ನೀವು ರೈತರಾಗಿದ್ದರೆ, 5 ಎಕರೆ ಒಳಗಡೆ ಕೃಷಿ ಭೂಮಿ ಹೊಂದಿದ್ದರೆ ಸರ್ಕಾರದಿಂದ ಪ್ರತಿ ತಿಂಗಳು 3000ರೂ. ಪಿಂಚಣಿ ಪಡೆಯಬಹುದು, ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ.?.

 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರ ಹೊಂದಿದಾಗಲಿಂದಲೂ ದೇಶದ ಎಲ್ಲಾ ವಲಯದ ಜನರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲೂ ಕೃಷಿ ಕ್ಷೇತ್ರಕ್ಕೆ ಹೆಚ್ಚು ಮಹತ್ವದ ಒತ್ತು ಕೊಟ್ಟಿರುವ ಅವರು ರೈತರು ಹಾಗೂ ರೈತ ಕಾರ್ಮಿಕದ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಅನುಕೂಲತೆ ಮಾಡಿಕೊಟ್ಟಿದ್ದಾರೆ.

ಇದುವರೆಗೆ ಸಿಗುತ್ತಿದ್ದ ರೈತರಿಗೆ ಬಡ್ಡಿ ರಹಿತ ಸಾಲ, ಕಡಿಮೆ ಬಡ್ಡಿದರದ ಸಾಲ ಹಾಗೂ ಸಬ್ಸಿಡಿ ರೂಪದ ಸಾಲ ಮತ್ತು ಸಬ್ಸಿಡಿ ರೂಪದಲ್ಲಿ ಬಿತ್ತನೆ ಬೀಜ ರಸಗೊಬ್ಬರ ವಿತರಣೆ, ಕೃಷಿ ಸಾಮಗ್ರಿಗಳ ಖರೀದಿಗೆ ಸಬ್ಸಿಡಿ ರೂಪದ ಸಾಲವನ್ನು ಕೊಡುವುದು ಸೇರಿದಂತೆ ದೇಶದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರೈತರಿಗೂ ಸಹ ಸಹಾಯಧನ ನೀಡುವ ಸದುದ್ದೇಶದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮನ್ ಯೋಜನೆಯನ್ನು ಕೂಡ ಆರಂಭಿಸಿದರು.

ಇದರ ಜೊತೆಗೆ ರೈತರ ಬೆಳೆ ಹಾನಿಯಾದಾಗ ವಿಮೆ ಕಟ್ಟಿ ಕೊಡುವ ಉದ್ದೇಶದಿಂದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಕೂಡ ಜಾರಿಗೆ ತಂದರು. ಈಗ ಅದೇ ರೀತಿ ಕೃಷಿ ಕಾರ್ಯದಲ್ಲಿ ತೊಡಗಿಕೊಂಡ ರೈತನು 60 ವರ್ಷ ತುಂಬಿದ ಬಳಿಕ ಜೀವನ ನಿರ್ವಹಣೆಗಾಗಿ ಕಷ್ಟಪಡಬಾರದು ಎನ್ನುವ ಕಾರಣಕ್ಕಾಗಿ ಪಿಂಚಣಿ ನೀಡುವ ವ್ಯವಸ್ಥೆಗೆ ಸಿದ್ಧವಾಗಿದೆ.

ಇದಕ್ಕಾಗಿ ಮಹತ್ವ ಯೋಜನೆ ಯನ್ನು ಜಾರಿಗೆ ತಂದು ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ ಎಂದು ಹೆಸರಿಡಲಾಗಿದೆ. ಈ ಯೋಜನೆಯ ಮೂಲಕ ಜೀವನದ ಸಂಧ್ಯಾಕಾಲದಲ್ಲಿ ರೈತನು ಕೂಡ ನೆಮ್ಮದಿಯಿಂದ ಜೀವನ ನಿರ್ವಹಣೆ ಮಾಡಲು ಪಿಂಚಣಿ ರೂಪದ ಹಣವನ್ನು ಪ್ರತಿ ತಿಂಗಳು ಕೂಡ ಪಡೆಯಬಹುದು.

