ಸಂಗಾತಿ ಎನ್ನುವುದು ಬದುಕಿನ ಬಹಳ ಮುಖ್ಯ ಭಾಗ. ಸಂಗಾತಿಗೆ ದೇಹದ ಅರ್ಧ ಭಾಗವನ್ನು ನೀಡಿ ಅರ್ಧನಾರೀಶ್ವರನಾದ ಮಹಾದೇವನನ್ನು ಪೂಜಿಸುವ ಸಂಸ್ಕೃತಿ ನಮ್ಮದು. ಸಂಸಾರದಲ್ಲಿ ಸತಿ ಪತಿ ಇಬ್ಬರ ಪಾತ್ರವೂ ಕೂಡ ಬಹಳ ದೊಡ್ಡದು ಇಬ್ಬರಿಗೂ ಕೂಡ ಅಷ್ಟೇ ಪೂಜ್ಯನೀಯ ಸ್ಥಾನವಿದೆ ಹಾಗೂ ಜವಬ್ದಾರಿಗಳೂ ಇವೆ.
ಇಂದು ನಾವು ಈ ಲೇಖನದಲ್ಲಿ ದಾಂಪತ್ಯದಲ್ಲಿ ಪತ್ನಿ ಆದವರ ಪಾತ್ರ ಹೇಗಿರಬೇಕು ಮತ್ತು ಹೆಣ್ಣು ಮಕ್ಕಳಲ್ಲಿ ಯಾವ ರೀತಿ ಗುಣಗಳು ಇದ್ದರೆ ಅವರ ಪರಿಪೂರ್ಣ ಪತ್ನಿ ಆಗುತ್ತಾರೆ ಎನ್ನುವ ಅಂಶದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಹೆಣ್ಣು ಮಕ್ಕಳು ಮನೆಯ ಅದೃಷ್ಟ ಲಕ್ಷ್ಮಿ, ಮನೆಯಲ್ಲಿ ಎಲ್ಲರೂ ಮುದ್ದಾಗಿ ಸಾಗುತ್ತಾರೆ ಎಲ್ಲವೂ ನಿಜ.
ಮನೆಯಲ್ಲಿ ಇಷ್ಟೇ ಸವಲತ್ತು ಇದ್ದರು ಪ್ರೀತಿಯಿಂದ ಸಾಕಿದರೂ ಹೆಣ್ಣು ಮಕ್ಕಳು ಬೆಳೆಯುತ್ತಾ ಹೋದಂತೆ ಅಹಂಕಾರದ ಬದಲು ತಾಳ್ಮೆ ಸಹನೆ ಸೌಹಾರ್ದತೆ ಗುಣ ಕಲಿಯಬೇಕು. ಬೆಳೆಯುತ್ತಲೇ ಅಣ್ಣ-ತಮ್ಮಂದಿರ ಅಕ್ಕ-ತಂಗಿಯರ ಜೊತೆ ಹಂಚಿಕೊಳ್ಳುವ ಗುಣ ಕಲಿಯಬೇಕು. ತಂದೆ ತಾಯಿಗೆ ಪ್ರೀತಿಯ ಮಗಳಾಗಿ ಮಾತ್ರವಲ್ಲದೆ ಅವರಿಗೆ ಗೌರವ ಕೊಡುವ ಅವರ ಕೀರ್ತಿಯನ್ನು ಬೆಳಗುವ ಮಗಳಾಗಬೇಕು.
ಈ ಸುದ್ದಿ ಓದಿ:-ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!
ಹೆಣ್ಣು ಮಕ್ಳಳು ಓದಿ ವಿದ್ಯಾವಂತೆಯಾಗಿ ಸಾಧನೆ ಮಾಡಿದರೆ ಸಂತೋಷ ಒಂದು ವೇಳೆ ಮಾಡಲಾಗದಿದ್ದರು ಅಪ್ಪ ಅಮ್ಮನ ಹೆಸರಿಗೆ ಚ್ಯುತಿ ತರದೆ ಬದುಕಿದರೆ ಅದೇ ಆಕೆಯ ಜೀವನದ ಶ್ರೇಷ್ಠ ಸಾಧನೆ. ಮದುವೆ ಆದ ಮೇಲೆ ಕೂಡ ಪತಿ ಕುಟುಂಬದವರೊಂದಿಗೆ ಇದೇ ರೀತಿ ಹೊಂದಾಣಿಕೆ ಗುಣವಿರಬೇಕು.
ಅತ್ತೆ ಮನೆಯವರನ್ನು ತಂದೆ ತಾಯಿಯಂತೆ ಕಾಣುವ ಪತಿಯ ಅಣ್ಣತಮ್ಮಂದಿರನ್ನು ತನ್ನ ಅಣ್ಣತಮ್ಮಂದಿರಂತೆ ಗೌರವಿಸುವ ಮನೆಯಲ್ಲಿ ಹಿರಿಯರಿದ್ದರೆ ಅವರಿಗೆ ಸೇವೆ ಮಾಡುವ ಮನೋಭಾವ ಹೊಂದಿದ್ದರೆ ಆಕೆಯನ್ನು ಪತ್ನಿಯಾಗಿ ಪಡೆದವರೇ ಪುಣ್ಯವಂತರು. ಹಾಗೆಯೇ ಮದುವೆ ಆದ ಮೇಲೆ ಬರುವ ಕಷ್ಟ ಸುಖಗಳಲ್ಲಿ ಒಂದೇ ರೀತಿ ಇರುವ ಸೋತಾಗ ಧೈರ್ಯ ಹೇಳುವ.
