ಮುತ್ತೈದೆಯರು ಅಪ್ಪಿ ತಪ್ಪಿಯು ಈ ತಪ್ಪುಗಳನ್ನ ಮಾಡಬಾರದು. ಮನೆಯಲ್ಲಿನ ಆಚಾರ ವಿಚಾರಗಳು ಗೊತ್ತಿದ್ದು ಗೊತ್ತಿಲ್ಲದೆ ಇಂತಹ ತಪ್ಪುಗಳು ನಡೆಯುತ್ತವೆ. ಈ ತಪ್ಪುಗಳನ್ನು ಮಾಡುವುದರಿಂದ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುವುದಿಲ್ಲ. ನಿಮ್ಮಲ್ಲಿನ ಕಷ್ಟಗಳು ಪರಿಹಾರ ಆಗೋದಿಲ್ಲ.
ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕು ಅಂದರೆ ಈ ತಪ್ಪುಗಳನ್ನು ಮಾಡಬೇಡಿ ಸ್ತ್ರೀ ಎಂದರೆ ಲಕ್ಷ್ಮಿ ಸ್ವರೂಪ ಹಾಗಾಗಿ ಮನೆಯಲ್ಲಿನ ಮುತ್ತೈದೆಯರು ಲವಲವಿಕೆಯಿಂದ ಮನೆಯಲ್ಲಿ ಓಡಾಡಿ ಕೊಂಡು ದೇವರಿಗೆ ಅಲಂಕಾರ ಮಾಡಿ ಪೂಜೆ ಮಾಡಬೇಕು. ಹಾಗಾದರೆ ಮನೆಯಲ್ಲಿರುವಂತಹ ಮುತ್ತೈದೆಯರು ಯಾವ ತಪ್ಪುಗಳನ್ನು ಮಾಡಬಾರದು ಎಂದು ಈ ಕೆಳಗೆ ತಿಳಿಯೋಣ.
ಈ ಸುದ್ದಿ ಓದಿ:- ಸಿಂಹ ರಾಶಿಯವರು ಜೀವನಪೂರ್ತಿ ಈ ದೇವರನ್ನು ಪೂಜಿಸಬೇಕು…||
* ಸಂಜೆ ವೇಳೆಗೆ ಬಟ್ಟೆಗಳನ್ನ ಒಗೆಯಬಾರದು. ಸಂಜೆ ವೇಳೆಯಲ್ಲಿ ಮಹಾಲಕ್ಷ್ಮಿಯ ಪ್ರವೇಶದ ಕಾಲವಾದರಿಂದ ಆ ಸಮಯದಲ್ಲಿ ಬಟ್ಟೆ ಒಗೆಯುವುದು ಸೂಕ್ತವಲ್ಲ.
* ಮಹಿಳೆಯರು ಉದ್ದವಾಗಿ ಉಗುರುಗಳನ್ನು ಬೆಳೆಸಬಾರದು. ಇದರಿಂದ ಆರೋಗ್ಯ ಸಮಸ್ಯೆ ಕಾಡುವುದಲ್ಲದೆ ಇದರಿಂದ ಲಕ್ಷ್ಮೀದೇವಿ ನಿಮ್ಮ ಮನೆಗೆ ಪ್ರವೇಶ ಮಾಡುವುದಿಲ್ಲ. ಹಾಗೆ ಹಣಕಾಸಿನ ಸಮಸ್ಯೆ ಉದ್ಭವವಾಗುತ್ತದೆ.
* ಮಹಿಳೆಯರು ಹೆಚ್ಚು ಹೊತ್ತು ನಿದ್ರಿಸುವುದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಯಶಸ್ಸು ಲಭಿಸುವುದಿಲ್ಲ.
* ಮಂಗಳವಾರ ಹಾಗೂ ಶುಕ್ರವಾರದ ದಿನ ಮನೆಯಲ್ಲಿ ಹೆಣ್ಣು ಮಕ್ಕಳು ಕಣ್ಣೀರನ್ನ ಹಾಕಬಾರದು. ಕೆಲವರು ಜೀವನದಲ್ಲಿ ಮಾನಸಿಕವಾಗಿ ಯಾವಾಗಲೂ ಕಣ್ಣೀರನ್ನು ಹಾಕುತ್ತಾರೆ. ಇದು ಮನೆಗೆ ಶ್ರೇಯಸ್ಸಲ್ಲ.
ಈ ಸುದ್ದಿ ಓದಿ:- ಈ 5 ವೇಳೆಗಳಲ್ಲಿ ಶೃಂಗಾರ ಮಾಡಿದ್ರೆ ದಾರಿದ್ರ್ಯ ಖಂಡಿತ ಅನುಭವಿಸಬೇಕು. ದಂಪತಿಗಳು ಈ ವಿಷಯಗಳನ್ನು ತಿಳಿದುಕೊಳ್ಳಿ
* ಆರ್ಟಿಫಿಶಿಯಲ್ ಹೂಗಳನ್ನು ಪೂಜೆಗೆ ಬಳಸಬಾರದು.
* ತಪ್ಪದೇ ನಿಮ್ಮ ಮನೆಯ ಅಂಗಳದಲ್ಲಿ ರಂಗೋಲಿಯನ್ನು ಹಾಕಿ. ಎಷ್ಟೋ ಜನರ ಮನೆಯಲ್ಲಿ ತುಳಸಿ ಪೂಜೆಯನ್ನ ಮಾಡೋದಿಲ್ಲ. ತಪ್ಪದೆ ಮುತ್ತೈದೆಯರು ತುಳಸಿ ಪೂಜೆಯನ್ನು ಮಾಡಬೇಕು.
