ನಮ್ಮಲ್ಲಿ ಕೈಯಲ್ಲಿರುವ ಹಸ್ತ ರೇಖೆಗಳನ್ನು ನೋಡಿ ಶಾಸ್ತ್ರ ನೋಡುತ್ತಾರೆ, ಕಣ್ಣು ರೇಖೆಗಳನ್ನು, ಮುಖ ಲಕ್ಷಣಗಳನ್ನು ಕೂಡ ನೋಡಿ ಶಾಸ್ತ್ರ ಹೇಳುತ್ತಾರೆ. ದೇಹದಲ್ಲಿರುವ ಅಂಗಗಳ ಲಕ್ಷಣಗಳನ್ನು ನೋಡಿ ಅವರ ಶುಭ ಹಾಗು ಅಶುಭ ಫಲಗಳನ್ನು ನುಡಿಯಬಹುದು ಮತ್ತು ಅವರ ಭವಿಷ್ಯದ ಬಗ್ಗೆ ಕೂಡ ಹೇಳಬಹುದು.
ಇದರ ಬಗ್ಗೆ ಹಿಂದಿನ ಕಾಲದಲ್ಲೂ ಕೂಡ ಪುರಾಣಗಳಲ್ಲಿ ತಿಳಿಸಲಾಗಿದೆ ವರಹಾ ಸಂಹಿತೆ, ನಾರದ ಸಂಹಿತೆ, ಭವಿಷ್ಯಪುರಾಣ ಇವುಗಳಲ್ಲಿ ಕೂಡ ಇದರ ಬಗ್ಗೆ ಉಲ್ಲೇಖ ಇದೆ. ಮಹಾಭಾರತದ ಕಾಲದಲ್ಲೂ ಸಹ ಒಬ್ಬ ವ್ಯಕ್ತಿಯ ಅಂಗಾಂಗಗಳ ವ್ಯತ್ಯಾಸಗಳನ್ನು ನೋಡಿ ಭವಿಷ್ಯವನ್ನು ಊಹಿಸಿ ಹೇಳಲಾಗುತ್ತಿತ್ತು ಎನ್ನುವ ಮಾತುಗಳಿವೆ. ಹಾಗಾಗಿ ದೇಹದ ಯಾವ ಅಂಗ ಯಾವ ರೀತಿ ಇದ್ದರೆ ಯಾವ ರೀತಿ ಫಲ ಎನ್ನುವುದರ ಬಗ್ಗೆ ಕೆಲ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಕಿಡ್ನಿ ಫೇಲ್ಯೂರ್ ಆಗಿದ್ದನ್ನೂ ಸರಿ ಮಾಡಬಹುದು, ಡಯಾಲಿಸಿಸ್ ಅವಶ್ಯಕತೆ ಇಲ್ಲ.! ವೈದ್ಯರು ಬಿಚ್ಚಿಟ್ಟ ಸತ್ಯಾಂಶ
● ಕೆಲವರು ತಮ್ಮ ನಾಲಿಗೆ ತುದಿಯಿಂದ ಮೂಗಿನ ತುದಿಯನ್ನು ಮುಟ್ಟಿಸುತ್ತಾರೆ, ಇದು ಬಹಳ ಅಪರೂಪ. ಈ ರೀತಿ ಮಾಡಲು ಸಾಧ್ಯವಾಗುವವರು ಜೀವನದಲ್ಲಿ ಬಹಳ ಪ್ರಸಿದ್ಧಿ ಪಡೆಯುತ್ತಾರೆ, ದೊಡ್ಡ ಜನರ ಸ್ನೇಹ ಬೆಳೆಸುತ್ತಾರೆ. ಇವರಿಗೆ 35 ವರ್ಷದಿಂದ 42 ವರ್ಷದವರೆಗೆ ಬಹಳ ಅದೃಷ್ಟದ ಸಮಯವಾಗಿರುತ್ತದೆ.
● ಬಾಯಿಯಲ್ಲಿ 32 ಹಲ್ಲುಗಳನ್ನು ಎಲ್ಲರೂ ಹೊಂದಿರುವುದಿಲ್ಲ. ಸಂಪೂರ್ಣವಾಗಿ 32 ಹಲ್ಲುಗಳನ್ನು ಹೊಂದಿರುವ ವ್ಯಕ್ತಿಯು ಯಾವಾಗಲೂ ಸತ್ಯವನ್ನು ನುಡಿಯುತ್ತಾನೆ ಹಾಗೂ ಆತನು ನುಡಿದ ಎಲ್ಲ ಮಾತುಗಳು ಕೂಡ ನಡೆಯುತ್ತವೆ ಎನ್ನುವುದನ್ನು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಈ ರೀತಿ ಇರುವ ವ್ಯಕ್ತಿಗಳು ಜೀವನ ಬಹಳ ಸುಖಮಯವಾಗಿರುತ್ತದೆ.
