ಬೆಂಗಳೂರಿನಲ್ಲಿದೆ 7000 ವರ್ಷದ ಹಳೆಯ ಆಂಜನೇಯ ದೇವಸ್ಥಾನ, ಇಲ್ಲಿಗೆ ಬಂದು ಬೇಡಿಕೊಂಡರೆ ಕೆಲಸ ಸಿಗುವುದು ಗ್ಯಾರಂಟಿ.!

 

ಸಿಲಿಕಾನ್ ಸಿಟಿ ಎಂದು ಕರೆಸಿಕೊಂಡಿರುವ ಐಟಿ ಪಾರ್ಕ್ ಆಗಿರುವ ಬೆಂಗಳೂರು ದೇಶ, ಭಾಷೆ, ಧರ್ಮ, ಜಾತಿ, ಜನಾಂಗ ಯಾವುದರ ಭೇದವಿಲ್ಲದೆ ತನ್ನ ಬಳಿ ಬಂದವರನೆಲ್ಲ ತನ್ನೊಡಲಿಗೆ ಹಾಕಿಕೊಳ್ಳುತ್ತದೆ. ಬೆಂಗಳೂರಿಗೆ ಉದ್ಯೋಗ ಅರಸಿ ಬಂದವರಲ್ಲಿ ಯಾರು ಕೂಡ ಕೆಲಸ ಸಿಕ್ಕಿಲ್ಲ ಎಂದು ವಾಪಸ್ ಹೋಗಿರುವ ಉದಾಹರಣೆ ಇಲ್ಲ.

ಕರ್ನಾಟಕದ ರಾಜಧಾನಿಯಾಗಿರುವ ಕರ್ನಾಟಕದ ಹೃದಯ ಭಾಗದಂತಿರುವ ಬೆಂಗಳೂರು ರಾಜಕಾರಣ, ಸಿನಿಮಾ ಕ್ಷೇತ್ರ, ಐಟಿ ವಲಯ, ಕಲೆ ಮತ್ತು ಇತಿಹಾಸದ ಅನೇಕ ಕುರುಹುಗಳನ್ನು ಹೊಂದಿರುವ ಉದ್ಯಾನ ನಗರಿ ಮಾತ್ರವಲ್ಲದೇ ಪುರಾಣ ಪ್ರಸಿದ್ಧವಾದ ದೇವಾಲಯಗಳ ಆಗರ ಕೂಡ. ಬೆಂಗಳೂರಿನಲ್ಲಿರುವ ಪ್ರತಿಯೊಂದು ದೇವಸ್ಥಾನವು ಕೂಡ ಒಂದೊಂದು ಕಥೆಯನ್ನು ಹೇಳುತ್ತದೆ.

ರಾಮಾಯಣ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯಗಳನ್ನು ಸಹ ಬೆಂಗಳೂರಿನಲ್ಲಿ ನೋಡಬಹುದು. ವಿಶ್ವದಾದ್ಯಂತ ಎಲ್ಲರ ಗಮನ ಸೆಳೆದಿರುವ ನಮ್ಮ ಬೆಂಗಳೂರಿನಲ್ಲಿ ಪುರಾಣ ಪ್ರಸಿದ್ಧವಾದ ಅನೇಕ ಐತಿಹಾಸಿಕ ದೇವಾಲಯಗಳು ಇವೆ. ಅವುಗಳಲ್ಲಿ ಒಂದು ಬಸವನಗುಡಿಯ 14ನೇ ಕ್ರಾಸ್, ಮೂರನೇ ಮೇನ್ ರೋಡ್ ಅಲ್ಲಿ ಇರುವ ಕಹಳೆ ಬಂಡೆ ಉದ್ಯಾನವನಕ್ಕೆ ಮುಂಭಾಗದಲ್ಲಿ ಮತ್ತು BMS ಮಹಿಳಾ ಕಾಲೇಜುಗೆ ಹಿಂಭಾಗದಲ್ಲಿ ಇರುವ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನ.

ಈ ದೇವಸ್ಥಾನವು ಬೆಂಗಳೂರಿಗೆ ಬಂದವರಿಗೆ ಉದ್ಯೋಗ ಕೊಡುವ ದೇವಸ್ಥಾನ ಎಂದೇ ಖ್ಯಾತಿಯಾಗಿದೆ. ಯಾಕೆಂದರೆ ಈ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಆಂಜನೇಯನನ್ನು ಪ್ರಾರ್ಥಿಸಿ ಕೊಂಡು ಹೋದರೆ 24 ಗಂಟೆ ಒಳಗಡೆ ಅವರಿಗೆ ಉದ್ಯೋಗ ಸಿಗುತ್ತದೆ. ಹಾಗಾಗಿ ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಪ್ರತಿಯೊಬ್ಬರು ಕೂಡ ತಪ್ಪದೆ ಮೊದಲು ಆಂಜನೇಯನ ದರ್ಶನವನ್ನು ಪಡೆಯುತ್ತಾರೆ.

