Sunday, June 4, 2023
HomeDevotionalದೀಪದ ಬತ್ತಿ ಪೂರ್ತಿ ಸುಟ್ಟು ಹೋಗುವುದರ ಸಂಕೇತ ಏನು ಗೊತ್ತಾ.? ಪ್ರತಿಯೊಬ್ಬರು ತಿಳಿಯಲೇ ಬೇಕಾದ ಮಾಹಿತಿ...

ದೀಪದ ಬತ್ತಿ ಪೂರ್ತಿ ಸುಟ್ಟು ಹೋಗುವುದರ ಸಂಕೇತ ಏನು ಗೊತ್ತಾ.? ಪ್ರತಿಯೊಬ್ಬರು ತಿಳಿಯಲೇ ಬೇಕಾದ ಮಾಹಿತಿ ಇದು.

ದೇವರ ಕೋಣೆಯಲ್ಲಿ ಹಚ್ಚುವ ದೀಪಗಳಿಗೆ ವಿಶೇಷ ಮಹತ್ವ. ಯಾಕೆಂದರೆ ಪ್ರತಿದಿನ ನಾವು ದೇವರ ಕೊನೆಯಲ್ಲಿ ಹಚ್ಚುವ ದೀಪಗಳಲ್ಲಿ ಸಕರಾತ್ಮಕ ಶಕ್ತಿ ತುಂಬಿರುತ್ತದೆ. ಆ ದೀಪಗಳು ಕೂಡ ದೈವಾಂಶ ಸಂಭೂತವಾಗಿರುತ್ತದೆ. ಪದೇ ಪದೇ ದೇವರ ಕೋಣೆಯಲ್ಲಿ ಇಡುವ ದೀಪಗಳನ್ನು ಬದಲಾಯಿಸಬಾರದು. ನಮ್ಮ ಹಿರಿಯರು ಯಾವ ದೀಪಗಳನ್ನು ಬಳಸಿಕೊಂಡು ಬರುತ್ತಿದ್ದರೂ ಪರವಾಗಿಲ್ಲ ಅದನ್ನೇ ಬಳಸಬೇಕು.

ಒಂದು ವೇಳೆ ಅದು ಪೂರ್ತಿ ಹಾಳಾಗಿದೆ ಅಥವಾ ಅದರಲ್ಲಿ ಭಿನ್ನವಾಗಿದೆ ಎನ್ನುವ ಸಮಯದಲ್ಲಿ ಮಾತ್ರ ನಾವು ಬೇರೆ ದೀಪಗಳನ್ನು ಬಳಸಬೇಕು. ಯಾಕೆಂದರೆ ನೀವು ದೀಪವನ್ನು ಬದಲಾಯಿಸಿ ಮತ್ತು ದೀಪವನ್ನು ಬದಲಿಸಿದ ನಂತರ ಅದರಲ್ಲಿ ಇರುವ ದೈವಿಕ ಶಕ್ತಿಯು ಮತ್ತೆ ಶೂನ್ಯದಿಂದ ಶುರುವಾಗುತ್ತದೆ, ಆ ಕಾರಣಕ್ಕಾಗಿ ಈಗಾಗಲೇ ಯಾವ ದೀಪಗಳನ್ನು ಹಿರಿಯರು ಮನೆಯಲ್ಲಿ ದೇವರಕೊಣೆಯಲ್ಲಿ ದೇವರ ಮುಂದೆ ಇಟ್ಟಿದ್ದಾರೋ ಅದೇ ದೀಪಗಳನ್ನು ನೀವು ಬೆಳಗಿಸಿ.

ದೇವರ ದೀಪ ಉರಿಯುತ್ತಿರುವುದರ ಸ್ವರೂಪವನ್ನೇ ನೋಡಿ ಮನೆಯಲ್ಲಿ ಆಗುವ ಒಳಿತು ಹಾಗೂ ಕೆಡಕುಗಳನ್ನು ತಿಳಿದುಕೊಳ್ಳಬಹುದು. ದೇವರಿಗೆ ನಮ್ಮ ಪೂಜೆ ಇಚ್ಛೆ ಆಗಿದೆಯೋ ಇಲ್ಲವೋ ಎನ್ನುವ ಅಂಶಗಳನ್ನು ತಿಳಿದುಕೊಳ್ಳಬಹುದು. ಯಾಕೆಂದರೆ ಮನೆಯ ದೇವರ ಕೋಣೆಯಲ್ಲಿ ಹಚ್ಚಿರುವ ದೀಪವು ಹೂವಿನ ಆಕಾರದಲ್ಲಿ ಉರಿಯುತ್ತಿದ್ದರೆ ದೇವರಿಗೆ ನಿಮ್ಮ ಕೋರಿಕೆ ಕೇಳಿಸಿದೆ, ನಿಮ್ಮ ಪೂಜೆಯಿಂದ ಅವರು ಪ್ರಸನ್ನರಾಗಿದ್ದಾರೆ ಎಂದು ಅರ್ಥ.

ಅಲ್ಲದೆ ದೀಪದ ಜ್ವಾಲೆಯು ಉರಿವಾಗ ಅದರಲ್ಲಿ ಯಾವುದಾದರೂ ದೇವರ ಮೂರ್ತಿರೂಪ ಕಾಣಿಸುತ್ತಿದ್ದರೆ ನಿಮಗೆ ಆ ದೇವರ ಅನುಗ್ರಹ ಆಗಿದೆ ಎಂದು ಅರ್ಥ. ಮನೆಯಲ್ಲಿ ದೇವರ ಕೋಣೆಯಲ್ಲಿ ದೀಪ ಉರಿಯುತ್ತಿದ್ದದೆ ಆ ಮನೆ ಪೂರ್ತಿ ವಾತಾವರಣವೇ ಬದಲಾಗಿರುತ್ತದೆ. ಮನೆಯಲ್ಲಿದ್ದ ನಕಾತ್ಮಕ ವಾತಾವರಣ ಹೋಗಿ ಸಕಾರಾತ್ಮಕತೆ ಸುತ್ತಲೂ ಆವರಿಸುತ್ತದೆ.

