ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥ ಪುರುಷರಾಗಿದ್ರೆ ಗೃಹಲಕ್ಷ್ಮಿ ಯೋಜನೆಯ 2,000 ಹಣ ಸಿಗಲ್ಲ.! ಹಣ ಬರಬೇಕು ಅಂದ್ರೆ ಏನು ಮಾಡಬೇಕು.? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.!

 

ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥ ಪುರುಷರಾಗಿದ್ದರೆ ಆ ಮನೆಯಲ್ಲಿರುವಂತಹ ಮಹಿಳೆಗೆ ಯಾವುದೇ ರೀತಿಯಾದಂತಹ ಹಣ ಸಿಗುವುದಿಲ್ಲ. ಅಂದರೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ. ಆದ್ದರಿಂದ ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯ ಸದಸ್ಯ ಪುರುಷನ ಹೆಸರನ್ನು ಬದಲಾಯಿಸಿ ಮಹಿಳೆಯ ಹೆಸರನ್ನು ಹಾಕಿಸಿದರೆ ಮಾತ್ರ ನಿಮಗೆ ಪ್ರತಿ ತಿಂಗಳು 2000 ಹಣ ಸಿಗುತ್ತದೆ.

ಹೌದು ತಿದ್ದುಪಡಿ ಮಾಡಿಸಿಕೊಳ್ಳುವುದರ ಮೂಲಕ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯ ಸದಸ್ಯೆ ಮಹಿಳೆ ಎನ್ನುವಂತೆ ನಿಮ್ಮ ಫೋಟೋ ಹಾಕಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ತದನಂತರ ನೀವು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

ಹೌದು ಮನೆಯಲ್ಲಿರುವಂತಹ ಮಹಿಳೆ ಪ್ರತಿ ತಿಂಗಳು 2000 ಹಣವನ್ನು ಪಡೆಯಬಹುದಾಗಿದ್ದು. ಅದನ್ನು ಯಾವುದೇ ಕಾರಣಕ್ಕೂ ಬೇರೆಯವರು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆ ಮಹಿಳೆಯ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಬರುತ್ತದೆ. ಆ ಹಣದಿಂದ ಅವಳು ತನಗೆ ಇಷ್ಟ ಬಂದಂತಹ ರೀತಿಯಲ್ಲಿ ಜೀವನವನ್ನು ನಡೆಸಬಹುದಾಗಿದ್ದು ಅದು ಕೇವಲ ಅವಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಹೇಳಬಹುದು.

ಈ ಒಂದು ಗ್ಯಾರಂಟಿಯನ್ನು ಜಾರಿಗೊಳಿಸಿರುವಂತಹ ಕಾಂಗ್ರೆಸ್ ಸರ್ಕಾರ ಮಹಿಳೆ ಯಾವುದೇ ರೀತಿಯಲ್ಲೂ ಹಿಂದುಳಿದಿರಬಾರದು ಅವಳು ಕೂಡ ಎಲ್ಲರಂತೆ ಎಲ್ಲ ರೀತಿಯ ಸೌಕರ್ಯವನ್ನು ಪಡೆದುಕೊಳ್ಳ ಬೇಕು ಹಾಗೂ ಪ್ರತಿಯೊಬ್ಬರೂ ಕೂಡ ಅವಳಿಗೆ ಗೌರವವನ್ನು ಕೊಡ ಬೇಕು ಅವಳು ಯಾವುದಕ್ಕೂ ಕೊರಗಬಾರದು ಎನ್ನುವಂತಹ ಉದ್ದೇಶ ದಿಂದ ಈ ಯೋಜನೆಯ ಜಾರಿಗೆ ತಂದಿದ್ದಾರೆ ಎಂದು ಹೇಳಬಹುದು.

