ಒಳ್ಳೆಯವರಿಗೆ ದೇವರ ಮೇಲೆ ಭಯ ಭಕ್ತಿ ಇಟ್ಟುಕೊಂಡು ಶ್ರದ್ಧಾಭಕ್ತಿಯಿಂದ ಧರ್ಮ ಮಾರ್ಗದಲ್ಲಿ ನಡೆಯುವವರಿಗೆ ಕ’ಷ್ಟಗಳು ಹೆಚ್ಚು. ಜನಸಾಮಾನ್ಯರಿಗೆ ಮೋ’ಸ ಮಾಡಿ, ಹಣ ದೋಚಿದವರು ಬೇರೆಯವರ ವಸ್ತುಗಳಿಗೆ ಆಸೆ ಪಡುವವರು, ಅ’ನ್ಯಾ’ಯ ಮಾಡುವವರು ಶ್ರೀಮಂತರವಾಗಿ ಬಹಳ ಚೆನ್ನಾಗಿ ಜೀವನ ನಡೆಸುತ್ತಿರುತ್ತಾರೆ.
ಹಾಗಾದರೆ ಭಗವಂತನನ್ನು ನೆನೆದು ಏನು ಪ್ರಯೋಜನ ಎಂದು ಹಲವರ ಪ್ರಶ್ನೆ. ಇದೇ ರೀತಿಯ ಪ್ರಶ್ನೆಯೊಂದನ್ನು ಅರ್ಜುನ ಶ್ರೀ ಕೃಷ್ಣರಿಗೂ ಕೇಳಿದ್ದ ಆಗ ಶ್ರೀ ಕೃಷ್ಣರು ಅರ್ಜುನರನ್ನು ಕರೆದುಕೊಂಡು ಒಂದು ಗ್ರಾಮಕ್ಕೆ ಹೋಗುತ್ತಾರೆ.
ಆ ಗ್ರಾಮದಲ್ಲಿ ಒಬ್ಬ ಬಡ ರೈತ ವಾಸಿಸುತ್ತಿರುತ್ತಾನೆ, ಆತ ಹಾಗೂ ಆತನ ಪತ್ನಿ ಸದ್ಗುಣ ಸಂಪನ್ನರು ಬಡತನ ಇದ್ದರೂ ಅತಿಥಿ ದೇವೋಭವ ಎಂದು ನಂಬಿ ಅಸಹಾಯಕರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ತಮ್ಮ ಕೃಷಿ ಕೆಲಸ ಹಾಗೂ 4 ಜಾನುವಾರುಗಳನ್ನು ನಂಬಿ ಮಕ್ಕಳ ಜೊತೆ ಇರುವುದರಲ್ಲಿ ತೃಪ್ತಿ ಪಟ್ಟುಕೊಂಡು ಬದುಕುತ್ತಿರುತ್ತಾರೆ.
ಈ ಸುದ್ದಿ ಓದಿ:- ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!
ಅದೇ ಗ್ರಾಮದಲ್ಲಿ ಒಬ್ಬ ಬಹಳ ಶ್ರೀಮಂತ ವ್ಯಕ್ತಿ ಇರುತ್ತಾನೆ, ಆತನಿಗೆ ಬಹಳ ದುರಂಕಾರ ಆತ ತನ್ನ ಎದುರು ಯಾರಾದರೂ ಬೆಳೆಯಲು ಪ್ರಯತ್ನಿಸಿದರೆ ಸಹಿಸದೆ ಅವರಿಗೆ ಕೆಟ್ಟದ್ದು ಮಾಡಿ ಅವರನ್ನು ದೋಚುತ್ತಿರುತ್ತಾನೆ. ತನ್ನ ಬಳಿ ರಾಶಿ ಸಂಪತ್ತು ಇದ್ದರೂ ಒಬ್ಬರಿಗೆ ಒಂದು ಕಾಸು ಕೂಡ ದಾನ ಮಾಡುವುದಿಲ್ಲ ಹೆಂಡತಿ ಮಕ್ಕಳಿಗೂ ಕೂಡ ಗೌರವ ಕೊಡದೆ ಹಿಂಸಿಸುತ್ತಿರುತ್ತಾನೆ.
ಮೊದಲಿಗೆ ಶ್ರೀ ಕೃಷ್ಣನು ಅರ್ಜುನನ ಜೊತೆ ವೇಷ ಬದಲಿಸಿಕೊಂಡು ಬಡ ರೈತನ ಮನೆಗೆ ಹೋಗಿ ತಾವು ದಾರಿ ತಪ್ಪಿ ಬಂದಿರುವುದಕ್ಕೆ ಎರಡು ದಿನ ಇಲ್ಲೇ ಉಳಿದುಕೊಳ್ಳಲು ಸ್ಥಳ ನೀಡಬೇಕಾಗಿ ಕೇಳಿಕೊಳ್ಳುತ್ತಾರೆ. ಆ ಎರಡು ದಿನಗಳು ರೈತ ಹಾಗೂ ರೈತನ ಕುಟುಂಬದವರು ಕೃಷ್ಣ ಮತ್ತು ಅರ್ಜುನರನ್ನು ಒಂದು ಚೂರು ನೋ’ವಾಗದಂತೆ ಇರುವ ಸೌಕರ್ಯಗಳಲ್ಲಿ ಸಂತೋಷದಿಂದ ಸತ್ಕರಿಸುತ್ತಾರೆ.
ಎರಡನೇ ದಿನ ಮುಗಿದ ಮೇಲೆ ರೈತನಿಗೆ ಹೇಳಿ ಕೃಷ್ಣ ಅರ್ಜುನ ಅಲ್ಲಿಂದ ಹೊರಡುವಾಗ ಕೃಷ್ಣನು ರೈತ ಹೊಂದಿದ್ದ 4 ಹಸುಗಳಲ್ಲಿ ಒಂದು ಬಹಳ ವಯಸ್ಸಾದ ಹಸು ಸಾ’ವ’ನ್ನಪ್ಪುವಂತೆ ಮಾಡುತ್ತಾರೆ. ಅರ್ಜುನನಿಗೆ ಏನು ಅರ್ಥವಾಗದೆ ದಿಗ್ಭ್ರಮೆಗೊಳಗಾಗುತ್ತಾರೆ, ಕಾರಣ ಕೇಳುತ್ತಾರೆ ಆಗ ಶ್ರೀಮಂತ ಧುರೀಣ ವ್ಯಕ್ತಿ ಮನೆಗೆ ಕರೆದುಕೊಂಡು ಹೋಗುತ್ತಾರೆ.
ಈ ಸುದ್ದಿ ಓದಿ:- ದೇವರು ನಿಮ್ಮ ಮನೆಯಲ್ಲಿ ನೆಲೆಸಿದ್ದಾಗ ಈ 11 ಸಂಕೇತಗಳು ಕಾಣಿಸಿಕೊಳ್ಳುತ್ತವೆ.!
ಅಲ್ಲಿ ಮತ್ತೆ ತಾವು ದಾರಿ ತಪ್ಪು ಬಂದಿರುವುದಾಗಿ ಎರಡು ದಿನ ಅರಮನೆಯಲ್ಲಿದ್ದು ಮೂರನೇ ದಿನ ಹೊರಟು ಬಿಡುವುದಾಗಿ ಈ ಊರಿನಲ್ಲಿ ಬಹಳ ಸಿರಿವಂತ ವ್ಯಕ್ತಿ ನೀವೇ ಹಾಗಾಗಿ ಇಲ್ಲಿಗೆ ಬಂದೆ ಎಂದು ಹೊಗಳಿ ಜಾಗ ಗಿಟ್ಟಿಸಿಕೊಳ್ಳಲು ನೋಡುತ್ತಾರೆ.
ಅವರಿಗೆ ಸಹಾಯ ಮಾಡುವ ಮನಸ್ಸಿಲ್ಲದೆ ಇದ್ದರು ಹೊಗಳಿಕೆಗೆ ಸೋತ ದುಷ್ಟ ವ್ಯಕ್ತಿ ಎರಡು ದಿನ ಮನೆ, ಕೊಟ್ಟಿಗೆ, ಜಮೀನಿನ ಕೆಲಸ ಮಾಡಿದರೆ ಆಶ್ರಯ ನೀಡುವುದಾಗಿ ಮನೆಯಲ್ಲಿ ಎಲ್ಲರೂ ತಿಂದು ಉಳಿದರೆ ಮಾತ್ರ ಆಹಾರ ಕೊಡುವುದಾಗಿ ಕಂಡಿಷನ್ ಹಾಕುತ್ತಾರೆ. ಆಯ್ತು ಎಂದು ಒಪ್ಪಿಕೊಂಡು ಸೇವಕರಂತೆ ಕೆಲಸ ಮಾಡಿದ ಕೃಷ್ಣ ಅರ್ಜುನರು ಎರಡನೇ ದಿನ ಹೊರಡಬೇಕಾದಾಗ ಸಂದರ್ಭದಲ್ಲಿ ದುಷ್ಟ ವ್ಯಕ್ತಿಯ ಮನೆ ಕೊಟ್ಟಿಗೆ ಕುಸಿದು ಬೀಳುವುದನ್ನು ಕಾಣುತ್ತಾರೆ.
ತಕ್ಷಣ ಕೃಷ್ಣ ಬಹಳ ಸುಂದರವಾದ ಒಂದು ಗಟ್ಟಿಮುಟ್ಟಾದ ಕೊಟ್ಟಿಗೆಯನ್ನಾಗಿ ಸರಿಪಡಿಸಿ ಕೊಡುತ್ತಾರೆ. ಸಹಿಸಲಾಗದ ಅರ್ಜುನ ಕೇಳಿಯೇ ಬಿಡುತ್ತಾರೆ. ರೈತ ದೇವರನ್ನೇ ನಂಬಿದ್ದಾನೆ ಮತ್ತು ಒಳ್ಳೆಯ ರೀತಿ ಬದುಕುತ್ತಿದ್ದೇನೆ ಅವನಿಗೆ ನೋವು ಕೊಟ್ಟು ಈ ಕೆಟ್ಟ ವ್ಯಕ್ತಿಗೆ ಶಿಕ್ಷೆ ಕೊಡುವ ಬದಲು ಉಪಕಾರ ಮಾಡುತ್ತಿದ್ದೀರಲ್ಲ ಇಂದು.