● ಬಾಯಿಯಲ್ಲಿ ಬೆಸ ಸಂಖ್ಯೆ ಹಲ್ಲುಗಳು ಇದ್ದರೆ ಅವರ ಜೀವನ ಬಹಳ ಕ’ಷ್ಟದಿಂದ ಕೂಡಿರುತ್ತದೆ. ಸಮಸಂಖ್ಯೆ ಹಲ್ಲುಗಳು ಇದ್ದರೆ ಜೀವನ ಬಹಳ ಸರೀಸಾಗಿ ನಡೆಯುತ್ತದೆ. ಸುಖಕರವಾಗಿರುತ್ತದೆ ಮತ್ತು ಅವರಿಗೆ ಸಮಸ್ಯೆಗಳು ಕೂಡ ಬಹಳ ವಿರಳ. ಸಮಸ್ಯೆಯಾದರೂ ಕೂಡ ತಕ್ಷಣ ಪರಿಹಾರವಾಗುವಂತ ಸಹಾಯಗಳು ಸಿಗುತ್ತವೆ ಎನ್ನುವುದನ್ನು ಪುರಾಣ ಹೇಳುತ್ತದೆ.
● ಪದೇಪದೇ ಕಣ್ಣಿನ ರೆಪ್ಪೆಗಳನ್ನು ಬಡಿಯುವ ವ್ಯಕ್ತಿಗಳು ನಂಬಿಕೆಗೆ ಅರ್ಹರಾಗಿರುವುದಿಲ್ಲ, ಅವರ ಬಳಿ ನಮ್ಮ ಸೀಕ್ರೆಟ್ಗಳನ್ನು ಹೇಳಿಕೊಳ್ಳದೆ ಇರುವುದೇ ಒಳ್ಳೆಯದು. ಅವರು ತುಂಬಾ ಚಂಚಲ ಸ್ವಭಾವದವರಾಗಿದ್ದು ಜೀವನದಲ್ಲಿ ಸೀರಿಯಸ್ನೆಸ್ ಇರುವುದಿಲ್ಲ ಎಂದೇ ಹೇಳಬಹುದು ಮತ್ತು ಇದು ಅಶಿಸ್ತಿನ ಲಕ್ಷಣ ಕೂಡ ಆಗಿದೆ.
ಮಹಿಳೆಯರಿಗೆ ಉಪಯುಕ್ತವಾಗುವ ಕೆಲವು ಸಲಹೆಗಳು ಇವು, ಎರಡೇ ಎರಡು ನಿಮಿಷ ಫ್ರೀ ಮಾಡಿಕೊಂಡು ನೋಡಿ ಸಾಕು.!
● ಪುರುಷರು ದೇಹದ ಬಲಭಾಗದಲ್ಲಿ ಮಚ್ಚೆಗಳು ಇದ್ದರೆ ಅವರು ಹೆಚ್ಚು ಅದೃಷ್ಟವಂತರು ಎಂದು ಹೇಳಲಾಗುತ್ತದೆ, ಆದರೆ ದೇಹದಲ್ಲಿ ಯಾವುದೇ ಕಾರಣಕ್ಕೂ 12ಕ್ಕಿಂತ ಹೆಚ್ಚಿನ ಮಚ್ಚೆಗಳು ಇರಬಾರದು ಕಷ್ಟಗಳು ಹೆಚ್ಚಾಗಿರುತ್ತವೆ.
● ಕೆಲ ಪುರುಷರಿಗೆ ಕೈ ಬೆರಳ ಹಿಂಭಾಗದಲ್ಲಿ ಕೂದಲು ಬೆಳೆಯುತ್ತಿರುತ್ತದೆ. ಈ ರೀತಿ ಲಕ್ಷಣಗಳು ಹೊಂದಿರುವವರು ಬಹಳ ಚುರುಕಿನ ಸ್ವಭಾವವನ್ನು ಹೊಂದಿರುತ್ತಾರೆ, ಬುದ್ದಿವಂತರಾಗಿರುತ್ತಾರೆ ಮತ್ತು ಹೆಚ್ಚು ಆಕರ್ಷಿತರಾಗುತ್ತಾರೆ. ಇದೇ ಲಕ್ಷಣಗಳನ್ನು ಮಹಿಳೆಯು ಹೊಂದಿದ್ದರೆ ಇದು ಆಕೆಗೆ ಅಶುಭ ಎಂದು ಹೇಳಲಾಗುತ್ತದೆ.
ಮಹಿಳೆಯರು ಈ ರೀತಿ ತಪ್ಪುಗಳನ್ನು ಮಾಡಿದ್ರೆ ಆ ಮನೆಯ ಸರ್ವನಾಶ ಆಗೋದು ಖಂಡಿತ.!
● ಪುರುಷರ ಬಲಗಾಲಿನ ಕೊನೆಯ ಬೆರಳು ಹಾಗೂ ಮಹಿಳೆಯರ ಎಡಗಾಲಿನ ಕಿರುಬೆರಳು ನೆಲಕ್ಕೆ ತಾಕದೆ ಹೋದರೆ ಜೀವನದಲ್ಲಿ ಅವರು ಬಹಳ ಮೋಸ ಹೋಗುತ್ತಾರೆ ಎಂದು ಹೇಳಲಾಗುತ್ತದೆ.
● ಗಿಣಿ ಮೂಗು ಅಥವಾ ದೊಡ್ಡ ಮೂಗನ್ನು ಹೊಂದಿರುವ ಜನರಿಗೆ ಹಣದ ಕೊರತೆ ಇರುವುದಿಲ್ಲ, ಜೀವನದಲ್ಲಿ ಅವರು ಯಶಸ್ವಿಯಾಗಿ ಬದುಕುತ್ತಾರೆ. ಅವರ ಬಳಿ ಬಹಳ ರಹಸ್ಯಗಳಿರುತ್ತದೆ ಎಂದು ಹೇಳಲಾಗುತ್ತದೆ.
https://youtu.be/rdt7V8r2owA?si=KW7tIidGTGnquAAm