* ಪಲ್ಯ ಪದಾರ್ಥಗಳ ಸಾರಿನಲ್ಲಿ ಮೆಣಸಿನ ಅಂಶ ಹೆಚ್ಚಾಗಿದ್ದಲ್ಲಿ ಸ್ವಲ್ಪ ಟೊಮೆಟೊ ಗೊಜ್ಜು ಅಥವಾ ಕತ್ತರಿಸಿದ ಟೊಮೆಟೊಗಳನ್ನು ಅಥವಾ ನಿಂಬೆರಸ ಅಥವಾ ಸ್ವಲ್ಪ ಸಕ್ಕರೆ ಸೇರಿಸಿದರೆ ಸಾರಿನ ಖಾರ ಬೇಗನೆ ಕಡಿಮೆಯಾಗುವುದು. ಪದಾರ್ಥ ಪಲ್ಯಗಳ ಸಾರುಗಳು ಪದಾರ್ಥದ ಸಾರನ್ನು ದಪ್ಪಗೊಳಿಸಲು ಅದಕ್ಕೆ ಕಾಳುಹಿಟ್ಟು ಅಥವಾ ಕಡ್ಲೆಹಿಟ್ಟನ್ನು ಸೇರಿಸಿದರೆ ಸಾರಿನ ರುಚಿಯು ನಾಶವಾಗಬಹುದು. ಇದರ ಬದಲಾಗಿ ಇನ್ನೂ ಸ್ವಲ್ಪ ತೆಂಗಿನ ಕಾಯಿಯ ಹಾಲು ಅಥವಾ ತೆಂಗಿನಕಾಯಿಯನ್ನು ಅರೆದು ತಯಾರಿಸಿದ ಪಿಷ್ಟವನ್ನು ಸೇರಿಸಿದರೆ ಅದರ ರುಚಿ ಉತ್ತಮವಾಗುವುದು.
ಈ ಸುದ್ದಿ ನೋಡಿ:- ಈ ಕ್ಷೇತ್ರದಲ್ಲಿ ತಾಳೆಗರಿಯ ಶಾಸ್ತ್ರ ಇದೆ.! ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ಆಸಕ್ತಿ ಇದ್ದರೆ ಇದನ್ನು ನೋಡಿ.!
* ಪಲ್ಯ ಪದಾರ್ಥದ ಸಾರಿನಲ್ಲಿ ಉಪ್ಪು ಹೆಚ್ಚಾಗಿದ್ದಲ್ಲಿ ಸ್ವಲ್ಪ ನೀರನ್ನು ಕುದಿಸಿ ಅದಕ್ಕೆ ಒಂದು ಚಮಚದಷ್ಟು ಮೈದಾ ಹಿಟ್ಟು ಸೇರಿಸಿ ಚೆನ್ನಾಗಿ ಕದಡಿ ಒಂದಿಷ್ಟು ಖೋವಾವನ್ನು ಅದರ ಮೇಲಕ್ಕೆ ಹಾರಿಸಿ ಅದು ಬೇಯಿಸಿದ ನಂತರ ಅದನ್ನು ಪಲ್ಯ ಪದಾರ್ಥದ ಸಾರಿಗೆ ಸೇರಿಸಬೇಕು. ಆನಂತರ ಹೆಚ್ಚಾಗಿರುವ ನಂತರ ಸಮತೂಕಗೊಳ್ಳುವುದು.
* ಪಲ್ಯ ಪದಾರ್ಥಗಳು ಸಾರು ತಯಾರಿಸಲು ಮಸಾಲೆಯನ್ನು ಅರೆದಿಟ್ಟ ಪಿಷ್ಟದ ಜೊತೆಗೆ ಮಸಾಲೆ ಉಡಿಯನ್ನು ಕೂಡಾ ಸೇರಿಸಿದರೆ ಇನ್ನೂ ಉತ್ತಮವಾಗುವುದು.
* ಪಲ್ಯದ ಸಾರಿನಲ್ಲಿ ಉಪ್ಪು ಹೆಚ್ಚಾದರೆ ಒಂದೆರಡು ಆಲೂಗಡ್ಡೆಗಳನ್ನು (ಬಟಾಟೆಗಳನ್ನು) ಆ ಸಾರಿನೊಳಗೆ ಹಾಕಿ ಕುದಿಸಿರಿ.
