ಮದುವೆಯಾದ ಗಂಡ ಹೆಂಡತಿ 5 ನಿಮಿಷ ಬಿಡುವು ಮಾಡಿಕೊಂಡು ಇದನ್ನ ನೋಡಿ ಸಾಕು.! ಸುಖ ಸಂಸಾರಕ್ಕೆ ಬೇಕಾದ ಅಂಶವಿದು

 

ದಾಂಪತ್ಯ ಎನ್ನುವುದು ಎಲ್ಲಾ ಸಂಬಂಧಗಳಿಗೂ ವಿಶೇಷ. ಯಾಕೆಂದರೆ, ಮದುವೆವರೆಗೂ ಕೂಡ ಎರಡು ಜೀವಗಳ ಬದುಕು, ಬದುಕುವ ಶೈಲಿ ಬೇರೆ ಬೇರೆಯಾಗಿದ್ದರೂ ಕೂಡ ಮದುವೆ ಎನ್ನುವ ಒಂದು ಬಂಧನಕ್ಕೆ ಬೆಲೆ ಕೊಟ್ಟು ಇನ್ನು ಮುಂದೆ ಒಂದಾಗಿ ಬಾಳುವ ನಿರ್ಧಾರಕ್ಕೆ ಬರುವ ಘಟ್ಟ. ಎಲ್ಲಾ ಮದುವೆಗಳ ಉದ್ದೇಶ ಸುಖ ದಾಂಪತ್ಯ ಹಾಗೂ ಯಶಸ್ವಿ ಜೀವನ, ಆದರೂ ಕೂಡ ಹಲವು ಮದುವೆಗಳು ಅರ್ಧಕ್ಕೆ ಮುರಿದು ಬೀಳುತ್ತವೆ. ಈ ರೀತಿ ಆಗಬಾರದು ಎಂದರೆ ಈಗ ನಾವು ಹೇಳುವ ಈ ಕೆಲ ಕಿವಿಮಾತುಗಳನ್ನು ಅನುಸರಿಸಿ.

ರೈತರಿಗೆ ಭರ್ಜರಿ ಗುಡ್‌ ನ್ಯೂಸ್: ರಸಗೊಬ್ಬರದ ಬೆಲೆ ಭಾರೀ ಇಳಿಕೆ.! ಡಿಎಪಿ ಹಾಗೂ ಯೂರಿಯಾ ಬೆಲೆ ಎಷ್ಟಾಗಿದೆ ಗೊತ್ತಾ.?

● ಪತಿಯು ಹೊರಗಡೆ ದುಡಿಯಲು ಹೋಗಿ ಮನೆಗೆ ಬಂದಾಗ ಪತ್ನಿ ಫೋನ್ ಅಲ್ಲಿ ಬಿಸಿ ಆಗಿರೋದು ಅಥವಾ ಬೇರೆ ಯಾವುದೋ ಕೆಲಸದಲ್ಲಿ ನಿರತರಾಗಿರುವುದು, ಟಿವಿ ಮುಂದೆ ಕುಳಿತುಕೊಂಡಿರುವುದು ಇವುಗಳನ್ನು ಮಾಡಬೇಡಿ. ಬದಲಾಗಿ ಬಂದವರನ್ನು ಸಮಾಧಾನದಿಂದ ಮಾತನಾಡಿಸಿ ಕುಡಿಯಲು ಒಂದು ಲೋಟ ನೀರು ಕೊಡಿ.

● ಹಣ ಆಸ್ತಿ ಒಡವೆ ಕಾರು ಬಂಗಲೆ ಇವೇ ಜೀವನಕ್ಕೆ ಅತಿ ಮುಖ್ಯ ಅಲ್ಲ, ನೆಮ್ಮದಿ ಎನ್ನುವುದು ಇದೆಲ್ಲದಕ್ಕಿಂತ ಮುಖ್ಯವಾದದ್ದು. ಇದು ಇಬ್ಬರಿಗೂ ತಿಳಿದಿರಬೇಕು. ಪತಿ ಎಷ್ಟೇ ದುಡಿದರು ಕೂಡ ಆ ಹಣದ ಬಗ್ಗೆ ಅವರ ಉದ್ಯೋಗದ ಬಗ್ಗೆ ಹೆಂಡತಿಗೆ ಗೌರವ ಇರಬೇಕು. ಪತಿಯ ದುಡಿಮೆಯಲ್ಲಿ ಮನೆ ಖರ್ ದೂಗಿಸಿಕೊಂಡು ಹೋಗುವ ಮನಸ್ಥಿತಿ ಹೆಂಡತಿಯಾದವಳಿಗೆ ಇರಬೇಕು.

● ಫ್ಯಾಮಿಲಿ, ಫ್ರೆಂಡ್ಸ್ ಅಕ್ಕಪಕ್ಕದವರು ಶಾಪಿಂಗ್ ಹೋಗುತ್ತಾರೆ ಅಥವಾ ಔಟಿಂಗ್ ಹೋಗುತ್ತಾರೆ ಎನ್ನುವ ಕಾರಣಕ್ಕೆ ನಾವು ಅದೇ ರೀತಿ ಹೋಗಬೇಕು ಎಂದು ಹಠ ಮಾಡಬಾರದು ಇನ್ನೊಬ್ಬರಿಗೆ ಹೋಲಿಕೆ ಮಾಡಿಕೊಂಡು ಬದುಕುವ ಗುಣವನ್ನು ಪತ್ನಿಯು ಬಿಟ್ಟುಬಿಡಬೇಕು. ಇಲ್ಲವಾದಲ್ಲಿ ಮನೆಯಲ್ಲಿ ವಿನಾಕಾರಣ ಜಗಳಗಳು ಆಗುತ್ತವೆ, ನಿಮಗೂ ಕೂಡ ತೆಗೆದುಕೊಳ್ಳುವ ಶಕ್ತಿ ಇದ್ದರೆ ಅಥವಾ ಅದರ ಅನಿವಾರ್ಯತೆ ಇದ್ದರೆ ಮಾತ್ರ ಆಸೆ ಪಡಬೇಕು.

