ಮೊದಲು ಮಾವಿನಕಾಯಿ ಚಿತ್ರಾನ್ನ ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಯಾವುದು ಎಂದು ನೋಡುವುದಾದರೆ.
* ಮಾವಿನಕಾಯಿ
* ತಣ್ಣಗಾಗಿರುವಂತಹ ಅನ್ನ
* ಅರ್ಧ ಚಮಚ ಮೆಂತ್ಯ ಕಾಳು
* ಒಂದು ಚಮಚ ಸಾಸಿವೆ
* ಎರಡು ಚಮಚ ಕಡಲೆಕಾಯಿ ಬೀಜ
* ಕಾಲು ಚಮಚ ಜೀರಿಗೆ
* ಇಂಗು
* ಒಂದು ಚಮಚ ಕಡಲೆ ಬೇಳೆ, ಉದ್ದಿನ ಬೇಳೆ
* ಆರು ಹಸಿ ಮೆಣಸಿನಕಾಯಿ
* ಉಪ್ಪು
* ತೆಂಗಿನಕಾಯಿ ತುರಿ
* ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ :- ಮೊದಲು ಒಂದು ಬಾಣಲೆಗೆ ಅರ್ಧ ಚಮಚ ಮೆಂತ್ಯ ಕಾಳು ಹಾಗೂ ಅರ್ಧ ಚಮಚ ಸಾಸಿವೆ ಇವೆರಡನ್ನು ಸಹ ಚೆನ್ನಾಗಿ ಹುರಿದು ಒಂದು ಕುಟ್ಟಣಿಗೆಯಲ್ಲಿ ಹಾಕಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು ಆನಂತರ ಕಡಲೆಬೀಜವನ್ನು ಸಹ ಎಣ್ಣೆಯಲ್ಲಿ ಹುರಿದು ಇಟ್ಟುಕೊಳ್ಳಬೇಕು.
ಈ ಸುದ್ದಿ ಓದಿ:- ಪ್ರತಿ ದಿನ ಈ ಹೂವು ಲಕ್ಷ್ಮಿ ದೇವಿ ಫೋಟೋ ಮುಂದೆ ಇಟ್ಟರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ಇರುತ್ತಾಳೆ.!
ಆನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ ಜೀರಿಗೆ ಕಡಲೆ ಬೆಳೆ ಉದ್ದಿನ ಬೆಳೆ ಇಷ್ಟನೂ ಹಾಕಿ ಚೆನ್ನಾಗಿ ಹುರಿದುಕೊಂಡು ಆನಂತರ ಸಣ್ಣದಾಗಿ ಕತ್ತರಿಸಿಕೊಂಡಂತಹ ಹಸಿ ಮೆಣಸಿನಕಾಯಿ ಇದನ್ನು ಸಹ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು ಮಾವಿನಕಾಯಿ ಹುಳಿ ಇರುವುದರಿಂದ ಅದಕ್ಕೆ ಕಾರ ಹೆಚ್ಚಾಗಿ ಹಾಕುವು ದರಿಂದ ಅದರ ರುಚಿ ಮತ್ತಷ್ಟು ಹೆಚ್ಚಾಗುತ್ತದೆ ಎಂದೇ ಹೇಳಬಹುದು.
ಈ ರೀತಿ ಹುರಿದುಕೊಂಡಂತಹ ಎಲ್ಲ ಮಿಶ್ರಣಕ್ಕೆ ಇಂಗು , ಕಡಲೇ ಕಾಯಿ ಬೀಜ, ತುರಿದಿಟ್ಟುಕೊಂಡಂತಹ ಮಾವಿನಕಾಯಿಯನ್ನು ಹಾಕಿ ಐದರಿಂದ 10 ನಿಮಿಷಗಳ ಕಾಲ ಹುರಿಯ ಬೇಕು ಆನಂತರ ರುಚಿಗೆ ಉಪ್ಪನ್ನು ಹಾಕಿ ಮಿಶ್ರಣ ಮಾಡಿ ಕೊನೆಯಲ್ಲಿ ಅನ್ನ ಹಾಕಿ. ಅದರ ಮೇಲೆ ಸಾಸಿವೆ ಮತ್ತು ಮೆಂತ್ಯ ಕಾಳಿನ ಪುಡಿ ಇದನ್ನು ಹಾಕಿ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿರುಚಿಯಾದಂತಹ ಮಾವಿನ ಕಾಯಿ ಚಿತ್ರಾನ್ನ ತಯಾರಾಗುತ್ತದೆ.
ಈ ಸುದ್ದಿ ಓದಿ:- ಮಂತ್ರಾಲಯದ ಮಂತ್ರಾಕ್ಷತೆ ಮಹಿಮೆ ಎಂಥದ್ದು ಗೊತ್ತ.?
ಮೇಲೆ ಹೇಳಿದ ಈ ವಿಧಾನದಲ್ಲಿ ನೀವು ಮಾವಿನಕಾಯಿ ಚಿತ್ರಾನ್ನ ಮಾಡಿದರೆ ಪ್ರತಿಯೊಬ್ಬರಿಗೂ ಕೂಡ ಇಷ್ಟುವಾಗುತ್ತದೆ. ಹಾಗೂ ಅದರ ರುಚಿ ಕೂಡ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಆದ್ದರಿಂದ ಪ್ರತಿ ಯೊಬ್ಬರೂ ಕೂಡ ಈ ವಿಧಾನ ಅನುಸರಿಸಿ ಮಾವಿನಕಾಯಿ ಚಿತ್ರಾನ್ನ ಮಾಡುವುದು ತುಂಬಾ ಸೂಕ್ತ ಹಾಗೂ ಕಡಿಮೆ ಸಮಯದಲ್ಲಿ ಕಡಿಮೆ ಪದಾರ್ಥಗಳನ್ನು ಉಪಯೋಗಿಸಿ ಮಾಡುವುದರಿಂದ ಯಾವುದೇ ರೀತಿಯ ಹೆಚ್ಚಿನ ಶ್ರಮ ಪಡುವ ಅವಶ್ಯಕತೆ ಇರುವುದಿಲ್ಲ.