ನಮ್ಮ ದೇಶದಲ್ಲಿ ಪ್ರತಿದಿನ ಕೂಡ ಕೋರ್ಟ್ ಕಚೇರಿಗಳಿಗೆ ತಮ್ಮ ಆಸ್ತಿ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಅಲೆದಾಡುತ್ತಿರುವ ಸಾಕಷ್ಟು ಜನರಿದ್ದಾರೆ. ಸದ್ಯಕ್ಕೆ ನ್ಯಾಯಾಲಯಗಳಲ್ಲಿ ಅತಿ ಹೆಚ್ಚು ದಾವೆಗಳು ಹೂಡಲ್ಪಡುತ್ತಿರುವುದು ಈ ರೀತಿ ಆಸ್ತಿ ಹಂಚಿಕೆಯ ವಿವಾದಗಳ ಕುರಿತೇ ಎಂದು ಹೇಳಬಹುದು. ನಮ್ಮ ದೇಶದಲ್ಲಿ ಒಂದು ಕೂಡು ಕುಟುಂಬದಲ್ಲಿ ಆಸ್ತಿ ಹಂಚಿಕೆ ಯಾವ ರೀತಿ ಆಗಬೇಕು ಎಂದು ಕಾನೂನಿನಲ್ಲಿ ಸ್ಪಷ್ಟವಾಗಿ ತಿಳಿಸಿಕೊಡಲಾಗಿದೆ.
ಒಂದು ವೇಳೆ ತಮಗೆ ಅ’ನ್ಯಾ’ಯವಾಗಿದೆ ಎನ್ನುವುದು ಕಂಡುಬಂದಲ್ಲಿ ನೇರವಾಗಿ ಕೋರ್ಟ್ ಗಳ ಮೊರೆ ಹೋಗುವ ಮೂಲಕ ನ್ಯಾಯವನ್ನು ಕೇಳಬಹುದು. ಇದಕ್ಕೂ ಮೊದಲು ನಾವು ಆಸ್ತಿ ಹಂಚಿಕೆ ಕುರಿತು ಕಾನೂನಿನಲ್ಲಿ ಏನಿದೆ ಎನ್ನುವುದರ ಕುರಿತು ಕನಿಷ್ಠ ಜ್ಞಾನವನ್ನು ಹೋಂದಿರಬೇಕು. ಅದಕ್ಕಾಗಿ ಇಂತಹ ಒಂದು ಉದಾಹರಣೆಯೊಂದಿಗೆ ಈ ಅಂಕಣದಲ್ಲಿ ವಿಶೇಷ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.
1 ಬ್ಲೌಸ್ ಪೀಸ್ ಇದ್ರೆ ಸಾಕು ಒಂದೇ ಗಂಟೆಯಲ್ಲಿ ಡೋರ್ ಗೆ ಬೇಕಾದ ಕಲರ್ ಫುಲ್ ಹೂವಿನ ಹಾರ ನೀವೆ ರೆಡಿ ಮಾಡಬಹುದು.!
ಸಾಮಾನ್ಯವಾಗಿ ಇದೇ ರೀತಿಯ ಅನುಮಾನ ಅನೇಕರಿಗೆ ಬಂದಿರುತ್ತದೆ. ಅದೇನೆಂದರೆ ಒಬ್ಬ ವ್ಯಕ್ತಿಗೆ ಇಬ್ಬರು ಹೆಂಡತಿಯರಿದ್ದು ಆ ಇಬ್ಬರೂ ಪತ್ನಿಯರಿಗೂ ಕೂಡ ಮಕ್ಕಳಿದ್ದರೆ ಎಲ್ಲರಿಗೂ ಆಸ್ತಿ ಸಮವಾಗಿ ಭಾಗ ಆಗುತ್ತದೆಯೇ ಎಂದು. ಈಗ ಕಾನೂನಿನಲ್ಲಿ ಮೊದಲನೇ ಹೆಂಡತಿ ಬದುಕಿದ್ದಾಗ ಎರಡನೇ ಮದುವೆ ಆಗುವಂತಿಲ್ಲ ಎಂದು ನಿಯಮ ಇದೆ.
ಆದರೆ ಈ ಕಾನೂನು ಬರುವ ಮುಂದೆ ಮದುವೆ ಆಗಿದ್ದವರು ಅಥವಾ ಒಂದು ವೇಳೆ ಮೊದಲ ಹೆಂಡತಿ ಮೃ’ತಪಟ್ಟಿದ್ದು ಆಕೆಗೆ ಮೂರು ಜನ ಮಕ್ಕಳಿದ್ದು ನಂತರ ಎರಡನೇ ಮದುವೆ ಆಗಿದ್ದರೆ ಆ ಮದುವೆ ಕೂಡ ಕಾನೂನಿನಲ್ಲಿ ಮಾನ್ಯವೇ ಆಗುತ್ತದೆ. ಆ ಎರಡನೇ ಹೆಂಡತಿಗೂ ಇಬ್ಬರು ಮಕ್ಕಳಿದ್ದರೆ ಎಂದುಕೊಳ್ಳೋಣ ಆಗ ಮೊದಲ ಹೆಂಡತಿಗೆ ಮೂರು ಮಕ್ಕಳು, ಎರಡನೇ ಹೆಂಡತಿಗೆ ಇಬ್ಬರು ಮಕ್ಕಳರುವುದರಿಂದ ಯಾವ ರೀತಿ ಆಸ್ತಿ ಹಂಚಿಕೆ ಆಗುತ್ತದೆ ಎನ್ನುವುದು ಹಲವರ ಗೊಂದಲ.
