Home Health Tips ಅನ್ನ ತಿಂದರೆ ಡಯಾಬಿಟಿಸ್, ಕೊಲೆಸ್ಟ್ರಾಲ್, ಬೊಜ್ಜು, ತೂಕ ಜಾಸ್ತಿ ಆಗುತ್ತಾ.? ವೈದ್ಯರು ಹೇಳಿದ್ದು ಒಮ್ಮೆ ಕೇಳಿ.!

ಅನ್ನ ತಿಂದರೆ ಡಯಾಬಿಟಿಸ್, ಕೊಲೆಸ್ಟ್ರಾಲ್, ಬೊಜ್ಜು, ತೂಕ ಜಾಸ್ತಿ ಆಗುತ್ತಾ.? ವೈದ್ಯರು ಹೇಳಿದ್ದು ಒಮ್ಮೆ ಕೇಳಿ.!

0
ಅನ್ನ ತಿಂದರೆ ಡಯಾಬಿಟಿಸ್, ಕೊಲೆಸ್ಟ್ರಾಲ್, ಬೊಜ್ಜು, ತೂಕ ಜಾಸ್ತಿ ಆಗುತ್ತಾ.? ವೈದ್ಯರು ಹೇಳಿದ್ದು ಒಮ್ಮೆ ಕೇಳಿ.!

 

ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನ ಅನ್ನವನ್ನು ತಿಂದರೆ ಕೊಲೆ ಸ್ಟ್ರಾಲ್ ಬೊಜ್ಜು ದೇಹದ ತೂಕ ಹೆಚ್ಚಾಗುತ್ತದೆ ಎನ್ನುವಂತಹ ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಆದರೆ ಅದು ತಪ್ಪು ಅನ್ನ ಸುಖ ಧಾನ್ಯ ವರ್ಗದಲ್ಲಿ ಸೇರುವಂತಹ ಒಂದು ವಿಶೇಷವಾದ ಆಹಾರ ಎಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ.

ಆದರೆ ಮೊದಲೇ ಹೇಳಿದಂತೆ ಕೆಲವೊಂದಷ್ಟು ಜನ ಅನ್ನವನ್ನು ತಿನ್ನುವುದರಿಂದ ದೇಹದಲ್ಲಿ ಹಲವಾರು ರೀತಿಯ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಡಯಾಬಿಟಿಸ್ ಹೀಗೆ ಇನ್ನೂ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎಂದು ಹೇಳುತ್ತಿರುತ್ತಾರೆ. ಆದರೆ ನಾವು ಅನ್ನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡರೆ ಅದರ ಒಂದು ಮಹತ್ವ ನಮಗೆ ತಿಳಿಯುತ್ತದೆ.

ಅದರ ಬದಲು ಬೇರೆ ಯಾರೋ ಹೇಳಿದ ಮಾತನ್ನು ಕೇಳಿಕೊಂಡು ಅದರ ಬಗ್ಗೆ ಅಸಡ್ಡೆ ಮಾಡುವುದು ಬಹಳ ತಪ್ಪು ಅನ್ನದಲ್ಲಿ ಬಹಳ ಸುಲಭವಾಗಿ ಜೀರ್ಣವಾಗುವಂತಹ ಅಂಶಗಳು ಇದೆ. ಆದ್ದರಿಂದ ನಾವು ಅನ್ನವನ್ನು ತಿನ್ನುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಕ್ರಮ ಬದ್ಧವಾಗಿರುತ್ತದೆ. ಮಲಬದ್ಧತೆಯ ಸಮಸ್ಯೆ ಬರುವುದಿಲ್ಲ.

ಈ ಸುದ್ದಿ ಓದಿ:- ಈ ಕ್ಷೇತ್ರದಲ್ಲಿ ತಾಳೆಗರಿಯ ಶಾಸ್ತ್ರ ಇದೆ.! ನಿಮ್ಮ ಮುಂದಿನ ಭವಿಷ್ಯದ‌ ಬಗ್ಗೆ ಆಸಕ್ತಿ ಇದ್ದರೆ ಇದನ್ನು ನೋಡಿ.!

ಯಾರ ದೇಹದ ಜೀರ್ಣಾಂಗ ವ್ಯವಸ್ಥೆ ಕ್ರಮಬದ್ಧವಾಗಿರುತ್ತದೆ, ಮಲಬದ್ಧತೆಯ ಸಮಸ್ಯೆ ಇರುವುದಿಲ್ಲ ಅಂಥವರಿಗೆ ಯಾವುದೇ ರೋಗಗಳು ಬರುವುದಿಲ್ಲ. ಆಯುರ್ವೇದ ಗ್ರಂಥಗಳಲ್ಲಿ ಬಹಳ ಮುಖ್ಯವಾಗಿ ಇದೊಂದು ಸುಖ ಧಾನ್ಯ ಎಂಬ ಹೆಸರನ್ನು ಇಟ್ಟಿದ್ದಾರೆ.

ಹಾಗಾದರೆ ಈ ದಿನ ಅಕ್ಕಿಯ ವಿಚಾರವಾಗಿ ನಾವು ಯಾವ ರೀತಿಯ ಅಕ್ಕಿಯನ್ನು ಉಪಯೋಗಿಸುವು ದರಿಂದ ನಮಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ ಯಾವ ರೀತಿಯ ಅಕ್ಕಿಯನ್ನು ಉಪಯೋಗಿಸುವುದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.

