Saturday, April 19, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeUseful Information300 ವರ್ಷಗಳ ನಂತರ ಬಂದಿದೆ, ಪ್ರಬಲ ಶಿವರಾತ್ರಿ ತ್ರಿಕೋನ ಶಿವಯೋಗ, ಶುಭ ಮುಹೂರ್ತದಲ್ಲಿ ಈ...

300 ವರ್ಷಗಳ ನಂತರ ಬಂದಿದೆ, ಪ್ರಬಲ ಶಿವರಾತ್ರಿ ತ್ರಿಕೋನ ಶಿವಯೋಗ, ಶುಭ ಮುಹೂರ್ತದಲ್ಲಿ ಈ ಕೆಲಸ ಮಾಡಿ ವರ್ಷಪೂರ್ತಿ ಹಣಕಾಸಿನ ಕೊರತೆ ಬರುವುದಿಲ್ಲ…

 

ಮಾರ್ಚ್ 08, 2024ರಂದು ಮಹಾ ಶಿವರಾತ್ರಿ ಇದೆ, ಪ್ರತಿ ವರ್ಷವೂ ಕೂಡ ಶಿವರಾತ್ರಿ ದಿನ ಬರುತ್ತಲೇ ಇರುತ್ತದೆ. ಈ ಬಾರಿಯ ಶಿವರಾತ್ರಿ ಮಾತ್ರ ಬಹಳ ವಿಶೇಷ. 300 ವರ್ಷಗಳ ನಂತರ ಈ ರೀತಿ ಮತ್ತೊಮ್ಮೆ ತ್ರಿಕೋನ ಶಿವಯೋಗ ಇರುವ ಶಿವರಾತ್ರಿ ಬಂದಿದೆ.

ಈ ದಿನವನ್ನು ಶಿವ ಪಾರ್ವತಿಯರು ವಿವಾಹದ ದಿನ ಶಿವನು ವಿಷಯವನ್ನು ಕುಡಿದು ನೀಲಕಂಠನಾದ ದಿನ ಎಂದು ಪುರಾಣಗಳಲ್ಲಿ ತಿಳಿಸಿದ್ದಾರೆ. ಈ ದಿನವನ್ನು ಸಂಪೂರ್ಣವಾಗಿ ಶಿವನಿಗಾಗಿ ಭಕ್ತರು ಮೀಸಲಿಟ್ಟು ಕಳೆಯುತ್ತಾರೆ. ಎಲ್ಲ ಶಿವಾಲಯಗಳಲ್ಲೂ ಕೂಡ ಅಭಿಷೇಕ ಪ್ರಿಯ ಶಿವನಿಗೆ ವಿವಿಧ ಬಗೆಯ ದ್ರವ್ಯಗಳಿಂದ ಅಭಿಷೇಕ, ಶಿವನಿಗೆ ಪ್ರಿಯವಾದ ಹೂವುಗಳಿಂದ ಅಲಂಕಾರ ಪೂಜೆ ನಡೆಯುತ್ತದೆ.

ಭಕ್ತಾದಿಗಳು ದಿನಪೂರ್ತಿ ಉಪವಾಸ ಇದ್ದು ರಾತ್ರಿ ಸಮಯ ಜಾಗರಣೆ ಇದ್ದು ಶಿವಧ್ಯಾನದಲ್ಲಿ ದಿನ ಕಳೆಯುತ್ತಾರೆ ಈ ಶಕ್ತಿಶಾಲಿಯಾದ ಶಿವರಾತ್ರಿ ದಿನದಂದು ನೀವು ಕೂಡ ನಾವು ಹೇಳುವ ವಿಧಾನದಲ್ಲಿ ಶಿವನನ್ನು ಪೂಜಿಸಿದರೆ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ.

ಈ ಸುದ್ದಿ ಓದಿ:- ಶಂಖ, ಚಕ್ರ ಚಿಹ್ನೆ ಗುರುತಿಸುವುದು ಹೇಗೆ.? ಎಷ್ಟಿದ್ದರೆ ರಾಜಯೋಗ, ಯಾವುದಕ್ಕೆ ಏನು ಫಲ ನೋಡಿ.!

ಈ ದಿನದಂದು ಮುಂಜಾನೆ ಎದ್ದು ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಿ ಶಿವನಿಗೆ ಇಷ್ಟವಾದ ಬಿಲ್ವ ಪತ್ರೆ ಹಾಗೂ ತುಂಬೆ ಪತ್ರೆಗಳನ್ನು ಅರ್ಪಿಸಿ ಶಿವಲಿಂಗ ಪೂಜೆ ಮಾಡಿ, ಶಿವಪೂಜೆಯಲ್ಲಿ ಶಿವನಿಗೆ ಅಭಿಷೇಕ ಮಾಡುವುದು ವಿಶೇಷ ನಿಮ್ಮ ಮನೆಯಲ್ಲಿರುವ ಶಿವಲಿಂಗಕ್ಕೆ ಜಲಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಮಾಡಿ ನಂತರ ಧೂಪದೀಪದಿಂದ ಬೆಳಗಿ ನೈವೇದ್ಯ ಅರ್ಪಿಸಿ.

