ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರವಾಗಿ ಪ್ರತಿಯೊಂದು ವ್ಯಕ್ತಿಯ ಜನನವೂ ಕೂಡ ಪೂರ್ವಜನ್ಮ ಕರ್ಮ ಆಧಾರಿತವಾಗಿದೆ ಎನ್ನುವುದನ್ನು ನಂಬುತ್ತೇವೆ. ಯಾವುದೇ ವ್ಯಕ್ತಿ ಜನಿಸಿದರು ಆತನಿಗೆ ಆತ ಜನಿಸಿದ ರಾಶಿ ನಕ್ಷತ್ರ ಎನ್ನುವುದು ಇದ್ದೇ ಇರುತ್ತದೆ. ಆದರೆ ಇಂದು ಈ ಅಂಕಣದಲ್ಲಿ ಒಂದು ಕುತೂಹಲಕಾರಿ ಸಂಗತಿ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ.
ಅದೇನೆಂದರೆ, ಈ ಜನ್ಮದಲ್ಲಿ ನೀವು ಜನಿಸಿರುವ ರಾಶಿ ಆಧಾರದ ಮೇಲೆ ನಿಮ್ಮ ಕಳೆದ ಜನ್ಮದಲ್ಲಿ ನೀವು ಹೇಗಿದ್ದೀರಿ ಎನ್ನುವುದನ್ನ ತಿಳಿದುಕೊಳ್ಳಬಹುದು. ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಈ ಜನ್ಮಜನ್ಮಾಂತರದ ರಹಸ್ಯವನ್ನು ಭೇದಿಸಲಾರದು ಆದರೆ ಜ್ಯೋತಿಷ್ಯ ಶಾಸ್ತ್ರಕ್ಕೆ ಈ ಶಕ್ತಿ ಇದೆ. ಆ ಪ್ರಕಾರವಾಗಿ ಯಾವ ರಾಶಿ ವ್ಯಕ್ತಿತ್ವ ಕಳೆದ ಜನ್ಮದಲ್ಲಿ ಹೇಗಿತ್ತು ಎನ್ನುವುದರ ವಿವರ ಹೀಗಿದೆ ನೋಡಿ.
* ಮೇಷ ರಾಶಿ:- ಮೇಷ ರಾಶಿಯವರ ಕಳೆದ ಜನ್ಮದಲ್ಲಿ ಯೋಧರಂತೆ ವೀರಾವೇಶದಿಂದ ಹೋರಾಡುವ ವ್ಯಕ್ತಿತ್ವದವರಾಗಿದ್ದರು, ಬಹಳ ಧೈರ್ಯಶಾಲಿಗಳಾಗಿದ್ದರು, ಏನಾದರೂ ಮುನ್ನುಗ್ಗುವ ಛಲವಂತರು, ನಾಯಕತ್ವದ ಗುಣ ಇದ್ದ ಸ್ವಭಾವವನ್ನು ಹೊಂದಿದ್ದವರು ಆಗಿದ್ದರು ಎಂದು ಹೇಳಲಾಗುತ್ತದೆ.
ಈ ಸುದ್ದಿ ಓದಿ:-ನಾಳೆ ಹನುನ ಜಯಂತಿ ಈ ರೀತಿ ಮಾಡಿ ನೀವು ಅಂದಿಕೊಂಡಿದೆಲ್ಲಾ ನೆಡೆಯುತ್ತೆ.!
* ವೃಷಭ ರಾಶಿ:- ವೃಷಭ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ಪೂರ್ವ ಜನ್ಮದಲ್ಲಿ ಪ್ರಾಮಾಣಿಕರಾಗಿರುತ್ತಾರೆ. ಸಹನಶೀಲರು ಅತ್ಯಂತ ತಾಳ್ಮೆ ಹೊಂದಿರುವ ಮನಸ್ಥಿತಿಯವರು ಆಗಿದ್ದರೂ, ಹಿಡಿದಿದ್ದನ್ನು ಬಿಡದೆ ಅಂದುಕೊಂಡಿದ್ದನು ಸಾಧಿಸುವ ಹಠವಾದಿಗಳು ಕೂಡ ಆಗಿದ್ದವರು, ನ್ಯಾಯ ನೀತಿ ಧರ್ಮವನ್ನು ನಂಬಿ ಬದುಕಿದಂತಹ ವ್ಯಕ್ತಿಗಳು ಆಗಿದ್ದವರು ಎಂದು ಶಾಸ್ತ್ರ ಹೇಳುತ್ತದೆ.
