ಉಗುರು ಎನ್ನುವುದು ಬಹಳ ಸಾಮಾನ್ಯ ವಿಷಯ ಎಂದು ಜನರು ತಿಳಿದುಕೊಂಡಿದ್ದಾರೆ. ಆದರೆ ಅನೇಕ ಕಾಯಿಲೆಗಳಿಗೆ ಉದ್ದವಾಗಿ ಬೆಳೆಸಿರುವ ಉಗುರು ಕಾರಣವಾಗುತ್ತದೆ. ಶಾಸ್ತ್ರಗಳಲ್ಲೂ ಕೂಡ ಉಗುರಿಗೆ ಸಂಬಂಧಪಟ್ಟ ಹಾಗೆ ಕೆಲವು ಪದ್ಧತಿಗಳು ಇವೆ ಎನ್ನುವುದು ಎಲ್ಲರಿಗೂ ತಿಳಿದಿಲ್ಲ.
ಈಗಿನ ಕಾಲದಲ್ಲಿ ಉದ್ದವಾಗಿ ಉಗುರುಗಳನ್ನು ಬೆಳೆಸಿ ನೇಲ್ ಆರ್ಟ್ ಮಾಡಿಸುವುದೇ ಟ್ರೆಂಡ್ ಆಗಿದೆ. ಸೆಲೆಬ್ರೆಟಿಗಳು ಇದಕ್ಕಾಗಿಯೇ ಲಕ್ಷಗಟ್ಟಲೇ ಹಣ ಸುರಿಯುತ್ತಾರೆ, ಸ್ಪೆಷಲ್ ಫೋಟೋ ಶಕಟ್ ಕೂಡ ಮಾಡಿಸುತ್ತಾರೆ. ಇನ್ನು ಕಾಲೇಜು ಕೆಲಸಕ್ಕೆ ಹೋಗುವ ಹುಡುಗಿಯರಿಗೆ ಉದ್ದ ಉಗುರು ಬೆಳೆಸಿ ಬಣ್ಣ ಹಚ್ಚುವ ಅಭ್ಯಾಸ ಇದ್ದೇ ಇರುತ್ತದೆ.
ಆದರೆ ಈ ಉದ್ದ ಉಗುರಿನಲ್ಲಿ ಉಂಟಾಗುವ ಕೊಳೆಗಳಲ್ಲಿ ಸೃಷ್ಟಿಯಾಗುವ ಸೂಕ್ಷ್ಮಣು ಜೀವಿಗಳು ಆಹಾರ ತಿನ್ನುವ ಸಮಯದಲ್ಲಿ ನಮ್ಮ ದೇಹವನ್ನು ಸೇರುವುದರಿಂದ ಬಹಳ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದನ್ನು ಅರಿತಿದ್ದ ಹಿರಿಯರು ಉಗುರನ್ನು ವಿಷ ಎಂದಿದ್ದರು. ಈಗ ಈ ಉಗುರಿಗೆ ಸಂಬಂಧಪಟ್ಟ ಹಾಗೆ ಶಾಸ್ತ್ರದಲ್ಲಿರುವ ಕೆಲವು ವಿಷಯಗಳನ್ನು ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ದೇವರನ್ನು ನಂಬಿ ಪೂಜೆ ಮಾಡುವವರಿಗೆ ಹೆಚ್ಚು ಕಷ್ಟಗಳು ಮತ್ತು ಪೂಜೆ ಮಾಡದವರು ಸಂತೋಷವಾಗಿಯೇ ಇರುತ್ತಾರೆ ಯಾಕೆ ಗೊತ್ತಾ.?
ಆರೋಗ್ಯ ದೃಷ್ಟಿಕೋನದಿಂದ ಹಾಗೂ ಶಿಸ್ತಿನ ವಿಚಾರವಾಗಿ ಹೇಳುವುದಾದರೆ ಉಗುರುಗಳನ್ನು ಬೆಳೆಸಲೇಬಾರದು ಮತ್ತು ವಾರಕ್ಕೊಮ್ಮೆಯಾದರೂ ಉಗುರನ್ನು ಕತ್ತರಿಸಬೇಕು ಆದರೆ ಹೀಗೆ ಉಗುರು ಕತ್ತರಿಸುವುದಕ್ಕೂ ಒಂದು ಪದ್ಧತಿ ಇದೆ. ಕೆಲವು ತಪ್ಪಾದ ದಿನಗಳಲ್ಲಿ ಉಗುರನ್ನು ಕತ್ತರಿಸುವುದರಿಂದ ಜೀವನಕ್ಕೆ ಸಂಬಂಧಿಸಿದ ಹಾಗೆ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.
ಅದನ್ನು ತಿಳಿಯದ ನಾವು ನಮಗೆ ಅನುಕೂಲವಾದ ದಿನಕ್ಕೆ ಅನುಕೂಲವಾದ ಸಮಯದಲ್ಲಿ ಅಥವಾ ರಜೆ ಇದ್ದಾಗ, ಇಂಟರ್ವ್ಯೂಗೆ ಹೋಗಬೇಕಿದ್ದಾಗ ಅಥವಾ ಮಕ್ಕಳು ಪಿಟಿ ಮಾಸ್ಟರ್ ಭಯಕ್ಕೆ ಎಲ್ಲೆಂದರಲ್ಲಿ ಉಗುರು ಕತ್ತರಿಸಿ ಬಿಡುತ್ತಾರೆ. ಬಳಿಕ ಇತರ ದುಷ್ಪರಿಣಾಮವನ್ನು ಅನುಭವಿಸಲೇಬೇಕಾಗುತ್ತದೆ ಇನ್ನು ಮುಂದೆ ಉಗುರು ಕತ್ತರಿಸುವ ವಿಷಯದಲ್ಲಿ ಈ ತಪ್ಪು ಮಾಡಬೇಡಿ ಯಾವ ದಿನ ಉಪಯೋಗ ಕತ್ತರಿಸುವುದರಿಂದ ಏನು ಫಲ ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಆ ಪ್ರಕಾರವಾಗಿ ಪಾಲಿಸಿ.
