ರೇಷನ್ ಕಾರ್ಡ್ ಗೆ (Rationcard) ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವತಿಯಿಂದ ನಾಡಿನ ಜನತೆಗೆ ಸಿಹಿ ಸುದ್ದಿ ಇದೆ. APL, BPL ಮತ್ತು AAY ಸಂಬಂಧಿಸಿದಂತೆ ಒಂದು ಪ್ರಮುಖ ಅಪ್ಡೇಟ್ ನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಂಚಿಕೊಂಡಿದೆ (Food and Civil Supply department). ಕರ್ನಾಟಕ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳು (Gyarantee Schemes) ಜಾರಿಯಾದ ಮೇಲೆ ರೇಷನ್ ಕಾರ್ಡ್ ಗೆ ಇನ್ನೆಲ್ಲದ ಡಿಮ್ಯಾಂಡ್ ಗಳು ಸೃಷ್ಟಿಯಾಗಿದೆ.
ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯ ಸಹಾಯಧನವನ್ನು ಪಡೆಯಲು ರೇಷನ್ ಕಾರ್ಡ್ ಇರುವುದು ಕಡ್ಡಾಯ ಮತ್ತು ರೇಷನ್ ಕಾರ್ಡ್ ನಲ್ಲಿ ಮಾಹಿತಿಗಳು ಕೂಡ ಸರಿಯಾಗಿರಬೇಕು, ಇದಲ್ಲದೆ ವೈದ್ಯಕೀಯ ಕಾರಣಗಳಿಂದ ಕೂಡ ಅನೇಕರು ರೇಷನ್ ಕಾರ್ಡ್ ಪಡೆಯಲು ಬಯಸುತ್ತಿದ್ದಾರೆ. ಹಾಗಾಗಿ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅನೇಕರು ಕಾಯುತ್ತಿದ್ದಾರೆ.
ಈ ಸುದ್ದಿ ಓದಿ:- ದೇವರು ನಿಮ್ಮ ಮನೆಯಲ್ಲಿ ನೆಲೆಸಿದ್ದಾಗ ಈ 11 ಸಂಕೇತಗಳು ಕಾಣಿಸಿಕೊಳ್ಳುತ್ತವೆ.!
ಇದರೊಂದಿಗೆ ಈಗಾಗಲೇ ಚುನಾವಣಾ ನೀತಿ ಸಂಹಿತೆಯಿಂದ ತಡೆಹಿಡಿಯಲಾಗಿದ್ದ ರೇಷನ್ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಹಾಗೆ APL ಕಾರ್ಡ್ ದಾರರು ತಮಗೂ ಕಡಿಮೆ ಬೆಲೆಗೆ ಪಡಿತರ ವಿತರಣೆ ಮಾಡುವಂತೆ ಬೇಡಿಕೆ ಇಟ್ಟಿದ್ದ ಪಡಿತರ ವಿತರಣೆ ಬಗ್ಗೆ ಕೂಡ ಸರ್ಕಾರ ಕಡೆಯಿಂದ ಒಂದು ಸಿಹಿ ಸುದ್ದಿ ಇದೆ.
ಅದೇನೆಂದರೆ, ರೇಷನ್ ಕಾರ್ಡ್ ನಲ್ಲಿ ಇರುವ ಸಮಸ್ಯೆಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಸಾಕಷ್ಟು ಬಾರಿ ಸರ್ಕಾರ ಅನುಮತಿ ನೀಡಿದೆ. ಆದರೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರಲಿಲ್ಲ. ಈಗ ಮಾರ್ಚ್ 1ನೇ ತಾರೀಖಿನಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಬಗ್ಗೆ ನಿರ್ಧಾರ ಕೈಗೊಂಡು ಏಪ್ರಿಲ್ 1ರಿಂದ ಅರ್ಜಿ ಆಹ್ವಾನ ಮಾಡುವುದಾಗಿ ಆಹಾರ ಇಲಾಖೆ ಸಚಿವರಾದ ಕೆ.ಎಚ್ ಮುನಿಯಪ್ಪನವರೇ (Minister K.H Muniyappa) ತಿಳಿಸಿದ್ದಾರೆ.
