ಒಂದು ಗುರುವಾರ ಭಕ್ತಿಯಿಂದ ಬಾಬಾ ಮುಂದೆ 2 ರೂಪಾಯಿ ಇಟ್ಟು, ಈ ರೀತಿ ಪೂಜೆ ಮಾಡಿ ನಿಮ್ಮ ಬೇಡಿಕೆಗಳು ಈಡೇರುತ್ತವೆ.!

 

ಸದ್ಗುರು ಸಾಯಿಬಾಬಾ, ಶಿರಡಿ ಸಾಯಿಬಾಬಾ ಎಂದು ಕರೆಸಿಕೊಳ್ಳುವ ಈ ಪವಾಡ ಪುರುಷರು ಕಲಿಯುಗದಲ್ಲಿ ತನ್ನ ಭಕ್ತರ ಸಕಲ ಕಷ್ಟಗಳನ್ನು ಕೂಡ ಪರಿಹಾರ ಮಾಡುತ್ತಿರುವ ದೇವರು. ಇಂದು ಮನೆ ಮನೆಗಳಲ್ಲಿ ಕೂಡ ಸಾಯಿಬಾಬಾರ ಭಕ್ತರಿರುವುದನ್ನು ನಾವು ಕಾಣುತ್ತೇವೆ. ಇದಕ್ಕೆಲ್ಲ ಕಾರಣ ಸಾಯಿಬಾಬಾ ಅವರ ಅನುಗ್ರಹ ಅವರ ಭಕ್ತರ ಮೇಲೆ ಇದ್ದು ಸದಾ ಅವರನ್ನು ಕಷ್ಟಗಳಿಂದ ಪಾರು ಮಾಡಿ ಮಕ್ಕಳ ರೀತಿ ಪೋಷಿಸುತ್ತ ಇರುವುದು.

ಸಾಯಿಬಾಬಾ ಅನುಗ್ರಹವನ್ನು ಪಡೆಯುವುದು ಬಹಳ ಸುಲಭ ಆದರೆ ಅದಕ್ಕೆ ಭಕ್ತಿ ಬಹಳ ಮುಖ್ಯ. ಪ್ರಾಮಾಣಿಕತೆಯಿಂದ ಭಕ್ತಿಯಿಂದ ಸಾತ್ವಿಕವಾಗಿ ನಡೆದುಕೊಂಡಲ್ಲಿ ಸಾಯಿಬಾಬಾರ ಅನುಗ್ರಹ ಬಹಳ ಬೇಗ ದೊರೆಯುತ್ತದೆ. ಜೊತೆಗೆ ನಾವು ಅಂದುಕೊಂಡ ಕೆಲಸಗಳು ನಡೆಯಲು ಸಾಯಿಬಾಬಾ ಅವರ ಆಶೀರ್ವಾದವನ್ನು ಪಡೆದುಕೊಳ್ಳಬೇಕು ಎಂದರೆ ಕೆಲವು ಸರಳ ವಿಧಾನಗಳು ಇವೆ.

ಈ ವಿಧಾನಗಳಿಂದ ಸಾಯಿಬಾಬಾ ಅವರನ್ನು ಪ್ರಾರ್ಥಿಸಿ ಪೂಜಿಸಿದರೆ ಬಹಳ ಬೇಗ ಅನುಗ್ರಹ ದೊರೆತು ಸಂಕಷ್ಟಗಳು ಇದ್ದರೆ ಪರಿಹಾರ ಆಗುತ್ತವೆ ಅಥವಾ ಇಷ್ಟಾರ್ಥಗಳು ಇದ್ದರೆ ಅವು ಸಿದ್ಧಿ ಆಗುತ್ತವೆ. ನೀವೇನಾದರೂ ಯಾವುದಾದರೂ ವಿಷಯ ಆಗಬೇಕು ಎಂದು ಬಹಳ ಆಸೆ ಪಟ್ಟಿದ್ದರೆ ಉದಾಹರಣೆಗೆ ಬಂಗಾರ ಕೊಂಡುಕೊಳ್ಳಬೇಕು, ಸೈಟ್ ಕೊಂಡುಕೊಳ್ಳಬೇಕು, ಮನೆ ಕಟ್ಟಿಸಬೇಕು ಅಥವಾ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಆಗಬೇಕು.

ಈ ರೀತಿಯಾದ ಯಾವುದಾದರೂ ಆಸೆಗಳನ್ನು ಇಟ್ಟುಕೊಂಡಿದ್ದರೆ ಒಂದು ಗುರುವಾರದಂದು 2 ರೂಪಾಯಿಯಿಂದ ಸಾಯಿಬಾಬಾ ಅವರನ್ನು ಈಗ ನಾವು ಹೇಳುವ ರೀತಿಯಲ್ಲಿ ಪೂಜೆ ಮಾಡಿ ಸಾಕು. ನೀವು ಅಂದುಕೊಂಡ ಕೆಲಸ ಆದಂತೆಯೇ ಸರಿ ಅಷ್ಟು ನಿಖರವಾಗಿ ಸಾಯಿಬಾಬಾ ಅವರು ಆ ಕಾರ್ಯ ಆಗುವಂತೆ ಮಾಡುತ್ತಾರೆ.

