Sunday, June 4, 2023
HomeEntertainmentದೀಪಿಕಾ ದಾಸ್ ಸೌಂದರ್ಯಕ್ಕೆ ಮಾರು ಹೋಗಿ ಬಿಗ್ ಆಫರ್ ಕೊಟ್ಟ ಆರ್ಯವರ್ಧನ್ ಗುರೂಜಿ, ಏನದು ಗೊತ್ತ.?

ದೀಪಿಕಾ ದಾಸ್ ಸೌಂದರ್ಯಕ್ಕೆ ಮಾರು ಹೋಗಿ ಬಿಗ್ ಆಫರ್ ಕೊಟ್ಟ ಆರ್ಯವರ್ಧನ್ ಗುರೂಜಿ, ಏನದು ಗೊತ್ತ.?

ದೀಪಿಕಾ ದಾಸ್ ನಿಜವಾದ ಟ್ಯಾಲೆಂಟ್‌ ಈ ವಿಡಿಯೋದಲ್ಲಿದೆ ನೋಡಿ

ಬಿಗ್ ಬಾಸ್ ಇನ್ನೇನು ಮುಕ್ತಾಯ ಹಂತಕ್ಕೆ ಬರುತ್ತಿದ್ದ ಹಾಗೆ ಮನೆಯಲ್ಲಿ ಇರುವಂತಹ ಸದಸ್ಯರೆಲ್ಲರೂ ಕೂಡ ತಾ ಮುಂದು ನಾ ಮುಂದು ಎಂದು ಎಂಟರ್ಟೈನ್ಮೆಂಟ್ ಕೊಡುವುದಕ್ಕೆ ಮುಂದಾಗಿದ್ದಾರೆ. ಮೊದಲ ವಾರದಿಂದ ಹಿಡಿದು ಇಲ್ಲಿಯವರೆಗೂ ಕೂಡ ಆರ್ಯವರ್ಧನ್ ಗುರೂಜಿ ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಸ್ಟೇಟ್ಮೆಂಟ್ ಕೊಡುವ ಮೂಲಕ ಜನರಿಗೆ ಮನರಂಜನೆಯನ್ನು ನೀಡುತ್ತಲೇ ಬಂದಿದ್ದರು.

ಆದರೆ ದೀಪಿಕಾ ದಾಸ್ ಬರುವ ಮಾತ್ರ ಟಾಸ್ಕ್ ಗಳನ್ನು ಬಿಟ್ಟರೆ ಅದರ ಹೊರತಾಗಿ ಯಾವುದೇ ಮನರಂಜನ ಕ್ಷೇತ್ರದಲ್ಲಿಯೂ ಕೂಡ ಮೀಸಲಾಗಿರಲಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಅಂತ ಇದ್ದರಹ, ಆದರೆ ಈ ಬಾರಿ ಜನರಿಗೆ ಮನರಂಜನೆ ನೀಡಬೇಕು ಎಂಬ ಉದ್ದೇಶದಿಂದಲೇ ಸಿಕ್ಕಾಪಟ್ಟೆ ಕ್ರಿಯೇಟಿವ್ ಆಗಿ ಪಾತ್ರ ಒಂದನ್ನು ಮಾಡಿದ್ದಾರೆ ಸದ್ಯಕ್ಕೆ ದೀಪಿಕಾ ದಾಸ್ ಮಾಡಿರುವ ಪಾತ್ರವನ್ನು ನೋಡಿ ಎಲ್ಲರೂ ಕೂಡ ಹುಬ್ಬೇರಿಸಿದ್ದಾರೆ.

ಏಕೆಂದರೆ ಯಾವಾಗಲೂ ಕೂಡ ಸ್ಟ್ರೈಟ್ ಫಾರ್ವರ್ಡ್ ಆಗಿ ಮಾತನಾಡುವ ದೀಪಿಕಾ ದಾಸ್ ಲೇಡಿ ಬಾಂಡ್ ಅಂತಾನೆ ಹೇಳಬಹುದು ಯಾವಾಗಲೂ ಗಾಂಭೀರ್ಯದಿಂದ ಇರುತ್ತಾರೆ. ಅವಶ್ಯಕತೆ ಇದ್ದಷ್ಟು ಮಾತ್ರ ಮಾತನಾಡುತ್ತಾರೆ ಅದನ್ನು ಬಿಟ್ಟರೆ ಬಹಳ ಸೈಲೆಂಟಾಗಿ ಇರುತ್ತಾರೆ. ಟಾಸ್ಕ್ ವಿಚಾರದಲ್ಲಿ ಇವರು ಚೆನ್ನಾಗಿಯೇ ಆಟಗಳನ್ನು ಆಡಿದರೂ ಕೂಡ ಮನರಂಜನೆ ವಿಚಾರದಲ್ಲಿ ಎಲ್ಲೋ ಸ್ವಲ್ಪ ಕಳೆದು ಹೋಗಿದ್ದಾರೆ ಅಥವಾ ಎಡವಿದ್ದಾರೆ ಅಂತ ಹೇಳಬಹುದು.

