ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ದೇವರನ್ನು ವಿವಿಧ ರೀತಿಯಲ್ಲಿ ಪೂಜೆ ಮಾಡುತ್ತೇವೆ. ಕಷ್ಟಗಳು ಬಂದಾಗ ಮನೆಯಲ್ಲಿ ಪೂಜೆಗಳನ್ನು ಮಾಡಿಸುವುದು ಹೋಮಗಳನ್ನು ಮಾಡಿಸುವುದು ಒಂದು ರೀತಿ ಆದರೆ ಅನುಕೂಲತೆ ಇಲ್ಲದೆ ಹೋದಾಗ ಬಹಳ ಕಷ್ಟದಲ್ಲಿದ್ದಾಗ ಕೈಯಲ್ಲಿರುವ ಕಾಣಿಕೆಯನ್ನು ಹಾಕಿ ಕೋರಿಕೆ ಕೇಳಿಕೊಂಡು ಹರಕೆ ಕಟ್ಟಿಕೊಳ್ಳುತ್ತೇವೆ.
ಸಾಮಾನ್ಯವಾಗಿ ಹೆಚ್ಚಿನ ಜನರು ಯಾವ ದೇವರಿಗೆ ಹರಕೆ ಮಾಡಿಕೊಡುತ್ತಾರೋ ಆ ದೇವರ ವಾರ ಇದ್ದ ದಿನ ಮನೆಯನ್ನು ಶುದ್ಧಗೊಳಿಸಿ ಪೂಜೆ ಮಾಡಿ ಮಡಿ ಉಟ್ಟುಕೊಂಡು ಒಂದು ಅರಿಶಿಣದ ಬಟ್ಟೆಯಲ್ಲಿ ಒಂದು ನಾಣ್ಯವನ್ನು ಹಾಕಿ ಗಂಟು ಕಟ್ಟಿ ಇಡುತ್ತಾರೆ. ನಂತರ ತಮ್ಮ ಹರಕೆಯನ್ನು ಕೇಳಿಕೊಳ್ಳುತ್ತಾರೆ. ಈ ಹರಕೆ ಪೂರೈಸಿದ ಬಳಿಕ ಕಾಣಿಕೆಯನ್ನು ಅರ್ಪಿಸಿ ನಿನ್ನ ಸನ್ನಿಧಾನಕ್ಕೆ ಬಂದು ದರ್ಶನ ಪಡೆಯುತ್ತೇನೆ ಎಂದು ಹೇಳಿಕೊಳ್ಳುತ್ತಾರೆ.
ಇದಾದ ಬಳಿಕ ಸ್ವಲ್ಪ ದಿನಗಳಲ್ಲಿ ಅದನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಇನ್ನು ಕೆಲವರು ಇನ್ನೊಂದು ರೀತಿಯಲ್ಲಿ ಹರಕೆ ಮಾಡಿಕೊಳ್ಳುತ್ತಾರೆ. ಅದೇನೆಂದರೆ ಇದೇ ರೀತಿ ಆ ದೇವರ ವಾರ ಇರುವ ದಿನ ದೇವಾಲಯಕ್ಕೆ ಹೋಗಿ ಅಥವಾ ಮನೆ ಸ್ವಚ್ಛಗೊಳಿಸಿ ಮಡಿ ಉಟ್ಟುಕೊಂಡು ದೇವರಿಗೆ ಪೂಜೆ ಮಾಡಿದ ಬಳಿಕ ನನಗೆ ಈ ರೀತಿ ಒಂದು ಸಮಸ್ಯೆಯಿಂದ ಪರಿಹಾರ ಮಾಡು ಅಥವಾ ಈ ರೀತಿ ಒಂದು ಒಳ್ಳೆ ಸುದ್ದಿ ಬರುವ ಹಾಗೆ ಮಾಡು.
ಹೀಗೆ ಮಾಡಿದರೆ ಸನ್ನಿಧಾನಕ್ಕೆ ಬಂದು ಈ ರೀತಿ ನಿನ್ನ ಹರಕೆ ತೀರಿಸುತ್ತೇನೆ ಎಂದು ಅನ್ನದಾನವನ್ನು ಅಥವಾ ಉರುಳು ಸೇವೆಯನ್ನು ಅಥವಾ ಇಷ್ಟು ಬಾರಿ ದೇವಾಲಯಕ್ಕೆ ಬರುತ್ತೇನೆ ಎಂದು ಅಥವಾ ವಿಶೇಷ ರೀತಿಯಲ್ಲಿ ಪೂಜೆ ಮಾಡುತ್ತೇನೆ ಎಂದು ಅಥವಾ ಅಲಂಕಾರ ಮಾಡಿಸುತ್ತೇನೆ ಎಂದು ಅವರಿಗೆ ತೋಚಿದ ರೀತಿಯಲ್ಲಿ ದೇವರ ಸೇವೆ ಮಾಡುತ್ತೇನೆ ಎಂದು ಹರಕೆ ಮಾಡಿಕೊಳ್ಳುತ್ತಾರೆ.
