ಪ್ರತಿಯೊಬ್ಬರಿಗೂ ಕೂಡ ಮನೆ ಎನ್ನುವುದು ಒಂದು ಕನಸು. ಇನ್ನೊಬ್ಬರಿಗಿಂತ ವಿಭಿನ್ನವಾಗಿ ಅಥವಾ ತಮ್ಮ ಕನಸಿನಂತೆ ಅಥವಾ ದೀರ್ಘಕಾಲ ಬಾಳಿಕೆಗೆ ಬರುವಂತೆ, ಎಲ್ಲರೂ ಮೆಚ್ಚುವಂತೆ ಮನೆ ನಿರ್ಮಿಸಬೇಕು ಎನ್ನುವುದು ಎಲ್ಲರ ಆಸೆ. ಒಂದು ವೇಳೆ ನಮ್ಮ ಮನೆ ನಾವು ಅಂದುಕೊಂಡಂತೆ ಬರದೇ ಹೋದರೆ ಮನೆಯಲ್ಲಿ ಇರುವಷ್ಟು ದಿನ ಪಶ್ಚಾತಾಪದಿಂದ ಅದರ ಬಗ್ಗೆಯೇ ಯೋಚಿಸುತ್ತಿರುತ್ತೇವೆ.
ಆದ್ದರಿಂದ ಮನೆ ಕಟ್ಟುವ ಮುನ್ನವೇ ಅವುಗಳ ಬಗ್ಗೆ ಸರಿಯಾಗಿ ಪ್ಲಾನ್ ಹಾಕಿಕೊಂಡು ನಂತರ ನಿರ್ಧಾರಗಳು ಸರಿಯೇ ಎನ್ನುವ ಬಗ್ಗೆ ಕ್ರಾಸ್ ಚೆಕ್ ಮಾಡಿಕೊಂಡು ಆ ರೀತಿ ಮಾಡಿಸಿದರೆ ಒಳ್ಳೆಯದು. ಹಾಗಾಗಿ ಈ ಅಕಣದಲ್ಲೂ ಗೃಹಿಣಿಯರ ಅಚ್ಚುಮೆಚ್ಚಿನ ತಾಣವಾದ ಕಿಚನ್ ಕೌಂಟರ್ ಮಾಡಿಸುವಾಗ ಯಾವೆಲ್ಲಾ ವಿಷಯದ ಬಗ್ಗೆ ಗಮನ ಕೊಡಬೇಕು ಎನ್ನುವುದರ ಬಗ್ಗೆ ತಿಳಿಸುತ್ತಿದ್ದೇವೆ.
● ಮೊದಲಿಗೆ ಕಿಚನ್ ಅಲ್ಲಿ ಸಿಂಕ್ ಹಾಕಿಸುವಾಗ ಯಾವಾಗಲೂ ಕ್ವಾರ್ಡ್ ಸಿಂಕ್ ಅನ್ನು ಹಾಕಿಸಿ, ಸಿಂಗಲ್ ಬೌಲ್ ಇರಲಿ ಹಾಗೂ ಅದರ ಟ್ಯಾಪ್ ವಾಲ್ ಮೌಂಟೆಡ್ ಆಗಿದ್ದರೆ ಒಳ್ಳೆಯದು.
● ಗ್ಯಾಸ್ ಅಥವಾ ಹಾಬ್ ಇಟ್ಟುಕೊಳ್ಳಬೇಕಾದ ಶೆಲ್ಫ್ ಅನ್ನು ಹೆಚ್ಚಿನ ಜನ ಕಪ್ಪು ಬಣ್ಣದಲ್ಲಿ ಆಯ್ದುಕೊಳ್ಳುತ್ತಾರೆ. ಕಾರಣ ಅಡುಗೆ ಮನೆಯಲ್ಲಿ ಕಲೆಗಳಾದರೆ ಕಾಣಿಸುವುದಿಲ್ಲ ಎಂದು, ಆದರೆ ಇದು ತಪ್ಪು. ಬಿಳಿ ಬಣ್ಣದ ಮೇಲೆ ಹೇಗೆ ಕಲೆಗಳು ಕಾಣುತ್ತಿರುತ್ತವೋ ಅದೇ ರೀತಿ ಕಪ್ಪು ಬಣ್ಣದ ಕಲ್ಲಿನ ಮೇಲೆ ಕೂಡ ಕಲೆಗಳು ಕಾಣುತ್ತಿರುತ್ತವೆ. ಅದರ ಬದಲು ಮಿಕ್ಸೆಡ್ ಬಣ್ಣವನ್ನು ಚೂಸ್ ಮಾಡಿ ಇದು ಕಲೆಗಳನ್ನು ಎತ್ತಿ ತೋರುವುದಿಲ್ಲ ಹಾಗೂ ಟ್ರೆಂಡಿ ಆಗಿ ಇರುತ್ತದೆ. ಕಿಚನ್ ಹಳೆಯದಾಗುತ್ತಿತ್ತಂತೆ ಕಲೆ ಹೆಚ್ಚಾದಗಲೂ ಮ್ಯಾನೇಜ್ ಆಗುತ್ತದೆ.
