Sunday, June 4, 2023
HomeNewsನಾಗವಲ್ಲಿ ಗೆಟಪ್ ನಲ್ಲಿ ಆಂಕರ್ ಅನುಶ್ರೀ ಮಾಡಿದ ಈ ಭರ್ಜರಿ ಡ್ಯಾನ್ಸ್ ಒಮ್ಮೆ ನೋಡಿ ನಿಜಕ್ಕೂ...

ನಾಗವಲ್ಲಿ ಗೆಟಪ್ ನಲ್ಲಿ ಆಂಕರ್ ಅನುಶ್ರೀ ಮಾಡಿದ ಈ ಭರ್ಜರಿ ಡ್ಯಾನ್ಸ್ ಒಮ್ಮೆ ನೋಡಿ ನಿಜಕ್ಕೂ ಕಳೆದು ಹೊಗ್ತೀರಾ, ರಿಯಲ್ ನಾಗವಲ್ಲಿ ಡ್ಯಾನ್ಸ್ ನೇ ಮೀರಿಸುವಂತಿದೆ.

 

ಕ್ಲಾಸಿಕಲ್ ಡ್ರೆಸ್ ತೊಟ್ಟು ರಾರಾ ಹಾಡಿಗೆ ಕುಣಿದ ಆಂಕರ್ ಅನುಶ್ರೀ…

ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ನಂಬರ್ ಒನ್ ಆಂಕರ್ ಪಟ್ಟದಲ್ಲಿರುವ ಅನುಶ್ರೀ ಅವರು ಬಹುಮುಖ ಪ್ರತಿಭೆ ಎನ್ನುವುದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ. ಅನುಶ್ರೀ ಅವರು ಝೀ ಕನ್ನಡ ವಾಹಿನಿಯ ಪರ್ಮನೆಂಟ್ ಮೆಂಬರ್ ಆಗಿಬಿಟ್ಟಿದ್ದಾರೆ ಎನ್ನಬಹುದು. ಯಾಕೆಂದರೆ ಝೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸರಿಗಮಪ ಲಿಟಲ್ ಚಾಂಪ್ಸ್ ಮತ್ತು ಸರಿಗಮಪ ಚಾಂಪಿಯನ್ಸ್ ಇವುಗಳನ್ನು ಹಲವು ಸೀಸನ್ ಗಳಿಂದ ನಿರೂಪಣೆ ಮಾಡುತ್ತಾ ಬಂದಿದ್ದಾರೆ.

ಜೊತೆಗೆ ಝೀ ಕನ್ನಡ ವಾಹಿನಿಯ ಇತರೆ ಕಾರ್ಯಕ್ರಮಗಳಾದ ಝೀ ಕುಟುಂಬ ಅವಾರ್ಡ್ಸ್, ಝೀ ಜಾತ್ರೆ ಇವುಗಳನ್ನು ಸಹ ನಡೆಸಿಕೊಡುವ ಹೊಣೆ ಇವರದ್ದೇ ಆಗಿರುತ್ತದೆ. ಒಂದರ್ಥದಲ್ಲಿ ಝೀ ಕನ್ನಡದ ಕಾರ್ಯಕ್ರಮಗಳು ಅನುಶ್ರೀ ಅವರ ಆಂಕರಿಂಗ್ ಇಲ್ಲದಿದ್ದರೆ ಕಳೆ ಕಟ್ಟುವುದಿಲ್ಲ ಎನ್ನಬಹುದು. ಅಷ್ಟರಮಟ್ಟಿಗೆ ಪಟಪಟನೆ ಹರಳು ಉರಿದಂತೆ ಕನ್ನಡ ಮಾತನಾಡುತ್ತಾ ಸದಾ ನಗುಮುಖದಿಂದ ಎಲ್ಲರನ್ನೂ ಆಕರ್ಷಿಸುತ್ತಾ ಆಗಾಗ ಅರ್ಜುನ್ ಜನ್ಯ ಅವರ ಕಾಲೆಳೆಯುತ್ತಾ ಪ್ರೇಕ್ಷಕರ ಮನ ಗೆದ್ದಿ.ದ್ದಾರೆ ಅನುಶ್ರೀ.

ಕೇವಲ ಝೀ ಕನ್ನಡ ವಾಹಿನಿಯ ನಿರೂಪಕಿ ಆಗಿ ಮಾತ್ರ ಅಲ್ಲದೆ ಅನೇಕ ರಾಜಕೀಯ ಕಾರ್ಯಕ್ರಮಗಳನ್ನು ನಡೆಸಿಕೊಡುವ ಹಾಗೂ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ಸ್ ಸಿನಿಮಾಗಳ ಪ್ರೀ ರಿಲೀಸ್ ಇವೆಂಟ್, ಆಡಿಯೋ ಲಾಂಚ್ ಇಂತಹ ಕಾರ್ಯಕ್ರಮಗಳ ನಿರೂಪಣೆ ಕೂಡ ಅಚ್ಚುಕಟ್ಟಾಗಿ ಮಾಡುವ ಇವರ ನಿರೂಪಣೆಗೆ ಈಗ ಲಕ್ಷ ಲಕ್ಷ ಸಂಭಾವನೆ ನೀಡಲಾಗುತ್ತಿದೆ.