* ಸೋಮವಾರದ ದಿನವು ಶಿವನ ದಿನವಾಗಿದೆ. ಈ ದಿನ ಮನಸ್ಸಿನ ಕಾರಕ ಚಂದ್ರನ ಪ್ರಭಾವವು ಹೆಚ್ಚಿಗೆ ಇರುವ ದಿನವೂ ಆಗಿದೆ. ಈ ದಿನದಂದು ಉಗುರುಗಳನ್ನು ಕತ್ತರಿಸುವುದು ಒಳ್ಳೆಯ ಫಲಗಳನ್ನು ನೀಡುತ್ತದೆ. ನಿಮ್ಮ ಜೀವನದಲ್ಲಿ ಬೇಡವಾದ, ನಿಮಗೆ ಇಷ್ಟವಿರದ ಸಂಗತಿಗಳಿಂದ ಮುಕ್ತಿ ಪಡೆಯುತ್ತೀರಿ.
ಈ ಸುದ್ದಿ ಓದಿ:- ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!
* ಮಂಗಳವಾರದಂದು ಉಗುರುಗಳನ್ನು ಕತ್ತರಿಸುವುದೇ ಆಗಲಿ ಕೂದಲನ್ನು ಕತ್ತರಿಸುವುದೇ ಆಗಲಿ ಶುಭವಲ್ಲ. ಹೀಗೆ ಮಾಡುವುದರಿಂರದ ನೀವು ಸಾಲದ ಸುಳಿಯಲ್ಲಿ ಸಿಲುಕುತ್ತೀರಿ ಎಂದು ಶಾಸ್ತ್ರಗಳಲ್ಲಿ ಹೇಳಿದೆ.
* ಬುಧವಾರದ ದಿನ ಉಗುರುಗಳನ್ನು ಕತ್ತರಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ ಮತ್ತು ಇದು ಒಳ್ಳೆಯ ದಿನ ಎಂದು ಹೇಳಲಾಗಿದೆ. ಈ ದಿನ ಉಗುರು ಕತ್ತರಿಸಿದರೆ ಬುದ್ಧಿವಂತಿಕೆಗೆ ಶ್ರಮಕ್ಕೆ ತಕ್ಕ ಹಾಗೆ ಪ್ರತಿಫಲಗಳನ್ನು ಪಡೆಯುತ್ತಾರೆ ಈ ರೀತಿಯ ಫಲಗಳು ಸಿಗುತ್ತವೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ
* ಗುರುವಾರದ ದಿನವೂ ಕೂಡ ಉಗುರುಗಳನ್ನು ಕತ್ತರಿಸಬಹುದು. ಈ ದಿನ ಉಗುರು ಕತ್ತರಿಸಿದರೆ ಮಾನವೀಯ ಮೌಲ್ಯಗಳು ಹೆಚ್ಚಾಗುತ್ತವೆ, ನಿಮ್ಮಲ್ಲಿರುವ ಗುಣಗಳು ಪ್ರಕಟವಾಗುತ್ತದೆ ಎಂದು ಹೇಳಲಾಗಿದೆ
* ಶುಕ್ರವಾರದ ದಿನ ಲಕ್ಷ್ಮಿಯ ವಾರವಾಗಿರುವುದರಿಂದ ಈ ದಿನ ಉಗುರುಗಳನ್ನು ಹಾಗೂ ಕೂದಲನ್ನು ಕತ್ತರಿಸುವುದು ನಿಷಿದ್ಧ.
ಈ ಸುದ್ದಿ ಓದಿ:- ಸರ್ಕಾರದಿಂದ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಮೂರು ಬಂಪರ್ ಕೊಡುಗೆ.!
* ಶನಿವಾರದ ದಿನ ಉಗುರುಗಳನ್ನು ಕತ್ತರಿಸಿದರೆ ಗ್ರಹಗತಿಗಳ ಮೇಲೆ ಕೆಟ್ಟ ಪ್ರಭಾವ ಉಂಟಾಗುತ್ತದೆ.
* ಭಾನುವಾರದ ದಿನ ಉಗುರುಗಳನ್ನು ಕತ್ತರಿಸಲು ಯಾವುದೇ ಅಡ್ಡಿ ಇಲ್ಲ
* ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ ಶುಭ ಕಾರ್ಯಗಳ ನಡೆಯುವ ದಿನಗಳಲ್ಲಿ ಯಾವುದೇ ವಾರವಾಗಿದ್ದರೂ ಉಗುರುಗಳನ್ನು ಕತ್ತರಿಸುವಂತಿಲ್ಲ
* ಮುಸ್ಸಂಜೆ ವೇಳೆ ಯಾವುದೇ ದಿನ ಉಗುರು ಕತ್ತರಿಸುವಂತಿಲ್ಲ.