ಹಾಗೆಯೇ ದೀಪಗಳನ್ನು ಹಚ್ಚುವಾಗ ಕೆಲ ಎಡಗಟ್ಟುಗಳು ಆಗುತ್ತವೆ, ಅವು ಮುಂದೆ ಬರುವ ಕೆಲವು ಮುನ್ಸೂಚನೆಗಳನ್ನು ಕೊಡುವ ಸಂಕೇತಗಳಾಗಿರುತ್ತವೆ. ನೀವೇನಾದರೂ ಮನೆಯಲ್ಲಿ ದೇವರ ದೀಪ ಹಚ್ಚಿದ ಕೆಲವೇ ಸಮಯದಲ್ಲಿ ಅದು ಕೆಟ್ಟು ಹೋದರೆ, ದೀಪದ ಎಣ್ಣೆ ಮತ್ತು ಬತ್ತಿ ಇದ್ದರೂ ಕೂಡ ದೀಪ ಉರಿಯದೆ ಆರಿ ಹೋಗಿದ್ದರೆ ಇದು ಮನೆಗೆ ಏನಾದರೂ ಒಂದು ಕೆಡುಕು ಆಗುವುದರ ಸೂಚನೆಯಾಗಿದೆ.

ಈ ರೀತಿ ಆದಾಗ ತಕ್ಷಣವೇ ನೀವು ದೀಪವನ್ನು ಮತ್ತೊಮ್ಮೆ ಸ್ವಚ್ಛ ಮಾಡಿ ಬೇರೆ ಎಣ್ಣೆ ಹಾಗೂ ಬತ್ತಿಯನ್ನು ಹಾಕಿ ದೀಪ ಹಚ್ಚಿ ದೇವರ ಬಳಿ ಭಕ್ತಿಯಿಂದ ಒಳಿತಿಗಾಗಿ ಪ್ರಾರ್ಥಿಸಿಕೊಳ್ಳಿ. ಇದರಂತೆ ದೀಪದ ಭತ್ತಿ ಏನಾದರೂ ಕಪ್ಪಾಗಿದ್ದರೆ ಸುಟ್ಟು ಹೋಗಿದ್ದರೆ ಮರುದಿನ ದೀಪ ಹಚ್ಚುವಾಗ ಆ ಕಪ್ಪಾದ ಭಾಗವನ್ನು ತೆಗೆದುಹಾಕಿ ನೀವು ದೀಪ ಹಚ್ಚಬೇಕು.

ನಾವು ದಿನನಿತ್ಯ ಹಚ್ಚುವ ರೀತಿಯಲ್ಲಿಯೇ ಎಣ್ಣೆ ಹಾಗೂ ಬತ್ತಿಯನ್ನು ಹಾಕಿ ದೀಪ ಹಚ್ಚಿದರೂ ಕೂಡ ಕೆಲವೊಮ್ಮೆ ಬತ್ತಿಯು ಜೋರಾಗಿ ಉರಿದು ಪೂರ್ತಿ ಬತ್ತಿ ಸುಟ್ಟು ಹೋಗಿರುತ್ತದೆ. ಈ ರೀತಿ ಆಗುವುದು ಕೂಡ ಅಶುಭ ಸೂಚನೆಯೇ ಆಗಿದೆ. ಯಾವುದೇ ಕಾರಣಕ್ಕೂ ಈ ರೀತಿ ಆದಾಗ ನಿರ್ಲಕ್ಷಿಸಬೇಡಿ. ತಪ್ಪದೇ ನೀವು ನಿಮ್ಮ ಮನೆ ದೇವರನ್ನು ಪ್ರಾರ್ಥಿಸಿ, ಮತ್ತೊಮ್ಮೆ ದೇವರ ಕೋಣೆಯನ್ನು ಸ್ವಚ್ಛ ಮಾಡಿ.

ಮನೆಯನ್ನು ಸ್ವಚ್ಛಗೊಳಿಸಿ ಮಡಿ ಉಟ್ಟುಕೊಂಡು ಭಕ್ತಿಯಿಂದ ದೀಪ ಹಚ್ಚಿ. ಈಗಲೂ ಕೂಡ ಮನಸಾರೆ ನಿಮ್ಮ ಇಷ್ಟ ದೇವತೆ ಹಾಗೂ ಕುಲದೇವತೆಯನ್ನು ಏನು ಕೆಡಕಾಗದಂತೆ ಕಾಪಾಡು ಎಂದು ಪ್ರಾರ್ಥಿಸಿಕೊಳ್ಳಿ. ಯಾವುದೇ ಘಟನೆ ಜರುಗಿದರೂ ಅದು ಮತ್ತೊಂದರ ಸೂಚನೆ ಆಗಿರುತ್ತದೆ, ಅದನ್ನು ಅರಿತುಕೊಂಡು ಅದಕ್ಕೆ ಇರುವ ಪರಿಹಾರ ಮಾಡಿಕೊಂಡಾಗ ಸಮಸ್ಯೆಯಿಂದ ಸುಲಭವಾಗಿ ಹೊರ ಬರಬಹುದು.