ನಮ್ಮ ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಬ್ರಹ್ಮದೇವನು ಈ ಸೃಷ್ಟಿಯ ಸೃಷ್ಟಿಕರ್ತ. ಸಕಲ ಜೀವರಾಶಿಯನ್ನು ಸೃಷ್ಟಿ ಮಾಡಿ ಆಯಸ್ಸು ನಿರ್ಧರಿಸುವುದು ಬ್ರಹ್ಮ ದೇವನೇ. ಆದರೆ ಈ ಭೂಮಂಡಲದಲ್ಲಿ ಪ್ರತಿಯೊಂದು ಜೀವಿಗೂ ಕೂಡ ಆಯಸ್ಸು ಬೇರೆಬೇರೆ ರೀತಿ ಇರುತ್ತದೆ. ಇಲ್ಲಿ ಒಂದು ದಿನದಲ್ಲಿ ಹುಟ್ಟಿ ಒಂದೇ ದಿನದಲ್ಲಿ ಸಾಯುವ ಕ್ರಿಮಿ-ಕೀಟ ಸೂಕ್ಷ್ಮಾಣು ಜೀವಿಗಳಿಂದ ಹಿಡಿದು ಶತಮಾನದವರೆಗೆ ಆಯಸ್ಸು ಪಡೆದ ಜೀವಿಗಳನ್ನು ಕಾಣಬಹುದು.
ಅದರಲ್ಲಿ ಪ್ರಾಣಿಗಳ ವರ್ಗಕ್ಕೆ ಬರುವುದಾದರೆ ಪ್ರಾಣಿಗಳಲ್ಲೂ ಕೂಡ ಒಂದು ಪ್ರಾಣಿಗೆ ಒಂದೊಂದು ಸರಾಸರಿ ವಯಸ್ಸು ನಿರ್ಧಾರ ಆಗಿದೆ, ಈ ರೀತಿ ವ್ಯತ್ಯಾಸ ಆಗಿರುವುದಕ್ಕೂ ಹಾಗೂ ಅತಿ ಹೆಚ್ಚಿನ ಆಯಸ್ಸು ಪಡೆದಿರುವ ಮನುಷ್ಯನು ಜೀವನದಲ್ಲಿ ಬಹಳ ಕಷ್ಟ ಪಡುವುದಕ್ಕೆ ಸಂಬಂಧ ಇದೆಯೇ ಎನ್ನುವ ವಿಚಾರದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.
ಈ ಸುದ್ದಿ ಓದಿ:- ನಿಮ್ಮ ಹೆಂಡತಿಯಲ್ಲಿ ಈ ಗುಣಗಳು ಇದ್ದರೆ ಆಕೆ ಪರಿಪೂರ್ಣ ಪತ್ನಿ.!
ಇದಕ್ಕೆ ಒಂದು ಕಥೆಯೂ ಕೂಡ ಇದೆ. ಬ್ರಹ್ಮ ದೇವನು ಪ್ರಾಣಿಗಳಿಗೆ ಆಯಸ್ಸು ನಿರ್ಧಾರ ಮಾಡುವಾಗ ಮನುಷ್ಯ, ಕತ್ತೆ, ನಾಯಿ ಹಾಗೂ ಗೂಬೆ ಎಲ್ಲರಿಗೂ ಸಮ ವಯಸ್ಸು ಅಂದರೆ 40 ವರ್ಷಗಳು ನಿರ್ಧಾರ ಮಾಡಿದ್ದರಂತೆ. ಮೊದಲಿಗೆ ಬ್ರಹ್ಮದೇವನ ಬಳಿ ಬಂದು ತನ್ನ ಕೋರಿಕೆ ಇಟ್ಟ ಕತ್ತೆಯು ನನಗೆ 40 ವರ್ಷ ಬಹಳ ಅಧಿಕ ಆಯ್ತು ಅಷ್ಟು ಆಯಸ್ಸುವರೆಗೂ ಕೂಡ ನಾನು ನನ್ನ ಮಾಲೀಕನ ಮನೆಯಲ್ಲಿ ದುಡಿಯಲು ಸಾಧ್ಯವಿಲ್ಲ.
ಹಾಗಾಗಿ ನಾನು ಹೆಚ್ಚು ಚೈತನ್ಯದಿಂದ ಇರುವ 20 ವರ್ಷ ವಯಸ್ಸು ನನಗೆ ಸಾಕು ಆ ನಂತರದ 20 ವರ್ಷ ನನಗೆ ಬೇಡ, ದಯವಿಟ್ಟು ವಾಪಸ್ ತೆಗೆದುಕೊಳ್ಳಿ ಎಂದು ಮೊರೆ ಇಟ್ಟಿರಂತೆ. ಬ್ರಹ್ಮದೇವನು ಯೋಚನೆಯಲ್ಲಿರುವಾಗ ಮನುಷ್ಯನು ಬ್ರಹ್ಮದೇವರ ಬಳಿ ಆ 20 ವರ್ಷವನ್ನು ತನಗೆ ಕೊಡುವಂತೆ ಕೇಳಿಕೊಂಡರಂತೆ.
ಈ ಸುದ್ದಿ ಓದಿ:- ಉಗುರು ಕತ್ತರಿಸುವುದಕ್ಕೂ ಪದ್ಧತಿ ಇದೆ, ಈ ದಿನ ಉಗುರು ಕತ್ತರಿಸಿದರೆ ಬಡತನ ಬರುವುದಿಲ್ಲ.!