ಆದರೆ ಇಷ್ಟೊಂದು ಜನಪ್ರಿಯತೆ ಬರುವ ಮೊದಲು ಅನುಶ್ರೀ ಅವರು ಜೀವನ ನಿರ್ವಹಣೆಗಾಗಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಉದ್ಯೋಗಿ ಕೂಡ ಆಗಿದ್ದರು. ಕಿರುತೆರೆಯ ಮನೆ ಮಗಳಂತೆ ಇವರು ಇದ್ದರೂ ಸಹ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುವ ಹಂಬಲ ಕಡಿಮೆಯಾಗಿಲ್ಲ. ಈಗಾಗಲೇ 3-4 ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಅಭಿನಯಿಸಿದ್ದರು ಸಹಾ ಯಾಕೋ ಇವರಿಗೆ ಸಿನಿಮಾಗಳು ಲಕ್ ತರಲಿಲ್ಲ ಬೆಂಕಿ ಪಟ್ಟಣ, ಮಾದ ಮತ್ತು ಮಾನಸಿ, ರಿಂಗ್ ಮಾಸ್ಟರ್ ಈ ಸಿನಿಮಾಗಳಲ್ಲಿ ಅನುಶ್ರೀ ಅವರು ಅಭಿನಯಿಸಿದ್ದಾರೆ.

ಜೊತೆಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಕೂಡ ಹೊಂದಿರುವ ಅನುಶ್ರೀ ಅವರು ಅಲ್ಲೂ ಸಹ ವಿಶೇಷ ರೀತಿಯಲ್ಲಿ ಸಿನಿಮಾ ಸ್ಟಾರ್ಗಳ ಸಂದರ್ಶನ ಮಾಡುವ ಮೂಲಕ ಮತ್ತು ಹೊಸ ಸಿನಿಮಾಗಳಿಗೆ ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಹ ಸಕ್ಕತ್ ಆಕ್ಟಿವ್ ಆಗಿರುವ ಅನುಶ್ರೀ ಅವರು ತಮ್ಮ ಅಭಿಮಾನಿಗಳು ಹಾಗೂ ಫಾಲೋವರ್ಸ್ ಗಳನ್ನು ಮನರಂಜನೆ ಪಡಿಸಲು ಆಗಾಗ ರೀಲ್ಸ್ ಗಳನ್ನು ಮಾಡಿ ಅದನ್ನು ಅಪ್ಲೋಡ್ ಮಾಡುತ್ತಾರೆ.

ಸಾಮಾನ್ಯವಾಗಿ ಶೂಟಿಂಗ್ ಸೆಟ್ನಲ್ಲಿ ಅಲ್ಲಿರುವ ಕಲಾವಿದರ ಜೊತೆ, ತಂತ್ರಜ್ಞಾನದ ಜೊತೆ ಅಥವಾ ಮೇಕಪ್ ಎಲ್ಲಾ ಆದಮೇಲೆ ಆ ಲುಕ್ಕಿನಲ್ಲಿ ರೀಲ್ಸ್ ಮಾಡಿ ಅದನ್ನು ಹಂಚಿಕೊಳ್ಳುತ್ತಿದ್ದ ಅನುಶ್ರೀ ಅವರು ಈಗ ಒಂದು ಹಾಡಿನ ರೀಲ್ಸ್ ಮಾಡುವ ಸಲುವಾಗಿ ಅವರೇ ಕಾಸ್ಟ್ಚೂಮ್ ತರಿಸಿ ತೊಟ್ಟುಕೊಂಡಿದ್ದಾರೆ.

ಅನುಶ್ರೀ ಅವರು ಆಪ್ತಮಿತ್ರ ಸಿನಿಮಾದ ರಾರ ಹಾಡಿಗೆ ರೀಲ್ಸ್ ಮಾಡಲು ಅದೇ ರೀತಿ ಕ್ಲಾಸಿಕ್ ಭರತನಾಟ್ಯಂ ಡ್ರೆಸ್ ಮೇಕಪ್ ಮಾಡಿಸಿಕೊಂಡಿದ್ದಾರೆ ಮತ್ತು ಹಾಡಿಗೆ ತಕ್ಕ ಹೆಜ್ಜೆಗಳನ್ನು ಕೂಡ ಹಾಕಿ ಹಾಗೆ ಸುಮ್ಮನೆ ಒಂದು ಪ್ರಯತ್ನ ಎಂದು ಅಡಿಬರಹ ಬರೆದು ಅದನ್ನು ಶೇರ್ ಮಾಡಿದ್ದಾರೆ. ಶೇರ್ ಮಾಡಿದ ಕೆಲವೇ ಗಳಿಗೆಯಿಂದಲೇ ಸಾಕಷ್ಟು ಜನರು ಲೈಕ್ ನೀಡಿ ಕಮೆಂಟ್ ಕೂಡ ಮಾಡಿ ಹೊಗಳುತ್ತಿದ್ದಾರೆ.