Home Useful Information ಜಮೀನು ಇಲ್ಲದವರಿಗೆ ಸಿಹಿ ಸುದ್ದಿ, ಪ್ರತಿ ಕುಟುಂಬಕ್ಕೂ 2 ಎಕರೆ ಜಮೀನು ಘೋಷಣೆ ಮಾಡಿದ ಸರ್ಕಾರ.!

ಜಮೀನು ಇಲ್ಲದವರಿಗೆ ಸಿಹಿ ಸುದ್ದಿ, ಪ್ರತಿ ಕುಟುಂಬಕ್ಕೂ 2 ಎಕರೆ ಜಮೀನು ಘೋಷಣೆ ಮಾಡಿದ ಸರ್ಕಾರ.!

0
ಜಮೀನು ಇಲ್ಲದವರಿಗೆ ಸಿಹಿ ಸುದ್ದಿ, ಪ್ರತಿ ಕುಟುಂಬಕ್ಕೂ 2 ಎಕರೆ ಜಮೀನು ಘೋಷಣೆ ಮಾಡಿದ ಸರ್ಕಾರ.!

 

ನಮ್ಮ ದೇಶ ಹಳ್ಳಿಗಳ (Village) ದೇಶ, ಹಳ್ಳಿಗಳೇ ಹೆಚ್ಚಾಗಿರುವ ನಮ್ಮ ದೇಶದಲ್ಲಿ ಹಳ್ಳಿಯ ಜನರ ಜೀವನೋಪಾಯ ಕೃಷಿಯೇ (Agriculture) ಆಗಿದೆ. ಆದರೆ ಕೃಷಿಯಲ್ಲಿ ತೊಡಗಿಕೊಳ್ಳಲು ಎಲ್ಲರಿಗೂ ಕೂಡ ಸ್ವಂತ ಜಮೀನು (agriculture land) ಇಲ್ಲ. ನಮ್ಮ ದೇಶದಲ್ಲಿ ಆಸ್ತಿ ಹಂಚಿಗೆ ಸಮನಾಗಿಲ್ಲ ಎನ್ನುವ ಅಂಶ ಎಲ್ಲರಿಗೂ ತಿಳಿದಿದೆ. ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರಾಗಿ ಇನ್ನೂ ಸಾಕಷ್ಟು ಜನರು ಕೆಲಸ ಮಾಡುತ್ತಿದ್ದಾರೆ.

ಆದರೆ ಕುಟುಂಬ ದೊಡ್ಡದಾಗುತ್ತಿದ್ದಂತೆ ಅದರಿಂದ ಬರುವ ಆದಾಯ ಸಾಲದ ಕಾರಣ ಮುಂದಿನ ದಿನಗಳಲ್ಲಿ ಅವರು ನಗರ ಪ್ರದೇಶಗಳಿಗೆ ಗುಳೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಈ ರೀತಿ ಉದ್ಯೋಗ ಹರಸಿ ಕೃಷಿ ಭೂ ರಹಿತ ಕುಟುಂಬಗಳು (Agriculture landless families) ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ನಗರ ಪ್ರದೇಶಕ್ಕೆ ಹೋಗುವ ಪರಿಸ್ಥಿತಿ ಸುಧಾರಿಸುವ ಸಲುವಾಗಿ ರಾಜ್ಯ ಸರ್ಕಾರ (Karnataka government) ಹೊಸ ನಿರ್ಧಾರಕ್ಕೆ ಬಂದಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವವರು ತಪ್ಪದೇ ಈ ಚೆಕ್ ಲಿಸ್ಟ್ ನೋಡಿ, ಇದರಲ್ಲಿ ನಿಮ್ಮ ಹೆಸರು ಇಲ್ಲ ಅಂದ್ರೆ ಮತ್ತೊಮ್ಮೆ ಅರ್ಜಿ ಹಾಕಬೇಕಾಗುತ್ತೆ.!

ಸದ್ಯಕ್ಕಿರುವ ಅಂಕಿ ಅಂಶಗಳ ಪ್ರಕಾರ ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರ ವರ್ಗದವರು ಈ ರೀತಿ ಹಳ್ಳಿಗಳಿಂದ ನಗರ ಪ್ರದೇಶಕ್ಕೆ ವಲಸೆ ಹೋಗುವ ಸಂಖ್ಯೆ ಹೆಚ್ಚಾಗುತ್ತಿದೆ. ಇವರುಗಳು ಹಳ್ಳಿಯಲ್ಲಿಯೇ ನೆಮ್ಮದಿಯಾಗಿ ಜೀವನದ ನಡೆಸಲು ಸಾಧ್ಯವಾಗಬೇಕು ಎನ್ನುವುದು ಡಾ. ಬಿಆರ್ ಅಂಬೇಡ್ಕರ್ (Dr. B.R Ambedkar) ಅವರ ಕನಸಾಗಿತ್ತು.

