Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಮಿಣಿ ಮಿಣಿ ಮೀನಾಕ್ಷಿ, ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ದಾಸ್ ಅವತಾರ ನೋಡಿ ನಕ್ಕು ನಕ್ಕು...

ಮಿಣಿ ಮಿಣಿ ಮೀನಾಕ್ಷಿ, ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ದಾಸ್ ಅವತಾರ ನೋಡಿ ನಕ್ಕು ನಕ್ಕು ಸುಸ್ತಾದ ಅಭಿಮಾನಿಗಳು, ಮದುವೆ ಆಗಲು ಹುಡುಗ ಬೇಕಂತೆ, ಈ ಫನ್ನಿ ವಿಡಿಯೋ ನೋಡಿ

ಮಿಣಿ ಮಿಣಿ ಮೀನಾಕ್ಷಿ ಅವತಾರಕ್ಕೆ ಫಿದಾ ಆದ ಅಭಿಮಾನಿಗಳು

ಬಿಗ್ ಬಾಸ್ ಮನೆಯಲ್ಲಿ ದಿನದಿನಕ್ಕೆ ಮನರಂಜನೆ ಹಾಗೂ ಕಾಂಪಿಟೇಶನ್ ಜೋರಾಗುತ್ತಿದೆ. ಎಲ್ಲಾ ಸ್ಪರ್ಧಿಗಳು ಸಹ ಒಬ್ಬರಿಗಿಂತ ಒಬ್ಬರು ಮನೆಯಲ್ಲಿ ಉಳಿದುಕೊಳ್ಳಲು ತಮ್ಮಂದ ಆದಷ್ಟು ಶ್ರಮ ಹಾಕುತ್ತಿದ್ದಾರೆ. ಮನೋರಂಜನೆ ವಿಚಾರದಲ್ಲಂತೂ ಇಡೀ ಮನೆಗೆ ಮನೆಯೇ ಎಲ್ಲರನ್ನು ಎಂಟರ್ಟೈನ್ ಮಾಡಲು ಅವಕಾಶಕ್ಕಾಗಿ ಕಾಯುತ್ತಿರುತ್ತದೆ.

ಆರ್ಯವರ್ಧನ್, ಅರುಣ್ ಸಾಗರ್, ರೂಪೇಶ್ ಶೆಟ್ಟಿ ಹಾಗೂ ರೂಪೇಶ್ ರಾಜಣ್ಣ ಅತಿ ಹೆಚ್ಚು ಮನರಂಜನೆ ನೀಡುವ ವ್ಯಕ್ತಿಗಳು ಎಂದು ಬಿಗ್ ಬಾಸ್ ಪ್ರೇಕ್ಷಕರೇ ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರ ಬಗ್ಗೆ ಜನಹೆಚ್ಚು ಮಾತನಾಡುತ್ತಿದ್ದು ಅವರ ಮುಗ್ಧತೆ ಹಾಗೂ ಮಾತುಕತೆಗಳು ಪಂಚಿಂಗ್ ಲೈನ್ ಗಳು ಹಾಗೂ ಕಾಮಿಡಿ ಸೀನ್ಸ್ ಮನೋರಂಜನೆ ಮಹಾಪೂರವನ್ನು ಹರಿಸುತ್ತದೆ ಎಂದು ಹಾಡಿ ಹೊಗಳುತ್ತಿದ್ದಾರೆ.

ಇದೀಗ ಮಹಿಳಾ ಕಂಟೆಸ್ಟೆಂಟ್ ಒಬ್ಬರು ಅದೇ ಸಾಲು ಸೇರುತ್ತಿದ್ದು ಈಗ ಹೊಸ ಅವತಾರದಲ್ಲಿ ಅವರನ್ನು ನೋಡಿ ಪ್ರೇಕ್ಷಕರು ಹಾಗೂ ಮನೆಯಲ್ಲಿದ್ದ ಎಲ್ಲರೂ ಆಶ್ಚರ್ಯ ಹಾಗೂ ಗಾಬರಿಗೊಂಡಿದ್ದಾರೆ. ಈ ಬಾರಿ ಪ್ರವೀಣರ ಪಟ್ಟಿಯಿಂದ ಮನೆ ಸೇರಿದ್ದ ದೀಪಿಕ ದಾಸ್ ಅವರು ತಮ್ಮ ವ್ಯಕ್ತಿತ್ವವನ್ನು ಹಾಗೆ ಉಳಿಸಿಕೊಂಡಿದ್ದರು.

ಕಳೆದ ಸೀಸನ್ ನಲ್ಲಿ ಹೇಗಿದ್ದರೋ ಹಾಗೆ ಈ ಸೀಸನ್ ನಲ್ಲಿ ಸಹ ಅವಶ್ಯಕತೆಗೆ ತಕ್ಕ ಅಷ್ಟೇ ಮಾತು, ವಿವಾದಗಳಾದಾಗ ರಿಸಲ್ಟ್ ಏನೇ ಆದರೂ ನೇರ ಉತ್ತರ, ಟಾಸ್ಕ್ ಗಳಲ್ಲಿ ಅತ್ಯುತ್ತಮ ಪಾಲ್ಗೊಳ್ಳುವಿಕೆ ಹೀಗೆ ಖಡಕ್ ಆಗಿ ಇದ್ದವರು. ಹೆಚ್ಚಾಗಿ ಯಾರೊಂದಿಗೂ ಕೂಡ ಅತಿ ಸಲಿಗೆ ಬಳಸಿಕೊಳ್ಳದ ಇವರು ಎಲ್ಲರ ಜೊತೆ ಒಂದು ಡಿಸ್ಟೆನ್ಸ್ ಮೇಂಟೆನ್ ಮಾಡುತ್ತಿದ್ದರು.

