ಹೈ BP ಎನ್ನುವುದು ಹಿಂದೆ ವಯೋಸಹಜ ಕಾಯಿಲೆ ಎನ್ನಲಾಗುತ್ತಿತ್ತು. ಆದರೆ ಈಗ 30ರ ಹರೆಯದವರಲ್ಲೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಖಂಡಿತವಾಗಿಯೂ ನಮ್ಮ ಆಹಾರ ಪದ್ಧತಿ ಬದಲಾಗಿರುವುದು ಮತ್ತು ನಮ್ಮ ಜೀವನ ಶೈಲಿಯು ಹದಗೆಟ್ಟಿರುವುದು ಕಾರಣ ಒಂದು ಕಡೆ ಆದರೆ, ಕೆಲವರಿಗೆ ಅನುವಂಶೀಯತೆಯಿಂದ ಎಂದರೆ ತಂದೆ ತಾಯಿಯಿಂದ ಬಳುವಳಿಯಾಗಿ ಬಂದಿರುತ್ತದೆ.
ಕುಟುಂಬದಲ್ಲಿ ಅಜ್ಜಿ-ತಾತನಿಗೆ ಯಾವುದಾದರು ಒಂದು ವಯಸ್ಸಿನಲ್ಲಿ BP ಶುರು ಆಗಿದ್ದರೆ ಅದು ತಂದೆಗೆ ವರ್ಗಾಯಿಸಿ, ತಂದೆಯಿಂದ ಮಕ್ಕಳಿಗೂ ಕೂಡ ಬರುತ್ತದೆ. ಈ ರೀತಿ ಅನುವಂಶಿಯಾಗಿ ಬರುವ BP ಯನ್ನು ತಡೆಯಲು ಸ್ವಲ್ಪ ಕ’ಷ್ಟ. ಆದರೆ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಬಹುದು.
ಆದರೆ ನಮ್ಮದೇ ಸ್ವಯಂಕೃತ್ಯ ಅಪರಾಧಗಳು ಎಂದು ಹೇಳಬಹುದಾದ ಕೆಲವು ಕಾರಣಗಳಿಂದ ಬರುವಂತಹ BP ಯನ್ನು ಕಂಟ್ರೋಲ್ ಮಾಡಲು ಅಥವಾ BP ಬರದೇ ಇರುವಂತೆ ನೋಡಿಕೊಳ್ಳಲು ಕೆಲವು ಟಿಪ್ ಗಳು ಇವೆ, ಅವುಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ. ಮೊದಲಿಗೆ ಯಾವ ಕಾರಣಗಳಿಂದ BP ಬರುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಅದನ್ನು ತಪ್ಪಿಸಿದಾಗ BP ಕಂಟ್ರೋಲ್ ಆಗುತ್ತದೆ.
ಈ ಹಂತದಲ್ಲಿ ನಮ್ಮ ಆಹಾರ ಪದ್ಧತಿ ಬದಲಾಗಿದ್ದಾಗ ಆ ವ್ಯತ್ಯಾಸದಿಂದ BP ಬರಬಹುದು ಅಥವಾ ನಾವು ನಿದ್ದೆ ಮಾಡೋದಕ್ಕೆ ಹಾಕಿಕೊಂಡಿದ್ದ ಪ್ಯಾಟರ್ನ್ ಹೆಚ್ಚು ಕಡಿಮೆ ಆದಾಗ ಆ ಬದಲಾವಣೆಯಿಂದಾಗಿ ಅಥವಾ ಇನ್ನಿತರ ಕಾರಣಗಳಿಂದಾಗಿ ನಿದ್ರೆ ಸಮಯಕ್ಕೆ ವ್ಯತ್ಯಾಸಗಳಾದಾಗ, ಅತಿಯಾದ ಕೆಲಸದ ಒತ್ತಡದಿಂದ ಕೂಡ ಸ್ಟ್ರೆಸ್ ಬರುತ್ತದೆ ಮತ್ತು ದೇಹಕ್ಕೆ ಕೆಲವು ಮೈಕ್ರೋ ನ್ಯೂಟ್ರಿಯೆಂಟ್ಸ್ ಗಳ ಅವಶ್ಯಕತೆ ಇರುತ್ತದೆ ಅವುಗಳ ಕೊರತೆಯಿಂದಲೂ BP ಬರುತ್ತದೆ.