ಈ ರೀತಿ ಹಳ್ಳಿಯಲ್ಲಿಯೇ ನೆಲೆ ನಿಲ್ಲಬೇಕು ಎಂದರೆ ಒಂದು ಕುಟುಂಬಕ್ಕೆ ಕನಿಷ್ಠ 1.67 ಎಕರೆ ಕೃಷಿ ಜಮೀನು ಬೇಕು ಎನ್ನುವುದು ಕೇಂದ್ರ ಸರ್ಕಾರದ ಮಾನದಂಡ. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡಿರುವ ಕರ್ನಾಟಕ ರಾಜ್ಯ ಸರ್ಕಾರ ಹೊಸ ಯೋಜನೆ ಯನ್ನು ಜಾರಿ ಮಾಡಿ ಹಳ್ಳಿಗಾಡಿನಲ್ಲಿರುವ ಜಮೀನು ರಹಿತ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವರ್ಗಕ್ಕೆ ಸರ್ಕಾರದ ವತಿಯಿಂದ ಜಮೀನು (Land sanction) ನೀಡುವ ನಿರ್ಧಾರಕ್ಕೆ ಬಂದಿದೆ ಎನ್ನುವ ಮಾಹಿತಿಯನ್ನು ಮಾನ್ಯ ಸಹಕಾರ ಸಚಿವರಾದ ಕೆ.ಸಿ ಮಹದೇವಪ್ಪ (Co-Operative Minister K C Mahadevappa) ಅವರು ತಿಳಿಸಿದ್ದಾರೆ.

ಹಳೆಯ ಬಟ್ಟೆಗಳು ಇವರ ಕೈಗೆ ಸಿಗದಂತೆ ನೋಡಿಕೊಳ್ಳಿ, ಈ ರೀತಿ ಹಳೆ ಬಟ್ಟೆಗಳನ್ನು ಮನೆಯಲ್ಲಿ ಬಳಸಿದರೆ ಕಷ್ಟಗಳು ಗ್ಯಾರಂಟಿ.!

ಬಲವಾದ ಮೂಲಗಳ ಮಾಹಿತಿ ಪ್ರಕಾರ ಈಗಾಗಲೇ ಸರ್ಕಾರ ಇದಕ್ಕೆ ಕ್ರಮ ಕೂಡ ಕೈಗೆತ್ತಿಕೊಂಡಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸರ್ಕಾರಿ ವಲಯದ ಪ್ರದೇಶವನ್ನು ಕೃಷಿ ಭೂಮಿಯಾಗಿ ಪರಿವರ್ತನೆ ಮಾಡಿ ಈ ರೀತಿ ಜಮೀನು ರಹಿತ ಕುಟುಂಬಗಳಿಗೆ ಹಂಚಲು ನಿರ್ಧಾರ ಮಾಡಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಇದರ ಪ್ರಕಾರವಾಗಿ ಆಯಾ ಜಿಲ್ಲಾಧಿಕಾರಿಗಳಿಗೆ ಕೂಡ ಇದರ ಕುರಿತು ಕ್ರಮ ಕೈಗೊಳ್ಳುವಂತೆ ಮತ್ತು ವರದಿ ಸಿದ್ದಪಡಿಸಿಕೊಂಡು ತರುವಂತೆ ಸರ್ಕಾರ ಸೂಚಿಸಿದೆ ಎನ್ನುವ ಮಾಹಿತಿಯು ಕೂಡ ಇದೆ.

ಮೊದಲ ಹಂತದಲ್ಲಿ ಮೈಸೂರು ಜಿಲ್ಲೆಯಲ್ಲಿ (Mysore district) ಈ ರೀತಿ ಜಮೀನು ರಹಿತ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವರ್ಷಕ್ಕೆ ಜಮೀನು ಹಂಚಿಕೆ ಮಾಡುವ ಪ್ರಯೋಗ ಮಾಡಲಾಗುವುದು ಎನ್ನುವ ಮಾಹಿತಿಯು ಇದೆ. ಈ ಬಗ್ಗೆ ಮಾಹಿತಿ ತಿಳಿಸಿದ ಸಹಕಾರ ಸಚಿವರಾದ ಕೆ.ಸಿ ಮಹದೇವಪ್ಪ ಅವರು ಒಂದು ವೇಳೆ ಕೆಲವು ಪ್ರದೇಶಗಳಲ್ಲಿ ಸರ್ಕಾರಿ ವಲಯದ ಭೂಮಿ ಸಿಗದೇ ಹೋದಲ್ಲಿ ಉಳ್ಳವರಿಂದ 50 ಎಕರೆ ಜಮೀನುವರೆಗೆ ಖರೀದಿಸಿ ಹಂಚುವ ನಿರ್ಧಾರವನ್ನು ಸರ್ಕಾರ ಮಾಡಿದೆ.

ಎಷ್ಟೇ ಹಳೆ ಕಾವಲಿ ಆಗಿದ್ರು ದೋಸೆ ನೀಟಾಗಿ ಬರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!

ಜಿಲ್ಲಾಧಿಕಾರಿಗಳ ವರದಿ ಪರಿಶೀಲಿಸಿ ಇದರ ಕುರಿತು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಈ ಯೋಜನೆ ಜಾರಿಗೆ ಬಂದರೆ ಕರ್ನಾಟಕದಲ್ಲಿರುವ ಎಲ್ಲಾ ಕುಟುಂಬಗಳು ಕೂಡ ಕೃಷಿ ಭೂಮಿ ಹೊಂದುವ ಅವಕಾಶ ಸಿಗಲಿದೆ. ಆದಷ್ಟು ಬೇಗ ಕರ್ನಾಟಕ ರಾಜ್ಯದಲ್ಲಿ ಈ ಯೋಜನೆ ಜಾರಿಗೆ ಬರಲಿ ಎಂದು ನಾವು ಕೂಡ ಆಶಿಸೋಣ. ಸರ್ಕಾರದ ಈ ನಿರ್ಧಾರವು ರಾಜ್ಯದ ಬಡ ಜನತೆಗೆ ಸಂತಸ ತರಲಿದೆ. ಆದ್ದರಿಂದ ಈ ಉಪಯುಕ್ತ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ.

LEAVE A REPLY

Please enter your comment!
Please enter your name here