ಹೈನುಗಾರಿಕೆ ದೇಶದಲ್ಲಿ ರೈತರ ಪಾಲಿಗೆ ಒಂದು ವರದಾನವೇ ಆಗಿದೆ. ಕೃಷಿ ಚಟುವಟಿಕೆ ಜೊತೆ ಹೈನುಗಾರಿಕೆ ಕೂಡ ರೈತರ ಆದಾಯ ತುಂಬುವ ಒಂದು ಜೀವನೋಪಾಯ ಆಗಿದ್ದು, ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಕೂಡ ಈ ಹೈನುಗಾರಿಕೆಯನ್ನು ಬೆಂಬಲಿಸುತ್ತಿವೆ. ಹಲವು ಯೋಜನೆಗಳ ಮೂಲಕ ಸಹಾಯಧನ, ಸಬ್ಸಿಡಿ ನೀಡಿ ಹೈನುಗಾರಿಕೆ ಮಾಡುವವರನ್ನು ಪ್ರೋತ್ಸಾಹಿಸುತ್ತಿದೆ. ಕರ್ನಾಟಕ ರಾಜ್ಯದಲ್ಲೂ ಕೂಡ ಸಾಕಷ್ಟು ರೈತರು ಹೈನುಗಾರಿಕೆ ಇಂದ ಬದುಕು ಕಟ್ಟಿಕೊಂಡಿದ್ದಾರೆ.
ಇವರಿಗೆಲ್ಲ ಅನುಕೂಲ ಮಾಡಿಕೊಡುವ ಸಲುವಾಗಿ ಹೈನುಗಾರಿಕೆಗೆ ಸಂಬಂಧಪಟ್ಟ ಸಾಕಷ್ಟು ಯೋಜನೆಗಳನ್ನು ಇದುವರೆಗೆ ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಸದ್ಯಕ್ಕೆ ರಾಜ್ಯ ಸರ್ಕಾರ ಪಶು ಭಾಗ್ಯ ಎನ್ನುವ ಯೋಜನೆ ಅಡಿಯಲ್ಲಿ ಮತ್ತೊಂದು ಹೊಸ ಯೋಜನೆ ತಂದಿದ್ದು ಆ ಯೋಜನೆ ಮೂಲಕ ಹೈನುಗಾರಿಕೆ ಮಾಡುವವರಿಗೆ ಘಟಕ ನಿರ್ಮಿಸಿಕೊಳ್ಳಲು ಭಾರಿ ಮೊತ್ತದ ಸಬ್ಸಿಡಿ ರೂಪದ ಸಾಲ ನೀಡಲಾಗುತ್ತಿದೆ. ಮುಖ್ಯಮಂತ್ರಿ ಅಮೃತ ಜೀವನ ಯೋಜನೆ ಇದಾಗಿದ್ದು 2022 ರಿಂದ ಈ ಯೋಜನೆ ಜಾರಿಯಲ್ಲಿ ಇದೆ.
ಕರ್ನಾಟಕದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ, ಹೈನುಗಾರಿಕೆಯಲ್ಲಿ ಆಸಕ್ತಿ ಇರುವ ರೈತರುಗಳು ಸರ್ಕಾರ ಸೂಚಿಸಿರುವ ಮಾರ್ಗಸೂಚಿ ಪ್ರಕಾರ ಈ ಯೋಜನೆಯ ಮೂಲಕ 60 ಸಾವಿರದವರೆಗೆ ಸಹಾಯಧನ ಪಡೆದುಕೊಳ್ಳಬಹುದು. ಇದು ಸಬ್ಸಿಡಿ ವಿನಾಯಿತಿಗೂ ಒಳಪಟ್ಟಿರುತ್ತದೆ. ರಾಜ್ಯದ ಎಲ್ಲಾ ರೈತರಿಗೂ ಕೂಡ ಈ ಯೋಜನೆಯ ಫಲಾನುಭವಿಗಳಾಗುವ ಅವಕಾಶ ಇದ್ದು ಮಹಿಳೆಯರಿಗೆ, ವಿಶೇಷ ಚೇತನರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವರಿಗೆ ಇನ್ನು ಹೆಚ್ಚಿನ ಒತ್ತು ನೀಡಲಾಗಿದೆ. ಈ ಅಂಕಣದಲ್ಲೂ ಸಹ ಮುಖ್ಯಮಂತ್ರಿ ಅಮೃತ ಜೀವನ ಯೋಜನೆ ಬಗ್ಗೆ ಪ್ರಮುಖ ಮಾಹಿತಿಗಳನ್ನು ತಿಳಿಸಿಕೊಡಲಾಗಿದೆ.
