ಜಮಾಲಿಗುಡ್ಡ
ನಟಿ ಪ್ರಭುದೇವ(Adithiprabhideva) ಹಾಗೂ ಡಾಲಿ ಧನಂಜಯ್(Dananjay) ಅಭಿನಯದ ಜಮಾಲಿ ಗುಡ್ಡ(Jamaligudda) ಇದೆ ತಿಂಗಳ ಡಿಸೆಂಬರ್ 30 ರಂದು ಕರ್ನಾಟಕದಾದ್ಯಂತ ಎಲ್ಲಾ ಚಿತ್ರಮಂದಿರದಲ್ಲೂ ಕೂಡ ಪ್ರದರ್ಶನ ಕಾಣಲಿದೆ. ಸದ್ಯಕ್ಕೆ ಅದಿತಿ ಪ್ರಭುದೇವ ಹಾಗೂ ಧನಂಜಯ್ ಇಬ್ಬರು ಕೂಡ ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಳೆದ ಒಂದು ವಾರದಿಂದಲೂ ಕೂಡ ಎಲ್ಲಾ ಕಡೆ ಭರ್ಜರಿ ವಿಚಾರ ಮಾಡುತ್ತಿದ್ದಾರೆ ಇನ್ನು ಅದಿತಿ ಪ್ರಭುದೇವ ಅವರು ಕಳೆದ ತಿಂಗಳಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆಯಾದ ಹೊಸದರಲ್ಲಿಯೂ ಕೂಡ ತಮ್ಮ ಕುಟುಂಬಕ್ಕೆ ಸಮಯ ನೀಡದೇ ಇದೀಗ ಸಿನಿಮಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ ಅಂತಾನೆ ಹೇಳಬಹುದು. ಇನ್ನು ಸಿನಿಮಾದ ಬಗ್ಗೆ ಹೇಳುವುದಾದರೆ ನಟಿ ಅದಿತಿ ಪ್ರಭುದೇವ ಅವರು ಜಮಾಲಿ ಗುಡ್ಡ ಸಿನಿಮಾದಲ್ಲಿ ರುಕ್ಮಿಣಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾಮಾಲಿ ಗುಡ್ಡ ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಅವರು ಕೃಷ್ಣ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಿತಿ ಪ್ರಭುದೇವ ಅವರಿಗೆ ಇದೊಂದು ವಿಭಿನ್ನ ಪಾತ್ರವಂತೆ ಎಂದು ನೀವು ಅದಿತಿ ಪ್ರಭುದೇವ ಅವರನ್ನು ಈ ರೀತಿ ನೋಡಿರುವುದಕ್ಕೆ ಸಾಧ್ಯನೇ ಇಲ್ಲ.
ಇದರ ಬಗ್ಗೆ ಅದಿತಿ ಪ್ರಭುದೇವ ಅವರ ಪ್ರೆಸ್ ಮೀಟ್ ನಲ್ಲಿ ಹೇಳಿಕೊಂಡಿದ್ದಾರೆ ಇನ್ನು ಜಮಾಲಿ ಗುಡ್ಡ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಎಲ್ಲರಿಂದಲೂ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ. ಡಾಲಿ ಧನಂಜಯ್ ಅವರು ಈ ವರ್ಷ ಸುಮಾರು ಏಳರಿಂದ ಎಂಟು ಸಿನಿಮಾದಲ್ಲಿ ನಟಿಸಿದ್ದು ಎಲ್ಲಾ ಸಿನಿಮಾಗಳು ಬಿಡುಗಡೆಯಾಗಿದ್ದು ಉತ್ತಮ ರೀತಿಯಲ್ಲಿ ಪ್ರದರ್ಶನ ಕಂಡಿದೆ. ಹಾಗಾಗಿ ಈ ಸಿನಿಮಾದ ಮೇಲೆಯೂ ಕೂಡ ಬಹಳಷ್ಟು ನೀರಿಕ್ಷೆಯನ್ನು ಇಟ್ಟುಕೊಂಡಿದ್ದಾರೆ ಪ್ರೇಕ್ಷಕರು ಈ ಸಿನಿಮಾವನ್ನು ಯಾವ ರೀತಿ ಕೈಗೆತ್ತಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಪ್ರಚಾರದ ನಡುವೆಯೇ ನಟಿ ಅದಿತಿ ಪ್ರಭುದೇವ ಅವರು ಹೇಳಿದ ಮಾತೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ ಅಭಿಮಾನಿಗಳನ್ನು ಕುರಿತು ಮಾತನಾಡುತ್ತಿರುವಾಗ ನಟಿ ಅದಿತಿ ಪ್ರಭುದೇವ ಅವರು ಈ ಸಿನಿಮಾವನ್ನು ನೀವು ತಪ್ಪದೆ ನೋಡಲೇಬೇಕು ಏಕೆಂದರೆ ನಿಮಗಾಗಿ ಈ ಸಿನಿಮಾದಲ್ಲಿ ನಾನು ಸಿಗರೇಟ್ ಸೇದಿದ್ದೇನೆ ಎಂಬ ಹೇಳಿಕೆ ಒಂದನ್ನು ಕೊಟ್ಟಿದ್ದಾರೆ. ಈವರೆಗೂ ಕೂಡ ನಾನು ಒಂದು ಬಾರಿಯೂ ಸಿಗರೇಟ್ ಅನ್ನು ಕೈಯಲ್ಲಿ ಮುಟ್ಟಿಲ್ಲ. ಆದರೆ ಪಾತ್ರಕ್ಕಾಗಿ ಸಿಗರೇಟ್ ಅನ್ನು ಸೇದಿದ್ದೇನೆ ಇದು ನನ್ನ ಜೀವನದಲ್ಲಿ ಮೊದಲ ಬಾರಿಗೆ ಮಾಡಿದಂತಹ ಪ್ರಯೋಗ ಇದಕ್ಕೋಸ್ಕರನಾದರೂ ಕೂಡ ನೀವು ಸಿನಿಮಾವನ್ನು ಥಿಯೇಟರ್ ಗೆ ಬಂದು ನೋಡಲೇಬೇಕು ಎಂದು ಅದಿತಿ ಪ್ರಭುದೇವ ಅವರು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಸದ್ಯಕ್ಕೆ ನಟಿ ಅದಿತಿ ಪ್ರಭುದೇವ ಮಾತನಾಡಿದಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಟಿಸಬೇಕಾದರೆ ಹಲವಾರು ರೀತಿಯಾದಂತಹ ಪಾತ್ರಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಯಾವುದೇ ರೀತಿಯಾದಂತಹ ಸನ್ನಿವೇಶ ಬಂದರು ಅದಕ್ಕೆ ನಾವು ಬದ್ಧರಾಗಿರಬೇಕಾಗುತ್ತದೆ ಹಾಗಾಗಿ ನಟಿ ಅದಿತಿ ಪ್ರಭುದೇವ್ ಅವರು ಕೂಡ ತಮ್ಮ ಬದುಕಿನ ಆದರ್ಶಗಳನ್ನು ಬದಿಗಿಟ್ಟು ಸಿನಿಮಾಗಾಗಿ ಇಂತಹದೊಂದು ಮಹತ್ತರವಾದಂತಹ ಪಾತ್ರದಲ್ಲಿ ಅಭಿನಯಿಸುವುದಕ್ಕೆ ಒಪ್ಪಿಕೊಂಡಿದ್ದು ನಿಜಕ್ಕೂ ಆಚರಿಯ ವಿಚಾರವೇ.
ಏಕೆಂದರೆ ಕೆಲವೇ ನಟ ನಟಿಯರು ತಮ್ಮ ಆದರ್ಶದ ವಿರುದ್ಧ ನಡೆದುಕೊಳ್ಳುವುದಿಲ್ಲ ಹಾಗೂ ತಮ್ಮ ಭಾವನೆಗೆ ಧಕ್ಕೆ ತರುವಂತಹ ಪಾತ್ರಗಳಲ್ಲಿಯೂ ಕೂಡ ನಟಿಸುವುದಿಲ್ಲ ಆದರೆ ಇವೆಲ್ಲವನ್ನು ಮೆಟ್ಟು ನಿಂತು ನಟಿ ಅದಿತಿ ಪ್ರಭುದೇವ ಅವರ ಹೊಸದೊಂದು ಪ್ರಯೋಗ ಮಾಡಿದ್ದು ನಿಜಕ್ಕೂ ಖುಷಿ ತರುವ ವಿಚಾರವೇ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.