ನಾನು 40 ವರ್ಷಗಳವರೆಗೆ ಜೀವನದಲ್ಲಿ ಸರಿಯಾದ ರೀತಿಯಲ್ಲಿ ಸೆಟಲ್ ಆಗಿರುವುದಿಲ್ಲ, ಜೀವನವನ್ನು ಕೂಡ ಸರಿಯಾಗಿ ಅರ್ಥ ಮಾಡಿಕೊಂಡಿರುವುದಿಲ್ಲ. ನನಗೆ ಬದುಕು ಅರ್ಥವಾಗಿ ಸಂಸಾರದ ಜೊತೆ ಜವಾಬ್ದಾರಿಯಾಗಿ ಇರಬೇಕು ಎಂದು ಆಲೋಚನೆ ಬರುವಾಗ ನನ್ನ ಆಯಸ್ಸು ಮುಗಿದು ಹೋಗಿರುತ್ತದೆ.
ಇದರಿಂದ ಏನು ಪ್ರಯೋಜನ ಹೆಚ್ಚುವರಿಯಾಗಿ 20 ವರ್ಷ ಬೇಕು ಎಂದು ಕೇಳಿದರಂತೆ ಬ್ರಹ್ಮದೇವ ಅಸ್ತು ಎಂದು ಅನುಮತಿ ನೀಡಿದ ಕಾರಣ 40ರಿಂದ 60 ವರ್ಷದವರೆಗೆ ಮನುಷ್ಯ ತನ್ನ ಮಕ್ಕಳು ಮೊಮ್ಮಕ್ಕಳನ್ನು, ಕುಟುಂಬವನ್ನು ಸರಿಯಾಗಿ ಸೆಟಲ್ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡು ಕತ್ತೆ ರೀತಿ ದುಡಿಯುತ್ತಾನೆ.
ನಂತರ ನಾಯಿಯು ಕೂಡ ತನಗೆ ಹೆಚ್ಚುವರಿ 20 ವರ್ಷ ಬೇಡ 20 ವರ್ಷ ಆಯಸ್ಸು ಸಾಕು ಎಂದು ಕೋರಿಕೊಂಡಿತಂತೆ. ಮನುಷ್ಯ ಪುನಃ ಅದೇ ಆಯಸ್ಸನ್ನು ತನಗೆ ಕೊಡುವಂತೆ ಕೇಳಿಕೊಳ್ಳುತ್ತಾನೆ ಕಾರಣ ಕೇಳಿದಾಗ ನಾಯಿ ಸದಾಕಾಲ ತನ್ನ ಮನೆಯಲ್ಲಿಯೇ ಇರುತ್ತದೆ. ನಾನು 60 ವರ್ಷದವರೆಗೆ ನಾನಾ ಕಾರಣಗಳಿಂದಾಗಿ ಮನೆ ಬಿಟ್ಟು ಹೊರಗೆ ಓಡಾಡುತ್ತಲೇ ಇರುತ್ತೇನೆ.
ಈ ಸುದ್ದಿ ಓದಿ:- ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!
ಹಾಗಾಗಿ 20 ವರ್ಷವಾದರೂ ನಾಯಿಯ ರೀತಿ ವಿಶ್ರಾಂತಿ ಮಾಡಬೇಕು ಎಂದು ಕೇಳಿಕೊಂಡಿದ್ದಕ್ಕೆ ಬ್ರಹ್ಮ ದೇವರು ಅಸ್ತು ಎಂದರಂತೆ. ಈ ಕಾರಣದಿಂದ 60 ರಿಂದ 80 ವರ್ಷದಲ್ಲಿ ಮನುಷ್ಯ ಮನೆಯಲ್ಲಿ ಇರುತ್ತಾನೆ ಹೊರಗೆ ಹೋಗುವುದಿಲ್ಲ ಮತ್ತು ಇದು ಮುಂದುವರೆದು ಗೂಬೆ ಸರದಿ ಬಂದಾಗ ಕೂಡ ಗೂಬೆಯು 20 ವರ್ಷ ಆಯಸ್ಸು ಸಾಕು ಎಂದು ಹೇಳಿದಾಗ ಹೆಚ್ಚುವರಿ 20 ವರ್ಷ ಆಯಸ್ಸನ್ನು ಮನುಷ್ಯನೇ ಕೋರಿಕೊಂಡನಂತೆ.
ಈ ಬಾರಿಯೂ ಅಸ್ತು ಎಂದ ಕಾರಣ 80 ರಿಂದ 100 ವರ್ಷ ವಯಸ್ಸಿನಲ್ಲಿ ಮನುಷ್ಯನ ಮುಖ ಚಹರೆ ಬದಲಾಗುತ್ತದೆ, ಕಣ್ಣುಗಳು ಒಳಗೆ ಹೋಗುತ್ತವೆ, ಚರ್ಮ ಬಿಳಿಚಿ ಕೊಳ್ಳುತ್ತದೆ, ಸುಕ್ಕಾಗುತ್ತದೆ ಬುದ್ಧಿ ಮಂಕಾಗುತ್ತದೆ. ಹೀಗೆ 80 ರಿಂದ 100 ವರ್ಷದವರೆಗೂ ಮನುಷ್ಯ ಗೂಬೆ ರೀತಿ ಬದುಕುತ್ತಾನೆ.