ಸಾಮಾನ್ಯವಾಗಿ ಮಹಿಳೆಯರಲ್ಲಿ 45 ರಿಂದ 55 ವರ್ಷದ ಒಳಗಡೆ ಹೆಣ್ಣು ಮಕ್ಕಳಲ್ಲಿ ಋತುಚಕ್ರ ನಿಲ್ಲುತ್ತದೆ. ಸರಾಸರಿ 51 ವರ್ಷ ಎಂದು ಹೇಳಲಾಗುತ್ತದೆ. ಆದರೂ ಒಮ್ಮೊಮ್ಮೆ ಅವರವರ ಕುಟುಂಬದ ಹಿನ್ನೆಲೆ ಮೇಲೆ ಇದು ನಿರ್ಧಾರ ಆಗುತ್ತದೆ ಮತ್ತು ಋತುಚಕ್ರ ನಿಲ್ಲುವುದು ಈ ಸಮಯದಲ್ಲದರೂ ಅದು ನಿಲ್ಲುವ ಲಕ್ಷಣಗಳು ಮುಂಚೆಯೇ ಕಾಣಿಸಿಕೊಳ್ಳಲು ಶುರುವಾಗಿರುತ್ತವೆ, ಇದನ್ನೇ ಮೆನೊಪಾಸ್ ಎನ್ನುತ್ತಾರೆ.
ಈಗಿನ ಕಾಲದ ಮಹಿಳೆಯರು 40 ವರ್ಷಕ್ಕೆ ಇದನ್ನು ಅನುಭವಿಸುತ್ತಿದ್ದಾರೆ. ಮತ್ತು ಹೆಚ್ಚಿನವರು ಈ ಸಮಯದಲ್ಲಿ ಆಗುವ ಸಮಸ್ಯೆ ಎದುರಿಸಲಾಗದೆ ಗರ್ಭಕೋಶ ತೆಗಿಸಲು ನಿರ್ಧಾರ ತೆಗೆದುಕೊಳ್ಳುತ್ತಾರೆ, ಅದು ಎಷ್ಟು ಸರಿ? ಈ ಸಮಯದಲ್ಲಿ ಯಾವ ಲಕ್ಷಣಗಳು ಅಪಾಯದ ಸೂಚನೆಗಳಾಗಿರುತ್ತವೆ ಎನ್ನುವ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರದ ಬಗ್ಗೆ ಅಂಕಣದಲ್ಲಿ ಹಂಚಿಕೊಳ್ಳುತ್ತೇವೆ.
ಸಂತಾನ ಫಲಕ್ಕಾಗಿ ರಾಯರ ಅದ್ಭುತವಾದ ಅನುಷ್ಠಾನ.!
ಋತುಚಕ್ರ ನಿಲ್ಲುವ ಸಮಯದಲ್ಲಿ ಎಲ್ಲರಿಗೂ ಒಂದೇ ರೀತಿ ಲಕ್ಷಣಗಳು ಇರುವುದಿಲ. ಲ ಕೆಲವರಿಗೆ ಈ ಪ್ರಕ್ರಿಯೆ ಆರಂಭವಾದ ಸಮಯದಿಂದ ನಿಲ್ಲುವವರೆಗೂ ಪ್ರತಿ ತಿಂಗಳು ಸರಿಯಾಗಿ ಆಗುತ್ತಾ ಒಂದೇ ಬಾರಿ ನಿಂತು ಹೋಗುತ್ತದೆ. ಇನ್ನು ಕೆಲವರಿಗೆ ಋತು ಚಕ್ರ ನಿಲ್ಲುವ ಸಮಯದಲ್ಲಿ ಹಂತ ಹಂತವಾಗಿ ಪ್ರತಿ ತಿಂಗಳು ಋತುಸ್ತ್ರಾವ ಕಡಿಮೆ ಆಗುತ್ತಾ ಒಂದೇ ಬಾರಿಗೆ ನಿಂತುಹೋಗುತ್ತದೆ.