ಹಾಗಾಗಿ ದೀಪಿಕಾ ದಾಸ್ ಅವರು ಇನ್ನೇನು ಬಿಗ್ ಬಾಸ್ ಫಿನಾಲೆ ಹತ್ತಿರ ಬರುತ್ತಿದ್ದ ಹಾಗೆ ತಮ್ಮ ಆಟದ ವರ್ಚಸ್ಸನ್ನು ಬದಲಾಯಿಸಿದ್ದಾರೆ. ಹೌದು ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದಾಗಿ ಹೊಸದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಕ್ರಿಯೇಟಿವಿಟಿ ಪರ್ಸನ್ ಅಂದರೆ ಅದು ಅರುಣ್ ಸಾಗರ್ ಅಂತಾನೆ ಹೇಳಬಹುದು. ಅರುಣ್ ಸಾಗರ್ ಅವರ ಸಾರಥ್ಯದಲ್ಲಿ ದೀಪಿಕಾ ದಾಸ್ ಅವರು ಮಿಣಿ ಮಿಣಿ ಮೀನಾಕ್ಷಿ ಎಂಬ ಹೊಸ ಹೆಸರಿನ ಮೂಲಕ ಇನ್ನೆಂದು ಕಾಣದ ರೀತಿಯ ವಿಭಿನ್ನ ರೀತಿಯ ವೇಷ ಭೂಷಣವನ್ನು ಧರಿಸಿದ್ದಾರೆ.

ಕಣ್ಣಿಗೆ ಸೋಡಾ ಕನ್ನಡಕ ಹಾಕಿಕೊಂಡು ಹಲ್ಲನ್ನು ಹುಬ್ಬು ಮಾಡಿಕೊಂಡು ಇಳಿಕಲ್ ಸೀರೆ ಉಟ್ಟಿಕೊಂಡು ನೋಡುವುದಕ್ಕೆ ಪಕ್ಕ ಹಳ್ಳಿ ಸೊಗಡಿನ ಹುಡುಗಿಯಂತೆ ಕಾಣುತ್ತಾರೆ. ಅವರ ನಡೆ-ನುಡಿ ಎಲ್ಲವೂ ಕೂಡ ಬದಲಾಗಿದೆ ಮೊದ ಮೊದಲು ಇವರನ್ನು ನೋಡಿದಂತಹ ಮನೆ ಮಂದಿಯೇ ದೀಪಿಕಾ ದಾಸ್ ಅವರನ್ನು ಗುರುತು ಹಿಡಿಯುವುದಕ್ಕೆ ಸಾಧ್ಯವಾಗುವುದಿಲ್ಲ ಅಷ್ಟರ ಮಟ್ಟಿಗೆ ಇವರು ತಮ್ಮ ವೇಷವನ್ನು ಬದಲಿಸಿಕೊಂಡಿರುತ್ತಾರೆ.

ಅರುಣ್ ಸಾಗರ್ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡ ದೀಪಿಕಾ ದಾಸ್ ಮಿಣಿ ಮಿಣಿ ಮೀನಾಕ್ಷಿ ನಾನು ಹಳ್ಳಿಯಿಂದ ಬಂದಿದ್ದೇನೆ ಮದುವೆಯಾಗುವುದಕ್ಕೆ ಒಬ್ಬ ವರ ಬೇಕು ಎಂದು ಹೇಳುತ್ತಾರೆ. ಇದೇ ಸಮಯದಲ್ಲಿ ಆರ್ಯವರ್ಧನ್ ಗುರೂಜಿ ಹಾಗೂ ರೂಪೇಶ್ ಶೆಟ್ಟಿ ಇಬ್ಬರ ನಡುವೆ ಕಾಂಪಿಟೇಶನ್ ಬರುತ್ತದೆ. ಮಂಗಳೂರಿನ ಭಾಷೆಯನ್ನು ಹಾಡುವ ಮೂಲಕ ಮಿಣಿ ಮಿಣಿ ಮೀನಾಕ್ಷಿಯನ್ನು ಇಂಪ್ರೆಸ್ ಮಾಡುತ್ತಾರೆ.

ಒಟ್ಟಿನಲ್ಲಿ ದೀಪಿಕಾ, ಅರುಣ್, ರೂಪೇಶ್ ಶೆಟ್ಟಿ, ರಾಜಣ್ಣ, ರಾಕೇಶ್ ಅವರು ಈ ಡ್ರಾಮಾದಲ್ಲಿ ಭಾಗಿಯಾಗಿ ಎಲ್ಲರನ್ನು ನಕ್ಕು ನಗಿಸಿದ್ದಾರೆ. ಕತ್ತಿನಲ್ಲಿರುವ ಚೈನ್ ಕೊಟ್ಟರೆ ಗುರೂಜಿಯನ್ನು ಮದುವೆಯಾಗ್ತೀನಿ ಎಂದು ಮಿಣಿ ಮಿಣಿ ಮೀನಾಕ್ಷಿ ಹೇಳಿದಾಗ, ಗುರೂಜಿ ಅವರು, ಕತ್ತಲ್ಲಿರುವ ಚೈನ್ ಕೊಡ್ತೀನಿ, ಬಾಡಿಲಿರೋ ಮನಸು ಕೊಡ್ತೀನಿ ಎಂದಿದ್ದಾರೆ. ದೀಪಿಕಾ, ಗುರೂಜಿ ರಾಜ ರಾಜ. ಎನ್ನುವ ಹಾಡಿಗೆ ಡ್ಯುಯೆಟ್ ಹಾಡಿದ್ದಾರೆ. ಅಂತೂ ಇಂತೂ ಈ ಸಂದರ್ಭ ಮನೆಯವರಿಗೆ, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಕೊಟ್ಟಿದೆ.

ನೀವು ಕೂಡ ಒಮ್ಮೆ ದೀಪಿಕಾ ದಾಸ್ ಅವರು ಅಭಿನಯಿಸಿರುವಂತಹ ಈ ಅದ್ಭುತ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ಹಾಗೂ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗಬಹುದು ಎಂಬುದನ್ನು ತಿಳಿಸಿ.