ಮತ್ತು ಇಲ್ಲಿರುವ ಆಂಜನೇಯನ ಪವಾಡ ಶಕ್ತಿ ಮತ್ತು ಮಹಾತ್ಮೆಯನ್ನು ತಿಳಿದ ಬಳಿಕ ಪದೇಪದೇ ಈ ಭಗವಂತನ ದರ್ಶನಕ್ಕಾಗಿ ಬರುತ್ತಾರೆ. ಈ ದೇವಸ್ಥಾನವು 7000 ವರ್ಷಗಳ ಹಿಂದೆಯೇ ನಿರ್ಮಾಣವಾಗಿದೆ ಎಂದು ಹನುಮಾನ್ ಅವತಾರ ಪುರಾಣದಲ್ಲಿ ತಿಳಿಸಲಾಗಿದೆ. ಇದೇ ರೀತಿ ಸಂಸ್ಕೃತದ ಹಲವು ಕಾವ್ಯಗಳು ಇದು ರಾಮಾಯಣದ ಕಾಲದಲ್ಲಿಯೇ ನಿರ್ಮಿತವಾಗಿದ್ದು ಎನ್ನುವುದಕ್ಕೆ ಸಾಕ್ಷಿ ನೀಡುತ್ತವೆ.

ತೇತ್ರಾಯುಗದಲ್ಲಿ ಸೀತಾ ಮಾತೆ ಅಪಹರಣ ಆದ ಸಂದರ್ಭದಲ್ಲಿ ಲಂಕೆಯ ಅಶೋಕ ವನದಲ್ಲಿದ್ದ ಸೀತಾಮಾತೆಯನ್ನು ನೋಡಲು ಆಂಜನೇಯ ಬರುತ್ತಾರೆ ಮತ್ತು ಸೀತಾಮಾತೆಯ ದರ್ಶನವಾದ ಬಳಿಕ ಈ ಮಾತನ್ನು ಶ್ರೀರಾಮನಿಗೆ ತಿಳಿಸಲು ಹಿಂತಿರುಗುವಾಗ ಸೀತಾಮಾತೆಯು ತಮ್ಮ ಚೂಡಾಮಣಿಯನ್ನು ಆಂಜನೇಯನಿಗೆ ಕೊಟ್ಟು ಕಳುಹಿಸುತ್ತಾರೆ.

ಹೇಗೆ ಆಂಜನೇಯರು ಸೀತಾಮಾತೆಯ ಚೂಡಾಮಣಿ ಹಿಡಿದು ಶ್ರೀರಾಮರನ್ನು ಕಾಣಲು ಹಿಂತಿರುಗಿದರು ಅದೇ ಅವತಾರದಲ್ಲಿ ಈ ಕಾರಂಜಿ ಆಂಜನೇಯ ಕೈಯಲ್ಲಿ ಚೂಡಾಮಣಿ ಹಿಡಿದು ದೇವಸ್ಥಾನದಲ್ಲಿ ನೆಲೆ ನಿಂತಿದ್ದಾರೆ. ಸುಮಾರು 18 ಅಡಿ ಎತ್ತರದಲ್ಲಿ ಇರುವ ಈ ಆಂಜನೇಯನ ವಿಗ್ರಹವನ್ನು ಯಾರು ಪ್ರತಿಷ್ಠಾಪನೆ ಮಾಡಿದರು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ಶ್ರೀ ಆಂಜನೇಯ ಸ್ವಾಮಿಯೇ ಇಲ್ಲಿ ಶಿಲೆಯಾಗಿ ಬದಲಾಗಿದ್ದಾರೆ ಎನ್ನುವುದನ್ನು ಬಲವಾಗಿ ನಂಬಲಾಗುತ್ತದೆ. ರಾಮಾಯಣದ ಕಾಲದಿಂದಲೂ ಕೂಡ ಈ ಆಂಜನೇಯನಿಗೆ ಪೂಜೆ ನಡೆಯುತ್ತಾ ಬಂದಿದೆ.

ಕಲಿಯುಗದಲ್ಲೂ ಕೂಡ ತನ್ನನ್ನು ಅರಸಿ ಕಷ್ಟವನ್ನು ಹೇಳಿಕೊಂಡು ಬರುವ ಭಕ್ತರಿಗೆ ಅಭಯ ಹಸ್ತ ನೀಡುವ ಈ ಸಾಹಸವಂತ ಬೆಂಗಳೂರಿಗರಿಗೆ ಉದ್ಯೋಗ ನೀಡುವ ಕಾರಂಜಿ ಆಂಜನೇಯ ಸ್ವಾಮಿಯಾಗಿ ಕಾಣಿಸಿಕೊಂಡಿದ್ದಾರೆ. ಆಂಜನೇಯ ಸ್ವಾಮಿಯು ಇಲ್ಲಿ ನೆಲೆನಿಂತಾಗ ಅಲ್ಲಿ ಕಾರಂಜಿಯ ಇದ್ದ ಕಾರಣ ಕಾರಂಜಿ ಆಂಜನೇಯ ಸ್ವಾಮಿ ಎಂದು ಹೆಸರಾಗಿದ್ದಾರೆ. ಇಂತಹ ದೇವಸ್ಥಾನಕ್ಕೆ ನೀವು ಕೂಡ ಒಮ್ಮೆ ಭೇಟಿ ಕೊಟ್ಟು ಸ್ವಾಮಿಯ ದರ್ಶನವನ್ನು ಪಡೆಯಿರಿ.

https://youtu.be/6LrASIedDNg

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

Leave a Comment