ಇನ್ನು ಕೆಲವರಿಗೆ ಐದಾರು ತಿಂಗಳು ಡೇಟ್ ಆಗುವುದಿಲ್ಲ ನಂತರ ಆದಾಗ ಒಂದೇ ಬಾರಿಗೆ ಹೆಚ್ಚು ಫ್ಲೋ ಇರುತ್ತದೆ. ಇನ್ನು ಕೆಲವರಿಗೆ ಎರಡು ಮೂರು ತಿಂಗಳು ಮಿಸ್ ಆಗುತ್ತದೆ ನಂತರ ಆದಾಗ ಅದು ತಿಂಗಳವರೆಗೂ ರಕ್ತಸ್ರಾವವಾಗುತ್ತದೆ ಮತ್ತು ವಿಪರೀತವಾದ ನೋ’ವು ಕೂಡ ಕಾಣಿಸಿಕೊಳ್ಳುತ್ತದೆ. ಇಂತಹ ಲಕ್ಷಣಗಳು ಇದ್ದಾಗ ಹೆಣ್ಣು ಮಕ್ಕಳು ಬಹಳ ಎಚ್ಚರಿಕೆಯಿಂದ ಇರಬೇಕು. ತಪ್ಪದೇ ಕೂಡಲೇ ವೈದ್ಯರಲ್ಲಿ ಸಂಪರ್ಕಿಸಬೇಕು.
ಜನ್ ಧನ್ ಜೀರೋ ಅಕೌಂಟ್ ಗೆ ಕೇಂದ್ರದ ಮೋದಿ ಬಂಪರ್ ಗಿಫ್ಟ್ 10,000 ಹಣ ಇವತ್ತು ಖಾತೆಗೆ ಜಮಾ.!
ಹೆಣ್ಣು ಮಕ್ಕಳಿಗೆ ತಿಂಗಳುಗಟ್ಟಲೆ ರಕ್ತಸ್ರಾವಾಗುತ್ತದೆ ಎಂದರೆ ಅದು ಗರ್ಭಕೋಶದ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ ಎನ್ನುವುದನ್ನು ಹೇಳುತ್ತದೆ. ಕೆಲವೊಮ್ಮೆ ಹಾರ್ಮೋನ್ಸ್ ವ್ಯತ್ಯಾಸದಿಂದಲೂ ಕೂಡ ಇದು ಉಂಟಾಗುತ್ತದೆ, ಬೇರೆ ಯಾವುದು ಕಾಯಿಲೆ ಬಂದ ಕಾರಣದಿಂದಾಗಲು ಹೀಗಾಗಬಹುದು. ಮೆಡಿಕಲ್ ಟೆಸ್ಟ್ ಗಳಿಂದ ಸಮಸ್ಯೆ ಏನಾಗಿದೆ ಎಂದು ಕಂಡುಹಿಡಿಯಲಾಗುತ್ತದೆ.
ಗರ್ಭಕೋಶದ ಪದರ ಗಟ್ಟಿಯಾಗಿರಬಹುದು ಅಥವಾ ಗರ್ಭಕೋಶದಲ್ಲಿ ಗೆಡ್ಡೆಗಳು ಆಗಿರಬಹುದು ಅಥವಾ ಹಾರ್ಮೋನ್ ವೇರಿಯೇಷನ್ ಇರಬಹುದು. ಸಮಸ್ಯೆ ಏನೆಂಬುದನ್ನು ಪರೀಕ್ಷಿಸಿ ಒಂದು ವೇಳೆ ಸಮಸ್ಯೆ ಇದ್ದರೆ ಆದಷ್ಟು ಔಷಧಿಯಿಂದ ಹಾಗೂ ಸರ್ಜರಿ ಇಂದ ಸಮಸ್ಯೆ ಪರಿಹರಿಸಲು ನೋಡಲಾಗುತ್ತದೆ.
