ಜೀವನದಲ್ಲಿ ದಾನ ಧರ್ಮ ಎನ್ನುವುದು ಎಲ್ಲಕ್ಕಿಂತ ಶ್ರೇಷ್ಠವಾದದ್ದು. ಈ ಭೂಮಿಗೆ ಬರುವಾಗ ನಾವು ಏನನ್ನು ತೆಗೆದುಕೊಂಡು ಬಂದಿರಲಿಲ್ಲ,ಹಾಗೆಯೇ ಹೋಗುವಾಗ ಏನನ್ನು ಕೂಡ ತೆಗೆದುಕೊಂಡು ಹೋಗಲು ಆಗುವುದಿಲ್ಲ ಬದುಕಿರುವವರೆಗೂ ಒಳ್ಳೆಯ ರೀತಿಯಲ್ಲಿ ಚೆನ್ನಾಗಿ ಬದುಕಿ, ಸಾಧ್ಯವಾದಷ್ಟು ನಮ್ಮ ಕುಟುಂಬದ ಜೋಪಾನಕ್ಕೆ ಎಷ್ಟು ಬೇಕು ಅಷ್ಟು ಮಾತ್ರ ಇಟ್ಟು ಇರುವುದರಲ್ಲಿ ಸ್ವಲ್ಪ ಅಸಹಾಯಕರಿಗೆ ದೀನರಿಗೆ ಹಂಚಿದರೆ ಪುಣ್ಯ ಬರುತ್ತದೆ.
ಈ ಪುಣ್ಯ ಒಂದು ಜನ್ಮದಲ್ಲಿ ಮಾತವಲ್ಲದೇ ಏಳೇಳು ಜನ್ಮದಲ್ಲಿಯೂ ಕಾಯುತ್ತದೆ ಎನ್ನುವ ಮಾತುಗಳಿವೆ. ಆದರೆ ದಾನ ಮಾಡುವಾಗ ಕೆಲವು ನಿಯಮಗಳಿವೆ ಅದನ್ನು ಪಾಲಿಸದೆ ದಾನ ಮಾಡಿದರೆ ನೀವು ನೀಡಿದ ದಾನಕ್ಕೆ ಯಾವುದೇ ಫಲ ಇರುವುದಿಲ್ಲ ಮತ್ತು ನೀವೇ ನಷ್ಟವನ್ನು ಅನುಭವಿಸಬೇಕಾಗಿ ಬರಬಹುದು ಹಾಗಾಗಿ ದಾನ ಮಾಡುವಾಗ ತಿಳಿದುಕೊಳ್ಳಲೇ ಬೇಕಾದ ಕೆಲ ಅಂಶಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ಇಂದು 02 ಮಾರ್ಚ್ 2024, ಅಕ್ರಮ ಸಕ್ರಮ ಸರ್ಕಾರಿ ಜಮೀನಿನಲ್ಲಿ ಮನೆ / ಬೇಸಾಯ ಮಾಡುತ್ತಿರುವವರಿಗೆ ಸರ್ಕಾರದಿಂದ ಹಕ್ಕು ಪತ್ರ ವಿತರಣೆ.!
* ನಾವು ಯಾವುದೇ ವಸ್ತುವನ್ನು ದಾನ ನೀಡಿದರು ಯಾರಿಗೆ ದಾನ ನೀಡುತ್ತಿದ್ದೇವೆ ಎನ್ನುವುದು ಮುಖ್ಯ. ನಾವು ದಾನ ನೀಡಿದ ವಸ್ತುವು ಆ ವ್ಯಕ್ತಿಗೆ ಬಳಕೆಗೆ ಬರುವಂತಿರಬೇಕು, ಈ ರೀತಿ ಅವಶ್ಯಕತೆ ಇರುವ ವ್ಯಕ್ತಿಗೆ ಅವನಿಗೆ ಬೇಕಾದ ವಸ್ತುವನ್ನು ದಾನ ಮಾಡಿದಾಗ ಮಾತ್ರ ನಮಗೆ ಪುಣ್ಯಪ್ರಾಪ್ತಿಯಾಗುವುದು.
