Sunday, May 28, 2023
HomeDevotionalನಿಮ್ಮ ಮನಸ್ಸಿನ ಕೋರಿಕೆ ಬೇಡಿಕೊಂಡ ತಕ್ಷಣ ನೀರು ಚಿಮ್ಮುವ ಕರ್ನಾಟಕದ ಪವಾಡ ಗಣಪತಿ ದೇವಸ್ಥಾನ.! ಇಲ್ಲಿ...

ನಿಮ್ಮ ಮನಸ್ಸಿನ ಕೋರಿಕೆ ಬೇಡಿಕೊಂಡ ತಕ್ಷಣ ನೀರು ಚಿಮ್ಮುವ ಕರ್ನಾಟಕದ ಪವಾಡ ಗಣಪತಿ ದೇವಸ್ಥಾನ.! ಇಲ್ಲಿ ಏನೇ ಬೇಡಿಕೊಂಡ್ರು ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ.

ಭಾರತ ದೇಶದ ಒಂದೊಂದು ದೇವಸ್ಥಾನದಲ್ಲೂ ಕೂಡ ಒಂದೊಂದು ರೀತಿಯ ವಿಶೇಷತೆ ಇದೆ. ಕರ್ನಾಟಕದಲ್ಲಿ ಆ ರೀತಿ ಅಚ್ಚರಿ ಉಂಟು ಮಾಡುವ ಅನೇಕ ದೇವಾಲಯಗಳು ಇದ್ದೂ ಆ ದೇವಾಲಯಗಳ ಪೈಕಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಸವಿ ಎಂಬ ಗ್ರಾಮದ ಬಳಿಯ ದಟ್ಟ ಅರಣ್ಯದ ಮಧ್ಯೆ ನೆಲೆಸಿರುವಂತಹ ಕಮಂಡಲ ಗಣಪತಿ ದೇವಸ್ಥಾನ ಕೂಡ ಒಂದು. ಕೊಪ್ಪ ಬಸ್ ನಿಲ್ದಾಣದಿಂದ ಮೃದ ಒದೆ ಮಾರ್ಗವಾಗಿ ನಾಲ್ಕು ಕಿಲೋಮೀಟರ್ ದೂರ ಸಾಗಿದರೆ ಈ ಕಮಂಡಲ ಗಣಪತಿ ದೇವಸ್ಥಾನಕ್ಕೆ ಹೋಗುವ ರಸ್ತೆ ಸಿಗುತ್ತದೆ.

ಕಾಡಿನ ಮಧ್ಯೆ ಇರುವ ಈ ಗಣಪತಿಯು ನಾನಾ ರೀತಿಯ ಚಮತ್ಕಾರಕ್ಕೆ ಸಾಕ್ಷಿಯಾಗಿದ್ದಾರೆ. ದೇವಸ್ಥಾನದ ಹತ್ತಿರದಲ್ಲಿ ಹೊಂದಿಕೊಂಡಂತೆ ಭದ್ರ ಅಭಯಾರಣ್ಯ ಇರುವುದರಿಂದ ಅಲ್ಲಿಗೆ ಬರುವ ಪ್ರವಾಸಿಗರೆಲ್ಲರೂ ಕೂಡ ತಪ್ಪದೇ ಈ ಕಮಂಡಲ ಗಣಪತಿಯ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ.

ಈ ದೇವಸ್ಥಾನವು ಸ್ಥಾಪಿತವಾಗಿರುವ ಕಥೆಯನ್ನು ನೋಡುವುದಾದರೆ ಶನಿಯ ಪ್ರಭಾವದಿಂದ ತಪ್ಪಿಸಿಕೊಳ್ಳಲು ಪಾರ್ವತಿ ಮಾತೆಯು ಭೂಲೋಕಕ್ಕೆ ಬಂದು ಈಗ ಗಣಪತಿಯ ದೇವಸ್ಥಾನ ಸೃಷ್ಟಿ ಆಗಿರುವ ಈ ಸ್ಥಳದಲ್ಲಿಯೇ ತಪಸ್ಸನಾಚರಿಸಿ ಬಳಿಕ ತನ್ನ ಕೈಯಾರೆ ಇಲ್ಲಿರುವ ಗಣಪತಿ ವಿಗ್ರಹವನ್ನು ಸ್ಥಾಪಿಸಿ ಹೋದರು ಎಂದು ಕಮಂಡಲ ಗಣಪತಿ ಪುರಾಣವು ಹೇಳುತ್ತದೆ.

