ಮಕ್ಕಳಾಗಿಲ್ಲ ಅನ್ನೋ ಕೊರಗು ದೂರ ಮಾಡಿಸುತ್ತೆ ಈ ದೇವಸ್ಥಾನ, ಇಲ್ಲಿಗೆ ಭೇಟಿದ್ರೆ ಸಂತಾನ ಫಲ ಪಡೆಯಬಹುದು ಜೊತೆಗೆ ಹಲವು ರೋಗಗಳನ್ನು ದೂರಮಾಡುತ್ತದೆ..!

ನಮಗೆ ತೊಂದರೆಯಾದಾಗ ನಾವು ಬೇಗ ದೇವರ ಮೊರೆ ಹೋಗ್ತೀವಿ. ನಮ್ಮೆಲ್ಲಾ ಕಷ್ಟಗಳಿಗೂ ದೇವರು ಪರಿಹಾರ ನೀಡ್ತಾನೆ ಅನ್ನೋದು ಎಲ್ಲರ ನಂಬಿಕೆ. ಇಲ್ಲೊಂದು ದೇವಸ್ಥಾನವಿದೆ, ಈ ದೇವಾಲಯವು ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ. ಈ ದೇವಾಲಯ ಇರೋದಾದ್ರೂ ಎಲ್ಲಿ, ಈ ದೇವಾಲಯದ ಹೆಸರೇನು, ವಿಶೇಷತೆ ಏನು, ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಳೆಯ ಐತಿಹಾಸಿಕ ಹಿನ್ನಲೆ ಹೊಂದಿರುವ ಏಕೈಕ ದೇವಾಲಯವಿದು. ಈ ದೇವಾಲಯಕ್ಕೆ ʻಮರೋಳಿ ಶ್ರೀ ಸೂರ್ಯ ನಾರಾಯಣ ದೇವಾಲಯʼ ಎಂಬುದಾಗಿ ಕರೆಯಲಾಗುತ್ತದೆ. ಈ ದೇವಾಲಯ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮರೋಳಿ ಮತ್ತು ಬೆಳ್ತಂಗಡಿಯ ನಾರಾವಿಯಲ್ಲಿ ಶ್ರೀ ಸೂರ್ಯನಾರಾಯಣ ದೇವಸ್ಥಾನವಾಗಿದೆ.

ಈ ದೇವಾಲಯ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಮದುವೆಯಾಗಿ ಬಹುಕಾಲದವರೆಗೆ ಮಕ್ಕಳು ಆಗದೆ ಇದ್ರೆ ಈ ಸೂರ್ಯ ನಾರಾಯಣನ ಸನ್ನಿದಿಗೆ ಬಂದು ಪೂಜೆ ಸಲ್ಲಿಸಿ ಬೇಡಿಕೊಂಡರೆ ಮಕ್ಕಳಾಗುತ್ತವೆ ಅನ್ನೋದು ಇಲ್ಲಿಯ ಭಕ್ತರ ನಂಬಿಕೆಯಾಗಿದೆ. ಅಷ್ಟೇ ಅಲ್ಲದೇ, ಈ ರೀತಿ ಮಕ್ಕಳ್ಳನ್ನು ಪಡೆದ ಅದೆಷ್ಟೋ ಉದಾರಣೆಗಳಿವೆ. ದೈಹಿಕವಾಗಿ ಸಮಸ್ಯೆ ಇದ್ರೆ ನಿವಾರಣೆಯಾಗುತ್ತವೆ ಅನ್ನೋದು ಸ್ಥಳೀಯ ಭಕ್ತರ ಮಾತಾಗಿದೆ. ತಲೆನೋವು, ದೃಷ್ಟಿ ದೋಷ ಇರುವವರು ಸಹ ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ಪರಿಹಾರವನ್ನು ಕಾಣಬಹುದಾಗಿದೆ. ಇಲ್ಲಿ ಪ್ರಾರ್ಥಿಸಿ ಕೊಂಡವರಲ್ಲಿ ಯಾವುದಾದರು ವಿಶೇಷ ಅಭಿವ್ಯಕ್ತಿ ಸಾಮಥ್ಯವಿದ್ದಲ್ಲಿ ಅದು ನೂರುಪಟ್ಟು ವೃದ್ಧಿಸುತ್ತದೆ ಎಂಬ ಪ್ರತೀತಿಯಿದೆ.

