ಮೇಕಪ್ ನಿಂದ ವಿರೂಪಗೊಂಡ ಮುಖ ಸಂಭ್ರಮದಿಂದ ನಡೆಯಬೇಕಿದ್ದ ವಿವಾಹ ನಿಂತು ಹೋಯ್ತು. ಬ್ಯೂಟಿ ಪಾರ್ಲರ್ ಗೆ ಹೋಗೋ ಮಹಿಳೆಯರೇ ಎಚ್ಚರ.!!
ಮನೆಯಲ್ಲಿ ನಡೆಯುವ ಯಾವುದೇ ಶುಭ ಕಾರ್ಯಕ್ಕೆ ಬಂದಿರುವವರ ಎದುರಲ್ಲಿ ತಾನು ಕೂಡ ಅಂದವಾಗಿ ಕಾಣಬೇಕು ಎಂಬುದು ಎಲ್ಲಾ ಮಹಿಳೆಯರ ಆಸೆ ಆಗಿರುತ್ತದೆ. ಹಸೆ ಮಣೆ ಏರುವ ದಿನದಂದು ಆಕರ್ಷಣೀಯವಾಗಿ ಕಾಣುವ ಹಂಬಲದಿಂದ ಮುಖವನ್ನು ಅಂದಗೊಳಿಸಿಕೊಳ್ಳಲು ಪಾರ್ಲರ್ ಗೆ ಹೋಗಿದ್ದ ಯುವತಿಯ ಮುಖ ವಿರೂಪವಾಗಿದೆ. ವರನ ಕೈ ಹಿಡಿಯಬೇಕಾಗಿದ್ದ ವಧು ದುರ್ಗತಿ ಎಂಬಾಕೆ ಮೇಕಪ್ ಮಾಡಿಸಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾಳೆ. ಹಾಸನದ ಅರಸೀಕೆರೆ ಗ್ರಾಮವು ಇಂತಹದೊಂದು ಘಟನೆಗೆ ಸಾಕ್ಷಿ ಆಗಿದೆ. ಇತ್ತೀಚಿನ ಮದುವೆ ಮನೆಗಳಲ್ಲಿ, ಮಾಂಗಲ್ಯ ಧಾರಣಾಮಂಟಪ…