ತುಳಸಿ ಭಾರತದ ಹೆಚ್ಚಿನ ಹಿಂದೂ ಮನೆಗಳಲ್ಲಿ ಕಂಡುಬರುವ ಮಂಗಳ ಕರ ಸಸ್ಯವಾಗಿದೆ. ಏಕೆಂದರೆ ತುಳಸಿ ಗಿಡವೂ ಸಂಪತ್ತಿನ ಅಧಿದೇವತೆ ಯಾದ ಲಕ್ಷ್ಮೀದೇವಿಯ ನೆಲೆಯಾಗಿದೆ ಎಂದು ನಂಬಲಾಗಿದೆ. ಆದ್ದರಿಂದ ಲಕ್ಷ್ಮಿ ನೆಲೆಸಿರುವ ತುಳಸಿ ಗಿಡವನ್ನು ಮನೆಯಲ್ಲಿ ಇರಿಸಿದಾಗ ಲಕ್ಷ್ಮಿ ದೇವಿಯು ಯಾವಾಗಲೂ ಮನೆಯಲ್ಲಿ ಇರುತ್ತಾಳೆ ಎಂದು ಜನರು ನಂಬುತ್ತಾರೆ.
ಆದರೆ ಮನೆಯಲ್ಲಿ ತುಳಸಿ ಗಿಡ ಬೆಳೆಸಿದರೆ ಪ್ರತಿನಿತ್ಯ ಪೂಜೆ ಮಾಡಬೇಕು ಹೀಗೆ ಮಾಡುವುದರಿಂದ ಮಾತ್ರ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು. ವಾಸ್ತು ಶಾಸ್ತ್ರದಲ್ಲಿಯೂ ಕೂಡ ತುಳಸಿ ಗಿಡವನ್ನು ಮನೆಯಲ್ಲಿ ಇಡುವಾಗ ಕೆಲವು ನಿಯಮಗಳು ಪಾಲಿಸಬೇಕು ಎಂದು ಹೇಳಲಾಗಿದೆ.
ಈ ಸುದ್ದಿ ಓದಿ:- ಮಿಥುನ ರಾಶಿಯವರ ಸಹಜ ಗುಣ ಸ್ವಭಾವಗಳು.!
ಆ ನಿಯಮಗಳನ್ನು ಅನುಸರಿಸಲು ವಿಫಲವಾದರೆ ಮನೆಗೆ ಬಡತನ ನೆಲೆಸುತ್ತದೆ ಹಾಗಾದರೆ ಈಗಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ತುಳಸಿ ಗಿಡವನ್ನು ನಮ್ಮ ಮನೆಯಲ್ಲಿ ಇಟ್ಟುಕೊಳ್ಳುವಾಗ ಯಾವ ಕೆಲವು ವಾಸ್ತು ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ
* ತುಳಸಿ ಗಿಡವನ್ನು ಯಾವಾಗಲೂ ಕತ್ತಲು ಪ್ರದೇಶದಲ್ಲಿ ಇಡಬಾರದು. ಸೂರ್ಯಾಸ್ತದ ನಂತರ ತುಳಸಿ ಗಿಡದ ಬಳಿ ದೀಪ ಹಚ್ಚಬೇಕು ತುಳಸಿ ಗಿಡವನ್ನು ಇಡುವ ಸ್ಥಳದಲ್ಲಿ ಯಾವಾಗಲೂ ಬೆಳಕು ಇರುವಂತೆ ನೋಡಿ ಕೊಳ್ಳಬೇಕು.
* ತುಳಸಿ ಗಿಡವನ್ನು ಯಾವಾಗಲೂ ಹೊರಾಂಗಣದಲ್ಲಿ ಇಡಬೇಕು ಆಗ ಮಾತ್ರ ಸೂರ್ಯನ ಬೆಳಕು ನೇರವಾಗಿ ಅದರ ಮೇಲೆ ಬೀಳುತ್ತದೆ ಮತ್ತು ಸಸ್ಯವು ಸಮೃದ್ಧವಾಗಿ ಬೆಳೆಯುತ್ತದೆ.
ಈ ಸುದ್ದಿ ಓದಿ:- ಖಾಲಿ ಒಡವೆ ಬಾಕ್ಸ್ ಗಳಿಂದ ಪ್ರತಿ ಮಹಿಳೆಗೂ ಉಪಯೋಗವಾಗುವ ಟಿಪ್ಸ್.!
* ತುಳಸಿ ಗಿಡಗಳಲ್ಲಿ ಒಣ ಎಲೆಗಳಿದ್ದರೆ ಕಾಲಕಾಲಕ್ಕೆ ತೆಗೆಯಬೇಕು ಆ ಒಣ ಎಲೆಗಳನ್ನು ಬಿಸಾಡುವ ಬದಲು ಗಿಡದ ಬಳಿ ಇಡಬೇಕು.
* ಮನೆಯಲ್ಲಿ ಇಟ್ಟಿರುವ ತುಳಸಿ ಗಿಡಗಳು ಒಣಗಿದ್ದರೆ ತಕ್ಷಣ ವಿಲೇವಾರಿ ಮಾಡಬೇಕು ಏಕೆಂದರೆ ಒಣಗಿದ ತುಳಸಿ ಗಿಡವು ಮನೆಗೆ ಬಡತನವನ್ನು ತರುತ್ತದೆ.
