ಶ್ರೀ ನರಸಿಂಹಸ್ವಾಮಿಯಿಂದ ರಕ್ಷಿಸಲ್ಪಟ್ಟಂತಹ ಭಕ್ತ ಪ್ರಹ್ಲಾದ ಅವತಾರವೇ ಆಗಿರುವ ರಾಘವೇಂದ್ರ ಸ್ವಾಮಿಗಳು ಈ ಕಲಿಯುಗದಲ್ಲಿ ತಮ್ಮ ಭಕ್ತಾದಿಗಳನ್ನು ಕಷ್ಟಕಾರ್ಪಣ್ಯಗಳಿಂದ ಮುಕ್ತಿಗೊಳಿಸಲೆಂದು ಅವತಾರ ಎತ್ತಿದವರು. ರಾಯರು ಗುರುರಾಯರು ಗುರುರಾಜರು ಗುರು ಸಾರ್ವಭೌಮರು ಹೀಗೆ ನಾನ ಹೆಸರುಗಳಿಂದ ಭಕ್ತಾದಿಗಳು ಗುರು ರಾಘವೇಂದ್ರ ಸ್ವಾಮಿಗಳನ್ನು ಕರೆಯುತ್ತಾರೆ.
ಶ್ರೀ ರಾಘವೇಂದ್ರ ಶ್ರೀಗಳನ್ನು ಕಲಿಯುಗದ ಕಾಮಧೇನು ಕಲಿಯುಗದ ಕಲ್ಪವೃಕ್ಷ ಎಂದು ಭಕ್ತ ಕೋಟಿ ಪರಿಗಣಿಸುತ್ತಾರೆ. ದೇವರೆಂದರೆ ತಿರುಪತಿಯ ತಿಮ್ಮಪ್ಪ ಗುರುಗಳೆಂದರೆ ಮಂತ್ರಾಲಯದ ರಾಚಪ್ಪ ಎನ್ನುವುದು ಜನಜನಿತವಾಗಿರುವಂತಹ ನಾನ್ನುಡಿ. ಈ ನುಡಿ ಎಷ್ಟು ಸತ್ಯವಾದದ್ದು ಎನ್ನುವುದಕ್ಕೆ ಪ್ರತಿದಿನ ಗುರುರಾಯರ ಬೃಂದಾವನ ಇರುವಂತಹ ಮಂತ್ರಾಲಯ ಕ್ಷೇತ್ರಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದವನ್ನು ಪಡೆಯುವಂತಹ ಭಕ್ತಾದಿಗಳೇ ಸಾಕ್ಷಿ.
ಈ ಸುದ್ದಿ ಓದಿ:- ಒಡೆದ ಪ್ಲಾಸ್ಟಿಕ್ ಮಗ್ ಬಕೆಟ್ ಪಾತ್ರೆಗಳನ್ನು ಜೋಡಿಸಿ ಕೇವಲ 1 ಚಮಚ ಉಪ್ಪಿನಿಂದ.!
ಭಕ್ತರ ಕಷ್ಟಗಳಿಗೆ ತಕ್ಷಣವೇ ಸ್ಪಂದಿಸುವಂತಹ ಮಾತೃ ಹೃದಯ ಗುರುರಾಯರದ್ದು. ಗುರು ರಾಘವೇಂದ್ರ ಶ್ರೀಗಳು ನೆಲೆಸಿರುವಂತಹ ತುಂಗಭದ್ರ ತಟದಲ್ಲಿರುವಂತಹ ಮಂತ್ರಾಲಯ ಕ್ಷೇತ್ರವನ್ನು ಬಣ್ಣಿಸಲು ಅಸಾಧ್ಯ. ಕೃತ ಯುಗದಲ್ಲಿ ಭಕ್ತ ಪ್ರಹ್ಲಾದರು ಯಜ್ಞ ಮಾಡಿದ ಸ್ಥಳ ತ್ರೆತಾ ಯುಗದಲ್ಲಿ ರಾಮ ಲಕ್ಷ್ಮಣರು ವಿಶ್ರಮಿಸಿದಂತಹ ಸ್ಥಳದಲ್ಲಿಯೇ ಗುರು ರಾಘವೇಂದ್ರ ಸ್ವಾಮಿಗಳು ಬೃಂದಾವನಸ್ಥರಾಗಿದ್ದಾರೆ.
ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಮಂತ್ರಾಲಯದಲ್ಲಿ ಸುಮಾರು 700 ವರ್ಷಗಳ ಕಾಲ ಜೀವಂತವಾಗಿ ಬೃಂದಾವನದಲ್ಲಿ ಇದ್ದು ತಮ್ಮ ಭಕ್ತಾದಿಗಳನ್ನು ಅನುಗ್ರಹಿಸುತ್ತಿದ್ದರೆ ಎನ್ನುವ ನಂಬಿಕೆ ಇದೆ. ಸಾಮಾನ್ಯವಾಗಿ ಯಾವುದೇ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಹೂವು ಹಣ್ಣು ಕುಂಕುಮಗಳನ್ನು ಪ್ರಸಾದದ ರೂಪದಲ್ಲಿ ಕೊಡುತ್ತಾರೆ. ಹಾಗೆಯೇ ಮಂತ್ರಾಲಯಕ್ಕೆ ತೆರಳಿದಾಗ ನಮಗೆ ಪರಿಮಳ ಪ್ರಸಾದ ಹಾಗೆಯೇ ಮಂತ್ರಾಕ್ಷತೆ ಪ್ರಸಾದ ದೊರೆಯುತ್ತದೆ.
ಈ ಸುದ್ದಿ ಓದಿ:- ಈ 5 ರಾಶಿಯ ಹೆಣ್ಣು ಮಕ್ಕಳು ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!