ಆದರೆ ಸ್ವಲ್ಪ ದಿನ ಕಳೆದ ಬಳಿಕ ಯಾವ ರೀತಿ ಹರಕೆ ತೀರಿಸುತ್ತೇನೆ ಎಂದು ಹರಕೆ ಮಾಡಿಕೊಂಡಿದ್ದೆ ಎನ್ನುವುದನ್ನು ಮರೆತು ಬಿಟ್ಟಿರುತ್ತಾರೆ. ಹೀಗಾದಾಗ ಬದುಕಿನಲ್ಲಿ ಬಹಳ ಕಷ್ಟ ಅನುಭವಿಸಬೇಕಾಗುತ್ತದೆ. ನೀವು ಯಾವ ವಿಷಯಕ್ಕಾಗಿ ಕೋರಿಕೆ ಮಾಡಿಕೊಂಡು ಮರೆತ್ತಿದ್ದಿರೋ ಅದೇ ವಿಷಯದಲ್ಲಿ ಪದೇ ಪದೇ ನಿಮಗೆ ತೊಂದರೆ ಆಗುತ್ತಿರುತ್ತದೆ. ಮನೆಯಲ್ಲಿ ನೆಮ್ಮದಿ ಇರುವುದಿಲ್ಲ, ಸಣ್ಣ ಪುಟ್ಟ ವಿಷಯಕ್ಕೆ ಜಗಳ ಆಗುತ್ತಿರುತ್ತದೆ.
ಉದ್ಯೋಗ ವಿಷಯವಾಗಿ ಹರಕೆ ಮಾಡಿಕೊಂಡಿದ್ದರೆ ಉದ್ಯೋಗ ಸ್ಥಳದಲ್ಲಿಯೇ ಸಮಸ್ಯೆ ಆಗುತ್ತದೆ, ಹಣಕಾಸಿನ ವಿಚಾರಕ್ಕೆ ಹರಕೆ ಮಾಡಿಕೊಂಡು ಮರೆತಿದ್ದರೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತೀರಿ. ಈ ರೀತಿ ಮಕ್ಕಳ ವಿಚಾರಕ್ಕೆ ಹರಕೆ ಮಾಡಿಕೊಂಡಿದ್ದರೆ ಅವರು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ. ಇಂತಹ ಸೂಚನೆಗಳನ್ನು ಮರೆತರು ಕೆಲವೊಮ್ಮೆ ಆ ದೇವರುಗಳೇ ಕನಸಿನಲ್ಲಿ ಬಂದು ಎಚ್ಚರಿಸುತ್ತಿರುತ್ತಾರೆ. ಆಗ ದೇವರು ಕನಸಿನಲ್ಲಿ ಬರುವುದು ಒಳ್ಳೆಯದು ಎಂದುಕೊಂಡು ಮರೆತು ಬಿಡಬಾರದು.
ಆದಷ್ಟು ಕೋರಿಕೆ ಪೂರೈಸಿದ ಕೆಲವೇ ದಿನಗಳಲ್ಲಿ ಹರಕೆಯನ್ನು ಕೂಡ ಸಲ್ಲಿಸಿ ಬಿಡಬೇಕು ಒಂದು ವೇಳೆ ನೀವು ಹರಕೆ ಮಾಡಿಕೊಂಡಿದ್ದ ವಿಷಯ ಮರೆತು ಹೋಗಿದ್ದರೆ ದೇವಸ್ಥಾನಕ್ಕೆ ಹೋಗಿ ತಪ್ಪು ಕಾಣಿಕೆಯನ್ನು ಹಾಕಿ ನಿಮ್ಮ ಕೈಯಲ್ಲಿ ಆದ ಸೇವೆಯನ್ನು ದೇವರಿಗೆ ಮಾಡಿ ನಿಮಗೆ ಯಾವ ರೀತಿ ತಿಳಿಯುತ್ತದೆ ಆ ವಿಧಾನದಲ್ಲಿ ಹರಕೆ ತೀರಿಸಿ ಕ್ಷಮೆ ಕೇಳಬೇಕು. ಈ ರೀತಿ ಮಾಡುವುದರಿಂದ ಸಮಸ್ಯೆಗಳಿಂದ ಆಚೆ ಬರಬಹುದು. ಆದರೆ ಯಾವುದೇ ಕಾರಣಕ್ಕೂ ಮಾಡಿಕೊಂಡಿದ್ದ ಹರಕೆಯನ್ನು ಮರೆಯುವುದು ಬಹಳ ತಪ್ಪು. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಿ ಬದುಕಬೇಕು.