ಲಕ್ಷ್ಮಿ ಕುಬೇರ ವ್ರತದ ಬಗ್ಗೆ ಆಸಕ್ತಿ ಎಲ್ಲರಿಗೂ ಇರುತ್ತದೆ. ಯಾಕೆಂದರೆ ಈ ವ್ರತ ಪಾಲಿಸುವವರಿಗೆ ತಪ್ಪದೆ ಲಕ್ಷ್ಮಿಯ ಕೃಪಾಕಟಾಕ್ಷ ದೊರೆಯುತ್ತದೆ. ಮನೆಯಲ್ಲಿ ಎಷ್ಟೇ ಆರ್ಥಿಕ ಸಂಕಷ್ಟ ಇದ್ದರೂ ಹಣಕಾಸಿನ ತೊಂದರೆಗಳು ಎಷ್ಟೇ ಭಾದಿಸುತ್ತಿದ್ದರು ಭಕ್ತಿಯಿಂದ ಈ ವ್ರತವನ್ನು ನಿಯಮ ಪ್ರಕಾರ ಪಾಲಿಸಿದರೆ ಅವರೆಲ್ಲಾ ಕಷ್ಟಗಳು ಕೂಡ ದೂರ ಆಗುತ್ತವೆ.
ಇದಕ್ಕೆ ಯಾವುದೇ ಬೇಧವಿಲ್ಲದೆ ಪುರುಷರು, ಮಹಿಳೆಯರು, ವಿಧವೆಯರು, ಸುಮಂಗಲಿಯರು ಕನ್ಯೆಯರು ಯಾರು ಬೇಕಾದರೂ ಆಚರಿಸಬಹುದು. ಇದನ್ನು ಅಮಾವಾಸ್ಯೆ ದಿನ ಆರಂಭಿಸಿದರೆ ತುಂಬಾ ಒಳ್ಳೆಯದು ಅಥವಾ ಅಮಾವಾಸ್ಯೆ ಆದ ಬಳಿಕ ಆರಂಭಿಸಿದರು ಒಳ್ಳೆಯದು. ಗುರುವಾರ ದಿನ ಆರಂಭಿಸುವುದರಿಂದ ಗುರುಗಳ ಆಶೀರ್ವಾದ ಹೆಚ್ಚು ಸಿಗುತ್ತದೆ ಎಂದು ನಂಬಲಾಗಿದೆ. ಆದರೆ ಒಮ್ಮೆ ಆರಂಭಿಸಿದ ಮೇಲೆ 48 ದಿನಗಳವರೆಗೆ ಪಾಲಿಸಬೇಕು.
ಹೆಣ್ಣು ಮಕ್ಕಳಿಗೆ ಮಧ್ಯದಲ್ಲಿ ತಿಂಗಳ ಸಮಸ್ಯೆ ಬಂದಾಗ ಐದಾರು ದಿನ ಬಿಟ್ಟು ಮತ್ತೆ ಆರಂಭಿಸಬಹುದು. ಈ ವ್ರತ ಆರಂಭಿಸಲು ಈ ರೀತಿ ಮಾಡಿ ಒಂದು ದಿನ ನಿರ್ಧಾರ ಮಾಡಿಕೊಂಡು ಮನೆಯಲ್ಲ ಶುದ್ಧ ಮಾಡಿಕೊಂಡು ಬೇಗ ಎದ್ದು ಸ್ನಾನ ಮಾಡಿ ಮನೆ ದೇವರ ಪೂಜೆ ಮಾಡಿ ಮತ್ತು ಮನೆ ದೇವರಿಗೆ ಕಾಣಿಕೆಯಾಗಿ 11 ರೂಪಾಯಿಯನ್ನು ಒಂದು ಅರಿಶಿಣದ ಬಟ್ಟೆಯಲ್ಲಿ ಕಟ್ಟಿ ಇಡಬೇಕು.
ನಂತರ ಎಂದಿನಂತೆ ಎಲ್ಲ ದೇವರಿಗೆ ಪೂಜೆ ಮಾಡಿ, ಮೊದಲು ಗಣಪತಿಯನ್ನು ಆಶೀರ್ವಾದಕ್ಕಾಗಿ ಆರಂಭಿಸಬೇಕು ಗಣಪತಿ ಆಶೀರ್ವಾದ ಬೇಡಿ ಬಳಿಕ ಕುಬೇರ ಲಕ್ಷ್ಮಿ ವ್ರತ ಪಾಲಿಸುತ್ತೇನೆ ಎಂದು ಸಂಕಲ್ಪ ಮಾಡಿಕೊಂಡು ನಿಯಮ ನಿಷ್ಠೆಯಿಂದ ನಡೆದುಕೊಳ್ಳಬೇಕು. ಪ್ರತಿದಿನವೂ ಕೂಡ 48 ದಿನಗಳವರೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ದೇವರಿಗೆ ಹೂವು ಇಟ್ಟು ದೀಪ ಹಚ್ಚಿ ಪೂಜೆ ಮಾಡಬೇಕು.