ಅನಾರೋಗ್ಯದಲ್ಲಿ ಧೈರ್ಯ ತುಂಬಿ ಶುಶ್ರೂಶೆ ಮಾಡುವ ಕಷ್ಟ ಬಂದಾಗ ಅದನ್ನು ಹಂಚಿಕೊಂಡು ಅವರ ಸಾಧನೆಗೆ ಸಹಕರಿಸುವ ಗುಣ ಹೊಂದಿದ್ದರೆ ಆಕೆ ಪರಿಪೂರ್ಣ ಪತ್ನಿ. ಹಾಗೆಯೇ ಯಾವುದೇ ಕಾರಣಕ್ಕೂ ಇನ್ನೊಬ್ಬರ ಆಸ್ತಿಗೆ ಆಗಲಿ ರೂಪಕ್ಕೆ ಆಗಲಿ ಮಾರುಹೋಗದೆ ಮದುವೆ ಆದ ಮೇಲೆ ಪತಿಯ ತನ ಎಲ್ಲವೂ ಎಂದು ಯಾವುದರ ಮೇಲು ಕೂಡ ಅತಿಯಾದ ವ್ಯಾಮೋಹಕ್ಕೆ ಬಲಿಯಾಗದೆ ಪರಿಶುದ್ದಳಾಗಿ ಬದುಕಿದರೆ ಆಕೆ ದೇವತೆ.
ಈ ಸುದ್ದಿ ಓದಿ:-ಸರ್ಕಾರದಿಂದ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಮೂರು ಬಂಪರ್ ಕೊಡುಗೆ.!
ಪತಿ ದಾರಿ ತಪ್ಪಿದರೂ ಬುದ್ಧಿವಂತಿಕೆಯಿಂದ ಸರಿಪಡಿಸಿಕೊಳ್ಳುತ್ತಾ ಬದುಕುವ ಹೆಂಡತಿ ಶ್ರೇಷ್ಠ ಮಕ್ಕಳಾದ ಮೇಲೆ ಕೂಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತುಕೊಟ್ಟು ತಾನು ಕಲಿತ ಸಂಸ್ಕಾರವನ್ನು ತನ್ನ ಮಕ್ಕಳಿಗೂ ಕಲಿಸುವ ಗುಣ ಹೊಂದಿರುವ ಪ್ರತಿ ಹಂತದಲ್ಲೂ ಮಕ್ಕಳ ಮೇಲೆ ಕಣ್ಣಿಟ್ಟು ಕಾಯುವ ಹೆಣ್ಣು ತನ್ನ ಕಾಲ ಮುಗಿದ ಮೇಲು ತಾನು ಹೋದ ಮನೆಯಲ್ಲಿ ತನ್ನ ಹೆಸರು ಉಳಿಸಿಕೊಂಡಿರುತ್ತಾಳೆ.
ಹೆಣ್ಣು ಮಕ್ಕಳಲ್ಲಿ ಯಾವ ಸದ್ಗುಣ ಇದ್ದರೂ ಇರದಿದ್ದರೂ ವಾದ ಮಾಡುವ ಗುಣ ಇರಬಾರದು. ತನ್ನ ಕುಟುಂಬದವರಿಗೆ ತಪ್ಪು ಒಪ್ಪು ಏನಾಗಿದ್ದರೂ ಸೋಲುವ ಸಹನೆ ಇರಬೇಕು ಮತ್ತು ಅದನ್ನು ಸಮಾಧಾನದಿಂದ ಅರ್ಥೈಸುವ ತಾಳ್ಮೆ ಇರಬೇಕು, ಎಲ್ಲವನ್ನು ಗೆಲ್ಲುವ ಧೈರ್ಯ ಇರಬೇಕು.
ಆಗ ಆಕೆ ಆ ಮನೆಗೆ ಲಕ್ಷ್ಮಿ, ಸರಸ್ವತಿ ಮತ್ತು ದೇವಿ ಆಗಿರುತ್ತಾರೆ. ಆ ಮನೆಯ ಏಳಿಗೆಯೂ ಆಗುತ್ತದೆ. ಮನೆಯಲ್ಲಿರುವ ಎಲ್ಲರಿಗೂ ಕೂಡ ಎಲ್ಲಾ ಕಾರ್ಯಗಳಲ್ಲೂ ಗೆಲುವಾಗುತ್ತದೆ. ಇಂತಹ ಪತ್ನಿ ಸಿಗುವುದು ಏಳು ಜನ್ಮದ ಪುಣ್ಯ ಎಂದೇ ಹೇಳಬಹುದು.