ಹಿರಿಯರು ಕೆಲವು ಬುದ್ಧಿ ಮಾತುಗಳನ್ನು ಹೇಳುತ್ತಾರೆ. ಅವುಗಳನ್ನು ಪಾಲಿಸಿ ನಡೆದಾಗ ನಮಗೆ ಬದುಕಿನಲ್ಲಿ ಬರಲಿರುವ ಅನೇಕ ಅ’ಪಾ’ಯಗಳು ತಪ್ಪುತ್ತದೆ. ಈ ಬುದ್ಧಿ ಮಾತುಗಳಲ್ಲಿ ಒಂದು ಸರ್ವೇ ಸಾಮಾನ್ಯವಾಗಿ ಸಂಗತಿ ಏನೆಂದರೆ ಕೆಲವು ವಿಷಯಗಳನ್ನು ಗುಟ್ಟು ಮಾಡು ಎನ್ನುವುದು.
ಗುಟ್ಟು ಮಾಡುವುದು ಎಂದರೆ ಸುಳ್ಳು ಹೇಳುವುದು ಎಂದು ಅರ್ಥವಲ್ಲ, ನಿಮಗೆ ಗೊತ್ತಿರುವ ಅಥವಾ ನಿಮ್ಮ ಮನೆ ಜೀವನದ ಕೆಲವು ವಿಷಯಗಳನ್ನು ಯಾರಿಗೂ ತಿಳಿಸದೆ ಸೈಲೆಂಟ್ ಆಗಿ ಇರುವುದನ್ನು ಗುಟ್ಟು ಮಾಡುವುದು ಎನ್ನುತ್ತಾರೆ. ಈ ರೀತಿ ಜೀವನದ ಕೆಲವು ಸಂಗತಿಗಳನ್ನು ಯಾರಿಗೂ ತಿಳಿಸದೆ ಪ್ರೈವೇಟ್ ಆಗಿ ಇಟ್ಟುಕೊಳ್ಳುವುದು ಬಹಳ ಒಳ್ಳೆಯದು.
ಯಾಕೆಂದರೆ ಒಂದು ವೇಳೆ ನಮ್ಮ ಜೀವನದ ಎಲ್ಲಾ ವಿಷಯಗಳನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳುವುದರಿಂದ ಮುಂದೆ ಒಂದು ದಿನ ಅದರಿಂದಲೇ ನಮಗೆ ಮೋ’ಸ ಆಗುವ ಅಥವಾ ದೃಷ್ಟಿ ದೋಷ ಉಂಟಾಗಿ ಜೀವನದಲ್ಲಿ ನಾವು ಸಮಸ್ಯೆಗೆ ಸಿಲುಕಿಕೊಳ್ಳಬಹುದು ಹಾಗಾಗಿ ಯಾವುದೇ ಕಾರಣಕ್ಕೂ ಸಾಧ್ಯವಾದಷ್ಟು ಈ ಒಂಬತ್ತು ಸಂಗತಿಗಳನ್ನಾದರೂ ನೀವು ಯಾರಿಗೂ ಹೇಳದೆ ಗುಟ್ಟಾಗಿಟ್ಟುಕೊಳ್ಳಿ.
ಈ ಸುದ್ದಿ ಓದಿ:- ಸಿಂಹ ರಾಶಿಯವರಿಗೆ ಏಪ್ರಿಲ್ 2024ರ ಶುಕ್ರ ಪ್ರಭಾವ ನಿಮ್ಮ ಜೀವನದಲ್ಲಿ ನೀವು ಊಹಿಸದ ಒಂದು ಅದ್ಭುತ ಬದಲಾವಣೆಯಾಗಲಿದೆ.!