ತಪ್ಪದೇ 108 ಬಾರಿ ಪಂಚಾಕ್ಷರಿ ಮಂತ್ರವನ್ನು ಪಠಣೆ ಮಾಡಿ. ಈ ದಿನ ತ್ರಿಕಾಲ ಪೂಜೆ ಮಾಡಬಹುದು ಎಂದು ಹೇಳಲಾಗುತ್ತದೆ. ಅಂದರೆ ಸಾಮಾನ್ಯವಾಗಿ ಪ್ರತಿದಿನ ಮುಂಜಾನೆ ಅಥವಾ ಅನುಕೂಲತೆ ಇದ್ದವರು ಮುಂಜಾನೆ ಮತ್ತು ಮುಸ್ಸಂಜೆ ಶಿವಪೂಜೆ ಮಾಡುತ್ತಾರೆ. ಶಿವರಾತ್ರಿ ದಿನದಂದು ಮೂರು ಸಮಯವು ಶಿವಪೂಜೆ ಮಾಡಬಹುದು ಮತ್ತು ದೇವಾಲಯಗಳಲ್ಲಿ ರಾತ್ರಿ ಪೂರ್ತಿ ಶಿವನಿಗೆ ವಿಶೇಷವಾದ ಪೂಜೆಗಳು ನಡೆಯುತ್ತಿರುತ್ತವೆ.

ಹಾಗಾಗಿ ಮನೆಯಲ್ಲಿ ಪೂಜೆ ಮಾಡಿದ ನಂತರ ಶಿವಾಲಯಗಳಿಗೆ ಹೋಗಿ ಸಮಯ ಕಳೆಯಿರಿ ನಿಮಗೆ ಶಕ್ತಿ ಇದ್ದರೆ ಉಪವಾಸ ಮಾಡಿ ಅಥವಾ ವೃದ್ಧರಾಗಿದ್ದರೆ, ಯಾವುದಾದರೂ ಕಾಯಿಲೆಗೆ ಔಷಧಿ ತೆಗೆದುಕೊಳ್ಳಬೇಕಿದ್ದರೆ, ಮಕ್ಕಳಾಗಿದ್ದರೆ ಫಲಹಾರ ಸೇವಿಸಬಹುದು. ರಾತ್ರಿ ಜಾಗರಣೆ ಇದ್ದು ಮರುದಿನ ಬೆಳಿಗ್ಗೆ ಉಪವಾಸ ಬಿಡಿ.

ಈ ಸುದ್ದಿ ಓದಿ:- 1 ರೂಪಾಯಿ ಬಂಡವಾಳ ಇಲ್ಲದೆ ಮನೆಯಲ್ಲಿಯೇ ಕೂತು ಲಕ್ಷ ಹಣ ಸಂಪಾದನೆ ಮಾಡಬಹುದು.!

ಹೆಚ್ಚು ಸಮಯ ಶಿವನ ಬಳಿ ಕಳೆಯುವುದರಿಂದ ಈ ದಿನ ನಿಮ್ಮ ಎಲ್ಲಾ ರೀತಿಯ ಕಷ್ಟಗಳನ್ನು ಪರಿಹಾರ ಮಾಡುವಂತೆ ಶಿವನ ಬಳಿ ಪ್ರಾರ್ಥಿಸಿಕೊಳ್ಳಿ ಖಂಡಿತವಾಗಿಯೂ ಬಹಳ ಬೇಗ ವರಗಳನ್ನು ತನ್ನ ಭಕ್ತಾದಿಗಳಿಗೆ ನೀಡುವ ಈಶ್ವರನು ನಿಮ್ಮ ಎಲ್ಲಾ ಕಷ್ಟಗಳನ್ನು ಪರಿಹಾರ ಮಾಡಿ ಕಾಪಾಡುತ್ತಾರೆ. ಮನೆಯಲ್ಲಿ ಯಾವ ರೀತಿಯ ಶಿವಲಿಂಗ ಪೂಜೆ ಮಾಡಬೇಕು ಎನ್ನುವ ಗೊಂದಲ ಇದ್ದರೆ ಅದಕ್ಕೆ ಮಾಹಿತಿ ಹೀಗಿದೆ ನೋಡಿ.