ಪರಿಹಾರಗಳು:-
* ಈ ಮೇಲೆ ತಿಳಿಸಿದಂತೆ ದೇಹಕ್ಕೆ ಮೆಗ್ನೀಷಿಯಂ ಹಾಗೂ ಪೊಟ್ಯಾಶಿಯಂ ನಂತಹ ಮೈಕ್ರೋ ನ್ಯೂಟ್ರಿಯೆಂಟ್ಸ್ ಗಳ ಅವಶ್ಯಕತೆ ಇರುತ್ತದೆ. ಪ್ರತಿನಿತ್ಯ ಕನಿಷ್ಠ 8ಗ್ರಾಂ ನಷ್ಟು ಮೆಗ್ನೇಶಿಯಂ ಹಾಗೂ ಪೊಟ್ಯಾಶಿಯಂ ಸಪ್ಲಿಮೆಂಟ್ ಗಳನ್ನು ಆಹಾರದ ರೂಪದಲ್ಲಿ ತೆಗೆದುಕೊಳ್ಳಬೇಕು.
* ಎಲ್ಲರಿಗೂ ಗೊತ್ತಿದೆ, ಉಪ್ಪನ್ನು ಜಾಸ್ತಿ ಬಳಸುವುದರಿಂದ BP ಹೆಚ್ಚಾಗುತ್ತದೆ ಎಂದು WHO ಪ್ರಕಾರ ಒಬ್ಬ ವ್ಯಕ್ತಿ ಒಂದು ದಿನಕ್ಕೆ 5 ಗ್ರಾಂ ಉಪ್ಪು ಬಳಸಬೇಕು ಆದರೆ ನಾವು ಇಂದು ಅದರ ದುಪ್ಪಟ್ಟು ಹಾಗೂ ಅದಕ್ಕಿಂತ ಹೆಚ್ಚು ಬಳಸುತ್ತಿದ್ದೇವೆ. ಇದನ್ನು ಕಂಟ್ರೋಲ್ ಮಾಡುವುದು ಒಳ್ಳೆಯದು. ಜಂಕ್ ಫುಡ್ ಗಳಲ್ಲಿ ಅವುಗಳ ರುಚಿ ಹೆಚ್ಚಿಸಲು ಅತಿ ಹೆಚ್ಚು ಉಪ್ಪನ್ನು ಬಳಕೆ ಮಾಡಲಾಗಿರುತ್ತದೆ, ಹಾಗಾಗಿ ಅವುಗಳ ಲೇಬಲ್ ನೋಡಿ ಸೋಡಿಯಂ ಕ್ಲೋರೈಡ್ ಹೆಚ್ಚಾಗಿರುವ ಪ್ರಮಾಣದ ಜಂಕ್ ಫುಡ್ ಗಳನ್ನು ಅವಾಯ್ಡ್ ಮಾಡುವುದು ಬಹಳ ಉತ್ತಮ
* ಒತ್ತಡದ ಬದುಕಿನಿಂದ ಸ್ವಲ್ಪ ರಿಲ್ಯಾಕ್ಸ್ ಆಗಿ ನಿಟ್ಟುಸಿರು ಬಿಟ್ಟಾಗ ದೇಹ ಒಂದು ರೀತಿ ರಿಲಾಕ್ಸ್ ಆಗುತ್ತದೆ. ಆ ರೀತಿ ಯಾವುದೇ ಟೆನ್ಶನ್ ನಿಂದ ಒಂದಷ್ಟು ಹೊತ್ತು ಆಚೆ ಬಂದು ಖುಷಿಯಾಗಿ ಇರುವ ಅವಶ್ಯಕತೆ ಇರುತ್ತದೆ. ಅದನ್ನು ನಿಮ್ಮ ಆಸಕ್ತಿಗಳ ಕಡೆ ತೆಗೆದುಕೊಳ್ಳಿ. ಒತ್ತಡದ ಮನಸ್ಸಿನಿಂದ ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಳ್ಳಿ, ಆಗ ಸ್ಟ್ರೆಸ್ ಕಡಿಮೆಯಾಗಿ BP ಬರುವ ಸಾಧ್ಯತೆ ಕಡಿಮೆ ಮತ್ತು BP ಇದ್ದರೆ ಕಂಟ್ರೋಲ್ ಆಗುತ್ತದೆ.
* ದೇಹಕ್ಕೆ ಅವಶ್ಯಕತೆ ಇರುವಷ್ಟು ನಿದ್ರೆಯನ್ನು ತಪ್ಪಿಸಬೇಡಿ, ನಿದ್ದೆ ಕೂಡ ಒಂದು ಔಷಧಿ
* ಇದರೊಂದಿಗೆ ಪ್ರತಿನಿತ್ಯ ಕನಿಷ್ಠ ವ್ಯಾಯಾಮ ಹಾಗೂ ಯೋಗ ಧ್ಯಾನ ದಂತಹ ಅಭ್ಯಾಸಗಳನ್ನು ರೂಡಿಸಿಕೊಳ್ಳಿ. ಇದರಿಂದಲೂ ಕೂಡ BP ಕಂಟ್ರೋಲ್ ಗೆ ಬರುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.