* ನಿಮ್ಮ ಬಳಿ ಇರುವ ಹಣದ ವಿಚಾರ, ನಿಮಗೆ ಬರುವಬೇಕಾದ ಹಣಕಾಸಿನ ಮೂಲದ ಬಗ್ಗೆ ವಿವರವಾಗಿ ಯಾರ ಬಗ್ಗೆಯೂ ಕೂಡ ಮಾಹಿತಿ ಹಂಚಿಕೊಳ್ಳಬೇಡಿ. ನಿಮಗೆ ಎಷ್ಟು ಸಂಬಳ ಬರುತ್ತದೆ ಅಥವಾ ನಿಮ್ಮ ವ್ಯಾಪಾರದಲ್ಲಿ ನಿಮಗೆ ಎಷ್ಟು ಲಾಭ ಆಗುತ್ತದೆ ಎನ್ನುವ ಖಚಿತವಾದ ಲೆಕ್ಕಾಚಾರ ಯಾರ ಬಳಿಯು ಹಂಚಿಕೊಳ್ಳಬಾರದು ನಿಮಗೆ ಬರುತ್ತಿರುವುದಕ್ಕಿಂತ ಕಡಿಮೆ ಮೊತ್ತವನ್ನೇ ಹೇಳಬೇಕು
* ನಿಮ್ಮ ಜೀವನದ ಮುಂದಿನ ಹೆಜ್ಜೆಗಳ ಬಗ್ಗೆ ಯಾವುದೇ ಕಾರಣಕ್ಕೂ ಯಾರೊಂದಿಗೂ ಹೇಳಿಕೊಳ್ಳಬಾರದು, ಯಾರು ನಿಮ್ಮ ಜೀವನಕ್ಕೆ ಮನಸ್ಪೂರ್ತಿಯಾಗಿ ಒಳ್ಳೆಯದನ್ನು ಬಯಸುತ್ತಾರೋ ಅಥವಾ ನಿಮ್ಮ ಸಾಧನೆ ಹಾದಿಯಲ್ಲಿ ನಿಮ್ಮನ್ನು ಪ್ರೇರೇಪಿಸುತ್ತಾರೋ ಇವರನ್ನು ಹೊರತುಪಡಿಸಿ ಸಿಕ್ಕಸಿಕ್ಕ ಯಾರ ಬಳಿಯೂ ಕೂಡ ಮುಂದೆ ನಾನು ಇದನ್ನು ಮಾಡುತ್ತೇನೆ ಎಂದು ಮುಂಚೆಯೇ ಹೇಳಿಕೊಳ್ಳಲೇಬಾರದು. ಇದರಿಂದ ಅವರು ನೀವು ಆ ಕೆಲಸ ಮಾಡದಂತೆ ನೀವು ಏಳಿಗೆ ಆಗದಂತೆ ಅಡ್ಡಗಲ್ಲು ಹಾಕುವ ಸಾಧ್ಯತೆ ಇರುತ್ತದೆ.
* ಆದಷ್ಟು ನಿಮ್ಮ ಕುಟುಂಬದ ವಿಚಾರವನ್ನು ಗುಪ್ತವಾಗಿಡಿ. ಅದರಲ್ಲೂ ನಿಮ್ಮ ಸಂಸಾರದ ವಿಷಯ ಹಾಗೂ ಪ್ರೀತಿ ಪ್ರೇಮ ಇತ್ಯಾದಿ ಪರ್ಸನಲ್ ವಿಷಯವನ್ನು ಯಾವುದೇ ಕಾರಣಕ್ಕೂ ಎಷ್ಟೇ ಆಪ್ತರಾಗಿದ್ದರು ಹೇಳಿಕೊಳ್ಳದೆ ಇರುವುದೇ ಒಳ್ಳೆಯದು.
ಈ ಸುದ್ದಿ ಓದಿ:- ಈ ಕ್ಷೇತ್ರದಲ್ಲಿ 7 ವಾರ 7 ತೆಂಗಿನ ಕಾಯಿ ಕಟ್ಟಿದರೆ ಏನೇ ಕಷ್ಟ ಇದ್ದರು ಪರಿಹಾರ ಆಗುತ್ತೆ.!