ಪ್ರತಿದಿನ ಸಾಯಿಬಾಬಾ ಅವರನ್ನು ಪೂಜೆ ಮಾಡುವವರಿಗೆ ಈ ವಿಧಾನ ತಿಳಿದಿರುತ್ತದೆ ಅಥವಾ ಹೊಸದಾಗಿ ಸಾಯಿಬಾಬಾ ಅವರನ್ನು ಪೂಜೆ ಮಾಡುತ್ತಾ ಇರುವವರು ಈ ರೀತಿ ಮಾಡಿ. ಮನೆಯನ್ನು ಶುದ್ಧಿ ಮಾಡಿ ನೀವು ಸ್ನಾನ ಮಾಡಿ ಮಡಿ ಉಟ್ಟುಕೊಂಡು ಸಾಧ್ಯವಾದರೆ ಉಪವಾಸ ಆಚರಣೆ ಮಾಡಿ ಸಾಯಿಬಾಬಾ ಅವರ ಫೋಟೋ ಅಥವಾ ವಿಗ್ರಹವನ್ನು ಗಂಧ ಮತ್ತು ಅರಿಶಿಣದಿಂದ ಅಲಂಕರಿಸಿ ಹಳದಿ ಹೂವು ಇಟ್ಟು ದೀಪ ಹಚ್ಚಿ ನೈವೇದ್ಯ ಮಾಡಿ ಧೂಪವನ್ನು ಕೂಡ ಹಾಕಿ.

ಈ ರೀತಿ ಮಾಡುವಾಗ ತಪ್ಪದೇ 2 ರೂಪಾಯಿ ನಾಣ್ಯವನ್ನು ಕೂಡ ಸಾಯಿಬಾಬಾ ಅವರ ಎದುರುಗಡೆ ಇಡಿ. ಆ ದಿನ ಪೂರ್ತಿ ಅದು ಅಲ್ಲೇ ಇರಲಿ ಸಂಜೆ ವೇಳೆ ಸಾಯಿಬಾಬಾ ಅವರ ಮಂದಿರಕ್ಕೆ ಹೋಗಿ ಸ್ವಲ್ಪ ಸಮಯ ಕಳೆದು ಧ್ಯಾನ ಮಾಡಿ ಬನ್ನಿ. ಮರು ದಿನ ಶುಕ್ರವಾರ ಕೂಡ ಅದು ಸಾಯಿಬಾಬಾ ಅವರ ಬಳಿಯೇ ಇರಲಿ. ಶುಕ್ರವಾರದ ಪೂಜೆಯಂತೆ ಪೂಜೆ ಮಾಡಿ ಆ ಸಮಯದಲ್ಲೂ ಕೂಡ ಸಾಯಿಬಾಬಾ ಅವರ ಅನುಗ್ರಹಕ್ಕೆ ಪ್ರಾರ್ಥಿಸಿ, ಆ ನಾಣ್ಯವನ್ನು ಅಲ್ಲೇ ಬಿಡಿ.

ಶನಿವಾರದಂದು ಆ ನಾಣ್ಯವನ್ನು ಇಟ್ಟುಕೊಂಡು ನೀವು ನಿಮ್ಮ ಕನಸಿನ ಕಾರ್ಯ ಕೈಗೊಳ್ಳಲು ಹಣ ಇಟ್ಟಿರುವ ಕಡೆ ಈ ಹಣವನ್ನು ಇಡಿ ಅಥವಾ ನೀವೇನಾದರೂ ಆ ಕಾರ್ಯಕ್ಕೆ ಹೊರಟಿದ್ದರೆ ಅದರ ಜೊತೆಗೆ ಈ ನಾಣ್ಯವನ್ನು ಕೂಡ ತೆಗೆದುಕೊಂಡು ಹೋಗಿ. ಬಂಗಾರ ಖರೀದಿಸುತ್ತಿದ್ದರೆ ಆ ದುಡ್ಡಿನ ಜೊತೆ 2 ರೂಪಾಯಿಯನ್ನು ಕೂಡ ಕೊಡಿ ಅಥವಾ ಮನೆಗೆ ವಸ್ತುಗಳನ್ನು ಖರೀದಿಸುತ್ತಿದ್ದರೆ ಅದರ ಜೊತೆ ಹೀಗೆ 2 ರೂಪಾಯಿಯನ್ನು ಕೊಡಿ.

ಒಂದು ವೇಳೆ ಮಕ್ಕಳ ವಿದ್ಯಾಭಾಸದ ಉದ್ದೇಶ ಹೊಂದಿದ್ದರೆ ಆ ಎರಡು ರೂಪಾಯಿಯನ್ನು ಮಕ್ಕಳ ಬ್ಯಾಗಲ್ಲಿ ಅಥವಾ ಜೇಬಿನಲ್ಲಿ ಇಡಿ. ಜೊತೆಗೆ ನಿಮ್ಮ ಮಗುವಿಗೆ ಆ 2 ರುಪಾಯಿಯನ್ನು ಜೋಪಾನವಾಗಿ ಇಟ್ಟುಕೊಳ್ಳುವಂತೆ ಬುದ್ಧಿ ಹೇಳಿ. ಈ ರೀತಿ ಮಾಡಿದರೆ ಆದಷ್ಟು ಬೇಗ ನಿಮ್ಮ ಇಷ್ಟಾರ್ಥ ಸಿದ್ಧಿ ಆಗುತ್ತದೆ.

 

Leave a Comment