ಆದರೆ ನೆನ್ನೆ ಇವರ ಫರ್ಫಾರ್ಮೆಸ್ ನೋಡಿ ಎಲ್ಲರೂ ನಿಜಕ್ಕೂ ಇದು ದೀಪಿಕಾ ದಾಸ್ ಅವರ ಎಂದು ಅನುಮಾನ ಪಟ್ಟಿದ್ದಾರೆ. ಮನೋರಂಜನೆ ವಿಚಾರದಲ್ಲಿ ದೀಪಿಕಾ ಸ್ವಲ್ಪ ಡಲ್ ಎಂದೆ ಎಲ್ಲರೂ ಭಾವಿಸಿದ್ದರು. ಇದೀಗ ಅರುಣ್ ಸಾಗರ್ ಅವರ ಜೊತೆ ಮಿಣಿ ಮಿಣಿ ಮೀನಾಕ್ಷಿ ಎನ್ನುವ ಅವತಾರ ತೊಟ್ಟಿದ್ದ ದೀಪಿಕಾ ದಾಸ್ ಅವರು ಗುರುತು ಸಿಗದ ರೀತಿ ಹಳ್ಳಿ ಹುಡುಗಿಯ ಮೇಕಪ್ ಮಾಡಿಕೊಂಡಿದ್ದರು.

ಅವರ ಈ ಮೇಕಪ್ ಗೆ ಅರುಣ್ ಸಾಗರ್ ಅವರು ಸಹ ಕೈಜೋಡಿಸಿ ಸಹಾಯ ಮಾಡಿದ್ದು ಅವರಿಗೆ ಮಿಣಿ ಮಿಣಿ ಮೀನಾಕ್ಷಿ ಎಂದು ನಾಮಕರಣ ಕೂಡ ಮಾಡಿದರು. ಅರುಣ್ ಸಾಗರ್ ಮಿಣಿ ಮಿಣಿ ಮೀನಾಕ್ಷಿ ನನ್ನ ತಂಗಿ ಮದುವೆ ಆಗಲು ಹುಡುಗ ಹುಡುಕುತ್ತಿದ್ದೇವೆ ಎಂದು ಮನೆ ಪೂರ್ತಿ ಹೇಳಿಕೊಂಡು ಓಡಾಡಿದ್ದಾರೆ. ಅಲ್ಲದೆ ಯಾರಾದರೂ ಮದುವೆ ಆಗಬೇಕು ಅನ್ನಿಸಿದರೆ ಸಂಪರ್ಕಿಸಬೇಕು ಎಂದು ಕೇಳಿದ್ದಾರೆ.

ದೀಪಿಕಾ ದಾಸ್ ಅವರನ್ನು ನೋಡಿ ಎಲ್ಲರೂ ಸಹ ಶಾಕ್ ಆಗಿದ್ದು ಮೊದಲಿಗೆ ಯಾರು ಯಾರು ಎಂದು ಅವರೇ ಕನ್ಫ್ಯೂಸ್ ಆಗಿದ್ದಾರೆ. ಎಲ್ಲರೂ ಸಹ ಮದುವೆ ಆಗುತ್ತೇವೆ ಎಂದು ಮುಂದೆ ಬಂದಿದ್ದಾರೆ ಅವರಿಗೆ ದೀಪಿಕಾ ಅವರು ಕೆಲವು ಪ್ರಶ್ನೆಗಳನ್ನು ಸಹ ಕೇಳಿದ್ದಾರೆ. ಆರ್ಯವರ್ಧನ್ ಅವರ ದೊಡ್ಡ ಚಿನ್ನದ ಸರ ನೋಡಿ ಅಣ್ಣಯ್ಯನಿಗೆ ಅದನ್ನು ಕೊಡ್ತಾರಾ ಕೇಳಿ ಎಂದು ಹೇಳುತ್ತಾರೆ. ಅದನ್ನು ಕೇಳಿಸಿಕೊಂಡ ಆರ್ಯವರ್ಧನ್ ಬರೀ ಚಿನ್ನ ಏನು ನಿನಗಾಗಿ ಮನಸೇ ಕೊಡುತ್ತೇನೆ ಎಂದು ಕೇಳಿದ್ದಾರೆ.

ನಿಜಕ್ಕೂ ನೆನ್ನೆ ದೀಪಿಕಾ ದಾಸ್ ಅವರ ಹಾವಭಾವ ಮಾತು ವೇಷಭೂಷಣ ಎಲ್ಲವೂ ವಿಭಿನ್ನವಾಗಿ ಇದ್ದಿದ್ದಲ್ಲದೆ ಸಾಕಷ್ಟು ಜನರ ಮೆಚ್ಚುಗೆಗೂ ಪಾತ್ರವಾಗಿದೆ ಹೊರಗಡೆ ಜನ ಸಹ ದೀಪಿಕಾ ಅವರಿಗೆ ಈಗ ಸರಿಯಾಗಿ ಬಿಗ್ ಬಾಸ್ ಅರ್ಥ ಆಗಿದೆ ಅನಿಸುತ್ತದೆ ಎಂದು ಮಾತನಾಡುವುದಲ್ಲದೆ ಇದೇ ರೀತಿ ಇದ್ದರೆ ಈ ಬಾರಿ ದೀಪಿಕಾ ಅವರೇ ವಿನ್ನರ್ ಎಂದು ಸಹ ಭವಿಷ್ಯ ಹೇಳುತ್ತಿದ್ದಾರೆ.