* ಆ ಮೇಲೆ ಬಟಾಟೆಗಳನ್ನು ಹೊರ ತೆಗೆಯಬಹುದು. ಅಥವಾ ಅದರಲ್ಲೇ ಬಿಟ್ಟುಬಿಡಬಹುದು.
ಈ ಸುದ್ದಿ ನೋಡಿ:- ರಾಜ್ಯದ ಎಲ್ಲಾ ರೇಷನ್ ಕಾರ್ಡ್ ರದ್ದು.! ಹೊಸ ರೂಲ್ಸ್ ಜಾರಿ.!
* ಪಲ್ಯ ಪದಾರ್ಥಗಳ ಸಾರು ಇನ್ನಷ್ಟು ರುಚಿಕರವಾಗಿಯೂ ಒಳ್ಳೇ ಬಣ್ಣವುಳ್ಳದ್ದಾಗಿಯೂ ಇರಬೇಕಾದರೆ ಮಸಾಲೆ ಹುರಿದ ನಂತರ ಹಣ್ಣಾಗಿರುವ ಮತ್ತು ಕೆಂಪು ಬಣ್ಣದ ಟೊಮೆಟೊಗಳ ಸಿಪ್ಪೆ ಸುಲಿದು ಕತ್ತರಿಸಿ ಸಾರಿಗೆ ಸೇರಿಸಬೇಕು. ಇದರಿಂದಾಗಿ ಆ ಸಾರು ಬಹಳ ದಪ್ಪವಾಗುತ್ತದೆ.
* ಪಲ್ಯ ಪದಾರ್ಥಗಳ ಸಾರು ಇತ್ಯಾದಿಗಳ ಮೇಲೆ ಒಂದಿಷ್ಟು ನಿಂಬೆರಸವನ್ನು ಸಿಂಪಡಿಸಿದರೆ ಪ್ರತ್ಯೇಕವಾದೊಂದು ಸುವಾಸನೆ ಉಂಟಾಗುತ್ತದೆ ಯಾವುದೇ ಅಡುಗೆಯ ಸಿಹಿ ಹೆಚ್ಚಾಗಿದ್ದರೆ ಕೆಲವಷ್ಟು ತೊಟ್ಟು ನಿಂಬೆರಸ ವನ್ನು ಸೇರಿಸಿ ಅದನ್ನು ತತ್ ಕ್ಷಣವೇ ಸರಿಪಡಿಸಬಹುದು.
ಈ ಸುದ್ದಿ ನೋಡಿ:- ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ಕಿಡ್ನಿ ಹಾಳಾಗಿದೆ ಎಂದರ್ಥ ಎಚ್ಚರ.!
* ಅಡುಗೆ ಪದಾರ್ಥ ಪಲ್ಯಗಳಲ್ಲಿ ಮಸಾಲೆ ಸಾಂಬಾರುಗಳ ಅಂಶವು ಹೆಚ್ಚಾಗಿ ಕಟುವಾಗಿದ್ದಂತೆ ಕಂಡುಬಂದರೆ ನಿಂಬೆರಸ ಸೇರಿಸಿ ತೆಳ್ಳಗೆ ಮಾಡಿ ಕರಿದ ಕೆಲವು ಈರುಳ್ಳಿ ಹೋಳುಗಳನ್ನು ಅದರಲ್ಲಿ ಹಾಕಿ ಕದಡಬೇಕು.
* ಅಡುಗೆ ಪದಾರ್ಥ ಪಲ್ಯಗಳಲ್ಲಿ ಮೆಣಸಿನಕಾಯಿಯ ಅಂಶವು ಅಧಿಕ ವಾಗಿದ್ದರೆ ಸ್ವಲ್ಪ ಟೊಮೆಟೊ ಗೊಜ್ಜು ಅಥವಾ ನಿಂಬೆರಸ ಅಥವಾ ಬೆಲ್ಲದ ಪುಡಿ ಅಥವಾ ಸಕ್ಕರೆ ಸೇರಿಸಿದರೆ ಮೆಣಸಿನಕಾಯಿಯ ಖಾರ ವನ್ನು ಹೋಗಲಾಡಿಸಬಹುದು.