* ಮಿಥುನ ರಾಶಿ:- ಪೂರ್ವ ಜನ್ಮದಲ್ಲಿ ವ್ಯಾಪಾರಸ್ಥರಾಗಿದ್ದವರು ಮಿಥುನ ರಾಶಿಯಲ್ಲಿ ಜನಿಸಿರುತ್ತಾರೆ ಮತ್ತು ಈ ಜನುಮದಲ್ಲೂ ಕೂಡ ಇವರಿಗೆ ಬಿಸಿನೆಸ್ ಬಗ್ಗೆ ಹಾಗೂ ಹಣಕಾಸಿನ ವಹಿವಾಟಿನ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ.
* ಕರ್ಕಾಟಕ ರಾಶಿ:- ಕನ್ಯಾ ರಾಶಿಯವರು ಕಳೆದ ಜನ್ಮದಲ್ಲಿ ಬಹಳ ಕಟು ಸ್ವಭಾವದ ವ್ಯಕ್ತಿಗಳಾಗಿದ್ದು ತಮ್ಮ ನೇರನುಡಿಯ ಮೂಲಕ ಪರಿಣಾಮ ಬೀರಿದವರಾಗಿರುತ್ತಾರೆ ಆದರೆ ಈ ಜನ್ಮದಲ್ಲಿ ಅದಕ್ಕೆ ವಿರುದ್ಧವಾಗಿ ಬಹಳ ಸೌಮ್ಯ ಸ್ವಭಾವದ ವ್ಯಕ್ತಿಗಳಾಗಿ ಯಾವಾಗಲು ಯಾವುದಾದರೂ ವಿಷಯದ ಬಗ್ಗೆ ಬಹಳ ಯೋಚನೆ ಮಾಡುತ್ತಾ ಕೊರಗುತ್ತಾ ಕೂರುವ ವ್ಯಕ್ತಿಗಳಾಗಿರುತ್ತಾರೆ ಎಂದು ಹೇಳಲಾಗುತ್ತಿದೆ.
ಈ ಸುದ್ದಿ ಓದಿ:-ಮೀನಾ ರಾಶಿಯವರ ಮೇ ತಿಂಗಳ ರಾಶಿ ಭವಿಷ್ಯ, ಈ ತಿಂಗಳಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆದರೆ ಈ ವಿಚಾರವಾಗಿ ಎಚ್ಚರವಾಗಿರಬೇಕು.!
* ಸಿಂಹ ರಾಶಿ:- ಜೀವನದಲ್ಲಿ ತಮ್ಮದೇ ಆದ ಆದರ್ಶ ಬೆಳೆಸಿಕೊಂಡು ಮಹತ್ವಾಕಾಂಕ್ಷೆಯ ಗುರಿಗಳನ್ನು ಇಟ್ಟುಕೊಂಡು ತಮ್ಮ ಕೋರಿಗಳನ್ನು ಸಾಧಿಸುವುದಕ್ಕಾಗಿಯೇ ಬದುಕಿದಂತಹ ಭಕ್ತಿಗಳು ಸಿಂಹ ರಾಶಿಯಲ್ಲಿ ಜನಿಸಿರುತ್ತಾರೆ ಮತ್ತು ಕಳೆದ ಜನ್ಮದಲ್ಲಿ ಕೂಡ ಸಾಧನೆ ಮಾಡಿದ ವ್ಯಕ್ತಿಗಳಾಗಿರುತ್ತಾರೆ. ಆ ಪ್ರಭಾವ ಈ ಜನ್ಮದಲ್ಲೂ ಕೂಡ ಹುಟ್ಟಿನಿಂದಲೇ ಮೈಗೂಡಿಕೊಂಡಿರುತ್ತದೆ ಎಂದು ಹೇಳಲಾಗುತ್ತದೆ.
* ಕನ್ಯಾ ರಾಶಿ:- ಕನ್ಯಾ ರಾಶಿಯವರು ಬಹಳ ಇಗೋ ಇಟ್ಟುಕೊಂಡು ಬದುಕಿದಂತಹ ವ್ಯಕ್ತಿಗಳಾಗಿರುತ್ತಾರೆ. ಆದರೆ ಈ ಜನ್ಮದಲ್ಲಿ ಇದಕ್ಕೆ ವಿರುದ್ಧ ಸ್ವಭಾವದವರಾಗಿರುತ್ತಾರೆ.