ಪ್ರತಿದಿನವೂ ಕೂಡ ಸ್ನಾನ ಮಾಡಲೇಬೇಕು ಎನ್ನುವ ನಿಯಮ ಇಲ್ಲ. ನೀವು ತಲೆ ಸ್ನಾನ ಮಾಡುವ ದಿನ ಮಾತ್ರ ತಲೆಗೆ ಸ್ನಾನ ಮಾಡಬಹುದು, ಬೇರೆ ದಿನ ಹಾಗೆ ಸ್ನಾನ ಮಾಡಿ ಕೂಡ ಪೂಜೆ ಮಾಡಬಹುದು. ಆದರೆ 48 ದಿನಗಳವರೆಗೆ ಮಾಂಸಹಾರದ ಸೇವನೆ ಅಥವಾ ಮಧ್ಯಪಾನ ಮಾಡಬಾರದು. ಆದಷ್ಟು ಆಧ್ಯಾತ್ಮಿಕವಾಗಿ ಇರಬೇಕು. ಈ ವ್ರತವಲ್ಲದೆ ಯಾವುದೇ ದೇವರ ಪೂಜೆಗಳನ್ನು, ವ್ರತಗಳನ್ನು ಮಾಡುವಾಗಲು ಕೂಡ ನಾವು ಎಷ್ಟು ಪ್ರಾಮಾಣಿಕವಾಗಿರುತ್ತವೆ.
ಒಳ್ಳೆ ಮಾತುಗಳನ್ನು ಆಡುತ್ತೇವೆ ಹಾಗೂ ಒಳ್ಳೆಯದನ್ನು ಬೇರೆಯವರಿಗೆ ಬಯಸುತ್ತೇವೆ ಅಷ್ಟೇ ಪ್ರತಿಫಲ ನಮಗೂ ಸಿಗುತ್ತದೆ. ಆದ್ದರಿಂದ ಈ ರೀತಿ ಸಕಾರಾತ್ಮಕತೆಯಿಂದ ಕೂಡಿದವರಿಗೆ ದೇವರ ಅನುಗ್ರಹ ಬೇಗ ಸಿಗುತ್ತದೆ. ಆರಂಭದಲ್ಲಿ ತಪ್ಪದೇ ಮುಖ್ಯವಾಗಿ ಒಂದು ಕೆಲಸ ಮಾಡಬೇಕು. ಅದೇನೆಂದರೆ ಬೆಲ್ಲ ಮೈದಾ ಹಿಟ್ಟು ಹಾಗೂ ಹಾಲಿನಿಂದ ಉಂಡೆಗಳನ್ನು ಮಾಡಿಕೊಳ್ಳಬೇಕು. 108 ಉಂಡೆಗಳನ್ನು ಮಾಡಿಕೊಂಡು ಅದನ್ನು ಸ್ವಲ್ಪ ಒಣಗಿಸಿ ಒಂದು ಬಟ್ಟಲಿನಲ್ಲಿ ದೇವರ ಮುಂದೆ ಇಡಬೇಕು.
ಮೊದಲ ದಿನ ತಪ್ಪದೇ ಇದನ್ನು ದೇವರ ಮುಂದೆ ಇಡುವಾಗ ಒಂದೊಂದು ಉಂಡೆ ಇಡುವಾಗಲು ಕೂಡ ಕನಕಧಾರಸ್ತೋತ್ರವನ್ನು ಒಂದೊಂದು ಉಂಡೆಗಳನ್ನು ಹಿಡಿದುಕೊಂಡು ಹೇಳಿ ಬಟ್ಟಲಿಗೆ ಹಾಕಬೇಕು. ಪೂರ್ವಾಭಿಮುಖವಾಗಿ ಅಥವಾ ಉತ್ತರಕ್ಕೆ ಮುಖವಾಗಿ ಚಾಪೆ ಮೇಲೆ ಅಥವಾ ಮಣೆಯ ಮೇಲೆ ಕುಳಿತುಕೊಂಡು ಗಣಪತಿಯನ್ನು ಮೊದಲು ಪ್ರಾರ್ಥಿಸಿ, ನಂತರ ಈ ರೀತಿ ಮಂತ್ರವನ್ನು ಹೇಳಬೇಕು.
108 ಬಾರಿ ಈ ರೀತಿ ಉಂಡೆಗಳನ್ನು ಹಿಡಿದುಕೊಂಡು 48 ದಿನಗಳವರೆಗೂ ಹೇಳಿ ವ್ರತ ಮುಗಿದ ಮೇಲೆ ಈ ಉಂಡೆಗಳನ್ನು ಹರಿಯುವ ನೀರಿನಲ್ಲಿ ಹಾಕಬೇಕು. ಅದನ್ನು ಮೀನುಗಳ ಸೇವಿಸಬೇಕು ಅಥವಾ ನಿಮ್ಮ ಮನೆ ಪಕ್ಕದಲ್ಲಿ ಯಾವುದಾದರೂ ಕೆರೆಗಳಲ್ಲಿ ಮೀನು ಇದ್ದರು ಹಾಕಬಹುದು ಆದರೆ ಯಾವುದೇ ಕಾರಣಕ್ಕೂ ಮನೆಯಲ್ಲಿರುವ ಅಕ್ವೇರಿಯಂ ಮೀನುಗಳಿಗೆ ಹಾಕಬಾರದು. ಈ ರೀತಿ ವ್ರತವನ್ನು ಪಾಲಿಸಿ ನೋಡಿ, ನಿಮ್ಮ ಪರಿಸ್ಥಿತಿ ಎಷ್ಟು ಉತ್ತಮವಾಗುತ್ತದೆ ಎಂದು ಆಶ್ಚರ್ಯಗೊಳ್ಳುತ್ತೀರಿ.