ನಿಮ್ಮ ಮೇಲೆ ಯಾರೇ ಎಷ್ಟೇ ಮಾಟ ಮಂತ್ರ ಪ್ರಯೋಗ ಮಾಡಿದ್ರು ಅದು ನಿಮಗೆ ತಗುಲಬಾರದು ಅಂದ್ರೆ ಈ ಗಿಡದಿಂದ ಚಿಕ್ಕ ಕೆಲಸವೊಂದು ಮಾಡಿ ಸಾಕು ಯಾವ ಶಕ್ತಿಯು ನಿಮಗೆ ಏನು ಮಾಡಲ್ಲ

ನಮಗೆ ಶತ್ರುಗಳ ಕಾಟಕ್ಕಿಂತ ಶತ್ರುಗಳ ಕಾಟವೇ ಹೆಚ್ಚಾಗಿರುತ್ತದೆ. ಯಾಕೆಂದರೆ ಶತ್ರುಗಳು ನೇರ ನೇರವಾಗಿ ಹೋರಾಡಿದರೆ ಹಿತಶತ್ರುಗಳು ಜೊತೆಗೆ ಇದ್ದುಕೊಂಡು ನಮಗೆ ಕೆಟ್ಟದ್ದನ್ನು ಬಯಸುತ್ತಿರುತ್ತಾರೆ. ಹಾಗಾಗಿ ಅವರು ನೇರವಾಗಿ ಎದುರಿಸದೆ ಅಡ್ಡ ದಾರಿ ಹುಡುಕುತ್ತಾರೆ. ಇದಕ್ಕಾಗಿ ವಾಮಾಚಾರದ ಮಾರ್ಗಗಳನ್ನು ಅನುಸರಿಸಲು ಕೂಡ ಅವರು ಹಿಂಜರಿಯುವುದಿಲ್ಲ.

ಈ ರೀತಿ ಹಿತಶತ್ರುಗಳ ಉಂಟಾಗುವುದಕ್ಕೆ ಸಾಕಷ್ಟು ಕಾರಣಗಳಿವೆ. ಯಾರಾದರೂ ಜೀವನದಲ್ಲಿ ಮುಂದೆ ಬರುತ್ತಿದ್ದರೆ, ಯಾರ ಕುಟುಂಬದಲ್ಲಾದರೂ ಸುಖ ಶಾಂತಿ ನೆಮ್ಮದಿ ನೆಲೆಸಿ ಸಂಬಂಧಗಳು ಚೆನ್ನಾಗಿದ್ದರೆ ಹಿತ ಶತ್ರುಗಳಿಗೆ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಅವರು ಅದನ್ನು ಕೆಡಿಸುವ ಪ್ರಯತ್ನ ಮಾಡುತ್ತಾರೆ. ಒಂದು ವೇಳೆ ಅವರ ಕೈಮೀರಿ ಪ್ರಯತ್ನ ಮಾಡಿ ಆಗಿಲ್ಲ ಎಂದರೆ ಈ ರೀತಿ ಅನ್ಯ ಮಾರ್ಗಗಳನ್ನು ಹುಡುಕಿ ನೆಮ್ಮದಿ ಹಾಳು ಮಾಡಲು ಪ್ರಯತ್ನಿಸುತ್ತಾರೆ.

ಈ ರೀತಿ ಹಿತಶತ್ರುಗಳೇ ಆಗಲಿ ಶತ್ರುಗಳೆ ಆಗಲಿ ದಾಯಾದಿಗಳಾಗಲಿ ಅಥವಾ ಬಂಧುಗಳೇ ಆಗಲಿ ನಮಗೆ ಕೆಟ್ಟದ್ದನ್ನು ಬಯಸಿ ಮಾಟ ಮಂತ್ರ ಪ್ರಯೋಗಿಸಿ ಕುಟುಂಬಕ್ಕೆ ಹಾನಿ ಮಾಡಲು ಪ್ರಯತ್ನಿಸುತ್ತಿದ್ದರೆ ಅದನ್ನು ನಮಗೆ ತಿಳಿಸಿಕೊಡಲು ಸಾಕಷ್ಟು ಸೂಕ್ಷ್ಮಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಆರಂಭದಲ್ಲಿ ಅರಿತು ಅದಕ್ಕೆ ತಕ್ಕನಾದ ಪರಿಹಾರ ಮಾಡಿಕೊಂಡಲ್ಲಿ ಆಗುವ ಗಂಡಾಂತರದಿಂದ ತಪ್ಪಿಸಿಕೊಳ್ಳಬಹುದು.

ಹಾಗಾಗಿ ಯಾವುದೇ ಶಕುನಗಳನ್ನು ಅಲ್ಲಗಳೆಯುವಂತಿಲ್ಲ. ಮತ್ತು ಇದರಲ್ಲಿ ಮನೆಯಲ್ಲಿರುವ ಒಂದು ಗಿಡದ ಪಾತ್ರವನ್ನು ಮರೆಯುವಂತಿಲ್ಲ. ಯಾಕೆಂದರೆ ಮನೆಯಲ್ಲಿ ಒಂದು ಗಿಡ ಇದ್ದರೆ ಸಾಕು ಅದು ಮೊದಲಿಗೆ ನಿಮ್ಮ ಕುಟುಂಬದ ಮೇಲೆ ಯಾವುದೇ ಮಾಟ ಮಂತ್ರ ಪ್ರಯೋಗ ಆಗದಂತೆ ತಡೆಯುತ್ತದೆ. ಮತ್ತು ಆ ಎಲ್ಲಾ ಕೆಟ್ಟ ಪರಿಣಾಮವು ತನ್ನ ಮೇಲೆ ಆಗುವಂತೆ ಮಾಡಿಕೊಂಡು ಅದರ ಮೂಲಕ ನಿಮಗೆ ಸೂಕ್ಷ್ಮವನ್ನು ತಿಳಿಸುತ್ತಿರುತ್ತದೆ.