* ತುಲಾ ರಾಶಿ:- ಕಳೆದ ಜನ್ಮದಲ್ಲಿ ನ್ಯಾಯವಂತಿಕೆ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಂತಹ ಶ್ರೇಷ್ಠ ಸ್ಥಾನದಲ್ಲಿ ಕುಳಿತಿದ್ದವರು ಈ ಜನ್ಮದಲ್ಲಿ ತುಲಾ ರಾಶಿಯಲ್ಲಿ ಜನಿಸಿರುತ್ತಾರೆ ಎಂದು ಹೇಳಲಾಗುತ್ತದೆ. ಏಕೆಂದರೆ ಈ ಜನ್ಮದಲ್ಲಿ ಕೂಡ ಅವರು ಎಲ್ಲವನ್ನು ತೂಗುಹಾಕಿ ನಿರ್ಧಾರ ತೆಗೆದುಕೊಂಡವ ಗುಣವಂತಿಕೆ ಮತ್ತು ಬುದ್ಧಿವಂತಿಕೆ ಹೊಂದಿರುತ್ತಾರೆ.
ಈ ಸುದ್ದಿ ಓದಿ:-ನಿಮ್ಮ ಮಗುವಿಗೆ ಈ ಹೆಸರಿಟ್ಟರೆ ತುಂಬಾ ಅದೃಷ್ಟ.!
* ವೃಶ್ಚಿಕ ರಾಶಿ:- ಕಳೆದ ಜನ್ಮದಲ್ಲಿ ಬಹಳ ರಾಜಯೋಗದಲ್ಲಿ ಬದುಕಿದ್ದವರು ಈ ಜನುಮದಲ್ಲಿ ವೃಶ್ಚಿಕ ರಾಶಿಯವರಾಗಿ ಜನಿಸಿ ಬದುಕುತ್ತಿರುತ್ತಾರೆ ಎಂದು ಹೇಳಲಾಗುತ್ತದೆ
* ಧನಸ್ಸು ರಾಶಿ:- ಧನಸ್ಸು ರಾಶಿಯವರು ಕಳೆದ ಜನ್ಮದಲ್ಲಿ ಎಲ್ಲವನ್ನು ಸರಿಯಾಗಿ ವಿಮರ್ಶೆ ಮಾಡುವಂತಹ ಜ್ಞಾನವನ್ನು ಹೊಂದಿದ್ದಂತಹ ಜ್ಞಾನವಂತರಾಗಿ ಬದುಕಿದ್ದರು ಈ ಜನ್ಮದಲ್ಲಿ ಹೆಚ್ಚು ಕಡಿಮೆ ಇದೆ ರೀತಿ ಸ್ವಭಾವ ಹೊಂದಿರುತ್ತಾರೆ ಎನ್ನಲಾಗುತ್ತಿದೆ.
* ಮಕರ ರಾಶಿ:- ಸಾಹಿತ್ಯದ ಬಗ್ಗೆ ಆಸಕ್ತನಾಗಿದ್ದವರು ಕವನ ಕವಿತೆ ಬರವಣಿಗೆಗಳ ಬಗ್ಗೆ ಒಲವು ಹೊಂದಿದದ್ದವರು ಈ ಜನ್ಮದಲ್ಲಿ ಮಕರ ರಾಶಿಯವರಾಗಿ ಜನಿಸಿ ಈಗಲೂ ವೈರಾಗ್ಯ ಗುಣ ಹೊಂದಿರುತ್ತಾರೆ ಎನ್ನಲಾಗುತ್ತಿದೆ.
ಈ ಸುದ್ದಿ ಓದಿ:-ಹುಟ್ಟಿದ ತಿಂಗಳಿನ ಆಧಾರದ ಮೇಲೆ ನಿಮ್ಮ ಗುಣ ಸ್ವಭಾವ ತಿಳಿದುಕೊಳ್ಳಿ.!
* ಕುಂಭ ರಾಶಿ:- ಬಹಳ ಗತ್ತಿನಲ್ಲಿ ಬದುಕಿದ ಮಾತುಗಳ ಮೂಲಕ ಪ್ರಭಾವ ಬೀರಿದಂತಹ ವ್ಯಕ್ತಿಗಳು ಕುಂಭ ರಾಶಿಯವರಾಗಿ ಜನಿಸಿರುತ್ತಾರೆ ಎಂದು ಹೇಳಲಾಗುತ್ತಿದೆ.
* ಮೀನ ರಾಶಿ:- ಬಹಳ ಚುರುಕಿನ ಸ್ವಭಾವದವರಾಗಿದ್ದು ಕಳೆದ ಜನ್ಮದಲ್ಲಿ ಕಡಿಮೆ ಆಯಸ್ಸು ಹೊಂದಿದ್ದವರಾಗಿದ್ದರು. ಆದರೆ ಈ ಜನ್ಮದಲ್ಲಿ ಬದುಕಿನ ಉದ್ದೇಶ ಪೂರೈಸಿಯೇ ತೀರುತ್ತಾರೆ ಎಂದು ಹೇಳಲಾಗುತ್ತದೆ.