* ಮುಖ್ಯವಾಗಿ ತುಳಸಿ ಗಿಡವನ್ನು ಮನೆಯಲ್ಲಿ ಇಡುವಾಗ ಸರಿಯಾದ ದಿಕ್ಕಿನಲ್ಲಿ ಇಡಬೇಕು ತುಳಸಿ ಗಿಡವನ್ನು ಯಾವಾಗಲೂ ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡುವುದನ್ನು ತಪ್ಪಿಸಿ ಗಿಡವನ್ನು ಇಡಲು ಉತ್ತಮವಾದ ದಿಕ್ಕು ಉತ್ತರ ಅಥವಾ ಈಶಾನ್ಯ ದಿಕ್ಕು ಆಗಿದೆ.
ಈ ಸುದ್ದಿ ಓದಿ:- ಈ ಒಂದು ದೀಪವನ್ನು ಮನೆಯಲ್ಲಿ ಮೂರು ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ…….||
* ತುಳಸಿ ಗಿಡವನ್ನು ಯಾವಾಗಲೂ ಕುಂಡದಲ್ಲಿ ಬೆಳೆಸಬೇಕು ನೇರವಾಗಿ ನೆಲದ ಮೇಲೆ ಸುರಿದು ಬೆಳೆಸಬೇಡಿ ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಕೇಳುವುದನ್ನು ತಪ್ಪಿಸಿ.
* ಭಾನುವಾರದಂದು ತುಳಸಿ ಗಿಡಕ್ಕೆ ನೀರು ಹಾಕಬೇಡಿ ಹಾಗೆಯೇ ಆ ದಿನ ತುಳಸಿ ಎಲೆಗಳನ್ನು ಕೀಳುವುದು ಅಶುಭವೆಂದು ಪರಿಗಣಿಸಲಾಗಿದೆ
* ತುಳಸಿ ಗಿಡವನ್ನು ಮುಟ್ಟುವಾಗ ಕೈಗಳು ಯಾವಾಗಲೂ ಸ್ವಚ್ಛವಾಗಿರಬೇಕು ತುಳಸಿ ಎಲೆಗಳನ್ನು ಯಾವಾಗಲೂ ಕೈಯಿಂದ ಒರೆಸಿ ಕತ್ತರಿಸಿ ಚಾಕು ಇತ್ಯಾದಿ ಯಾವುದನ್ನು ಬಳಸಬೇಡಿ.
* ಮುಖ್ಯವಾಗಿ ತುಳಸಿ ಗಿಡವನ್ನು ಅನಗತ್ಯವಾಗಿ ಮುಟ್ಟುವುದನ್ನು ತಪ್ಪಿಸಿ ವಿಶೇಷವಾಗಿ ಸ್ನಾನ ಮಾಡದೆ ತುಳಸಿ ಗಿಡವನ್ನು ಮುಟ್ಟುವುದನ್ನು ತಪ್ಪಿಸಿ ಸ್ನಾನ ಮಾಡದೆ ತುಳಸಿ ಎಲೆಗಳನ್ನು ಮುಟ್ಟುವುದು ಸ್ವೀಕಾರಾರ್ಹವಲ್ಲ ಹಾಗಾಗಿ ಈ ಬಗ್ಗೆ ಎಚ್ಚರದಿಂದಿರಿ.
1 ಫೆಬ್ರವರಿ 2024, ಕೇಂದ್ರದಿಂದ ಬಜೆಟ್ ಮಂಡನೆ ಈ 10 ಘೋಷಣೆಗಳು
* ಮಾಂಸ ಮತ್ತು ಮಧ್ಯ ಸೇವಿಸುವ ಮನೆಯಲ್ಲಿ ತುಳಸಿ ಗಿಡ ನೆಡ ಬಾರದು ಎನ್ನಲಾಗುತ್ತದೆ ಈ ರೀತಿಯ ಮನೆಯಲ್ಲಿ ತುಳಸಿ ಇದ್ದರೆ ಲಕ್ಷ್ಮಿ ಹಾಗೂ ವಿಷ್ಣುವಿಗೆ ಕೋಪ ಬರುತ್ತದೆ.
* ಒಂದು ವೇಳೆ ನೆಟ್ಟಿದ್ದರೆ ಮಾಂಸ ಮಧ್ಯ ಸೇವಿಸಿ ತುಳಸಿಯನ್ನು ಮುಟ್ಟಬಾರದು ಹಾಗೂ ಮಾಂಸ ಮಧ್ಯ ಸೇವಿಸಿದಾಗ ನಿಮ್ಮ ನೆರಳು ತುಳಸಿ ಗಿಡದ ಹತ್ತಿರ ಬೀಳದಂತೆ ನೋಡಿಕೊಳ್ಳಬೇಕು.
* ಮಹಿಳೆಗೆ ಅವಮಾನವಾಗುವ ಮನೆಯಲ್ಲಿ ತುಳಸಿ ಗಿಡ ಇಡಬಾರದು ಎಲ್ಲಾಗುತ್ತದೆ ಯಾವ ಮನೆಯಲ್ಲಿ ಹೆಣ್ಣು ಸುಖವಾಗಿ ಇರುವುದಿಲ್ಲವೋ ಹಾಗೂ ಪದೇಪದೇ ನೋವನ್ನು ಅನುಭವಿಸುತ್ತಾರೆಯೋ ಆ ಮನೆಯ ಮೇಲೆ ಲಕ್ಷ್ಮಿಗೆ ಕೋಪ ಬರುತ್ತದೆ. ಹಾಗಾಗಿ ಆ ಮನೆಯಲ್ಲಿ ತುಳಸಿ ಪೂಜೆ ಮಾಡಬಾರದು ಎನ್ನಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.