ಸಾಮಾನ್ಯವಾಗಿ ಎಲ್ಲರೂ ಕೂಡ ಇತ್ತೀಚಿನ ದಿನದಲ್ಲಿ ಹೆಚ್ಚು ಪಾಲಿಶ್ ಆಗಿರುವಂತಹ ಬಿಳಿ ಬಣ್ಣ ಇರುವಂತಹ ಅಕ್ಕಿಯನ್ನು ಉಪಯೋಗಿಸು ತ್ತಾರೆ. ಆದರೆ ಈ ಅಕ್ಕಿಯಲ್ಲಿ ಯಾವುದೇ ರೀತಿಯಾದಂತಹ ಫೈಬರ್ ಅಂಶ ಇರುವುದಿಲ್ಲ ಆದರೆ ಪಾಲಿಶ್ ಆಗದೆ ಇರುವಂತಹ ಅಕ್ಕಿಯನ್ನು ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು ಹಾಗೂ ಅದರಲ್ಲಿ ನಮಗೆ ಫೈಬರ್ ಅಂಶ ಯಥೇಚ್ಛವಾಗಿ ಸಿಗುತ್ತದೆ.

ಈ ಸುದ್ದಿ ಓದಿ:- ರಾಜ್ಯದ ಎಲ್ಲಾ ರೇಷನ್ ಕಾರ್ಡ್ ರದ್ದು.! ಹೊಸ ರೂಲ್ಸ್ ಜಾರಿ.!

ಇದರ ಜೊತೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮಾಹಿತಿ ಏನೆಂದರೆ ಅಕ್ಕಿಯನ್ನು ನೇರವಾಗಿ ಕುಕ್ಕರ್ ಒಳಗೆ ಬೇಯಿಸಬಾರದು ಬದಲಿಗೆ ಮಣ್ಣಿನ ಪಾತ್ರೆ ಸ್ಟೀಲ್ ಪಾತ್ರೆಯಲ್ಲಿ ಅನ್ನವನ್ನು ಮಾಡುವುದ ರಿಂದ ಅಥವಾ ಬಸಿಯುವುದರ ಮೂಲಕ ಈ ರೀತಿ ಮಾಡಿಕೊಂಡು ಅನ್ನವನ್ನು ಸೇವನೆ ಮಾಡಬೇಕು ಇದರಿಂದ ಅದರಲ್ಲಿರುವಂತಹ ಅಂಶ ಹೋಗುವುದಿಲ್ಲ.

ಆಯುರ್ವೇದದಲ್ಲಿ ರಾತ್ರಿ ವೇಳೆ ಲಘು ಆಹಾರ ಸೇವನೆ ಮಾಡಬೇಕು ಎಂದು ಹೇಳುತ್ತಾರೆ ಲಘು ಆಹಾರದಲ್ಲಿ ಈ ಅಕ್ಕಿ ಕೂಡ ಒಂದು ಇದನ್ನು ಸೇವನೆ ಮಾಡಿದರೆ ನಾವು ತಿಂದಂತಹ ಆಹಾರ ಸರಾಗವಾಗಿ ಜೀರ್ಣವಾಗುತ್ತದೆ. ಹಾಗೇನಾದರೂ ಜೀರ್ಣವಾಗದೆ ಇರುವಂತಹ ಆಹಾರವನ್ನು ಸೇವನೆ ಮಾಡಿದರೆ ನಾವು ತಿಂದಂತಹ ಆಹಾರ ಜೀರ್ಣ ವಾಗುವುದಿಲ್ಲ ಅದು ವಾತ ಪಿತ್ತ ಕಫ ಜವ್ಯಾದಿಗಳಿಗೆ ಬಹಳ ಪ್ರಮುಖವಾದ ಕಾರಣವಾಗುತ್ತದೆ.

ಈ ಸುದ್ದಿ ಓದಿ:- ಎಲ್ಲಾ ರೈತರಿಗೆ ಗುಡ್ ನ್ಯೂಸ್, ತಂದೆ, ತಾತ, ಮುತ್ತಾತನ ಹೆಸರಿನಲ್ಲಿ ಜಮೀನು ಇದ್ದರೆ ನಿಮ್ಮ ಹೆಸರಿಗೆ ಜಮೀನು ಮಾಡಿಕೊಳ್ಳಿ.! ಪಹಣಿ ತಿದ್ದುಪಡಿ ಕಂದಾಯ ಅದಾಲತ್‌ ಜಾರಿ……||

ಆದ್ದರಿಂದ ಇಂತಹ ಲಘು ಆಹಾರವನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು. ಹೀಗೆ ನಾವು ರಾತ್ರಿ ಸಮಯ ಲಘುವಾಗಿ ಅನ್ನ ತಿಳಿ ಬೇಳೆ ಸಾಂಬಾರ್ ತಿಂದರೆ ಅದು ನಮಗೆ ಅಮೃತಕ್ಕೆ ಸಮಾನ ಎಂದು ಆಯುರ್ವೇದ ತಿಳಿಸುತ್ತದೆ. ಹೀಗೆ ಸೇವನೆ ಮಾಡುವುದರಿಂದ ಫೈಬರ್, ಪ್ರೋಟೀನ್, ಕಾರ್ಬೋಹೈಡ್ರೇಟ್, ವಿಟಮಿನ್ ಹೀಗೆ ಇನ್ನೂ ಹಲವಾರು ರೀತಿಯ ಪೋಷಕಾಂಶಗಳು ನಮಗೆ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/at0ywf-eXdo?si=8867-IThuz1TKyEL

LEAVE A REPLY

Please enter your comment!
Please enter your name here