ಗ್ಯಾಸ್ ಸ್ಟವ್ ಉರಿ ಸ್ಲೋ ಆಗಿದ್ರೆ ಈ ವಿಧಾನದಿಂದ ಬರ್ನರ್ ಕ್ಲೀನ್ ಮಾಡಿ.!
ಇಂತಹ ಪರಿಸ್ಥಿತಿಯಲ್ಲಿ ಆ ತಂದೆ ಆಸ್ತಿ 5 ಎಕರೆ ಇದೆ ಎಂದುಕೊಳ್ಳೋಣ ಅದು ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಒಟ್ಟು 5 ಜನ ಮಕ್ಕಳಿಗೂ ಸಮಭಾಗವಾಗಿ ಅಂದರೆ ಒಬ್ಬ ಮಗನಿಗೆ ಒಂದು ಎಕರೆ ಆಸ್ತಿಯಂತೆ ಎಲ್ಲರಿಗೂ ಹಂಚಿಕೆಯಾಗುತ್ತದೆ. ಇದರಲ್ಲಿ ಮೊದಲನೇ ಹೆಂಡತಿ ಎರಡನೇ ಹೆಂಡತಿ ಮಕ್ಕಳು ಎನ್ನುವ ಯಾವುದೇ ಭೇದಭಾವ ಇಲ್ಲ.
ಒಟ್ಟು ಎಷ್ಟು ಜನ ಮಕ್ಕಳು ಹಾಗೂ ಇರುವ ಆಸ್ತಿ ಎಷ್ಟು ಎನ್ನುವುದಷ್ಟೇ ಕಾನೂನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಇದರಲ್ಲಿ ಎಲ್ಲಾ ಮಕ್ಕಳು ಸಮಾನರು ಎಂದೆ ನೋಡಲಾಗುತ್ತದೆ ಆದರೆ ಒಂದು ವೇಳೆ ಆಸ್ತಿಯು ಆ ವ್ಯಕ್ತಿಯ ಸ್ವಯಾರ್ಜಿತ ಆಸ್ತಿ ಆಗಿತ್ತು ಎಂದಿಟ್ಟುಕೊಳ್ಳೋಣ ಆ ವ್ಯಕ್ತಿಯು ತನ್ನ ಸ್ವಂತ ದುಡಿಮೆಯಿಂದ ಆ 5 ಎಕರೆ ಆಸ್ತಿಯನ್ನು ಸಂಪಾದನೆ ಮಾಡಿದ್ದಲ್ಲಿ ಆತ ಐದು ಜನ ಮಕ್ಕಳಲ್ಲಿ ಯಾವ ಮಕ್ಕಳಿಗೆ ಬೇಕಾದರೂ ತಮ್ಮ ಆಸ್ತಿಯನ್ನು ದಾನ ಪತ್ರದ ಮೂಲಕ ಅಥವಾ ವೀಲ್ ಮಾಡಿ ಕೊಡಬಹುದು.
ಪೂಜೆಗೆ ಇಡುವ ತೆಂಗಿನ ಕಾಯಿ ಕಣ್ಣು ಕಾಣಿಸಬಾರದು ಯಾಕೆ ಗೊತ್ತಾ.?
ಇಂತಹ ಸಂದರ್ಭಗಳಲ್ಲಿ ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಬರುವುದಿಲ್ಲ. ಒಂದು ವೇಳೆ ಆ ವ್ಯಕ್ತಿ ಜೀವಂತವಾಗಿಲ್ಲ ಈ ರೀತಿ ಯಾರಿಗೂ ಸ್ವಯಾರ್ಜಿತ ಆಸ್ತಿಯ ಬಗ್ಗೆ ವೀಲ್ ಮಾಡಿಲ್ಲ ಎನ್ನುವುದಾದರೆ ಆಗಲು ಕೂಡ ಆ ಆಸ್ತಿಯು 5 ಜನ ಮಕ್ಕಳಿಗೆ ಸಮಾನವಾಗಿ ವಿಭಾಗ ಆಗುತ್ತದೆ ಎನ್ನುವುದನ್ನು ಕಾನೂನು ಹೇಳುತ್ತದೆ. ಈ ವಿಚಾರವಾಗಿ ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ನಿಮ್ಮ ಹತ್ತಿರದ ಕಾನೂನು ಸಲಹಾ ಕೇಂದ್ರಕ್ಕೆ ಭೇಟಿ ಕೊಟ್ಟು ಅಥವಾ ಪರಿಚಯದ ವಕೀಲರ ಬಳಿ ಕೇಳಿ ಮಾಹಿತಿ ಪಡೆಯಬಹುದು.