ದೇವಸ್ಥಾನದ ವಿಳಾಸ: ಶ್ರೀ ಸೂರ್ಯನಾರಾಯಣ ದೇವಸ್ಥಾನ, ಮರೋಳಿ, ಮಂಗಳೂರು 575 005 ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ ರಾಜ್ಯ ಪೂಜಾ ಸಮಯ: ಬೆಳಿಗ್ಗೆ : 6:00 ಗಂಟೆಗೆ, ಮದ್ಯಾಹ್ನ : 12:00 ಗಂಟೆಗೆ, ಸಾಯಂಕಾಲ : 8:00 ಗಂಟೆಗೆ. ಮರೋಳಿ ಸೂರ್ಯನಾರಾಯಣ ದೇವಸ್ಥಾನಕ್ಕೆ ಒಂದು ವಿಶೇಷ ಐತಿಹ್ಯ ಇದೆ. ಆದಿಯಲ್ಲಿ ಇದು ಒಂದು ಗುಹೆ, ಅರಣ್ಯ, ಜಲಚರಗಳಿಂದ ಕೂಡಿದ ಪ್ರಕೃತಿ ರಮಣೀಯ ಪ್ರದೇಶ. ಆ ಸಮಯದಲ್ಲಿ ಮಹಾ ತಪಸ್ವಿ ಋಷಿಯೊಬ್ಬರಿಗೆ ಗೋಲಾಕೃತಿಯೊಂದು ಪ್ರಕಾಶ ರೂಪದಲ್ಲಿ ಕಾಣಿಸಿ, ಶ್ರೀ ಸೂರ್ಯನಾರಾಯಣ ದೇವರ ಆವಿರ್ಭಾವ ಆಯಿತು ಎಂದು ಪ್ರತೀತಿ.

ಸಂಸ್ಕ್ರತದಲ್ಲಿ ʻಮರಾಲಿʼ ಎಂದರೆ ಸಾತ್ವಿಕ-ಸುಂದರ ಎಂದು ಅರ್ಥ. ಮರಾಲ ಋಷಿಯ ಕತೆಯು ಇದೆ. ಸುಮಾರು 1200 ವರ್ಷಗಳ ಹಿಂದೆ ತಪಸ್ವಿಗಳಿಂದ ಸ್ಥಾಪನೆಗೊಂಡಿತ್ತು ಎನ್ನಲಾದ ಶ್ರೀ ಸೂರ್ಯನಾರಾಯಣ ಕ್ಷೇತ್ರವು ಕ್ರಿಶ.16ನೇ ಶತಮಾನದಲ್ಲಿ ಯುದ್ಧ ಮತ್ತು ರಾಜಾಶ್ರಯದ ಕೊರತೆಯಿಂದಾಗಿ ಜೀರ್ಣಾವಸ್ಥೆಯನ್ನು ತಲುಪಿತ್ತು. ಕಾಲಾಂತರದಲ್ಲಿ ಇಲ್ಲಿ ಯಾವುದೋ ರಾಜರುಗಳ ನಡುವೆ ಯುದ್ಧವಾಗಿ ಈ ದೇವಸ್ಥಾನ ನಿರ್ನಾಮವಾಯಿತು.

ಮುಂದೆ ಒಂದು ದಿನ ದೇವಸ್ಥಾನವೇ ಇಲ್ಲದ ಈಗಿನ ಶೂನ್ಯವಾಗಿದ್ದ ಸ್ಥಳದಲ್ಲಿ ಎರಡು ಗುತ್ತು ಮನೆಯ ಮಾತೆಯವರು ಈ ಸ್ಥಳದಲ್ಲಿ ಹಾಯ್ದು ಹೋಗುವ ಸಂದರ್ಭ ಕತ್ತಲಾಯಿತು. ಆಗ ಗೋಲರೂಪದಲ್ಲಿ ಪ್ರಭೆಯೊಂದು ಮಾತೆಯರಿಗೆ ಕಂಡು ದಿಗ್ಭಮೆಗೊಂಡು, ವಿಷಯ ತಿಳಿದ ರಾಣಿಯು ಅಲ್ಲೇ ದೇವಸ್ಥಾನ ಪುನಃ ನಿರ್ಮಾಣ ಮಾಡುವ ಸಂಕಲ್ಪ ಮಾಡಿದಳು. ಇದಕ್ಕೆ ಸಂವಾದಿಯಾಗಿ ಜೈನರಾಣಿಯೊಬ್ಬಳು ಈಗ ಇರುವ ದೇವಸ್ಥಾನವನ್ನು ಪುನಃ ನಿರ್ಮಾಣ ಮಾಡಿದಳು ಎಂಬುದು ಇತಿಹಾಸ.