ಈ ಸುದ್ದಿ ಓದಿ:- ಅರಿಶಿಣದಿಂದ ಈ ಚಿಕ್ಕ ಕೆಲಸ ಮಾಡಿದರೆ, ಗಿರವಿ ಇಟ್ಟಿರೋ ಚಿನ್ನವನ್ನು 3 ದಿನದಲ್ಲಿ ತರಬಹುದು.!
ಆಗ ಕೃಷ್ಣ ಹೇಳುತ್ತಾರೆ ಎಲ್ಲರ ಅದೃಷ್ಟವು ಪೂರ್ವಜನ್ಮದ ಕರ್ಮಾನುಸಾರ ನಿರ್ಧಾರ ಆಗಿರುತ್ತದೆ, ಆದರೆ ಭಗವಂತನ ಸ್ಮರಣೆಗಿಂತ ಕರ್ಮಗಳನ್ನು ಕಡಿಮೆ ಮಾಡಿಕೊಂಡು ಪುಣ್ಯ ಹೆಚ್ಚಿಸಿಕೊಳ್ಳಬಹುದು. ಹೇಗೆಂದರೆ ಆ ರೈತನ ಹಣೆ ಬರಹದಲ್ಲಿ ಇಂದು ಬಹಳ ವರ್ಷದಿಂದ ಆತನ ಜೊತೆಗಿದ್ದ ಬೆಲೆ ಬಾಳುವುದನ್ನು ಕಳೆದುಕೊಳ್ಳಬೇಕು ಎಂದು ಬರೆದಿತ್ತು.
ಆತನಿಗೆ ಇದ್ದ ಹಸುಗಳಲ್ಲಿ ಮತ್ತು ಆತ್ಮೀಯರಲ್ಲಿ ಈ ಹಸು ಸತ್ತಿದ್ದರೆ ಹೇಗೋ ಸಹಿಸಿಕೊಳ್ಳುತ್ತಿದ್ದ ಹಾಗಾಗಿ ಆಗುವ ನಷ್ಟದಲ್ಲಿ ಕಡಿಮೆ ನಷ್ಟ ಆಗುವಂತೆ ಮಾಡಿದೆ. ರಾಕ್ಷಸ ವ್ಯಕ್ತಿಯ ಅದೃಷ್ಟದಲ್ಲಿ ಇಂದು ಆತನಿಗೆ ಅನಿರೀಕ್ಷಿತ ಲಾಭವಾಗುತ್ತದೆ ಎಂದು ಇತ್ತು, ಈ ಕೊಟ್ಟಿಗೆ ಕೆಳಗೆ ಅಪಾರ ನಿಧಿ ಸಂಪತ್ತು ಇದೆ, ಇದು ಕುಸಿದು ಬಿದ್ದಿದ್ದರೆ ಆತ ಇದನ್ನು ಸರಿ ಮಾಡಿಸಿಕೊಳ್ಳಲು ಹೋದಾಗ ಇದರ ಕೆಳಗೆ ಇರುವ ಸಂಪತ್ತನ್ನೆಲ್ಲ ಹೊಡೆದುಕೊಳ್ಳುತ್ತಿದ್ದ.
ಹಾಗಾಗಿ ಕೊಟ್ಟಿಗೆ ಬೀಳದಂತೆ ಅಲ್ಪ ಲಾಭ ಮಾಡಿಕೊಟ್ಟಿದ್ದೇನೆ ಹೀಗೆ ಭಗವಂತನನ್ನು ಪ್ರಾರ್ಥಿಸಿ, ಸರಿಯಾದ ದಾರಿಯಲ್ಲಿ ನಡೆದರೆ ಅವರನ್ನು ದೇವರು ಕೈಬಿಡುವುದಿಲ್ಲ ಹಾಗೂ ನಷ್ಟವನ್ನು ಕಡಿಮೆ ಮಾಡುತ್ತಾನೆ ಮತ್ತು ದುರಹಂಕಾರದಿಂದ ನಡೆದರೆ ದೇವರಿಗೆ ಶ್ರದ್ಧೆ ತೊರದೆ ಇದ್ದರೆ ಅವರಿಗೆ ಸಿಗುವ ಪ್ರತಿಫಲ ಇಷ್ಟೇ ಎಂದು ಹೇಳುತ್ತಾರೆ, ಈಗ ಎಲ್ಲರಿಗೂ ಅರ್ಥವಾಗಿದೆ ಎಂದುಕೊಳ್ಳುತ್ತೇನೆ.