ಪ್ರಧಾನಮಂತ್ರಿ ಕಿಸಾನ್ ಮಂದನ್ ಯೋಜನೆ ಕುರಿತ ಪ್ರಮುಖ ಅಂಶಗಳು:-
ಎರಡು ಹೆಕ್ಟರ್ ಅಥವಾ ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಯೋಜನೆಗೆ ಸೇರಲ್ಪಡುವ ರೈತನ ವಯಸ್ಸು 18 ವರ್ಷದಿಂದ 40 ವರ್ಷದ ಒಳಗಿರಬೇಕು.
● ವಯಸ್ಸಿಗೆ ಅನುಗುಣವಾಗಿ ಸರ್ಕಾರವು ಪ್ರೀಮಿಯಂಗಳನ್ನು ನಿಗದಿಪಡಿಸಿದೆ.

● ವಯಸ್ಸಿಗೆ ಅನುಗುಣವಾಗಿ ಸರ್ಕಾರ ಸೂಚಿಸಿದಷ್ಟು ಮೊತ್ತವನ್ನು 60 ವರ್ಷದವರೆಗೆ ಪ್ರತಿ ತಿಂಗಳು ಕೂಡ ಪ್ರೀಮಿಯಂ ಆಗಿ ಪಾವತಿ ಮಾಡಿಕೊಂಡು ಬರಬೇಕು.
● 60 ವರ್ಷ ತುಂಬಿದ ಬಳಿಕ ಪ್ರತಿ ತಿಂಗಳು 3000 ಪಿಂಚಣಿಯು ರೈತನಿಗೆ ಸಿಗುತ್ತದೆ. ಒಂದು ವೇಳೆ ಮಧ್ಯದಲ್ಲಿ ರೈತರು ಮೃತಪಟ್ಟಲ್ಲಿ ಪತ್ನಿ ಯೋಜನೆಯ ಮುಂದುವರಿಸಿಕೊಂಡು ಹೋಗಬಹುದು.
● ಪಿಂಚಣಿ ಪಡೆಯುವ ವೇಳೆಯಲ್ಲಿ ರೈತ ಪಟ್ಟರೆ ಆಗ ಕುಟುಂಬ ಪಿಂಚಣಿಯಾಗಿ ಆತನ ಪತ್ನಿಗೆ 1500 ರೂ. ಪಿಂಚಣಿ ಅವರು ಇರುವವರೆಗೂ ಸಿಗುತ್ತದೆ.

● ಈ ಯೋಜನೆಯನ್ನು ಖರೀದಿಸಲು ರೈತನು ಹತ್ತಿರದಲ್ಲಿರುವ ಯಾವುದಾದರೂ ಸೇವಾ ಸಿಂಧು ಕೇಂದ್ರಕ್ಕೆ ಭೇಟಿ ಕೊಟ್ಟು ಇದಕ್ಕಾಗಿ ಕೇಳುವ ದಾಖಲೆಗಳನ್ನು ಸಲ್ಲಿಸಿದರೆ ಸಾಕು. ನಿಮ್ಮ ಹೆಸರಿನಲ್ಲಿ ಈ ಯೋಜನೆಯನ್ನು ಖರೀದಿಸಬಹುದು ಮತ್ತು ಪ್ರತಿ ತಿಂಗಳು ಯೋಜನೆಯ ಪ್ರೀಮಿಯಂ ಹಣವು ನಿಮ್ಮ ಖಾತೆಯಿಂದ ಕಡಿತಗೊಳ್ಳುತ್ತದೆ.

● ಪ್ರಧಾನ ಮಂತ್ರಿ ಕಿಸಾನ್ ಮನ ಧನ್ ಯೋಜನೆ ಖರೀದಿಸಲು ಕೇಳಲಾಗುವ ಪ್ರಮುಖ ದಾಖಲೆಗಳು:-
1. ರೈತನ ಆಧಾರ್ ಕಾರ್ಡ್
2. ಜಮೀನಿನ ಪಹಣಿ ಪತ್ರ
3. ಕುಟುಂಬದ ರೇಷನ್ ಕಾರ್ಡ್
4. ಬ್ಯಾಂಕ್ ಪಾಸ್ ಪುಸ್ತಕದ ವಿವರ
5. ಮೊಬೈಲ್ ಸಂಖ್ಯೆ
6. ಇನ್ನಿತರ ಪ್ರಮುಖ ದಾಖಲೆಗಳು.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

Leave a Comment