* ಕೆಲವೊಂದು ಆರೋಗ್ಯ ಸಮಸ್ಯೆ ಬಗ್ಗೆ ಕೂಡ ನೀವು ಗುಟ್ಟಾಗಿರಬೇಕಾಗುತ್ತದೆ. ನಮ್ಮಿಂದ ಮತ್ತೊಬ್ಬರಿಗೆ ಆ ಆರೋಗ್ಯ ಸಮಸ್ಯೆ ಹರಡುವುದಿಲ್ಲ ಯಾವುದೇ ತೊಂದರೆ ಇಲ್ಲ ಆದರೂ ನಿಮಗೆ ಆರೋಗ್ಯ ಸಮಸ್ಯೆ ಇದೆ ಎನ್ನುವುದಾದರೆ ಅದನ್ನು ವೈದ್ಯರ ಬಳಿ ಮತ್ತು ನಿಮ್ಮ ಕುಟುಂಬದವರ ಬಳಿ ಬಿಟ್ಟು ಬೇರೆ ಯಾರ ಜೊತೆಗೂ ಕೂಡ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ
* ಮದುವೆಯಾಗಿರುವ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಗಂಡನ ಮನೆಯ ವಿಷಯಗಳನ್ನು ತವರು ಮನೆಯಲ್ಲಿ ಹೇಳಿಕೊಳ್ಳಬಾರದು. ಗಂಡನ ಮನೆಯಲ್ಲಿ ಬಹಳ ಕಷ್ಟ ಇದ್ದು ಅನಿವಾರ್ಯವಾಗಿ ಗಂಡನಿಗೆ ಸಹಾಯ ಬೇಕಾಗಿದ್ದರೆ ಆಗ ಕೇಳಿಕೊಳ್ಳಬಹುದು. ಅದನ್ನು ಬಿಟ್ಟು ಗಂಡನ ಮನೆಗೆ ಸಾಸಿವೆ ಬಿದ್ದರೂ ತವರಿಗೆ ಹೇಳುವ ಗುಣ ಮಾತ್ರ ಇರಲೇಬಾರದು. ಈ ವಿಚಾರದಲ್ಲಿ ಆದಷ್ಟು ಗುಟ್ಟಾಗಿರಬೇಕು ಸ್ನೇಹಿತರು ಹಾಗೂ ಸಂಬಂಧಿಕರ ಜೊತೆಗೂ ಕೂಡ ಗಂಡನ ಮನೆಯು ವಿಚಾರಗಳನ್ನು ಇದ್ದದ್ದು ಇದ್ದಹಾಗೆ ಹೇಳಿಕೊಳ್ಳದೆ ಇರುವುದೇ ಒಳ್ಳೆಯದು
* ನಿಮಗಿರುವ ಬುದ್ಧಿವಂತಿಕೆ ಬಗ್ಗೆ ಯಾವುದೇ ಕಾರಣಕ್ಕೂ ನೀವೇ ಜಂಬ ಕೊಚ್ಚಿಕೊಂಡು ಹೇಳಿಕೊಳ್ಳಲು ಹೋಗಬೇಡಿ ಇದು ಪ್ರದರ್ಶನ ಮಾಡುವಂಥದ್ದಲ್ಲ ಕಷ್ಟ ಬಂದಾಗ ನಿಮ್ಮನ್ನು ನೀವು ಪಾರು ಮಾಡಿಕೊಳ್ಳಲು ಬಳಸುವುದಾಗಿದೆ ಹಾಗಾಗಿ ಯಾವುದೇ ಕಾರಣಕ್ಕೂ ಇಂತಹ ವಿಚಾರದಲ್ಲಿ ಸಮಯ ಬರುವವರೆಗೂ ಸೈಲೆಂಟ್ ಆಗಿ ಇದ್ದುಬಿಡಿ.