ಈ ರೀತಿ ಮಾಟ ಮಂತ್ರ ಪ್ರಯೋಗಗಳ ಬಗ್ಗೆ ಸೂಚನೆ ಕೆಡುವ ಗಿಡ ಮತ್ಯಾವುದೂ ಅಲ್ಲ ಮನೆಯಲ್ಲಿ ನಾವು ಬೆಳೆಸಿ ಪೂಜೆ ಮಾಡುವ ತುಳಸಿ ಗಿಡ. ಅದಕ್ಕಾಗಿ ಹಿಂದೂ ಸಂಸ್ಕೃತಿಯಲ್ಲಿ ಪ್ರತಿ ಮನೆಯ ಮುಂದೆ ತಪ್ಪದೆ ತುಳಸಿ ಗಿಡವನ್ನು ನೆಡುತ್ತಾರೆ. ಯಾಕೆಂದರೆ ತುಳಸಿ ಗಿಡವು ಮನೆ ಐಶ್ವರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ನೆಗೆಟಿವ್ ಎನರ್ಜಿಗಳು ಮನೆಯನ್ನು ತಾಕದಂತೆ ತಡೆಯುತ್ತವೆ.

ಈ ರೀತಿ ಯಾವುದೇ ಕೆಟ್ಟ ಶಕ್ತಿಗಳು ಮನೆಯ ಮೇಲೆ ಪ್ರಭಾವ ಬೀರಲು ಬಂದರೆ ದೈವತ್ವದ ಶಕ್ತಿ ಇರುವ ತುಳಸಿ ಗಿಡವು ಮೊದಲು ಅದನ್ನು ತಡೆಯುತ್ತದೆ. ತುಂಬಾ ಕೆಟ್ಟ ಪರಿಣಾಮ ಇದ್ದ ಸಮಯದಲ್ಲಿ ಅದನ್ನು ತನ್ನ ಮೇಲೆ ಹಾಕಿಕೊಂಡು ಅದು ಒಣಗಲು ಆರಂಭಿಸುತ್ತದೆ ನೀವು ಮನೆಯಲ್ಲಿ ಚೆನ್ನಾಗಿ ಸೋಂಪಾಗಿ ಬೆಳೆಸಿದ ತುಳಸಿ ಗಿಡವು ಇದ್ದಕ್ಕಿದ್ದ ಹಾಗೆ ಒಣಗಲು ಶುರು ಮಾಡಿದರೆ ಅಥವಾ ಪದೇಪದೇ ಹೊಸ ಗಿಡ ಹಾಕಿದರು ಅದು ಒಣಗಿಹೋಗುತ್ತಿದೆ ಎಂದರೆ ನಿಮ್ಮ ಮನೆಯ ಮೇಲೆ ಕೆಟ್ಟ ಶಕ್ತಿಗಳ ಪ್ರಭಾವ ಆಗಿದೆ ಎಂದು ಅರ್ಥ.

ಈ ರೀತಿ ಸೂಚನೆಗಳು ಸಿಕ್ಕ ಪಕ್ಷದಲ್ಲಿ ಇದನ್ನು ಪರಿಹಾರ ಮಾಡಿಕೊಳ್ಳುವ ಪ್ರಯತ್ನ ಮಾಡಿ ಅಥವಾ ಇದರ ಬಗ್ಗೆ ಚೆನ್ನಾಗಿ ಗೊತ್ತಿರುವವರ ಬಳಿ ಕೇಳಿ ಪರೀಕ್ಷಿಸಿ ಅದನ್ನು ಕಳೆದುಕೊಂಡು ಹೊರಬನ್ನಿ. ಹಾಗೆ ಯಾವುದೇ ಕಾರಣಕ್ಕೂ ಮನೆ ಮುಂದೆ ತುಳಸಿ ಗಿಡವನ್ನು ನೆಡುವುದನ್ನು ಮರೆಯಬೇಡಿ. ಅದು ಎಷ್ಟೇ ಬಾರಿ ಒಣಗತ್ತಿದ್ದರು ಕೂಡ ಮತ್ತೆ ಹೊಸ ತುಳಸಿ ಗಿಡವನ್ನು ತಂದು ಎಂದಿನಂತೆ ಅದನ್ನು ಪೂಜಿಸಿ ಅದರ ಬಳಿ ಸಾಧ್ಯವಾದರೆ ಒಂದು ತುಪ್ಪದ ದೀಪವನ್ನು ಕೂಡ ಹಚ್ಚಿಡಿ. ಇದರಿಂದ ಯಾವುದೇ ಕೆಟ್ಟ ಪ್ರಭಾವ ನಿಮ್ಮ ಮೇಲೆ ಬೀರದಂತೆ ಅದು ಶ್ರೀರಕ್ಷೆ ಆಗಿರುತ್ತದೆ ಮತ್ತು ತಪ್ಪದೇ ಇಂತಹ ಉಪಯುಕ್ತ ಮಾಹಿತಿಯನ್ನು ಎಲ್ಲರ ಜೊತೆಗೂ ಹಂಚಿಕೊಳ್ಳಿ.

Leave a Comment