* ಹೆಣ್ಣು ಮಕ್ಕಳು ಕೂದಲನ್ನು ಕಟ್ಟದೆ ಪೂಜೆಯನ್ನು ಮಾಡಬಾರದು. ಇದರಿಂದ ಪೂಜೆಯ ಫಲ ಸಿಗೋದಿಲ್ಲ. ಹಾಗಾಗಿ ಮಡಿಯಿಂದ ಪೂಜೆ ಮಾಡಬೇಕು.
* ಯಾವುದೇ ಶುಭ ಸಮಾರಂಭಗಳಿಗೆ ಹೋಗುವಾಗ ಅಥವಾ ಮನೆಯಲ್ಲಿ ಇರುವಾಗ ಮುತ್ತೈದೆಯರು ಕುಂಕುಮವನ್ನು ಹಣೆಯ ಮೇಲೆ ಹಚ್ಚಿಕೊಳ್ಳಬೇಕು. ಇಲ್ಲವಾದಲ್ಲಿ ನಿಮಗೆ ಅನೇಕ ಸಮಸ್ಯೆಗಳು ಕಾಡುತ್ತವೆ.
ಈ ಸುದ್ದಿ ಓದಿ:- ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತದೆ.!
* ಹೆಣ್ಣು ಮಕ್ಕಳು ಮನೆಯಲ್ಲಿರುವ ದೇವರ ಕೋಣೆಯನ್ನು ತುಂಬಾ ಸ್ವಚ್ಚವಾಗಿಟ್ಟುಕೊಳ್ಳಬೇಕು. ಇದರ ಜೊತೆಗೆ ಪ್ರತಿನಿತ್ಯವೂ ದೇವರ ಕೋಣೆಯಲ್ಲಿ ದೇವರಿಗೆ ದೀಪವನ್ನು ಹಚ್ಚಬೇಕು. ಅದೇ ರೀತಿ ಪ್ರತಿನಿತ್ಯ ತಡವಾಗಿ ಏಳುವುದು ಮತ್ತು ಪ್ರತಿನಿತ್ಯ ಸ್ನಾನ ಮಾಡದೇ ಇರುವುದು ನಿಮ್ಮ ಮನೆಯಲ್ಲಿರುವ ದಾರಿದ್ರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ನಮ್ಮ ಹಿರಿಯರು ನಂಬಿಕೊಂಡು ಬಂದಿದ್ದಾರೆ.
* ಗುರುವಾರದ ದಿನ ಯಾವ ಹೆಂಗಸು ಮಾಂಸಹಾರ ಸೇವನೆ ಹಾಗೂ ಮಧ್ಯಪಾನವನ್ನು ಮಾಡುತ್ತಾರೋ ಆಗ ಆ ಮನೆಯಲ್ಲಿ ದಾರಿದ್ರ್ಯತನ ಎಂಬುದು ಹೆಚ್ಚಾಗುತ್ತದೆ.
* ಮದುವೆಯಾದ ಹೆಂಗಸರು ಸಂಪೂರ್ಣವಾಗಿ ಬಿಳಿ ಬಟ್ಟೆಯನ್ನು ಧರಿಸಿಕೊಂಡರೆ ಸಾಕಷ್ಟು ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಬಿಳಿ ಬಣ್ಣವು ಇವರ ಜೀವನದಲ್ಲಿ ಬೇರೆ ಬಣ್ಣಗಳಿಗೆ ಅವಕಾಶವಿಲ್ಲ ಎಂಬುದನ್ನು ತಿಳಿಸುತ್ತದೆ.
ಈ ಸುದ್ದಿ ಓದಿ:- ಈ ಒಂದು ದೀಪವನ್ನು ಮನೆಯಲ್ಲಿ ಮೂರು ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ…….||
* ಮದುವೆಯಾದ ಹೆಂಗಸರು ಕಾಲಿಗೆ ಧರಿಸುವ ಕಾಲ್ಗೆಜ್ಜೆ ಚಿನ್ನದಲ್ಲಿ ಮಾಡಿಸಿಕೊಂಡು ಹಾಕಿಕೊಂಡರೆ ಮನೆಯಲ್ಲಿ ದಾರಿದ್ರ್ಯತನ ಬರುತ್ತದೆ. ಈ ರೀತಿ ಮಾಡಿದರೆ ಕುಬೇರ ದೇವನಿಗೆ ಅವಮಾನ ಮಾಡಿದಂತಾಗುತ್ತದೆ ಇದರಿಂದ ಮನೆಯಲ್ಲಿ ಬಡತನ ಬರುವ ಸಾಧ್ಯತೆ ಹೆಚ್ಚಿರುತ್ತದೆ.
* ತಲೆಯ ಕೂದಲನ್ನು ಬಿಟ್ಟುಕೊಂಡು ಅಡುಗೆ ಮನೆಗೆ ಪ್ರವೇಶಿಸ ಬಾರದು ಹಾಗೂ ಅಡುಗೆಯನ್ನು ತಯಾರು ಮಾಡಬಾರದು.
* ಇದರಿಂದ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ ನೀವು ಮಾಡುವಂತಹ ಅಡುಗೆಯನ್ನು ಸೇವಿಸುವ ವ್ಯಕ್ತಿಗಳಿಗೆ ಯಶಸ್ಸು ಸಿಗುವುದಿಲ್ಲ. ಆದ ಕಾರಣ ತಲೆಯ ಕೂದಲನ್ನು ಬಿಚ್ಚಿಕೊಂಡು ಯಾವುದೇ ಕಾರಣಕ್ಕೂ ಅಡುಗೆ ಮನೆಗೆ ಹೋಗಬಾರದು. ಈ ಒಂದು ನಿಯಮವನ್ನು ಮನೆ ಯಲ್ಲಿ ಪ್ರತಿಯೊಬ್ಬ ಹೆಂಗಸರು ಪಾಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.