ಈ ಸುದ್ದಿ ಓದಿ:-ಈ ಬೇರು ಸಿಕ್ಕರೆ ಬಿಡಬೇಡಿ, ಹಣ ಆಕರ್ಷಣೆ ಮಾಡುವ ಬೇರಿದು ಬೇಗ ಶ್ರೀಮಂತರಾಗುತ್ತೀರಾ, ನಿಮ್ಮನ್ನೇ ಹುಡುಕಿ ಹಣ ಬಂದು ಸೇರುತ್ತದೆ.!
ಅತೀ ಮುಖ್ಯವಾಗಿ ಈಗಾಗಲೇ ಮೂರು ವರ್ಷಗಳ ಹಿಂದೆಯೇ ಹೊಸ BPL ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದವರ ಅರ್ಜಿಗಳು ಪರಿಶೀಲನೆಯಾಗಿ ರೇಷನ್ ಕಾರ್ಡ್ ಅನುಮೋದನೆಯಾಗಿದ್ದರು ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಕಾರಣದಿಂದಾಗಿ ವಿತರಣೆ ಕಾರ್ಯಕ್ರಮವನ್ನು ತಡೆಹಿಡಿಯಲಾಗಿತ್ತು.
ಈಗ ಅದಕ್ಕೆ ಅನುಮತಿ ನೀಡಲಾಗಿತ್ತು ಆಹಾರ ಸಚಿವರು ಏಪ್ರಿಲ್ 1 ರಿಂದ ಅನುಮೋದನೆಯಾಗಿರುವ BPL ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡುವುದಾಗಿ ಕೂಡ ಸಚಿವರು ಅನುಮತಿ ನೀಡಿದ್ದಾರೆ. ಇದರಿಂದ ಬಹುದಿನಗಳಿಂದ ರೇಷನ್ ಕಾರ್ಡ್ ಕುರಿತಂತೆ ಇದ್ದ ಬಹಳ ದೊಡ್ಡ ಕೋರಿಕೆ ಇತರ್ಥವಾದಂತಾಗುತ್ತದೆ.
ಈ ಸುದ್ದಿ ಓದಿ:-ಬಳೆ ಪದ್ಮಾವತಿ ಅಮ್ಮ ಎಷ್ಟು ಶಕ್ತಿಶಾಲಿ ಎಂದರೆ ಇಲ್ಲಿ ಬಳೆ ಹರಕೆ ಮಾಡಿಕೊಂಡರೆ ನಿಮ್ಮ ಇಚ್ಚೆಗಳು 100% ನೆರವೇರುತ್ತದೆ.!
ಮತ್ತೊಂದು ಸುದ್ದಿ ಏನೆಂದರೆ, APL ಪಡಿತರ ಚೀಟಿದಾರರು ಕೂಡ ತಮಗೆ ಕಡಿಮೆ ದರದಲ್ಲಿ ಪಡಿತರ ವಿತರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈಗ ಅದಕ್ಕೂ ಕೂಡ ಸರ್ಕಾರದ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು 1 ಕೆಜಿ ಅಕ್ಕಿಗೆ 15 ರುಪಾಯಿಯಂತೆ APL ಪಡಿತರ ಚೀಟಿದಾರರಿಗೂ ಕೂಡ ರೇಷನ್ ಕಾರ್ಡ್ ವಿತರಣೆ ಮಾಡಲು ಒಪ್ಪಿಗೆ ಸಿಗುತ್ತಿದೆ.
ಇದೆಲ್ಲದರ ಜೊತೆ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಒಂದು ಎಚ್ಚರಿಕೆ ಕೂಡ ಇದೆ ಅದೇನೆಂದರೆ ಯಾರು ಕಳೆದ ಆರು ತಿಂಗಳಿಂದ ಯಾರು ತಮ್ಮ ಪಡಿತರವನ್ನು ಪಡೆದಿಲ್ಲ ಅಂತಹ ಕಾರ್ಡುಗಳನ್ನು ರದ್ದುಪಡಿಸಲಾಗುತ್ತಿದೆ. ನೀವು ಮಾಹಿತಿ ಕಣಜ ವೆಬ್ಸೈಟ್ ಗೆ ಭೇಟಿ ನೀಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೇವೆ ಎನ್ನುವ ಆಪ್ಷನ್ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಕುವ ಮೂಲಕ ರೇಷನ್ ಕಾರ್ಡ್ ಸ್ಥಿತಿ ಪರಿಶೀಲಿಸಬಹುದು.
ಈ ಸುದ್ದಿ ಓದಿ:-ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!