ಮನುಷ್ಯನ ಇಡೀ ದೇಹವನ್ನು ಆವರಿಸಿರುವ ಚರ್ಮ ದೇಹದ ಅತಿ ದೊಡ್ಡ ಅಂಗ. ಅಷ್ಟು ದೊಡ್ಡ ಅಂಗವಾದರೂ ಅದು ಅತೀ ಸೂಕ್ಷ್ಮ ಹವಾಮಾನ ಬದಲಾವಣೆಗೆ ತಕ್ಕಂತೆ ಬದಲಾಗುವ ಋತುಮಾನಕ್ಕೆ ತಕ್ಕಂತೆ ಚರ್ಮಕ್ಕೂ ವೈವಿಧ್ಯಮಯ ಆರೈಕೆಯೇ ಬೇಕು. ಈ ಬದಲಾ ವಣೆಗಳಿಗೆ ಅನುಗುಣವಾಗಿ ಚರ್ಮ ಸಂರಕ್ಷಣೆಯ ಅಭ್ಯಾಸಗಳನ್ನು ರೂಢಿಸಿ ಕೊಂಡರೆ ಬದಲಾಗುವ ಹವಾಮಾನದಿಂದ ತ್ವಚೆಗೆ ಯಾವುದೇ ಹಾನಿ ಉಂಟಾಗುವುದಿಲ್ಲ.
ಹಾಗಾದರೆ ಈ ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ನಾವು ಯಾವುದೆಲ್ಲ ರೀತಿಯ ವಿಧಾನಗಳನ್ನು ಅನುಸರಿಸಬೇಕು ಹಾಗೂ ನಮ್ಮ ತ್ವಚೆಯನ್ನು ಕಾಪಾಡಿ ಕೊಳ್ಳುವುದಕ್ಕೆ ಮನೆಯಲ್ಲಿಯೇ ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರ ಮೂಲಕ ನಮ್ಮ ತ್ವಚೆಯನ್ನು ರಕ್ಷಣೆ ಮಾಡಿಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಚಳಿಗಾಲದ ತಣ್ಣನೆಯ ಹವೆ ಚರ್ಮದ ಮೇಲೆ ಬೀರುವ ಕೆಟ್ಟ ಪರಿಣಾಮದಿಂದ ಚರ್ಮ ಬಿರಿಯುವುದು ಸಹಜ. ಈ ಸಮಸ್ಯೆ ಒಣ ಚರ್ಮದವರಲ್ಲಿ ಇನ್ನಷ್ಟು ಹೆಚ್ಚು. ಒಣಚರ್ಮದವರು ಚಳಿಗಾಲದಲ್ಲಿ ಸಾಬೂನಿನ ಬಳಕೆಯನ್ನು ಆದಷ್ಟೂ ಕಡಿಮೆ ಮಾಡುವುದು ಒಳಿತು. ತ್ವಚೆಯ ಶುಷ್ಕತೆಯನ್ನು ಕಡಿಮೆ ಮಾಡಲು ಮುಖ ತೊಳೆದ ನಂತರ ಕೋಲ್ಡ್ ಕ್ರೀಮ್, ಆಲಿವ್ ಆಯಿಲ್ ಉಪಯೋಗಿಸಿ.
* ಟೊಮ್ಯಾಟೋ ಮತ್ತು ಸ್ಟ್ರಾಬೆರಿ ಜ್ಯೂಸ್ ಮುಖ ಸ್ವಚ್ಛಮಾಡಲು ಅತ್ಯುತ್ತಮ. ಬಿಸಿ ನೀರಿನಲ್ಲಿ ತೋಯಿಸಿ ಹಿಂಡಿದ ಟವಲ್ ನಿಂದ ರಾತ್ರಿ ವೇಳೆ ಮುಖ ಒರೆಸಿ ಸ್ಕಿನ್ ನರಿ ಶಿಂಗ್ ಕ್ರೀಮ್ ಅನ್ನು ಬಾದಾಮಿ ಎಣ್ಣೆ ಯೊಂದಿಗೆ ಬೆರೆಸಿ 10-15 ನಿಮಿಷ ಮಸಾಜ್ ಮಾಡುವುದು ಉತ್ತಮ.
ಈ ವಿಧಾನಗಳನ್ನು ಅನುಸರಿಸುವುದರಿಂದ ಚಳಿಗಾಲದ ಸಂದರ್ಭದಲ್ಲಿ ನಮ್ಮ ತ್ವಚೆಯನ್ನು ರಕ್ಷಿಸಿ ಕೊಳ್ಳಬಹುದು.
