ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನ ತಮ್ಮ ಕೈ ಬೆರಳಿಗೆ ಗಣಪತಿಯ ಉಂಗುರ ವೆಂಕಟೇಶ್ವರನ ಉಂಗುರ ಗಣಪತಿಯ ಚಿತ್ರ ಇರುವಂತಹ ಉಂಗುರಗಳನ್ನು ಧರಿಸಿಕೊಳ್ಳುತ್ತಿರುತ್ತಾರೆ. ಇಂತಹ ಒಂದು ಸಂದರ್ಭ ದಲ್ಲಿ ಅವರು ಮಾಂಸಹಾರ ಸೇವನೆ ಮಾಡಬಹುದಾ ಎನ್ನುವಂತಹ ಪ್ರಶ್ನೆ ಹಲವಾರು ಜನರಲ್ಲಿ ಇದೆ. ಹಾಗಾದರೆ ಈ ದಿನ ಈ ಒಂದು ಪ್ರಶ್ನೆಗೆ ಸಂಬಂಧಿಸಿದಂತೆ ಉತ್ತರವನ್ನು ತಿಳಿದು ಕೊಳ್ಳೋಣ ಅದೇ ರೀತಿಯಾಗಿ
* ಮಹಿಳೆಯರು ತಮ್ಮ ತಾಳಿಸರದಲ್ಲಿ ಲಕ್ಷ್ಮಿ ಕಾಸನ್ನು ಹಾಕಿಕೊಂಡು ಮಾಂಸಹಾರಿ ಸೇವನೆ ಮಾಡಬಹುದಾ ಹಾಗೂ ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಯಾವ ಉಂಗುರಗಳನ್ನು ಅಂದರೆ ದೇವರ ಫೋಟೋ ಇರುವಂತಹ ವಿಗ್ರಹಗಳನ್ನು ಧರಿಸಿಕೊಳ್ಳಬಾರದು ಹಾಗೂ ಧರಿಸಿಕೊಂಡರೆ ಏನೆಲ್ಲ ತೊಂದರೆಗಳು ಕಾಣಿಸಿಕೊಳ್ಳುತ್ತದೆ.
ಈ ಸುದ್ದಿ ಓದಿ:-ಆಸ್ತಿ ವಿಭಾಗದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡದಿದ್ದರೆ ಏನಾಗುತ್ತೆ ಗೊತ್ತ.?
ಜೊತೆಗೆ ಮಹಿಳೆಯರು ತಮ್ಮ ಕೈಯಲ್ಲಿ ಎಷ್ಟು ಬಳೆಗಳನ್ನು ಹಾಕಿಕೊಳ್ಳು ವುದರಿಂದ ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು ಹೀಗೆ ಇನ್ನೂ ಹಲವಾರು ವಿಷಯವಾಗಿ ಸಂಬಂಧಿಸಿದ ಬಹಳಷ್ಟು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯೋಣ.
* ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಎನ್ನುವ ಹೆಸರಿನಿಂದ ಹಲವಾರು ರೀತಿಯ ಉಂಗುರಗಳನ್ನು ಉದ್ದರಿಸಿಕೊಳ್ಳುತ್ತಿರುತ್ತಾರೆ. ಅವುಗಳನ್ನು ಧರಿಸಿಕೊಳ್ಳುವುದರ ಬದಲು ಮೇಲೆ ಹೇಳಿದಂತೆ ದೇವರ ವಿಗ್ರಹವಿರು ವಂತಹ ಉಂಗುರಗಳನ್ನು ಧರಿಸಿಕೊಳ್ಳುವುದು ಉತ್ತಮ ಇದರಿಂದ ಭಗವಂತನ ಅನುಗ್ರಹ ಎನ್ನುವುದು ಸಿಗುತ್ತದೆ.
ಈ ಸುದ್ದಿ ಓದಿ:-ನಮ್ಮ ವಯಸ್ಸು 25 ಆದ ಬಳಿಕ ಈ ನಿಯಮ ಪಾಲಿಸಬೇಕು.!
ಅದೇ ರೀತಿಯಾಗಿ ಕೆಲವೊಂದಷ್ಟು ಜನ ಇಂತಹ ಉಂಗುರಗಳನ್ನು ಮಾಡಿಸಿಕೊಂಡು ತಂದ ತಕ್ಷಣವೇ ಅದನ್ನು ಕೈಗೆ ಧರಿಸಿಕೊಳ್ಳುತ್ತಿರುತ್ತಾರೆ. ಆದರೆ ಯಾವುದೇ ಕಾರಣಕ್ಕೂ ತಂದ ತಕ್ಷಣ ಉಂಗುರವನ್ನು ಧರಿಸಿಕೊಳ್ಳಬಾರದು. ಅದನ್ನು ಶುದ್ಧೀಕರಣ ಮಾಡಿ ಧರಿಸಬೇಕು. ಶುದ್ಧೀಕರಣ ಹೇಗೆ ಮಾಡುವುದು ಎಂದರೆ.