ಸುಮಾರು ಸಾವಿರಕ್ಕೂ ಹೆಚ್ಚು ವರ್ಷಕಾಲದಿಂದಲೂ ಕೂಡ ಭಕ್ತಾದಿಗಳಿಗೆ ಈ ಗಣಪತಿಯ ದರ್ಶನವಾಗುತ್ತಿದೆ. ಈ ದೇವಸ್ಥಾನದಲ್ಲಿರುವ ಆಶ್ಚರ್ಯಕರ ವಿಷಯವೆಂದರೆ ಗಣಪತಿ ವಿಗ್ರಹದ ಮುಂದೆ ಇರುವ ಹೊಳಲುಕಲ್ಲಿನಂತಹ ಆಕಾರದ ಕಲ್ಲಿನಿಂದ ನೀರು ಚಿಮ್ಮುತ್ತಿರುವುದು. ದೇವಸ್ಥಾನ ತೆರೆದಿರುವಾಗ ಮಾತ್ರ ಆಗಾಗ ಈ ರೀತಿ ನೀರು ಚಮ್ಮುತ್ತದೆ. ಒಂದು ವೇಳೆ ದೇವಸ್ಥಾನ ಮುಚ್ಚಿದ ಸಂದರ್ಭದಲ್ಲಿ ಈ ರೀತಿ ನೀರು ಚಿಮ್ಮಿದರೆ ಪ್ರಪಂಚದಲ್ಲಿ ಯಾವುದೋ ಆಗಂತುಕ ಘಟನೆ ನಡೆಯುತ್ತದೆ ಎನ್ನುವುದರ ಸೂಚನೆ ಎಂದು ದೇವಾಲಯದ ಬಗ್ಗೆ ಸೂಕ್ಷ್ಮವಾಗಿ ಅರಿತ ಸ್ಥಳೀಯರು ಹೇಳುತ್ತಾರೆ.

ಈ ನೀರು ಚಿಮ್ಮುತ್ತಿರುವಾಗ ಭಕ್ತಾದಿಗಳು ಏನೇ ಕೋರಿಕೆ ಕೇಳಿಕೊಂಡು ಒಂದು ನಾಣ್ಯವನ್ನು ಅದರೊಳಗೆ ಹಾಕಿದಾಗ ಆ ನೀರಿನ ಚಿಮ್ಮುವಿಕೆ ಅಥವಾ ಹರಿವು ಹೆಚ್ಚಾದರೆ ಆ ಕೋರಿಕೆ ನೆರವೇರುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ನಂಬಿಕೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿಯನ್ನು ಕೂಡ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ನಾವೇ ಇದನ್ನು ಕಾಣಬಹುದು. ಈ ರೀತಿ ನೀರು ಚಿಮ್ಮುವ ಅಥವಾ ಹರಿಯುವ ಮೂಲಕ ಸೂಚನೆ ಕೊಟ್ಟು ಭಕ್ತಾದಿಗಳ ಕೋರಿಕೆ ನೆರವೇರುತ್ತದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷೆ ಮಾಡುವ ಸಲುವಾಗಿಯೇ ಇಲ್ಲಿಗೆ ಸಹಸ್ರಾರು ಮಂದಿ ರಾಜ್ಯದ ವಿವಿಧ ಭಾಗಗಳಿಂದ ಭೇಟಿ ಕೊಡುತ್ತಾರೆ.

ಈ ದೇವಸ್ಥಾನದಲ್ಲಿ ಈ ರೀತಿ ಚಿಮ್ಮುವ ನೀರು ಹರಿದು ಬಂದು ದೇವಸ್ಥಾನದ ಮುಂಭಾಗದಲ್ಲಿರುವ ಸಣ್ಣ ಕೊಳದಲ್ಲಿ ಸೇರುತ್ತದೆ. ಆ ಕೊಳದ ನೀರಿನಲ್ಲಿ ಸ್ನಾನ ಮಾಡುವುದರಿಂದ ಎಂತಹ ಚರ್ಮರೋಗಗಳಿದ್ದರೂ ಕೂಡ ನಿವಾರಣೆ ಆಗುತ್ತದೆ. ಇದು ವೈದ್ಯ ಲೋಕಕ್ಕೆ ಸವಾಲಾಗಿದ್ದು ಇಂದಿಗೂ ಸಹ ಇದನ್ನು ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲ.

ಅಷ್ಟೇ ಅಲ್ಲದೆ ದೇವಾಲಯದಲ್ಲಿ ಗಣಪತಿಯ ಮುಂದೆ ಚಿಮ್ಮುವ ಈ ನೀರು ಸಾಮಾನ್ಯ ನೀರಿನ ಹಾಗಿರದೇ ತುಳಸಿ ನೀರಿನ ರುಚಿಯನ್ನು ಹೊಂದಿದೆ. ಅಕ್ಕಪಕ್ಕದಲ್ಲಿ ತುಳಸಿಯ ಮೆದೆಗಳು ಹೆಚ್ಚಾಗಿರುವುದರಿಂದ ಆ ಗುಣಗಳು ನೀರಿಗೆ ಬಂದಿದೆ ಎಂದು ಹೇಳಲಾಗುತ್ತದೆ. ಇದು ಬ್ರಾಹ್ಮಿ ನದಿಯ ನೀರು ಎಂದು ಹೇಳಲಾಗುತ್ತಿತ್ತು, ಈ ನೀರನ್ನು ಕುಡಿಯುವುದರಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎನ್ನುವುದನ್ನು ಕೂಡ ಈ ಭಾಗದ ಜನರು ನಂಬುತ್ತಾರೆ ಮತ್ತು ಪಾಲಿಸುತ್ತಾರೆ. ಇಂತಹ ಹೆಸರಾಂತ ದೇವಸ್ಥಾನಕ್ಕೆ ನೀವು ಕೂಡ ಭೇಟಿ ಕೊಟ್ಟು ಈ ಪವಾಡವನ್ನು ಕಣ್ಣಾರೆ ಕಾಣಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845688854*