ಮುಖ್ಯಮಂತ್ರಿ ಅಮೃತ ಜೀವನ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:-
● ಆಧಾರ್ ಕಾರ್ಡ್
● BPL ರೇಷನ್ ಕಾರ್ಡ್
● ಬ್ಯಾಂಕ್ ಖಾತೆ ಪುಸ್ತಕ
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಮೊಬೈಲ್ ಸಂಖ್ಯೆ
● ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
● ವಿಶೇಷ ಚೇತನರಿಗೆ ಅಂಗ ವೈಫಲ್ಯಕ್ಕೆ ಸಂಬಂಧಪಟ್ಟ ವೈದ್ಯಕೀಯ ದೃಢೀಕರಣ ಪತ್ರ
ಪ್ರಯೋಜನಗಳು:-
● ಈ ಯೋಜನೆಗೆ ಅರ್ಜಿ ಸಲ್ಲಿಸಿ, ಪಡೆಯುವ ಸಹಾಯಧನದಿಂದ ಹೈನುಗಾರಿಕೆ ಘಟಕ ನಿರ್ಮಿಸಿಕೊಳ್ಳಬಹುದು.
● ಸಹಾಯಧನ ಉಪಯೋಗಿಸಿಕೊಂಡು ಹಾಲು ಕರೆಯುವ ಹಸು ಅಥವಾ ಹಾಲು ಕರೆಯುವ ಎಮ್ಮೆ ಕೂಡ ಖರೀದಿಸಬಹುದು.
● ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಾಲದ ಮೊತ್ತದಲ್ಲಿ 20,655 ರೂಪಾಯಿ ಸಬ್ಸಿಡಿ ಸಿಗುತ್ತದೆ.
● ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 15,500 ಸಬ್ಸಿಡಿ ಸಿಗುತ್ತದೆ.
● ಒಟ್ಟು ಸಿಗುವ ಸಹಾಯಧನದ ಹಣದಲ್ಲಿ ಸಬ್ಸಿಡಿ ಮೊತ್ತದ ಹಣವನ್ನು ಬಿಟ್ಟು ಉಳಿದ ಹಣವನ್ನು ಮಾತ್ರ ಮರುಪಾವತಿ ಮಾಡಬೇಕು.
● ಸಹಾಯಧನದಲ್ಲಿ ಮಹಿಳೆಯರಿಗೆ 33.3%, ಅಲ್ಪಸಂಖ್ಯಾತರಿಗೆ 15%, ವಿಶೇಷ ಚೇತನರಿಗೆ 3% ಆದ್ಯತೆ ಇರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಲ್ಲಿ ಸಲ್ಲಿಸಬೇಕು:-
● ರೈತರು ತಮ್ಮ ತಾಲೂಕು ಅಥವಾ ಜಿಲ್ಲೆಯಲ್ಲಿ ಇರುವ ಮುಖ್ಯ ಪಶು ವೈದ್ಯಾಧಿಕಾರಿಗಳ ಕಚೇರಿ ಅಥವಾ ಜಿಲ್ಲಾ ಪಶು ಪಾಲನ ಪಶು ವೈದ್ಯಕೀಯ ಸೇವಾ ಇಲಾಖೆ ಭೇಟಿ ಕೊಟ್ಟು ಈ ಯೋಜನೆಗೆ ಅರ್ಜಿ ಪಡೆದುಕೊಳ್ಳಬೇಕು.
● ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ಅಜ್ಜಿ ಫಾರಂ ಅನ್ನು ಸವಿವರಗಳ ಜೊತೆ ತುಂಬಿಸಿ ಕಛೇರಿಗೆ ಸಲ್ಲಿಸಬೇಕು.
● ಅಧಿಕಾರಿಗಳಿಂದ ಅರ್ಜಿ ತಪಾಸಣೆ ಆದ ಬಳಿಕ DBT ಮೂಲಕ ರೈತರ ಖಾತೆಗೆ ಹಣ ಜಮೆ ಆಗುತ್ತದೆ.