ಅದೇ ರೀತಿಯಾಗಿ ಇನ್ನು ಬೇಸಿಗೆ ಸಂದರ್ಭದಲ್ಲಿ ನಾವು ನಮ್ಮ ತ್ವಚೆ ಯನ್ನು ಹೇಗೆ ಕಾಪಾಡಿಕೊಳ್ಳುವುದು ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರಿಂದ ಬೇಸಿಗೆ ಕಾಲದಲ್ಲಿ ಉಂಟಾಗುವಂತಹ ಚರ್ಮಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳ ಬಹುದು ಎನ್ನುವಂತಹ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
* ಚಳಿಗಾಲ ಚರ್ಮಕ್ಕೆ ಶುಷ್ಕತೆಯ ಅನುಭವ ನೀಡಿದರೆ ಬೇಸಿಗೆ ಬೆವರಿ ನ ಮೂಲಕ ದೇಹದ ನೀರನ್ನೆಲ್ಲ ಬಸಿದು ಬಿಡುತ್ತದೆ. ಇದರ ಜೊತೆಗೆ ಬಿಸಿಲಿಗೆ ತೆರೆದು ಕೊಳ್ಳುವುದರಿಂದ ಚರ್ಮದ ಸಹಜತೆ ಮಾಯವಾಗಿ ತೊಂದರೆ ಗೀಡಾಗುತ್ತದೆ.
ಹಾಗಾಗಿ ಬೇಸಿಗೆಯಲ್ಲಿ ಚರ್ಮಕ್ಕೆ ವಿಶೇಷ ಆರೈಕೆ ಬೇಕು ತೈಲೀಯ ತ್ವಚೆಯವರು ವಾರಕ್ಕೊಮ್ಮೆ, ಶುಷ್ಕ ತ್ವಚೆ ಯವರು ಎರಡು ವಾರಕ್ಕೊಮ್ಮೆ ಹಬೆ ತೆಗೆದು ಕೊಳ್ಳುವುದು ಒಳ್ಳೆಯದು. ಹಬೆ ತೆಗೆದು ಕೊಂಡ ನಂತರ ತಣ್ಣೀರನ್ನು ಮುಖಕ್ಕೆ ಎರಚಿ ಕೊಳ್ಳುವುದ ರಿಂದ ತರೆದು ಕೊಂಡ ಚರ್ಮದ ರಂಧ್ರಗಳು ಮುಚ್ಚಿಕೊಳ್ಳುತ್ತವೆ. ರಾತ್ರಿ ಮಲಗುವ ಮುನ್ನ ತೆಳುವಾಗಿ ಕ್ರೀಮ್ ಸವರಿ ಈ ಮಸಾಜ್ ಮಾಡಬೇಕು
* ದಿನಕ್ಕೆ ಕನಿಷ್ಠ 8 ರಿಂದ 10 ಲೋಟ ನೀರು ಕುಡಿಯುವುದನ್ನು ಮರೆಯಬೇಡಿ. ಚರ್ಮವನ್ನು ಜೀವಂತವಾಗಿಡುವಲ್ಲಿ ನೀರಿನ ಪಾತ್ರ ದೊಡ್ಡದು. ಹಣ್ಣು ಮತ್ತು ತರಕಾರಿಗಳು ಹೆಚ್ಚಿನ ನೀರಿನಂಶವನ್ನು ದೇಹಕ್ಕೆ ನೀಡುವುದರಿಂದ ಬೇಸಿಗೆಯಲ್ಲಿ ಇವು ಆರೋಗ್ಯಕ್ಕೆ ಹೆಚ್ಚು ಪೂರಕ. ಕೆಂಪು ಗಂಧದ ಪುಡಿ ಹಾಗೂ ರೋಸ್ ವಾಟರ್ನ ತೆಳು ಮಿಶ್ರಣವನ್ನು ಹಚ್ಚುವುದರಿಂದ ಚರ್ಮಕ್ಕೆ ಸಹಜತೆ ಮರಳುತ್ತದೆ.
ಇವು ಕಾಲಕ್ಕೆ ತಕ್ಕಂತೆ ಬೇಕಾದ ಆರೈಕೆಯಾದರೆ ಯಾವುದೇ ಕಾಲ ವಿರಲಿ ಹೊರಗೆ ಹೊರಡು ವಾಗ ಸನ್ ಸ್ಟ್ರೀಮ್ ಲೋಷನ್ ಹಚ್ಚುವುದನ್ನು ಮರೆಯಬೇಡಿ. ಚರ್ಮಕ್ಕೆ ಘಾಸಿಯಾಗದಂತೆ ಎಲ್ಲ ಕಾಲದಲ್ಲೂ ಸೂಕ್ತವಾದ ಎಚ್ಚರಿಕೆ ವಹಿಸಿದರೆ ಬಹುಕಾಲ ಚರ್ಮದ ಸೌಂದರ್ಯವನ್ನು ಕಾಪಾಡಿ ಕೊಳ್ಳಬಹುದು.