* ಪ್ರತಿದಿನವೂ ಕೂಡ ಮುಂಜಾನೆ ಶಿವಲಿಂಗ ಪೂಜೆ ಮಾಡುವುದಾದರೆ ನರ್ಮಧೇಶ್ವರ ಶಿವಲಿಂಗವನ್ನು ಮನೆಗೆ ತೆಗೆದುಕೊಂಡು ಬಂದು ಪ್ರತಿ ದಿನವೂ ಜಲಾಭಿಷೇಕ ಮಾಡಿ ಶಿವನಿಗೆ ಪೂಜೆ ಮಾಡಿ
* ಪ್ರತಿದಿನ ಪೂಜೆ ಮಾಡಲು ಸಾಧ್ಯವಿಲ್ಲ ಸೋಮವಾರ ಅಥವಾ ಹಬ್ಬ ಹರಿದಿನಗಳ ವಿಶೇಷ ಸಮಯದಲ್ಲಿ ಪೂಜೆ ಮಾಡುತ್ತೇವೆ ಎನ್ನುವುದಾದರೆ, ಸ್ಪಟಿಕಲಿಂಗವನ್ನು ತಂದು ಪೂಜೆ ಮಾಡಿ. ಸ್ಪಟಿಕ ಲಿಂಗವನ್ನು ಚೆನ್ನಾಗಿ ಬೆಳ್ಳಿ ಇಂತಹ ಲೋಹಗಳಲ್ಲಿ ಇಟ್ಟು ಕೂಡ ಪೂಜೆ ಮಾಡುತ್ತಾರೆ.

* ನಿಮಗೆ ಪಾದರಸದ ಶಿವಲಿಂಗ ಸಿಕ್ಕಿದರೆ ಅದನ್ನು ಪೂಜೆ ಮಾಡುವುದು ಕೂಡ ಒಳ್ಳೆಯದು. ಯಾಕೆಂದರೆ ಪಾದರಸವನ್ನು ಶಿವನಿಂದ ಸೃಷ್ಟಿಯಾದ ಧಾತು ಎಂದು ನಂಬಲಾಗಿದೆ.
* ಶಿವಲಿಂಗಕ್ಕೆ ನೀರು ಗಂಗಾಜಲ ಕಬ್ಬಿನರಸ ಜೇನುತುಪ್ಪ ಹಾಲು ಮೊಸರು ತುಪ್ಪ ಬೆಲ್ಲ ಪಂಚಾಮೃತ ಈ ಪದಾರ್ಥಗಳಿಂದ ಅಭಿಷೇಕ ಮಾಡುವುದನ್ನು ರುದ್ರಾಭಿಷೇಕ ಎನ್ನುತ್ತಾರೆ.

ಈ ಸುದ್ದಿ ಓದಿ:- ಮನುಷ್ಯ 40 ವರ್ಷದ ನಂತರ ಏಕೆ ಕಷ್ಟ ಪಡುತ್ತಾನೆ ಗೊತ್ತಾ.?, ಬೇರೆಯವರ ಆಯಸ್ಸನ್ನು ಪಡೆದಿರುವುದೇ ಇದಕ್ಕೆ ಕಾರಣವೇ ನೋಡಿ.!

ಪ್ರತಿದಿನ ಮಾಡಲಾಗದವರು ಶಿವರಾತ್ರಿ ಹಬ್ಬದ ದಿನದಂದು ತಪ್ಪದೆ ಮನೆಯಲ್ಲಿರುವ ಶಿವಲಿಂಗಕ್ಕೆ ಇವುಗಳಿಂದ ಅಭಿಷೇಕ ಮಾಡುತ್ತಾರೆ ಈ ಸಮಯದಲ್ಲಿ ಒಂದೊಂದು ದ್ರವ್ಯದಿಂದ ಅಭಿಷೇಕ ಮಾಡುವಾಗ ಒಂದೊಂದು ವಿಶೇಷವಾದ ಮಂತ್ರವನ್ನು ಹೇಳಬೇಕು ಸಾಧ್ಯವಾಗದಿದ್ದರೆ ಪಂಚಾಕ್ಷರಿ ಮಂತ್ರವನ್ನು ಅಥವಾ ಓಂ ನಮೋ ಪಾರ್ವತಿ ಪತೈ ನಮಃ ಎಂದು ಹೇಳಬಹುದು. ಇದರಲ್ಲಿ ಅರ್ಪಿಸುವ ಒಂದೊಂದು ವಸ್ತುವೂ ಒಂದೊಂದು ರೀತಿಯಲ್ಲಿ ನಿಮ್ಮ ಜೀವನದ ಕಷ್ಟಗಳನ್ನು ಕಳೆಯುತ್ತದೆ ಎನ್ನುವುದು ನಂಬಿಕೆ.