Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಡಾಲಿ ಮಾತನಾಡುತ್ತಿರುವಾಗ ಡಿ ಬಾಸ್, ಡಿ ಬಾಸ್ ಎಂದು ಚೀರಾಡಿದ ಅಭಿಮಾನಿಗಳು ಇದನ್ನು ಕೇಳಿದಂತಹ ನಟ...

ಡಾಲಿ ಮಾತನಾಡುತ್ತಿರುವಾಗ ಡಿ ಬಾಸ್, ಡಿ ಬಾಸ್ ಎಂದು ಚೀರಾಡಿದ ಅಭಿಮಾನಿಗಳು ಇದನ್ನು ಕೇಳಿದಂತಹ ನಟ ಧನಂಜಯ್ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಆಶ್ಚರ್ಯ ಆಗುತ್ತೆ

ಡಾಲಿ ಮಾತು ಕೇಳಿ ಶಾ-ಕ್ ಆದ ಅಭಿಮಾನಿಗಳು

 

ನಟ ಡಾಲಿ ಧನಂಜಯ್(Dali Dananjay) ಅಭಿನಯದ ಜಮಾಲಿಗುಡ್ಡ(Jamaligudda) ಸಿನಿಮಾ ಇದೇ ತಿಂಗಳ 30ನೇ ತಾರೀಕು ಕರ್ನಾಟಕದ ಅತ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಕೂಡ ತೆರೆ ಕಾಣಲಿದೆ ಸದ್ಯಕ್ಕೆ ಧನಂಜಯ್ ಅವರು ಈ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದಲ್ಲಿ ನಟಿ ಅದಿತಿ ಪ್ರಭುದೇವ ಅವರು ನಟಿಸಿದ್ದು ರುಕ್ಮಿಣಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧನಂಜಯ್ ಅವರು ಈ ವರ್ಷ ಸಾಲು ಸಾಲು ಸಿನಿಮಾಗಳನ್ನು ಬಿಡುಗಡೆ ಮಾಡಿದ್ದಾರೆ.

ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿವೆ ಹಾಗಾಗಿ ವರ್ಷದ ಕೊನೆಯಲ್ಲಿ ತೆರೆ ಕಾಣಲಿರುವ ಜಮಾಲಿಗುಡ್ಡ ಸಿನಿಮಾ ಕೂಡ ಪ್ರೇಕ್ಷಕರಿಗೆ ಮನರಂಜನೆ ನೀಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಅಂತಾನೆ ಹೇಳಬಹುದು. ಇನ್ನು ಕಳೆದ ಒಂದು ತಿಂಗಳಿನಿಂದ ಜಮಾಲಿಗುಡ್ಡ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಭಾಗಿಯಾಗಿರುವಂತಹ ಧನಂಜಯ ಅವರು ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ನಡೆದಂತಹ ಇವೆಂಟ್ ಒಂದರಲ್ಲಿ ಪಾಲ್ಗೊಂಡಿದ್ದಾರೆ.

ಈ ಸಮಯದಲ್ಲಿ ಜಮಾಲಿ ಗುಡ್ಡದ ಕಥೆಯ ಬಗ್ಗೆ ಹಾಗೂ ಈ ಸಿನಿಮಾದಲ್ಲಿ ಇರುವಂತಹ ವಿಶೇಷ ಪಾತ್ರಗಳ ಬಗ್ಗೆ ಮಾತನಾಡುತ್ತಿರುವಾಗ ಅಲ್ಲಿ ನೆರದಿದ್ದಂತಹ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಜೋರಾಗಿ ಚಿರಚಾಡಿದ್ದಾರೆ. ಧನಂಜಯ್ ಅವರಿಗೆ ಮಾತನಾಡುವುದಕ್ಕೂ ಕೂಡ ಅವಕಾಶ ಕೊಟ್ಟಿಲ್ಲ ಇದನ್ನು ಕೇಳಿಸಿಕೊಂಡಂತಹ ಧನಂಜಯ ಅವರು ದರ್ಶನ್ ಅಭಿಮಾನಿಗಳಿಗೆ ಹೇಳಿದ್ದೇನು ಎಂಬುದನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ.