* ಹಾಗೆ ಕೆಲವು ವಸ್ತುಗಳನ್ನು ದಾನ ಮಾಡಬಾರದು ಎನ್ನುವ ನಿಯಮವು ಇದೆ. ಅದರಲ್ಲಿ ಪೊರಕೆಯು ಕೂಡ ಒಂದು, ಪೊರೆಕೆಗಳನ್ನು ದಾನ ಮಾಡಿದರೆ ದಾನ ಮಾಡಿದ ವ್ಯಕ್ತಿಗೆ ಹಣಕಾಸಿನ ಸಮಸ್ಯೆಗಳು ಬರುತ್ತವೆ ಆತನ ಐಶ್ವರ್ಯವೂ ಕರಗುತ್ತಾ ಹೋಗುತ್ತದೆ ಎನ್ನುವ ನಂಬಿಕೆ ಇದೆ ಹಾಗಾಗಿ ಯಾವುದೇ ಕಾರಣಕ್ಕೂ ಪೊರಕೆಗಳನ್ನು ಮತ್ತೊಬ್ಬರಿಗೆ ದಾನ ಮಾಡಬೇಡಿ.
ಈ ಸುದ್ದಿ ಓದಿ:-10 ವರ್ಷ ಪ್ರೀತಿಸಿ ಮದುವೆಯಾದರೂ ಭಾಗ್ಯಲಕ್ಷ್ಮಿ ನಟಿ ಸುಷ್ಮಾ ದಾಂಪತ್ಯದಲ್ಲಿ ಬಿ’ರುಕು, ಸ್ಯಾಂಡಲ್ ವುಡ್ ಖ್ಯಾತ ಡೈರೆಕ್ಟರ್ ಕೈ ಹಿಡಿದರು ಒಬ್ಬಂಟಿ ಜೀವನ
* ಪುಸ್ತಕಗಳನ್ನು ದಾನ ಮಾಡುವುದು ಅದರಲ್ಲೂ ಬಡ ಮಕ್ಕಳಿಗೆ ಪುಸ್ತಕಗಳನ್ನು ದಾನ ಮಾಡುವುದು ಬಹಳ ಒಳ್ಳೆಯ ಕೆಲಸ. ಆದರೆ ನೀವು ಓದುವ ಪುಸ್ತಕವನ್ನೇ ಆಗಲಿ, ಬರೆಯುವ ಪುಸ್ತಕವನ್ನೇ ಆಗಲೇ ಬಹಳ ಹಳೆಯದಾಗಿರುವ ಹರಿದಿರುವ ಪುಸ್ತಕಗಳನ್ನು ದಾನ ಮಾಡಿದರೆ ಇದರಿಂದ ಯಾವುದೇ ಪುಣ್ಯ ಬರುವುದಿಲ್ಲ, ಬದಲಾಗಿ ನಿಮಗೆ ದೋಷಗಳು ಹೆಚ್ಚಾಗುತ್ತವೆ.
* ಎಣ್ಣೆಗಳನ್ನು ದಾನ ಮಾಡುವಾಗ ಕೂಡ ಎಚ್ಚರವಾಗಿರಬೇಕು, ಸಾಮಾನ್ಯವಾಗಿ ತೈಲ ದಾನವನ್ನು ಶನಿಗೆ ಗ್ರಹಕ್ಕೆ ಹೋಲಿಸಲಾಗುತ್ತದೆ. ನೀವು ತಪ್ಪಾದ ವಿಧಾನದಲ್ಲಿ ಎಣ್ಣೆ ದಾನ ಮಾಡಿದರೆ ಶನಿ ದೇವರ ಕೋಪಕ್ಕೆ ತುತ್ತಾಗ ಬೇಕಾಗುತ್ತದೆ. ಎಣ್ಣೆಯನ್ನು ದಾನ ತೆಗೆದುಕೊಳ್ಳಬಾರದು ಎಂದು ಅನೇಕರು ತಿಳಿದಿದ್ದಾರೆ ಹೀಗಿದ್ದು ಎಣ್ಣೆ ದಾನ ಮಾಡುವ ಸಮಯ ಬಂದರೆ ನೀವು ಶುದ್ಧವಾದ ಎಣ್ಣೆಯನ್ನು ಮಾತ್ರ ದಾನ ಮಾಡಬೇಕು. ಈಗಾಗಲೇ ನೀವು ಬಳಸಿರುವ ಎಣ್ಣೆಯನ್ನಾಗಲಿ ಅಥವಾ ಅಶುದ್ಧ ಎಣ್ಣೆಯನ್ನಾಗಲಿ ದಾನ ಮಾಡಬಾರದು. ಈ ರೀತಿ ಮಾಡುವುದರಿಂದ ನಿಮಗೆ ಸಮಸ್ಯೆಗಳು ಬರುತ್ತವೆ.