ಇವತ್ತು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಈ ಜಿಲ್ಲೆಗಳಿಗೆ ಜಮಾ ಆಗುತ್ತೆ.!
ಆ ಹಂತ ಮೀರಿದ್ದಾಗ ಪರಿಹಾರ ಇಲ್ಲದೆ ಇದ್ದಾಗ ಮಾತ್ರ ಗರ್ಭಕೋಶದ ಆಪರೇಷನ್ ಮಾಡಿ ತೆಗೆಯಲು ಸೂಚಿಸುತ್ತಾರೆ. ಆದರೆ ಕೆಲವರು ಹೆಣ್ಣು ಮಕ್ಕಳು ಸಣ್ಣ ಪುಟ್ಟ ಸಮಸ್ಯೆಗಳು ಇದ್ದಾಗ ಅದನ್ನು ಸರಿಪಡಿಸಿಕೊಳ್ಳುವುದಕ್ಕಿಂತ ಒಂದೇ ಬಾರಿಗೆ ಮದುವೆ ಆಯ್ತು ಮಕ್ಕಳು ಇದ್ದಾರೆ ಅವಶ್ಯಕತೆ ಇಲ್ಲ ಎಂದು ಗರ್ಭಕೋಶ ತೆಗೆಸಿ ಬಿಡುತ್ತಾರೆ.
ಇಂತಹ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ, ಯಾಕೆಂದರೆ ನೈಸರ್ಗಿಕವಾಗಿ ಆರಂಭವಾಗಿರುವ ಇದು ನೈಸರ್ಗಿಕವಾಗಿ ನಿಲ್ಲಬೇಕು. ನಾವು ಬಲವಂತವಾಗಿ ಯಾವುದೇ ಬದಲಾವಣೆ ಮಾಡುವುದರಿಂದ ಬಹಳ ದುಷ್ಪರಿಣಾಮ ಅನುಭವಿಸಬೇಕಾಗುತ್ತದೆ. ಆದಷ್ಟು ಸಮಸ್ಯೆಗಳನ್ನು ಕಂಟ್ರೋಲ್ ಮಾಡಿಕೊಳ್ಳುವುದಕ್ಕೆ ಪರಿಹಾರ ಈ ಸಲಹೆಗಳನ್ನು ಪಾಲಿಸಿ.
ಈ ಆಕಾರದ ಗಡಿಯಾರ ಮನೆಯಲ್ಲಿ ಇರಲೇ ಬಾರದು.!
ಈ ಸಮಯದಲ್ಲಿ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಸಾಕಷ್ಟು ಗೊಂದಲಗಳು ಇರುತ್ತವೆ ಅವರಿಗೆ ಮೂಡ್ ಸ್ವಿಂಗ್ ಆಗುವುದು ಸ್ಟ್ರೆಸ್ ಆಗುವುದು ಇನ್ನು ಮುಂತಾದ ಮಾನಸಿಕ ತೊಂದರೆಗಳು ಇರುತ್ತದೆ. ಪ್ರತಿದಿನವೂ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮತ್ತು 20 ನಿಮಿಷಗಳ ಧ್ಯಾನ ಮಾಡುವುದು ಇದರೊಂದಿಗೆ ಒಳ್ಳೆಯ ಡಯಟ್ ಫಾಲೋ ಮಾಡುವುದು, ಪ್ರೋಟಿನ್ ಅಂಶ ಹೆಚ್ಚು ಇರುವ ಆಹಾರ ಪದಾರ್ಥ ಸೇವಿಸುವುದು ಇವು ನಿಮ್ಮ ಋತು ಚಕ್ರ ಪ್ರಕ್ರಿಯೆ ಸಲೀಸಾಗಿ ನಿಲ್ಲಲು ಸಹಾಯ ಮಾಡಿಕೊಡುತ್ತದೆ.