ಈ ಆಹಾರ ತಿನ್ನೊದನ್ನು ಬಿಟ್ರೆ ಮಲಬದ್ಧತೆ ಮಾಯ ಆಗುತ್ತೆ.!

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ಜನರಿಗೆ ಮಲಬದ್ಧತೆಯ ಸಮಸ್ಯೆ ಇದ್ದು ಅದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಹೌದು ನೀವು ಗಮನಿಸಬಹುದು ಬಹಳ ಹಿಂದಿನ ದಿನದಲ್ಲಿ ಈ ರೀತಿಯಾದಂತಹ ಸಮಸ್ಯೆ ಹೆಚ್ಚಾಗಿ ಯಾರಿಗೂ ಸಹ ಕಾಣಿಸಿಕೊಳ್ಳುತ್ತಿರಲಿಲ್ಲ.

ಬದಲಿಗೆ ವಯಸ್ಸಾದವರಿಗೆ 70 ವರ್ಷ 80 ವರ್ಷ ದಾಟಿದ ಜನರಲ್ಲಿ ಕಾಣಿಸಿಕೊಳ್ಳುತ್ತಿತ್ತು ಆದರೆ ಇತ್ತೀಚಿನ ದಿನದಲ್ಲಿ ಕೇವಲ ಚಿಕ್ಕ ಮಕ್ಕಳಿಗೆ ಈ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು ಈ ಒಂದು ಸಮಸ್ಯೆಗೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ಅವರು ತಿಳಿದುಕೊಳ್ಳುವುದಿಲ್ಲ ಹೌದು ಬದಲಿಗೆ ಜೀವನ ಶೈಲಿ ಆಹಾರ ಶೈಲಿಯನ್ನು ಬದಲಾಯಿಸಿಕೊಂಡಿರುತ್ತಾರೆ.

ಆದ್ದರಿಂದಲೇ ಈ ಸಮಸ್ಯೆಗಳು ಇತ್ತೀಚಿನ ದಿನದಲ್ಲಿ ಹೆಚ್ಚಾಗಲು ಪ್ರಾರಂಭವಾಗಿದೆ ಎಂದೇ ಹೇಳಬಹುದು. ಸಾಮಾನ್ಯವಾಗಿ ಪ್ರತಿಯೊಬ್ಬರು ಸಹ ಬಹಳ ಹಿಂದಿನ ದಿನಗಳಲ್ಲಿ ಗಮನಿಸಿರಬಹುದು ಅಂದರೆ ಬಹಳ ಹಿಂದಿನ ಕಾಲದಲ್ಲಿ ಮನೆಗೆ ಯಾರೇ ಒಬ್ಬ ವ್ಯಕ್ತಿ ಬಂದರೆ ಅವರಿಗೆ ಮೊದಲು ಕುಡಿಯುವುದಕ್ಕೆ ನೀರನ್ನು ಕೊಡುತ್ತಿದ್ದರು ಆನಂತರ ಅವರು ಸ್ವಲ್ಪ ಸಮಯ ಸುಧಾರಿಸಿ.

ಆನಂತರ ಅವರು ಒಳ್ಳೆಯ ಆಹಾರ ಪದ್ಧತಿಯನ್ನು ಒಳ್ಳೆಯ ಪೌಷ್ಟಿ ಕಾಂಶ ಭರಿತ ಆಹಾರಗಳನ್ನು ಕೊಡುತ್ತಿದ್ದರು ಹಾಗೂ ಆ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುತ್ತಿ ದ್ದರು. ಅದರಲ್ಲೂ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಮನೆಯಲ್ಲಿ ಕೆಲಸ ಕಾರ್ಯಗಳನ್ನು ಮಾಡುವುದರ ಜೊತೆಗೆ ಹೊಲ ಗದ್ದೆಗಳಿಗೆ ಹೋಗಿ ಕೆಲಸವನ್ನು ಮಾಡುವುದರ ಮೂಲಕ ಹಾಗೂ ಇನ್ನಿತರ ಕೆಲವು ಕೆಲಸ ಕಾರ್ಯಗಳನ್ನು ಮಾಡುವುದರ ಮೂಲಕ ಅವರು ಚುರುಕಾಗಿರುತ್ತಿದ್ದರು.

ಆದ್ದರಿಂದ ಅವರಿಗೆ ಯಾವುದೇ ರೀತಿಯ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತಿರಲಿಲ್ಲ. ಹಾಗೂ ಪುರುಷರು ಕೂಡ ಬೆಳಗಿನ ಸಮಯ ಉತ್ತಮವಾದಂತಹ ಆಹಾರವನ್ನು ಸೇವನೆ ಮಾಡಿ ಹೊಲಗದ್ದೆಗಳಿಗೆ ಹೋಗಿ ಕೆಲಸವನ್ನು ಮಾಡುತ್ತಿದ್ದರು ಹೆಚ್ಚು ಶ್ರಮಪಟ್ಟು ಕೆಲಸ ಮಾಡುತ್ತಿದ್ದರು ಅವರಿಗೆ ಆಗಿನ ಕಾಲದಲ್ಲಿ ಯಾವುದೇ ರೀತಿಯ ಮಂಡಿ ನೋವಿನ ಸಮಸ್ಯೆ ಮಲಬದ್ಧತೆಯ ಸಮಸ್ಯೆಗಳು ಬರುತ್ತಿರಲಿಲ್ಲ.