ಮಹಿಳೆಯರಿಗೆ ಕೆಲ ಉಪಯುಕ್ತ ಮಾಹಿತಿಗಳು.! ಎಲ್ಲಾ ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇದು.

● ಹೆಂಡತಿ ಮನೆಯವರ ಬಗ್ಗೆ ಗಂಡ, ಗಂಡನ ಮನೆಯವರ ಬಗ್ಗೆ ಹೆಂಡತಿ ದೂರು ಹೇಳುವುದು ಅಥವಾ ಅವರನ್ನು ಕೀಳಾಗಿ ಕಾಣುವಂತೆ ಮಾತನಾಡುವುದು ಈ ರೀತಿ ಮಾಡಬಾರದು. ಮಾತನಾಡಬೇಕಾದ ಸಂದರ್ಭ ವಿಷಯ ಬಂದರೆ ಒಳ್ಳೆಯ ಮಾತನಾಡಿ ಅದನ್ನು ಬಿಟ್ಟು ಇಲ್ಲಸಲ್ಲದ ವೈಯಕ್ತಿಕ ವಿಚಾರಗಳನ್ನು ಬೇಡದ ವಿಚಾರಗಳನ್ನು ಮಾತನಾಡಿ ಮನಸನ್ನು ಮನೆಯ ವಾತವರಣವನ್ನು ಹಾಳುಮಾಡಬೇಡಿ.

● ನಿಮ್ಮ ಮನೆಯ ಬಗ್ಗೆಯೇ ಸಾಕಷ್ಟು ವಿಚಾರಗಳನ್ನು ಮಾತನಾಡುವುದು ಇರುತ್ತದೆ. ಅದನ್ನು ಬಿಟ್ಟು ಬೇರೆಯವರ ಅಥವಾ ಬೇಡದ ವಿಚಾರಗಳನ್ನು ಮಾತನಾಡಬೇಡಿ. ಇದೇ ಜಗಳ ಶುರುವಾಗಲು ಮುಖ್ಯ ಕಾರಣ.
● ಪತಿ, ಪತ್ನಿ ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಗೌರವ ಪ್ರೀತಿ ವಿಶ್ವಾಸ ನಂಬಿಕೆ ಇರಬೇಕು. ಅದನ್ನು ಬಿಟ್ಟು ಸಂಶಯ ಪಡುವುದು, ಚುಚ್ಚುಮಾತುಗಳನ್ನು ಆಡುವುದು, ಜಗಳ ಮಾಡುವ ಅವಮಾನಿಸುವ ಮನಸ್ಥಿತಿ ಇರಬಾರದು.

● ಇಬ್ಬರು ದುಡಿಯುತ್ತಿದ್ದರೆ ಇದು ನನ್ನ ದುಡಿಮೆ, ಇದು ನಿನ್ನ ಹಣ ಎಂದು ಭೇದ ಭಾವ ಮಾಡಬಾರದು. ಭಿನ್ನಾಭಿಪ್ರಾಯ ಬರುವುದಕ್ಕೆ ಇದು ಕೂಡ ಒಂದು ಕಾರಣ. ಗಂಡ ಹೆಂಡತಿ ಎಂದರೆ ಇಬ್ಬರೂ ಕೂಡ ಒಂದೇ, ಒಟ್ಟಾಗಿ ಕುಟುಂಬವನ್ನು ಕಟ್ಟಬೇಕು, ಮಕ್ಕಳನ್ನು ಬೆಳೆಸಬೇಕು, ಎರಡು ದೇಹ ಒಂದು ಜೀವ ಎನ್ನುವಂತೆ ಒಬ್ಬರ ಕಷ್ಟ-ಸುಖಗಳಲ್ಲಿ ಮತ್ತೊಬ್ಬರು ಸಮಪಾಲು ಪಡೆಯಬೇಕು.

ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಈ ಲಕ್ಷಣಗಳು ಕಾಣಿಸುತ್ತೆ ಎಚ್ಚರಿಕೆ.!

● ಈ ಜಗತ್ತಿನಲ್ಲಿ ಅದೃಷ್ಟವಂತರು ಯಾರೆಂದರೆ ಗಂಡನ ಕಷ್ಟವನ್ನು ಅರ್ಥ ಮಾಡಿಕೊಳ್ಳುವ ಹೆಂಡತಿ ಪಡೆದವರು, ಹಾಗೇ ಎಷ್ಟೇ ಸಮಸ್ಯೆಗಳಿದ್ದರೂ ಕೂಡ ಹೆಂಡತಿಯ ಮುಖದಲ್ಲಿ ನಗುತರುಸುವ ಗಂಡನನ್ನು ಪಡೆದವರು.

Leave a Comment