ಈ ಸುದ್ದಿ ಓದಿ:-ಮಕರ ರಾಶಿಯವರಿಗೆ ಮೇ 1 ರಿಂದ ಗುರುಬಲ ಬರಲಿದೆ ಇದರಿಂದ ಎಷ್ಟೆಲ್ಲಾ ಲಾಭಗಳು ಸಿಗಲಿದೆ ನೋಡಿ.!
* ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ವಸ್ತುಗಳನ್ನು ಯಾರಿಗೂ ದಾನ ಮಾಡಬಾರದು ಪ್ಲಾಸ್ಟಿಕ್ ದಾನ ಮಾಡಿದ ವ್ಯಕ್ತಿ ವ್ಯಾಪಾರಸ್ಥನಾಗಿದ್ದರೆ ದಿಢೀರ್ ಎಂದು ಆತನ ವ್ಯಾಪಾರ ಕುಸಿಯುತ್ತದೆ ಮತ್ತು ಕುಟುಂಬದಲ್ಲೂ ಕೂಡ ನಾನಾ ರೀತಿಯ ಸಮಸ್ಯೆಗಳು ಎದುರಾಗಿ ಆತನ ನೆಮ್ಮದಿ ಹಾಳಾಗುತ್ತದೆ ಎಂದು ತಿಳಿಸಲಾಗಿದೆ.
* ಸ್ಟೀಲ್ ಪಾತ್ರೆಗಳನ್ನು ಕೂಡ ದಾನ ಮಾಡಬಾರದು ಉಕ್ಕಿನ ಪಾತ್ರೆಗಳನ್ನು ದಾನ ಮಾಡಿದರೆ ಮನೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತದೆ.
* ನೀರು ಮತ್ತು ಆಹಾರ ದಾನ ಮಾಡುವುದನ್ನು ಮಹಾದಾನಗಳು ಎಂದು ಪರಿಗಣಿಸಲಾಗಿದೆ. ಹಸಿದವರಿಗೆ ಆಹಾರ ಧಾನ ನೀಡುವುದು ತುಂಬಾ ಶ್ರೇಷ್ಠವಾದ ಕೆಲಸ ಆದರೆ ಈ ರೀತಿ ಆಹಾರವನ್ನು ಕೊಡುವಾಗಲಾಗ ಅಥವಾ ಆಹಾರ ಧಾನ್ಯಗಳನ್ನು ಕೊಡುವಾಗ ಕೆಟ್ಟು ಹೋದ ಪದಾರ್ಥಗಳನ್ನು ಕೊಡಲೇಬಾರದು ಹಳಸಿದ ಆಹಾರವನ್ನು ಯಾರಿಗೂ ದಾನವಾಗಿ ನೀಡಬಾರದು ಎಂದು ಶಾಸ್ತ್ರದಲ್ಲಿ ಕಟ್ಟುನಿಟ್ಟಾಗಿ ತಿಳಿಸಲಾಗಿದೆ. ಈ ರೀತಿ ಮಾಡುವುದರಿಂದ ನಿಮಗೆ ಕಷ್ಟಗಳು ಎದುರಾಗುತ್ತವೆ, ಮತ್ತೊಬ್ಬರಿಗೆ ಆಹಾರ ದಾನ ನೀಡುವಾಗ ತಾಜಾ ಆಹಾರಗಳನ್ನು ನೀಡಿ ಅವರ ಹಸಿವನ್ನು ಇಂಗಿಸಿ ಇದು ಪುಣ್ಯದ ಕೆಲಸ.