ಹಾಗೆ ನಾವು ಯಾವುದೇ ಊರಿನ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ತೆರಳಿದರೂ ಮಂತ್ರಾಕ್ಷತೆಯನ್ನೇ ಮಹಾಪ್ರಸಾದದ ರೂಪದಲ್ಲಿ ನೀಡುತ್ತಾರೆ. ಹಾಗಾದರೆ ಅಲ್ಲಿ ಕೊಡುವಂತಹ ಮಂತ್ರಾಕ್ಷತೆಯ ಮಹಿಮೆ ಏನು ಎಂದು ನೋಡುವುದಾದರೆ.
* ಮಂತ್ರಾಲಯದಲ್ಲಿ ನೀಡಲಾಗುವಂತಹ ಕೆಂಪು ಬಣ್ಣದ ಮಂತ್ರಾಕ್ಷತೆಗೆ ಅಪಾರವಾದ ಶಕ್ತಿ ಇದೆ. ಅಕ್ಷತ ಎಂಬ ಪದ ಸಂಸ್ಕೃತದ ಅಕ್ಷತಾ ಎನ್ನುವ ಶಬ್ದದಿಂದ ಬಂದಿದೆ. ಅಕ್ಷತಾ ಎಂಬುದು ತುಂಡಾಗದೆ ಇರುವಂತಹ ಪರಿಪೂರ್ಣತೆಯ ಸಂಕೇತ. ಮನುಷ್ಯನಿಗೆ ಜೀವನದಲ್ಲಿ ಪರಿಪೂರ್ಣತೆ ಇರಲೇಬೇಕು. ಆರೋಗ್ಯ ಶರೀರ ಆಯುಷ್ಯ ಆತನಿಗೆ ಇರಲೇಬೇಕು. ಆಗಲೇ ಮನುಷ್ಯ ಜೀವನ ಪೂರ್ಣವಾಗುತ್ತದೆ.
ಮಂತ್ರಾಕ್ಷತೆ ಹೆಸರೇ ಸೂಚಿಸುವಂತೆ ಇದು ಮಂತ್ರಿಸಿದ ಅಕ್ಷತೆ. ಮಂತ್ರಾಕ್ಷತೆಯನ್ನು ಗುರುರಾಯರ ಅಭಯಾಸ್ತ ಎಂದೇ ಹೇಳಬಹುದು. ಇದು ದೇಹ ಪ್ರಾಣ ಹಾಗೂ ಆತ್ಮಗಳಿಗೆ ಪೋಷಕ ಗುರುರಾಯರು ಹಾಗೂ ಅವರ ಭಕ್ತರ ನಡುವಿನ ಭಾವನಾತ್ಮಕ ಕೊಂಡಿ ಮಂತ್ರಾಲಯದ ಮಂತ್ರಾಕ್ಷತೆ.
ಈ ಸುದ್ದಿ ಓದಿ:- ಆಸ್ತಿ ವಿಭಾಗದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡದಿದ್ದರೆ ಏನಾಗುತ್ತೆ ಗೊತ್ತ.?
ಶ್ರೀ ಮಠದ ಪರಂಪರೆಯಲ್ಲಿ ಮಂತ್ರಾಕ್ಷತೆಗೆ ವಿಶೇಷವಾದ ಸ್ಥಾನ ಇದೆ. ಮೂಲ ರಾಮನಿಗೆ ಸಮರ್ಪಣೆ ಮಾಡಲಾಗುವಂತಹ ಮಂತ್ರಾಕ್ಷತೆಯನ್ನು ತದನಂತರ ರಾಯರ ಬೃಂದಾವನಕ್ಕೆ ಅರ್ಪಿಸಲಾಗುತ್ತದೆ. ಬೃಂದಾವನದ ಮೇಲೆ ಸಮರ್ಪಿಸಿದಂತಹ ಮಂತ್ರಾಕ್ಷತೆಯನ್ನು ಪ್ರತಿನಿತ್ಯ ತೆಗೆದು ಭಕ್ತಾದಿಗಳಿಗೆ ಪ್ರಸಾದವಾಗಿ ನೀಡಲಾಗುತ್ತದೆ. ಪ್ರತಿನಿತ್ಯ ಪೀಠಾಧಿಪತಿಗಳಾಗಿರುವಂತಹ ಶ್ರೀಗಳು ಮಂತ್ರಾಕ್ಷತೆಗಳನ್ನು ವೇದ ಮಂತ್ರಗಳಿಂದ ಮಂತ್ರೀಕರಿಸಿ ತಾವೇ ಮೊದಲು ಅತೀ ಶ್ರದ್ಧೆಯಿಂದ ಧಾರಣೆ ಮಾಡಿ ಆನಂತರ ಭಕ್ತಾದಿಗಳಿಗೆ ನೀಡುತ್ತಾರೆ.
ಪ್ರಸಾದದ ರೂಪದಲ್ಲಿ ಹಣ್ಣು ಹಾಗೂ ಹೂವನ್ನು ನೀಡಿದಾಗ ಅವುಗಳನ್ನು ತಕ್ಷಣವೇ ಉಪಯೋಗಿಸಬೇಕು ಇಲ್ಲವಾದರೆ ದೀರ್ಘಕಾಲದವರೆಗೆ ಇಟ್ಟರೆ ಅವು ಬಹು ಬೇಗನೆ ಹಾಳಾಗಿಬಿಡುತ್ತದೆ. ಆದರೆ ಬಹುಕಾಲದವರೆಗೆ ಹಾಳಾಗದೆ ಇರುವಂತಹ ಪದಾರ್ಥ ಯಾವುದು ಎಂದರೆ ಅದು ಮಂತ್ರಾಕ್ಷತೆ ಮಾತ್ರ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.