ಹರಿ, ಹರ, ಬ್ರಹ್ಮ ಹಾಗೂ ಶಕ್ತಿ ಸಾನ್ನಿಧ್ಯವನ್ನು ಹೊಂದಿರುವ ಶ್ರೀ ಸೂರ್ಯನಾರಾಯಣ ಸ್ವಾಮಿ ದೇವಾಲಯವು ಪವಿತ್ರ ಕ್ಷೇತ್ರವಾಗಿದ್ದು ಈ ದೇವಾಲಯದ ಶಕ್ತಿಯನ್ನು ನಂಬಿ ಬಂದ ಭಕ್ತರಿಗೆ ಈ ಕ್ಷೇತ್ರದ ದೇವರು ಉನ್ನತಿಯನ್ನು ದಯಪಾಲಿಸಿದ ಸಾಕಷ್ಟು ಉದಾಹರಣೆಗಳು ಇವೆ.

ಸೂರ್ಯ ಮಂಡಲದ ಪ್ರಧಾನ ದೇವರು ಶ್ರೀ ಸವಿತೃ ಸೂರ್ಯನಾರಾಯಣ. ನಮಗೆ ನಿತ್ಯ ಕಾಣುವ ದೇವರು. ಏಳು ಕುದುರೆಗಳ ರಥವನ್ನು ಏರಿ ಅರುಣನನ್ನು ಸಾರಥಿಯಾಗಿಟ್ಟುಕೊಂಡು ನಿತ್ಯ ಸಂಚಾರಿ ಎಂದು ಪ್ರತೀತಿ. ಸೌರಮಾನ ಪಂಥದವರಿಗೆ ಇವನು ಮೂಲ ಆಕಾರ, ಇವನು ಕಳಿಂಗ ದೇಶೋದ್ಭವ. ಹುಟ್ಟಿದ ದಿನ ಪ್ರಭಾವ ನಾಮ ಸಂವತ್ಸರ ಮಾಘಮಾಸ ಶುಕ್ಲ ಪಕ್ಷ ಸಪ್ತಮಿ. ಅದುವೇ ನಾವು ಆಚರಿಸುವ ರಥಸಪ್ತಮಿಯ ಮಹಾರಥೋತ್ಸವ.

ಭಾರತ ದೇಶದಲ್ಲಿ ಸೂರ್ಯನ ಆರಾಧನೆ ಸನಾತನವಾದದ್ದು. ರಾಮಾಯಣದಲ್ಲಿ ರಾವಣವಧಾ ಪ್ರಸಂಗದಲ್ಲಿ ಶ್ರೀ ಸೂರ್ಯಮಂತ್ರ ಆದಿತ್ಯಹೃದಯದ ಪ್ರಭಾವ, ಮುಂದೆ ಮಹಾಭಾರತದಲ್ಲಿ ಭಗವಾನ್ ಶ್ರೀಕೃಷ್ಣ ಸೂರ್ಯದೇವರಿಗೆ ಕೊಡುತ್ತಿದ್ದ ಪ್ರಾತಃ ಅರ್ಘ್ರ್ಯವೇ ಗಯನ ಪ್ರಕರಣಕ್ಕೆ ಕಾರಣ ಎನ್ನುವುದರಿಂದ ಶ್ರೀ ಸೂರ್ಯನ ಆರಾಧನೆ ಅನಾದಿಕಾಲದಿಂದಲೂ ಇತ್ತು ಎಂಬುದು ಜನಜನಿತ. ಋಷಿ ಮುನಿಗಳು ಅವರ ನಿತ್ಯಾನುಷ್ಠಾನದಲ್ಲಿ ಪ್ರಾತಃ ಸಂಧ್ಯೆಯನ್ನು ಶ್ರೀ ಸೂರ್ಯದೇವರಿಗೆ ಅರ್ಘ್ರ್ಯ ಕೊಟ್ಟು ಪ್ರಾರಂಭಿಸಿ, ಮನಸ್ಸಿನ ಹತೋಟಿಗೆ ಹಾಗೂ ಬುದ್ಧಿಯ ವಿಕಾಸವನ್ನು ಅಪೇಕ್ಷಿಸುವ ಮಹಾಗಾಯತ್ರಿ ಮಂತ್ರವನ್ನು ಪಠಿಸುವುದು ಶ್ರೀ ಸೂರ್ಯನ ಕುರಿತದ್ದೇ ಆಗಿದೆ.

Leave a Comment