● ಅಡಿಗೆ ಮನೆಗೆ ಹಾಕುವ ಕಲ್ಲನ್ನು ಹೆಚ್ಚಿನವರು ಗ್ರಾನೈಟ್ ಕಲ್ಲು ಚೂಸ್ ಮಾಡುತ್ತಾರೆ. ಇದರ ಬದಲು ಕ್ವಾರ್ಡ್ಜ್ ಗಳನ್ನು ಸೆಲೆಕ್ಟ್ ಮಾಡಿದರೆ ಬಣ್ಣಗಳ ಆಪ್ಷನ್ ಹೆಚ್ಚು ಸಿಗುತ್ತದೆ ಹಾಗೂ ಡಿಸೈನ್ಸ್ ಕೂಡ ಹೆಚ್ಚಿಗೆ ಇರುತ್ತದೆ. ಲುಕ್ ಕೂಡ ಚೆನ್ನಾಗಿ ಇರುತ್ತದೆ.
● ಕಿಚನ್ ಸ್ಲ್ಯಾಬಿನ ಹೈಟ್ ವಿಷಯ ಕೂಡ ಮುಖ್ಯವಾದ ವಿಷಯ. ಯಾಕೆಂದರೆ ಸಾಮಾನ್ಯವಾಗಿ ಎಲ್ಲರೂ ಕೂಡ ಒಂದು ಸ್ಟ್ಯಾಂಡರ್ಡ್ ಎಂದು 3 ಫೀಟ್ ಗೆ ಕಿಚನ್ ಸ್ಲ್ಯಾಬ್ ಹಾಕಿಸುತ್ತಾರೆ. ಆದರೆ ಆ ರೀತಿ ಮಾಡುವ ಬದಲು ನಿಮ್ಮ ಮನೆಯಲ್ಲಿ ಯಾರು ಹೆಚ್ಚು ಅಡುಗೆ ಮನೆಯಲ್ಲಿ ಸಮಯ ಕಳೆಯುತ್ತಾರೆ, ಅಡುಗೆ ಮಾಡುತ್ತಾರೆ ಅಂತವರ ಹೈಟಿಗೆ ಮ್ಯಾಚ್ ಆಗೋ ರೀತಿ ಮಾಡಿಸಿದರೆ ನಂತರ ದಿನಗಳಲ್ಲಿ ಅವರಿಗೆ ಕಿರಿಕಿರಿ ಆಗುವುದು ತಪ್ಪುತ್ತದೆ. ಎಲ್ಲರಿಗೂ ಸಹ 3 ಫೀಟ್ ಸ್ಟ್ಯಾಂಡರ್ಡ್ ಆಗಿ ಅಡ್ಜಸ್ಟ್ ಆಗುವುದಿಲ್ಲ, ಅವರವರ ಎತ್ತರಕ್ಕೆ ಅನುಗುಣವಾಗಿ ಸ್ಲ್ಯಾಬ್ ಮಾಡಿಸಿದರೆ ಒಳ್ಳೆಯದು.
● ಕಿಚನ್ ಕ್ಯಾಬಿನೆಟ್ ಗಳಿಗೆ ಹಾಕುವ ಸ್ವಿಚ್ ಬೋರ್ಡ್ ಗಳ ಬಗ್ಗೆ ಗಮನ ಇಡಲೇಬೇಕು. ಯಾಕೆಂದರೆ ಮುಂದೆ ಟೆಕ್ನಾಲಜಿ ಇಂಪ್ರೂ ಆದಂತೆ ಕೆಳಗಿನಿಂದಲೇ ಅಪ್ಲೈಸನ್ಸ್ ಗಳಿಗೆ ಕನೆಕ್ಷನ್ ಕೊಡುವ ಟ್ರೆಂಡ್ ಬರುತ್ತದೆ. ಹಾಗಾಗಿ ಕನಿಷ್ಠ ಮೂರು ಸ್ವಿಚ್ ಬೋರ್ಡ್ ಆದರೂ ಹಾಕಿಸಿ. ಜೊತೆಗೆ ಮೇಲೆ ಗ್ರಾನೆಟ್ ಓಪನ್ ಹೋಲ್ ಗಳ ಬಗ್ಗೆ ಗಮನ ಕೊಡಿ. ಯಾಕೆಂದರೆ ವೈರ್ ಗಳು ಬರುವುದಕ್ಕೆ ಲೈನ್ಸ್ ಇಲ್ಲ ಎಂದರೆ ನಂತರದ ದಿನಗಳಲ್ಲಿ ಕಷ್ಟ ಆಗುತ್ತದೆ. ಹಾಗಾಗಿ ಕಿಚನ್ ಕೌಂಟರ್ ಮಾಡುವಾಗ ಇವುಗಳ ಬಗ್ಗೆ ಗಮನ ಇರಲಿ.
ಇದೇ ರೀತಿಯ ಇನ್ನು ಸಾಕಷ್ಟು ವಿಷಯಗಳು ಕಿಚನ್ ಕೌಂಟರ್ ಜಾಗಕ್ಕೆ ಸಂಬಂಧಪಟ್ಟಹಾಗೆ ಇವುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ. ಮತ್ತು ಈ ವಿಡಿಯೋವನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಶೇರ್ ಮಾಡಿ.