ಹೌದು ಅದೇ ರೀತಿಯಾಗಿ ಈ ಒಂದು ಗ್ಯಾರಂಟಿಯನ್ನು ಜಾರಿಗೆ ತರುವ ಮುಂಚೆ ಕಾಂಗ್ರೆಸ್ ಸರ್ಕಾರ ಕೆಲವೊಂದಷ್ಟು ಸೂಚನೆಗಳನ್ನು ಬಿಟ್ಟಿದೆ ಅಂದರೆ ಕೆಲವೊಂದು ಶರತ್ತುಗಳನ್ನು ಬಿಟ್ಟಿದೆ ಆ ರೀತಿಯಾಗಿ ನಿಯಮ ಇದ್ದರೆ ಮಾತ್ರ ಅಂತವರು ಈ ಒಂದು ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.

ಹಾಗಾದರೆ ಗೃಹಲಕ್ಷ್ಮಿ ಯೋಜನೆಯನ್ನು ಪಡೆದು ಕೊಳ್ಳಬೇಕು ಎಂದರೆ ಮಹಿಳೆಯರು ಯಾವುದೆಲ್ಲ ರೀತಿಯ ದಾಖಲಾತಿ ಗಳನ್ನು ಹೊಂದಿರಬೇಕಾಗುತ್ತದೆ ಹಾಗೂ ಯಾವ ರೀತಿಯಾದಂತಹ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಇರಬೇಕು ಹೀಗೆ ಈ ಎಲ್ಲ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

• ಮೊದಲೇ ಹೇಳಿದಂತೆ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯ ಸದಸ್ಯೆಯಾಗಿ ಮಹಿಳೆಯ ಫೋಟೋ ಇರಬೇಕು. ಈ ರೀತಿ ಇದ್ದರೆ ಮಾತ್ರ ಮಹಿಳೆಗೆ ಪ್ರತಿ ತಿಂಗಳು ಸರ್ಕಾರದ ವತಿಯಿಂದ 2,000 ಹಣ ಸಿಗುತ್ತದೆ.

ಹಾಗೇನಾದರೂ ನಿಮ್ಮ ಪತಿಯ ಹೆಸರು ಫೋಟೋ ವಿಳಾಸ ಇದ್ದರೆ ಕೂಡಲೇ ಅದನ್ನು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಹೋಗಿ ಅಥವಾ ನಾಡಕಚೇರಿಗೆ ಹೋಗಿ ಅದನ್ನು ತಿದ್ದುಪಡಿ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಅಥವಾ ಆನ್ಲೈನ್ ನಲ್ಲಿ ಹೋಗಿ ನೀವು ಅದನ್ನು ಪರಿಶೀಲಿಸಿ ಸರಿಯಾದ ದಾಖಲಾತಿಗಳನ್ನು ಕೊಟ್ಟು ಮನೆಯ ಒಡತಿಯ ಜಾಗದಲ್ಲಿ ನಿಮ್ಮ ದಾಖಲಾತಿಗಳನ್ನು ಕೊಡುವುದು ಒಳ್ಳೆಯದು.

ನಂತರ ಈ ಒಂದು ತಿದ್ದುಪಡಿ ಮಾಡಿದ ಮೇಲೆ ನೀವು ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗೇನಾದರೂ ಬೇರೆಯವರ ಹೆಸರು ಇದ್ದರೆ ಅದನ್ನು ತಿದ್ದುಪಡಿ ಮಾಡಿಸಬೇಕು ಎಂದರೆ ಯಾವುದೆಲ್ಲ ದಾಖಲಾತಿಗಳು ಅಗತ್ಯವಾಗಿ ಬೇಕಾಗಿರುತ್ತದೆ ಎಂದು ನೋಡುವುದಾದರೆ.

• ಕುಟುಂಬದ ಮುಖ್ಯಸ್ಥರು ಮ.ರಣ ಹೊಂದಿದ್ದರೆ ಅವರ ಮರಣ ಪ್ರಮಾಣ ಪತ್ರ
• ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ ಅಥವಾ ಪೂರಕ ದಾಖಲೆ
• ಸ್ವಯಂ ಘೋಷಣೆ
• ಹೊಸ ಹೆಸರು ಸೇರ್ಪಡೆಗೊಳಿಸುವವರ ಪಾಸ್ ಪೋರ್ಟ್ ಗಾತ್ರದ ಫೋಟೋ, ಅವರ ಆಧಾರ್ ಕಾರ್ಡ್.

Leave a Comment