ಆದರೆ ಇತ್ತೀಚಿನ ದಿನದಲ್ಲಿ ಮನೆಯಲ್ಲಿರುವಂತಹ ಮಹಿಳೆಯರಾಗಿರಬಹುದು ಪುರುಷರಾಗಿರ ಬಹುದು ಅವರಿಗೆ ಯಾವುದೇ ರೀತಿಯ ಹೆಚ್ಚಿನ ಕಷ್ಟಪಡುವಂತಹ ಕೆಲಸಗಳು ಇರುವುದಿಲ್ಲ ಬದಲಿಗೆ ಮನೆಯಲ್ಲಿ ಕೆಲಸ ಮಾಡುವುದಕ್ಕೆ ಎಂದೇ ಕೆಲವೊಂದು ಪದಾರ್ಥಗಳು ಅಂದರೆ ಮಷೀನ್ ಗಳು ಬಂದಿರುವುದರಿಂದ ಆ ಕೆಲಸ ಅವರು ಮಾಡುವುದಿಲ್ಲ ಬದಲಿಗೆ ಅದರಿಂದ ಕೆಲಸವನ್ನು ಮಾಡಿ ಸುಮ್ಮನೆ ಕುಳಿತಿರುತ್ತಾರೆ.

ಆದ್ದರಿಂದ ಅವರಲ್ಲಿ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ ಎಂದು ಹೇಳಬಹುದು. ಅದೇ ರೀತಿಯಾಗಿ ಪುರುಷರಿಗೂ ಸಹ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ಅವರಿಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆ ಗಳು ಅದರಲ್ಲೂ ಮಲಬದ್ಧತೆಯ ಸಮಸ್ಯೆ ಮಂಡಿ ನೋವಿನ ಸಮಸ್ಯೆ ಬೆನ್ನು ನೋವು ಹೀಗೆ ಇನ್ನೂ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಪ್ರತಿನಿತ್ಯ ತಮ್ಮ ದೇಹಕ್ಕೆ ಕೆಲವೊಂದಷ್ಟು ವ್ಯಾಯಾಮವನ್ನು ಮಾಡುವುದು ಒಳ್ಳೆಯದು ಇದರಿಂದ ದೇಹವು ಬಲಿಷ್ಠ ವಾಗುತ್ತದೆ ಜೊತೆಗೆ ದೇಹವು ಎಲ್ಲಾ ಕೆಲಸವನ್ನು ಮಾಡುವುದರಿಂದ ಕ್ರಿಯಾಶೀಲವಾಗಿ ಇರುತ್ತದೆ. ಇದರ ಜೊತೆ ಪ್ರತಿನಿತ್ಯ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಹೆಚ್ಚು ನೀರನ್ನು ಕುಡಿಯುವುದು ಆನಂತರ ಒಬ್ಬ ವ್ಯಕ್ತಿ ದಿನಕ್ಕೆ ಐದರಿಂದ ಆರು ಲೀಟರ್ ನೀರನ್ನು ಕುಡಿಯುವುದು ಕಡ್ಡಾಯ ಹೌದು ಹೆಚ್ಚಿನ ಪ್ರಮಾಣದಲ್ಲಿ ನಾವು ನೀರನ್ನು ಸೇವನೆ ಮಾಡಿದಾಗ ನಮ್ಮ ದೇಹದಲ್ಲಿರುವಂತಹ ಕಲ್ಮಶವೆಲ್ಲವೂ ಸಹ ದೂರವಾಗುತ್ತದೆ.

ಇದರಿಂದ ನಮ್ಮ ಕರುಳು ಸಂಪೂರ್ಣವಾಗಿ ಶುದ್ಧೀಕರಣವಾಗುತ್ತದೆ. ಆದರೆ ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ನೀರನ್ನು ಸೇವಿಸದೇ ಇರುವುದ ರಿಂದ ಈ ಒಂದು ಮಲಬದ್ಧತೆಯ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಬಹುದು. ಇದರ ಜೊತೆಗೆ ಅನಾರೋಗ್ಯವನ್ನು ಉಂಟು ಮಾಡುವಂತಹ ಆಹಾರ ಪದ್ಧತಿ, ಅದರಲ್ಲೂ ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥ ಬೇಕರಿ ತಿನಿಸು, ಬಿಡಿ, ಸಿಗರೇಟ್, ತಂಬಾಕು, ಗುಟ್ಕಾ ಸೇವನೆ ಈ ರೀತಿಯಾದಂತಹ ಕೆಟ್ಟ ಚಟಗಳಿಂದ ಈ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಒಳ್ಳೆಯ ಆಹಾರ ಕ್ರಮವನ್ನು ಒಳ್ಳೆಯ ಜೀವನ ಶೈಲಿಯನ್ನು ಅನುಸರಿಸುವುದರಿಂದ ಯಾವುದೇ ರೀತಿಯ ಸಮಸ್ಯೆ ಬಾರದಂತೆ ನೀವು ತಡೆಗಟ್ಟಬಹುದಾಗಿದೆ.

Leave a Comment