* ಆಹಾರ ಪದಾರ್ಥ ಪಲ್ಯಗಳನ್ನು ಬೇಯಿಸುವಾಗ ಅವುಗಳ ದ್ರವ ಬತ್ತಿಹೋದರೆ ತಣ್ಣೀರು ಸೇರಿಸಬಾರದು. ಇದಕ್ಕಾಗಿ ಬಿಸಿ ನೀರನ್ನು ಪಕ್ಕದಲ್ಲಿ ಇಟ್ಟುಕೊಳ್ಳಬೇಕು. ಅಡುಗೆ ಪಾತ್ರೆಯ ಮುಚ್ಚಳದ ಮೇಲೆ ಬಿಸಿ ನೀರನ್ನಿಟ್ಟು ಕೊಳ್ಳುವುದು ಒಳ್ಳೆಯದು ಇದರಿಂದಾಗಿ ಬೇಯುವ ಆಹಾರದ ಒಳಗಿನಿಂದ ಅತಿಯಾದ ಹಬೆ ಯನ್ನು ಕೂಡ ತಡೆಗಟ್ಟಬಹುದು.
ಈ ಸುದ್ದಿ ನೋಡಿ:- ಸೂರ್ಯೋದಯ ಯೋಜನೆ ಮೂಲಕ ಪ್ರತಿ ಮನೆಗೆ ಉಚಿತ ಸೋಲಾರ್ & 300 ಯೂನಿಟ್ ಫ್ರೀ ವಿದ್ಯುತ್ ಪಡೆಯಿರಿ.!
* ಮುಚ್ಚಳದ ಮೇಲಿಟ್ಟಿರುವ ಬಿಸಿನೀರನ್ನು ಆಹಾರ ಬೇಯಿಸುವ ಪಾತ್ರೆಗಳಿಗೆ ಹಾಕಲು ಬೇಕಾದರೆ ಉಪಯೋಗಿಸಬಹುದು
* ಅರೆದಿಟ್ಟ, ನೆನೆದಿರುವ ಮಸಾಲೆ ಪಿಷ್ಟದ ಮೇಲೆ ಪುಷ್ಕಳವಾಗಿ ಉಪ್ಪು ಸಿಂಪಡಿಸಿಟ್ಟುಕೊಂಡರೆ ಅದನ್ನು ಒಂದೆರಡು ದಿವಸಗಳ ತನಕ ಕೆಡದಂತೆ ಇಟ್ಟುಕೊಳ್ಳಬಹುದು.
* ತರಕಾರಿಗಳ ಪದಾರ್ಥಗಳಲ್ಲಿ ಉಪ್ಪು ಸೇರಿಸಿದ್ದು ಹೆಚ್ಚಾದರೆ ಆಲೂಗಡ್ಡೆಯ(ಬಟಾಟೆಯ) ತುಂಡುಗಳನ್ನು ಅಥವಾ ಗೋಧಿ ಹಿಟ್ಟಿನ (ಕಣಕ) ಉಂಡೆಯನ್ನು ಪದಾರ್ಥ ಪಲ್ಯ ಬೇಯಿಸಿಕೊಂಡಿರುವಾಗಲೇ ಹಾಕಬೇಕು. ಇವುಗಳು ಉಪ್ಪಿನ ಕೆಲವು ಅಂಶವನ್ನು ಹೀರಿಕೊಂಡು ಪದಾರ್ಥ ರುಚಿಕರವಾಗುವಂತೆ ಮಾಡುತ್ತದೆ.
* ಬಟಾಣಿ ಕಡಲೆಗಳನ್ನು ಬೇಯಿಸಿ ಕುದಿಸುವಾಗ ಒಂದು ಚಮಚದಷ್ಟು ಸಕ್ಕರೆ ಸೇರಿಸಿದರೆ ಅವುಗಳ ಸುವಾಸನೆಯು ವೃದ್ಧಿಯಾಗುವುದು.