಕ್ಕಳ ಹೆಸರಿನಲ್ಲೂ ಖಾತೆ ತೆರೆಯಲು ಅವಕಾಶ ಇರುತ್ತದೆ.
ಮುಂಜಾನೆ ಎದ್ದ ತಕ್ಷಣ ಈ ಮಂತ್ರ ಜಪಿಸಿ.! ನಿಂತು ಹೋದ ಕೆಲಸ ಪೂರ್ಣಗೊಳ್ಳುತ್ತದೆ.!
ಈ ಯೋಜನೆಯಲ್ಲಿ 9 ಲಕ್ಷ ಹೂಡಿಕೆ ಮಾಡುವುದರಿಂದ 28 ಲಕ್ಷ ಹಣವನ್ನು ನೀವು ಹಿಂಪಡೆಯಬಹುದು. ಹೇಗೆಂದರೆ ನಿಮ್ಮ ಮಗುವಿಗೆ ಈಗ 5 ವರ್ಷ ವಯಸ್ಸಿದೆ ಎಂದುಕೊಳ್ಳೋಣ ನೀವು 2024ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆದರೆ ನಿಮ್ಮ ಮಗುವಿಗೆ 18 ವರ್ಷ ತುಂಬುವವರೆಗೂ ಒಟ್ಟು 9 ಲಕ್ಷ ಹೂಡಿಕೆ ಮಾಡುತ್ತೀರಿ. ಇದಕ್ಕೆ ಸರ್ಕಾರದಿಂದ 18.92 ಲಕ್ಷ ಬಡ್ಡಿ ಸಿಗುತ್ತಿದೆ, ಒಟ್ಟಾರಿಯಾಗಿ ನಿಮ್ಮ ಹಿಂಪಡೆಯುವ ಮೊತ್ತ 27.92 ಲಕ್ಷ ಆಗಿರುತ್ತದೆ.
ಆದಾಯ ತೆರಿಗೆ ನೀತಿ 80C ನಡಿ ತೆರಿಗೆ ವಿನಾಯಿತಿ ಕೂಡ ಈ ಯೋಜನೆಗೆ ಅನ್ವಯವಾಗುತ್ತದೆ. ಈ ಯೋಜನೆ ಬಗ್ಗೆ ಇನ್ನಷ್ಟು ವಿಸ್ತಾರವಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಇಂತಹ ಉತ್ತಮ ಮಾಹಿತಿಯನ್ನು ತಪ್ಪದೇ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಜೊತೆಗೂ ಹಂಚಿಕೊಳ್ಳಿ.