ಅರಿಶಿಣದ ನೀರಿನಲ್ಲಿ ಸ್ವಲ್ಪ ತುಳಸಿ ದಳವನ್ನು ಹಾಕಿ ಅದರಿಂದ ಚಿನ್ನದ ಉಂಗುರಗಳನ್ನು ತೊಳೆಯಬೇಕು ತದನಂತರ ಹಾಲಿನಲ್ಲಿಯೂ ಸಹ ಉಂಗುರ ತೊಳೆಯಬೇಕು ಏಕೆಂದರೆ ಹಾಲಿನಲ್ಲಿ ತಾಯಿ ಲಕ್ಷ್ಮಿ ದೇವಿ ವಾಸ ಇರುತ್ತಾಳೆ ಆದ್ದರಿಂದ ಇದರಿಂದ ತೊಳೆಯುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:-ಮೂರ್ಖ ಪುರುಷರ ಲಕ್ಷಣಗಳು.!
ತದನಂತರ ಶುದ್ಧವಾದ ನೀರಿನಿಂದ ತೊಳೆದು ನಿಮ್ಮ ಹತ್ತಿರ ಇರುವಂತಹ ಯಾವುದಾದರೂ ದೇವಸ್ಥಾನಕ್ಕೆ ಹೋಗಿ ಆ ಒಂದು ದೇವರ ಪಾದದ ಬಳಿ ಆ ಒಂದು ಉಂಗುರವನ್ನು ಇಡಿಸಿ ಆನಂತರ ಅದನ್ನು ಧರಿಸುವುದು ಉತ್ತಮ ಅದರಿಂದ ಒಳ್ಳೆಯ ಶುಭಫಲಗಳನ್ನು ಸಹ ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಹೀಗೆ ಮಾಡಲು ಸಾಧ್ಯವಿಲ್ಲ ಎನ್ನುವವರು ನಿಮ್ಮ ದೇವರ ಮನೆಯಲ್ಲಿ ಇರಿಸಿ ಅದಕ್ಕೆ ಪೂಜೆ ಮಾಡಿ ತದನಂತರ ಧರಿಸುವುದು ಉತ್ತಮ. ಇದರ ಜೊತೆ ದೇವರ ಉಂಗುರವನ್ನು ಹಾಕಿಕೊಂಡು ಮಾಂಸಹಾರ ಸೇವನೆ ಮಾಡಬಾರದು. ಮಾಂಸಹಾರ ಸೇವನೆ ಮಾಡುವಂತಹ ಸಂದರ್ಭದಲ್ಲಿ ಆ ಉಂಗುರ ವನ್ನು ತೆಗೆದು ಆನಂತರ ಶುದ್ಧವಾಗಿ ಸ್ನಾನ ಮಾಡಿ ಆನಂತರ ಉಂಗುರ ವನ್ನು ಧರಿಸಬಹುದು.
ಈ ಸುದ್ದಿ ಓದಿ:-ಫ್ರಿಡ್ಜ್ ಯಾವತ್ತು ಹೊಸದರಂತೆ ಇರುತ್ತೆ ಫ್ರಿಡ್ಜ್ ಯಾವತ್ತು ರಿಪೇರಿಗೆ ಬರಲ್ಲ..!
ಅದೇ ರೀತಿಯಾಗಿ ಮಹಿಳೆಯರು ಕೂಡ ತಮ್ಮ ತಿಂಗಳ ಮುಟ್ಟಿನ ಸಂದರ್ಭದಲ್ಲಿ ಆ ಒಂದು ಉಂಗುರವನ್ನು ತೆಗೆದು ಇಡಬೇಕು ಆ ನಂತರ 5 ದಿನ ಮುಗಿದ ಮೇಲೆ ಉಂಗುರವನ್ನು ಮೇಲೆ ಹೇಳಿದಂತೆ ಶುದ್ಧೀಕರಣ ಮಾಡಿ ಆನಂತರ ಧರಿಸುವುದು ಒಳ್ಳೆಯದು.
* ಅದೇ ರೀತಿಯಾಗಿ ಮಹಿಳೆಯರು ತಮ್ಮ ಕೈಗಳಲ್ಲಿ ಕನಿಷ್ಠಪಕ್ಷ ಎರಡೆರಡು ಬಳೆಗಳನ್ನಾದರೂ ಸಹ ಹಾಕಿಕೊಳ್ಳಬೇಕು ಇನ್ನು ಅತಿ ಹೆಚ್ಚಿನ ಫಲಗಳನ್ನು ಪಡೆದುಕೊಳ್ಳಬೇಕು ಎಂದರೆ ಮಹಿಳೆಯರು ತಮ್ಮ ಕೈಗಳಿಗೆ ಒಂದು ಡಜನ್ ಬಳೆಗಳನ್ನಾದರೂ ಸಹ ಹಾಕಿಕೊಳ್ಳುವುದು ಉತ್ತಮ ಇದರಿಂದ ಇನ್ನೂ ಹೆಚ್ಚಿನ ಫಲಗಳನ್ನು ಪಡೆಯುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.