ಧನಂಜಯ್ ಮಾತನಾಡುತ್ತಿರುವಂತಹ ಸಂದರ್ಭದಲ್ಲಿ ಡಿ ಬಾಸ್ ಡಿ ಬಾಸ್ ದರ್ಶನ್ ಎಂದು ಕೂಗುತ್ತಿದ್ದಂತಹ ಅಭಿಮಾನಿಗಳ ಮಾತನ್ನು ಕೇಳಿದಂತಹ ಧನಂಜಯ್ ಇನ್ನೂ ಜೋರಾಗಿ ಕಿರಿಕಿ ಇನ್ನೂ ಜೋರಾಗಿ ಡಿ ಬಾಸ್ ಎಂದು ಘೋಷಣೆ ಕೂಗಿ. ಕೇವಲ ಅವರೊಬ್ಬರ ಹೆಸರನ್ನು ಮಾತ್ರವಲ್ಲದೆ ಕನ್ನಡ ಸಿನಿಮಾ ರಂಗದಲ್ಲಿ ಇರುವಂತಹ ಎಲ್ಲಾ ಕಲಾವಿದರ ಹೆಸರನ್ನು ಕೂಗಿ. ನಾವು ಯಾರನ್ನೆಲ್ಲ ನೋಡಿ ಬೆಳೆದಿದ್ದೆವು ಯಾರನ್ನೆಲ್ಲ ನೋಡಿ ಕಲಿತಿದ್ದೆವೋ ಅವರ ಹೆಸರನ್ನೆಲ್ಲ ಜೋರಾಗಿ ಕೂಗಿ ಚಿತ್ರರಂಗ ಇನ್ನು ದೊಡ್ಡದಾಗಿ ಬೆಳೆಯಲಿ ಚಿತ್ರರಂಗದಲ್ಲಿ ಇರುವಂತಹ ಎಲ್ಲಾ ಕುಟುಂಬಸ್ಥರು ಕೂಡ ಒಂದಾಗಲಿ ಎಂದು ಧನಂಜಯ್ ಅವರು ಪ್ರತಿಕ್ರಿಯಿಸಿದ್ದಾರೆ.

ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಧನಂಜಯ್ ಅವರು ಮಾತನಾಡಿದಂತಹ ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಧನಂಜಯ್ ಅವರು ಪ್ರತಿಕ್ರಿಯಿಸಿದ ಬಗೆಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಸಾಮಾನ್ಯವಾಗಿ ಒಬ್ಬ ಕಲಾವಿದ ಅಥವಾ ಒಬ್ಬ ನಟ ಮಾತನಾಡುವಂತಹ ಸಮಯದಲ್ಲಿ ಬೇರೊಬ್ಬ ನಟನ ಹೆಸರನ್ನು ಹೇಳಿದರೆ ಆತನಿಗೆ ಮುಜುಗರವಾಗಬಹುದು. ಅಷ್ಟೇ ಅಲ್ಲದೆ ತಾನು ಏನನ್ನು ಹೇಳಲು ಹೊರಟಿದ್ದಾನೋ ಅದನ್ನು ಹೇಳದೆ ಇರಬಹುದು ಇದರಿಂದ ಬೇಸರವೂ ಕೂಡ ಉಂಟಾಗಬಹುದು.

ಆದರೆ ಧನಂಜಯ್ ಅವರು ಮಾತ್ರ ತಾಳ್ಮೆಯನ್ನು ಕಳೆದುಕೊಳ್ಳದೆ ಅಭಿಮಾನಿಗಳೊಟ್ಟಿಗೆ ಸೇರಿ ಅವರದ್ದೇ ದಾರಿಯಲ್ಲಿ ಅವರಿಗೆ ಬುದ್ಧಿಯನ್ನು ಕಲಿಸಿದ್ದಾರೆ. ಹೌದು ಕಳೆದ ಒಂದು ವಾರದಿಂದ ಎಲ್ಲೇ ನೋಡಿದರೂ ಕೂಡ ದರ್ಶನ್ ಅಭಿಮಾನಿಗಳದ್ದೆ ಕಾರುಬಾರು. ಅದರಲ್ಲಿಯೂ ಕೂಡ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆತ ಬಿದ್ದ ಮೇಲಂತೂ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ ಅಂತ ಹೇಳಬಹುದು. ಅದೇನೇ ಆಗಲಿ ಅವರವರ ಫ್ಯಾನ್ಸ್ ಅವರವರಿಗೆ ಹೆಚ್ಚು ಸದ್ಯಕ್ಕೆ ನಟ ಧನಂಜಯ್ ಅವರು ಪ್ರತಿಕ್ರಿಯಿಸಿದ ಪರಿ ಮಾತ್ರ ಅದ್ಭುತವಾಗಿದೆ. ನೀವು ಕೂಡ ಧನಂಜಯ್ ಮಾತನಾಡಿದಂತಹ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ.