ವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ 2 ವರ್ಷ ಶಿಕ್ಷೆಗೆ ಗುರಿಯಾಗಿರುವ ನಟಿ ಅಭಿನಯ ಜೈಲು ಸೇರುವ ಭೀತಿಯಿಂದ ತಲೆ ಮರೆಸಿಕೊಂಡಿದ್ದಾರೆ ಅಭಿನಯ & ಕುಟುಂಬಸ್ಥರ ಹುಡುಕಾಟ ನೆಡೆಸುತ್ತಿರುವ ಪೋಲಿಸರು
ಹೋದೆಯ ದೂರ ಓ ಜೊತೆಗಾರ ಎನ್ನುವ ಕನ್ನಡದ ಎವರಿನ್ ಗ್ರೀನ್ ಸಾಂಗ್ ಅಲ್ಲಿ ಅಭಿನಯಿಸಿರುವ ನಟಿ ಅಭಿನಯ ( Abhinaya) ಯಾರಿಗೆ ಗೊತ್ತಿಲ್ಲ ಹೇಳಿ, ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಇವರು ಭಾಗ್ಯವಂತ, ದೇವತಾ ಮನುಷ್ಯ ಮುಂತಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ನಂತರ ತಮ್ಮ 13ನೇ ವಯಸ್ಸಿನಲ್ಲಿ ಕಾಶಿನಾಥ್ ಅವರ ಅನುಭವ (Anubhava) ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡು ನಾಯಕ ನಟಿಯಾಗಿ ಗುರುತಿಸಿಕೊಂಡರು. ಇಲ್ಲಿತ ತನಕವೂ ಪೋಷಕ ಪಾತ್ರಧಾರಿಯಾಗಿ ಮತ್ತು ಇತ್ತೀಚೆಗೆ ಸೀರಿಯಲ್ ಕಲಾವಿದೆಯಾಗಿ ಕನ್ನಡಿಗರನ್ನು ರಂಜಿಸುತ್ತಿದ್ದ ನಟಿ…